ನವದೆಹಲಿ : ಬಹುತೇಕ ಮಂದಿ ಮೊಬೈಲ್ (Mobile) ಮತ್ತು ಸ್ಮಾರ್ಟ್ ಟಿವಿಯಲ್ಲಿ ಒಟಿಟಿಯೊಂದಿಗೆ ಮನರಂಜನೆಗಾಗಿ ನೆಟ್‌ಫ್ಲಿಕ್ಸ್ (Netflix) ವೀಕ್ಷಣೆ ಮಾಡುತ್ತಾರೆ. ಈ ಪ್ಲಾಟ್ ಫಾರಂನಲ್ಲಿ ಸಾವಿರಾರು ಚಲನಚಿತ್ರಗಳು ಮತ್ತು ವೆಬ್ ಸರಣಿಗಳ ಆನಂದ ಪಡೆಯಬಹುದು.  ಆದರೆ ಇದರ ಚಂದಾದಾರಿಕೆ (Subscription) ತುಸು ದುಬಾರಿ. ಈ ಕಾರಣದಿಂದಾಗಿ ಜನ ದರ ಚಂದಾದಾರಿಕೆ ಪಡೆಯಲು ಹಿಂದೆ ಮುಂದೆ ಯೋಚಿಸುತ್ತಾರೆ. ಆದರೆ ಇದೀಗ ಇದಕ್ಕೂ ಒಂದು ಮಾರ್ಗವಿದೆ. 


COMMERCIAL BREAK
SCROLL TO CONTINUE READING

ಉಚಿತವಾಗಿ ವೀಕ್ಷಿಸಬಹುದು ನೆಟ್ ಫ್ಲಿಕ್ಸ್ : 
ನೆಟ್‌ಫ್ಲಿಕ್ಸ್ (Netflix) ಅನ್ನು ಕೂಡಾ ಉಚಿತವಾಗಿ ವೀಕ್ಷಿಸಬಹುದು ಅನ್ನೋ ವಿಚಾರ ಬಹುತೇಕ ಜನರಿಗೆ ತಿಳಿದಿರಲಿಕ್ಕಿಲ್ಲ. ಇದಕ್ಕಾಗಿ ನೀವು ಈ OTTಯೊಂದಿಗೆ ನಿಮ್ಮ ಇಮೇಲ್ ವಿಳಾಸ ಅಥವಾ ಕ್ರೆಡಿಟ್ ಕಾರ್ಡ್ (Credit Card) ವಿವರಗಳನ್ನು ಸಹ ನಮೂದಿಸುವ ಅಗತ್ಯವಿಲ್ಲ.


ಇದನ್ನೂ ಓದಿ : Vodafone- Idea ರೀಚಾರ್ಜ್ ಯೋಜನೆ, ಕೇವಲ 2.76 ರೂ.ಗೆ ಸಿಗುತ್ತಿದೆ 1GB ಡೇಟಾ


ನೆಟ್ ಫ್ಲಿಕ್ಸ್ ಅನ್ನು ಫ್ರೀಯಾಗಿ ವೀಕ್ಷಿಸಲು ಹೀಗೆ ಮಾಡಿ :  
ಮಾಹಿತಿಯ ಪ್ರಕಾರ, ಈಗ ಅನೇಕ ಚಲನಚಿತ್ರಗಳು (Films) ಮತ್ತು ಸರಣಿಗಳನ್ನು ನೆಟ್‌ಫ್ಲಿಕ್ಸ್‌ನಲ್ಲಿ ಉಚಿತವಾಗಿ ವೀಕ್ಷಿಸಬಹುದು. ನೆಟ್‌ಫ್ಲಿಕ್ಸ್ ನ ಕೆಲವು ಕಂಟೆಂಟ್ ಗಳನ್ನು ಉಚಿತವಾಗಿ ವೀಕ್ಷಿಸಬಹುದು. ಅಂದರೆ, ನೀವು ಚಲನಚಿತ್ರ ಅಥವಾ ಸರಣಿಯ (Web series) ಮೇಲೆ ಕ್ಲಿಕ್ ಮಾಡಿದ ತಕ್ಷಣ, ಉಚಿತ ಸ್ಟ್ರೀಮಿಂಗ್ ಆಯ್ಕೆ ಕಾಣಿಸುತ್ತದೆ.


ಪ್ರಕ್ರಿಯೆ ಹೀಗಿರಲಿದೆ : 
ಮೊದಲಿಗೆ ನೀವು netflix.com/watch-free ಗೆ ಹೋಗಬೇಕು. ಪೇಜ್ ಒಪನ್ ಆದ ತಕ್ಷಣ ಅಲ್ಲಿ ಅನೇಕ ಆಯ್ಕೆಗಳನ್ನು ಕಾಣಬಹುದು. ಇಲ್ಲಿ Watch Now ಮೇಲೆ  ಕ್ಲಿಕ್ ಮಾಡಿ. Watch Now ಎಂದರೆ ಈ ಕಂಟೆಂಟನ್ನು ಉಚಿತವಾಗಿ ವೀಕ್ಷಿಸಬಹುದು ಎಂದರ್ಥ. 


ಇದನ್ನೂ ಓದಿ : ತನ್ನ ಗ್ರಾಹಕರಿಗಾಗಿ ವಿಶಿಷ್ಟ ಪ್ಲಾನ್ ಪರಿಚಯಿಸಿದ BSNL, ಈಗ ಚಿಲ್ಲರ್‌ನಲ್ಲಿ ಲಭ್ಯ ಫುಲ್ ಟಾಕ್‌ಟೈಮ್


ಜನಪ್ರಿಯ ಚಲನಚಿತ್ರಗಳನ್ನು ಆನಂದಿಸಬಹುದು : 
ಅಂದಹಾಗೆ, ನೆಟ್‌ಫ್ಲಿಕ್ಸ್‌ನಲ್ಲಿ ಅನೇಕ ಉತ್ತಮ ಚಲನಚಿತ್ರಗಳು (Cinema)ಮತ್ತು ಸರಣಿಗಳನ್ನು ಉಚಿತವಾಗಿ ವೀಕ್ಷಿಸಬಹುದಾಗಿದೆ. ಅವುಗಳಲ್ಲಿ ಲವ್ ಈಸ್ ಬ್ಲೈಂಡ್, ದಿ ಬಾಸ್ ಬೇಬಿ ಇನ್ ಬ್ಯುಸಿನೆಸ್ ಮತ್ತು ಸ್ಟ್ರೇಂಜರ್ ಥಿಂಗ್ಸ್ ಸಾಕಷ್ಟು ಜನಪ್ರಿಯವಾಗಿದೆ. ಇವೆಲ್ಲವನ್ನೂ ನೆಟ್‌ಫ್ಲಿಕ್ಸ್‌ನಲ್ಲಿ ಉಚಿತವಾಗಿ ವೀಕ್ಷಿಸಬಹುದು. ಈ ಎಲ್ಲಾ ಜನಪ್ರಿಯ ಸರಣಿಗಳ ಕೆಲವು ಕಂತುಗಳು ಮಾತ್ರ ಉಚಿತ ಎನ್ನಲಾಗಿದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.