ನವದೆಹಲಿ: ಟ್ವಿಟ್ಟರ್ ಸಾಮಾಜಿಕ ಮಾಧ್ಯಮವನ್ನು ಎಲೋನ್ ಮಸ್ಕ್ ಸ್ವಾಧೀನಪಡಿಸಿಕೊಳ್ಳುತ್ತಿದ್ದಂತೆ ಹಲವು ಮಹತ್ವದ ಬದಲಾವಣೆಗಳನ್ನು ಮಾಡಲು ಮುಂದಾಗಿದ್ದಾರೆ. ಅದರಲ್ಲೂ ಇನ್ಮುಂದೆ ದುಡ್ಡು ಕೊಟ್ರೆ ಅಷ್ಟೇ ಬ್ಲೂ ಟಿಕ್ ಎನ್ನುವ ನಿಯಮವಂತೂ ಬಹುತೇಕರ ಕೆಂಗಣ್ಣಿಗೆ ಗುರಿಯಾಗಿದೆ.
ಈಗ ಒಂದು ವೇಳೆ ನಿಮಗೆ ಟ್ವಿಟ್ಟರ್ ನಿಂದ ಬ್ಲೂ ಟಿಕ್ ಮಾರ್ಕ್ ಬೇಕೆಂದರೆ ಅದಕ್ಕೆ ನೀವು ಪ್ರತಿ ತಿಂಗಳಿಗೆ ಎಂಟು ಡಾಲರ್ ಗಳನ್ನು ಪಾವತಿಸಬೇಕಾಗುತ್ತದೆ.ಹೀಗಾಗಿ ಈ ನಡೆಗೆ ಅಸಮಾಧಾನಗೊಂಡಿರುವ ನೆಟ್ಟಿಗರು ಈಗ ಏಕಾಏಕಿ ಮಾಸ್ಟೋಡಾನ್ ಎನ್ನುವ ಪರ್ಯಾಯ ವೇದಿಕೆಗೆ ವಲಸೆ ಹೋಗುತ್ತಿದ್ದಾರೆ.
ಇದನ್ನೂ ಓದಿ:11,136 ಪೌರಕಾರ್ಮಿಕರಿಗೆ ಖಾಯಂ ನೌಕರಿ ನೀಡಲು ಅಧಿಸೂಚನೆ
Speaking of features Twitter doesn't have— here are some other perks of joining Mastodon!
✅Edit button
✅Server-custom emoticons
✅Auto-delete posts option
✅Extended notification bar (see image)
✅500 character limit
✅Advanced post filter system
✅Content warnings
& more! pic.twitter.com/qDdmlzPXuz— Mastodon (@joinmastodon) November 5, 2022
ಅಷ್ಟಕ್ಕೂ ಏನಿದು ಮಾಸ್ಟೋಡಾನ್..?
ಮಾಸ್ಟೋಡಾನ್ ಟ್ವಿಟ್ಟರ್ ನಂತೆ ಕೇಂದ್ರಿತ ಸಾಮಾಜಿಕ ವೇದಿಕೆಯಲ್ಲಿ ಇದರಲ್ಲಿ ಸರ್ವರ್ ಮೂಲಕ ಹಲವು ಗ್ರೂಪ್ ಗಳಿಗೆ ನೀವು ಸೇರಬಹುದಾಗಿದೆ. ಎಲ್ಲದ್ದಕ್ಕಿಂತ ಹೆಚ್ಚಾಗಿ ಇದೊಂದು ಓಪನ್ ಸೌರ್ಸ್ ವೇದಿಕೆಯಾಗಿರುವದರಿಂದ ಇದು ಹೆಚ್ಚಾಗಿ ಕ್ರೌಡ್ ಫಂಡಿಂಗ್ ಮೂಲಕ ತನ್ನ ಕಾರ್ಯಚಟುವಟಿಕೆಗಳನ್ನು ಸಕ್ರಿಯವಾಗಿರಿಸುತ್ತದೆ. ಹಾಗಾಗಿ ಮಸ್ಕ್ ಟ್ವಿಟ್ಟರ್ ಸ್ವಾಧೀನದ ನಂತರವಂತೂ ಮಾಸ್ಟೋಡಾನ್ ಗೆ ಈಗ ಸಾಗರೋಪಾದಿಯಲ್ಲಿ ಜನರು ಇದಕ್ಕೆ ಸೇರುತ್ತಿದ್ದಾರೆ.
ಇದನ್ನೂ ಓದಿ: "ಖರ್ಗೆಯವರು ನೀಡಿರುವ ಎಚ್ಚರಿಕೆ ಮಾತುಗಳಂತೆ ನಾವು ನಡೆದುಕೊಳ್ತೇವೆ"
ಟ್ವಿಟರ್ ತೊರೆಯುವ ಚರ್ಚೆಯು ಇನ್ನೂ ಆರಂಭಿಕ ಹಂತದಲ್ಲಿದೆ ಮತ್ತು ಕೆಲವು ಬಳಕೆದಾರರು ಇನ್ನೂ ಪರ್ಯಾಯಗಳನ್ನು ಪರಿಗಣಿಸುತ್ತಿದ್ದಾರೆ, ಇತರರು ವೇದಿಕೆಯ ಬಳಕೆದಾರ ಇಂಟರ್ಫೇಸ್‌ನೊಂದಿಗೆ ಹತಾಶೆಯನ್ನು ವ್ಯಕ್ತಪಡಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ