ಇಂದೂ ಕೂಡ `ಮಹಾ ಸಂಯೋಗ`ವನ್ನು ನೋಡಬಹುದು!
ಹಿಂದೆ 1623ರಲ್ಲಿ ಇಂತಹ ಮಹಾ ಸಂಯೋಗ ಕಾಣಿಸಿಕೊಂಡಿತ್ತು. ಮುಂದೆ 2080ರಲ್ಲಿ, ಅಂದರೆ 60 ವರ್ಷಗಳ ಬಳಿಕ ಮತ್ತೆ ಗೋಚರಿಸುವ ಸಾಧ್ಯತೆ ಇದೆ ಎಂದು ನಾಸಾ ಅಭಿಪ್ರಾಯಪಟ್ಟಿದೆ.
ಬೆಂಗಳೂರು: ಗುರು ಮತ್ತು ಶನಿ ಗ್ರಹಗಳು ಅತ್ಯಂತ ಸಮೀಪಕ್ಕೆ ಬಂದಿರುವ ಸಂದರ್ಭವನ್ನು 'ಮಹಾ ಸಂಯೋಗ' (Maha Samyoga) ಎಂದು ಕರೆಯಲಾಗುತ್ತದೆ. ಬಹಳ ಅಪರೂಪಕ್ಕೆ ಜರಗುವ ಈ ಮಹಾ ಸಂಯೋಗವನ್ನು ವಿಶ್ವದಾದ್ಯಂತ ಖಗೋಳ (Astronomy) ವಿದ್ಯಮಾನದ ಬಗ್ಗೆ ಆಸಕ್ತಿ ಉಳ್ಳವರು ಸೋಮವಾರ ಸಂಜೆ ವೀಕ್ಷಿಸಿದ್ದಾರೆ. ಸೋಮವಾರ ಮಿಸ್ ಮಾಡಿಕೊಂಡಿದ್ದರೆ ಇಂದು ಕೂಡ ನೋಡುವ ಅವಕಾಶ ಇದೆ.
ಮಹಾ ಸಂಯೋಗವು 400 ವರ್ಷಗಳ ಬಳಿಕ ಘಟಿಸಿರುವ ವಿದ್ಯಮಾನವಾಗಿದೆ. ಹಾಗಾಗಿ ಈ ತಲೆಮಾರಿಗೆ ಮಹಾ ಸಂಯೋಗ ನೋಡುವ ಇದು ಮೊದಲ ಮತ್ತು ಕೊನೆಯ ಅವಕಾಶವಾಗಿದೆ.
ಸೋಮವಾರ ಸಂಜೆ ಗುರು ಮತ್ತು ಶನಿ ಗ್ರಹಗಳು ಅತ್ಯಂತ ಸಮೀಪಕ್ಕೆ ಬಂದಿದ್ದವು. 400 ವರ್ಷಗಳ ನಂತರ ಇದೇ ಮೊದಲ ಬಾರಿ ಭೂಮಿಗೆ ಅತ್ಯಂತ ಸಮೀಪಕ್ಕೆ ಬಂದ ಗುರು ಮತ್ತು ಶನಿ ಗ್ರಹಗಳೆರಡರ ದೃಶ್ಯವನ್ನು ವಿಜ್ಞಾನ-ತಂತ್ರಜ್ಞಾನ ಖಾತೆ ಸಚಿವರೂ ಆದ ಉಪಮುಖ್ಯಮಂತ್ರಿ ಡಾ. ಸಿ. ಎನ್. ಅಶ್ವತ್ಥನಾರಾಯಣ (Dr CN Ashwathnarayan) ಕಣ್ತುಂಬಿಕೊಂಡರು. ಮಂಗಳವಾರ ಕೂಡ ಎರಡೂ ಗ್ರಹಗಳು ಹತ್ತಿರದಲ್ಲೇ ಇರುತ್ತವೆಯಾದರೂ ಸೋಮವಾರದಷ್ಟು ಸನಿಹವಿರುವುದಿಲ್ಲ. ಈ ಅಪರೂಪದ ಚಿತ್ರಣ ಗೋಚರಿಸುವುದು ಸಂಜೆ 6.30 ರಿಂದ 7.30ರ ನಡುವೆ.
ಹೊಸ ಆಕಾಶಗಂಗೆಯನ್ನು ಪತ್ತೆಹಚ್ಚಿದ ಭಾರತೀಯ ವಿಜ್ಞಾನಿಗಳು, ಭೇಷ್ ಎಂದ NASA
ಇನ್ನು ಖಗೋಳ (Astronomy) ವಿದ್ಯಮಾನಗಳನ್ನು ಬರಿಗಣ್ಣಿನಿಂದ ನೋಡಬಹುದೇ ಎಂಬುದು ಸದಾ ಕಾಡುವ ಗೊಂದಲ. ಆದರೆ ಈ ಮಹಾ ಸಂಯೋಗವನ್ನು ಬರಿಗಣ್ಣಿನಿಂದ ನೋಡುವ ಸುಯೋಗ ಇದೆ. ಎರಡೂ ಗ್ರಹಗಳ ಹೊಳಪು ಪ್ರಬಲವಾಗಿರುವ ಕಾರಣ ಬರಿಗಣ್ಣಿನಿಂದ ನೋಡಿದರೂ ವೀಕ್ಷಣೆಗೆ ಲಭ್ಯ ಎಂದು ಎಂದು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ (NASA) ಹೇಳಿದೆ.
ಹಿಂದೆ 1623ರಲ್ಲಿ ಇಂತಹ ಮಹಾ ಸಂಯೋಗ ಕಾಣಿಸಿಕೊಂಡಿತ್ತು. ಮುಂದೆ 2080ರಲ್ಲಿ ಅಂದರೆ 60 ವರ್ಷಗಳ ಬಳಿಕ ಮತ್ತೆ ಗೋಚರಿಸುವ ಸಾಧ್ಯತೆ ಇದೆ ಎಂದು ನಾಸಾ ಅಭಿಪ್ರಾಯಪಟ್ಟಿದೆ. ಹಾಗಾಗಿ ಆಸಕ್ತರು ಇವತ್ತೇ ಆ ಸುಂದರ ಕ್ಷಣಗಳನ್ನು ಕಣ್ತುಂಬಿಕೊಳ್ಳಬಹುದು.
ಇದನ್ನೂ ಓದಿ: ಬಾಹ್ಯಾಕಾಶದಲ್ಲಿ ಅದ್ಭುತ ದೃಶ್ಯ: ಚಂದ್ರನೊಂದಿಗೆ ಕಾಣಲಿದೆ ಒಟ್ಟು 5 ಗ್ರಹಗಳು
ಮಹಾ ಸಂಯೋಗವನ್ನು ಯಾವ್ಯಾವ ದೇಶಗಳ ಯಾವ್ಯಾವ ನಗರಗಳಲ್ಲಿ ಎಷ್ಟು ಗಂಟೆಗೆ ನೋಡಬಹುದು ಎಂದು ಖ್ಯಾತ ಗ್ರಹ ಖಗೋಳಶಾಸ್ತ್ರಜ್ಞ ಡಾ. ಜೇಮ್ಸ್ ಒ'ಡೊನೊಘ್ಯೂ(Dr. James O'Donoghue) ಟ್ವೀಟ್ ಮಾಡಿದ್ದಾರೆ. ಕೆಲವೆಡೆ ನಾಳೆಯೂ (ಮಂಗಳ ವಾರ) ಗೋಚರಿಸಲಿದೆ.
* ಲಾಸ್ ಏಂಜಲೀಸ್ 9.43
* ನ್ಯೂಯಾರ್ಕ್ 12.43
* ರಿಯೋ ಡಿ ಜನೈರೊ – 2.43
* ಲಂಡನ್ – 5.43
* ಪ್ಯಾರಿಸ್ – 6.43
* ಇಸ್ತಾಂಬುಲ್ – 8.43
* ದುಬೈ – 9.43
* ನವದೆಹಲಿ – 11.13 (ರಾತ್ರಿ)
* ಟೋಕಿಯೊ – 2.43 (ಡಿಸೆಂಬರ್ 22ರ ಮುಂಜಾನೆ)
* ಸಿಡ್ನಿ – 04.43 (ಡಿಸೆಂಬರ್ 22ರ ಮುಂಜಾನೆ)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.