Twitter ಗೆ ಟಕ್ಕರ್ ನೀಡಲು ಬಂದ ದೇಶಿ ಪ್ಲಾಟ್ಫಾರ್ಮ್ Tooter, ಖಾತೆ ತೆರೆದ Modi, ಅಮಿತ್ ಷಾ
ಮೇಡ್ ಇನ್ ಇಂಡಿಯಾ ಅಭಿಯಾನ ಅಡಿ ಸ್ವದೇಶಿ ಸಾಮಾಜಿಕ ನೆಟ್ವರ್ಕ್ ಟೂಟರ್ ಅನ್ನು ಪ್ರಾರಂಭಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಟೂಟರ್‌ನಲ್ಲಿ ತಮ್ಮ ಖಾತೆ ತೆರೆದಿದ್ದಾರೆ.
ನವದೆಹಲಿ: ಸಾಮಾಜಿಕ ನೆಟ್ವರ್ಕಿಂಗ್ ಸೈಟ್ ಟ್ವಿಟ್ಟರ್ನೊಂದಿಗೆ (Twitter) ಸ್ಪರ್ಧಿಸಲು, ಭಾರತೀಯ ಸಾಮಾಜಿಕ ನೆಟ್ವರ್ಕಿಂಗ್ ಪ್ಲಾಟ್ಫಾರ್ಮ್ ಟೂಟರ್ (Tooter) ಪ್ರಾರಂಭಿಸಲಾಗಿದೆ. ಸ್ವದೇಶಿ ಸಾಮಾಜಿಕ ನೆಟ್ವರ್ಕ್ Tooter ಅನ್ನು ಮೇಡ್ ಇನ್ ಇಂಡಿಯಾ ಉಪಕ್ರಮದ ಅಡಿಯಲ್ಲಿ ಪ್ರಾರಂಭಿಸಲಾಗಿದೆ ಮತ್ತು ಇಂಟರ್ನೆಟ್ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಅನೇಕ ನಾಯಕರು ತಮ್ಮ ಖಾತೆಗಳನ್ನು ಟೂಟರ್ ನಲ್ಲಿ ರಚಿಸಿದ್ದಾರೆ.
ಇದನ್ನು ಓದಿ- ವಿಶ್ವ ದಾಖಲೆ ಬರೆದ RBI Twitter ಹ್ಯಾಂಡಲ್, Followers ಗಳ ಸಂಖ್ಯೆ ಎಷ್ಟು ಗೊತ್ತಾ?
ಈ ವರ್ಷದ ಜೂನ್ ಹಾಗೂ ಜುಲೈ ನಲ್ಲಿ ಆರಂಭಗೊಂಡಿದೆ
ಈ ವರ್ಷ ಜೂನ್-ಜುಲೈನಲ್ಲಿ ಟೂಟರ್ ಅನ್ನು ಬಿಡುಗಡೆ ಮಾಡಲಾಗಿತ್ತು. ಆದರೆ ಈಗ ಅದು ಜನರಲ್ಲಿ ಚರ್ಚೆ ಹುಟ್ಟುಹಾಕಿದೆ. ಈ ಕುರಿತು ತನ್ನ ಸೈಟ್ ನ About Us ವಿಭಾಗದಲ್ಲಿ ಹೇಳಿಕೊಂಡಿರುವ ಟೂಟರ್ 'ಭಾರತದಲ್ಲಿ ಸ್ಥಳೀಯ ಸಾಮಾಜಿಕ ನೆಟ್ವರ್ಕ್ ಇರಬೇಕು ಎಂದು ನಾವು ನಂಬುತ್ತೇವೆ. ಟೂಟರ್ ನಮ್ಮ ಸ್ವದೇಶಿ ಚಳುವಳಿ 2.0 ಆಗಿದ್ದು, ಈ ಆಂದೋಲನದಲ್ಲಿ ನೀವು ನಮ್ಮೊಂದಿಗೆ ಸೇರಿ' ಎಂದು ಹೇಳಿದೆ.
ಇದನ್ನು ಓದಿ- ಏಕಾಏಕಿ Twitter ನಲ್ಲಿ ನಟಿ ರಕುಲ್ ಪ್ರೀತ್ ಸಿಂಗ್ ಟ್ರೆಂಡಿಂಗ್ ಆಗಿದ್ದೇಕೆ?
ಪ್ರಧಾನಿ ಮೋದಿ ಸೇರಿದಂತೆ ಈ ಗಣ್ಯರು ಖಾತೆ ತೆರೆದಿದ್ದಾರೆ
Tooterನಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕೃತ ಖಾತೆ ಹೊಂದಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಷಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಸದ್ಗುರು ಕೂಡ tooter ನಲ್ಲಿ ಖಾತೆ ಹೊಂದಿದ್ದರೆ. ಇವರಲ್ಲದೆ BJP ಕೂಡ ಟೂಟರ್ ನಲ್ಲಿ ಅಧಿಕೃತ ಖಾತೆ ಹೊಂದಿದೆ.
ಇದನ್ನು ಓದಿ-ಲೇಹ್ ನ್ನು ಚೀನಾದ ಭಾಗವಾಗಿ ತೋರಿಸಿದ್ದ ಟ್ವಿಟ್ಟರ್ ನಿಂದ ಲಿಖಿತ ಕ್ಷಮೆಯಾಚನೆ
ಏನಿದು TOOTER ಮತ್ತು ಅದನ್ನು ಹೇಗೆ ಬಳಸಬೇಕು?
ಟೂಟರ್ನ ವಿನ್ಯಾಸ ಮತ್ತು ಇಂಟರ್ಫೇಸ್ ಟ್ವಿಟರ್ಗೆ ಸಂಪೂರ್ಣವಾಗಿ ಹೋಲುತ್ತದೆ ಮತ್ತು ಅದರ ಲಾಂಛನದಲ್ಲಿ ನೀಲಿ ಶಂಖವಿದೆ. ಟೂಟರ್ ನಲ್ಲಿ ಖಾತೆಯನ್ನು ರಚಿಸಿದ ನಂತರ, ನೀವು ಜನರನ್ನು ಸೇರಿಸಬಹುದು, ಸುದ್ದಿ ಫೀಡ್‌ನಲ್ಲಿ ಇತರ ಜನರ ಪೋಸ್ಟ್‌ಗಳನ್ನು ನೋಡಬಹುದು ಮತ್ತು ನೀವೇ ಟ್ವೀಟ್ ಮಾಡಬಹುದು. ಟೂಟರ್ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ ಮತ್ತು ಇದನ್ನು ಟೂಟರ್.ಇನ್ ವೆಬ್‌ಸೈಟ್‌ನಲ್ಲಿಯೂ ಬಳಸಬಹುದು. ಐಒಎಸ್ ಬಳಕೆದಾರರಿಗೆ ಇದೀಗ ಅಪ್ಲಿಕೇಶನ್ ಲಭ್ಯವಿಲ್ಲದಿದ್ದರೂ. ಟೂಟರ್‌ನಲ್ಲಿ ಹೆಸರು, ಇಮೇಲ್ ಐಡಿ ಮತ್ತು ಪಾಸ್‌ವರ್ಡ್ ಹಾಕುವ ಮೂಲಕ ಖಾತೆಯನ್ನು ರಚಿಸಬಹುದು.