ವಿಶ್ವ ದಾಖಲೆ ಬರೆದ RBI Twitter ಹ್ಯಾಂಡಲ್, Followers ಗಳ ಸಂಖ್ಯೆ ಎಷ್ಟು ಗೊತ್ತಾ?

ಯುಎಸ್ ಫೆಡರಲ್ ರಿಸರ್ವ್ ಮತ್ತು ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ (UCB) ಗಳನ್ನು ಹಿಂದಿಕ್ಕಿರುವ ಭಾರತೀಯ ರಿಸರ್ವ್ ಬ್ಯಾಂಕ್ (RBI) ವಿಶ್ವ ದಾಖಲೆ ಬರೆದಿದೆ.

Last Updated : Nov 22, 2020, 07:11 PM IST
ವಿಶ್ವ ದಾಖಲೆ ಬರೆದ RBI Twitter ಹ್ಯಾಂಡಲ್, Followers ಗಳ ಸಂಖ್ಯೆ ಎಷ್ಟು ಗೊತ್ತಾ? title=

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (RBI) ಹೆಸರಿನಲ್ಲಿ ವಿಶ್ವದಾಖಲೆಯೊಂದು ನಿರ್ಮಾಣಗೊಂಡಿದೆ. ಆರ್‌ಬಿಐನ ಟ್ವಿಟರ್‌ನಲ್ಲಿ ಅನುಯಾಯಿಗಳ ಸಂಖ್ಯೆ 10 ಲಕ್ಷ ದಾಟಿದೆ. ಈ ಸಾಧನೆ ಮಾಡಿದ ವಿಶ್ವದ ಮೊದಲ ಕೇಂದ್ರೀಯ ಬ್ಯಾಂಕ್ ಎಂಬ ಹೆಗ್ಗಳಿಕೆಗೆ  RBI ಪಾತ್ರವಾಗಿದೆ. ಮೈಕ್ರೋಬ್ಲಾಗಿಂಗ್ ಸೈಟ್‌ನಲ್ಲಿ 1 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ರಿಸರ್ವ್ ಬ್ಯಾಂಕ್,  ಅಮೆರಿಕಾದ ಫೆಡರಲ್ ರಿಸರ್ವ್ ಮತ್ತು ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ (ECB)ಯನ್ನು ಹಿಂದಿಕ್ಕಿದೆ.

ಇದನ್ನು ಓದಿ-Lakshmi Vilas Bank ವಿಲೀನದ ಬಗ್ಗೆ RBI ಏನು ಹೇಳಿದೆ?

ರಿಸರ್ವ್ ಬ್ಯಾಂಕ್ ನ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ RBI ಟ್ವಿಟ್ಟರ್ ಹ್ಯಾಂಡಲ್ ಹಿಂಬಾಲಕರ ಸಂಖ್ಯೆ 27 ಸೆಪ್ಟೆಂಬರ್ ಗೆ 9.66 ಲಕ್ಷರಷ್ಟಿತ್ತು ಮತ್ತು ಇದೀಗ ಅದು 10 ಲಕ್ಷ ದಾಟಿದೆ. ಈ ಕುರಿತು ಭಾನುವಾರ ಟ್ವೀಟ್ ಮಾಡಿರುವ RBI ಗವರ್ನರ್ ಶಕ್ತಿಕಾಂತ್ ದಾಸ್, "ರಿಸರ್ವ್ ಬ್ಯಾಂಕ್ ಟ್ವಿಟ್ಟರ್ ಖಾತೆಯ ಮೇಲೆ ಇಂದು ಅನುಯಾಯಿಗಳ ಸಂಖ್ಯೆ 10 ಲಕ್ಷ ತಲುಪಿದೆ. ಇದಕ್ಕಾಗಿ RBIನ ಎಲ್ಲ ನನ್ನ ಸಹೋದ್ಯೋಗಿಗಳಿಗೆ ಅಭಿನಂದನೆಗಳು" ಎಂದಿದ್ದಾರೆ.

ಟಾಪ್ 10 ನಲ್ಲಿ ಮತ್ತೆ ಯಾವ ಕೇಂದ್ರೀಯ ಬ್ಯಾಂಕ್ ಗಳಿವೆ?
RBI ಬಳಿಕ ಟ್ವಿಟ್ಟರ್ ನಲ್ಲಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಬ್ಯಾಂಕ್ ಎಂದರೆ ಅದು ಮೆಕ್ಸಿಕೋದ Banco de Mexico. ಈ ಬ್ಯಾಂಕ್ 7.74 ಲಕ್ಷ ಫಾಲೋವರ್ಸ್ ಗಳನ್ನು ಹೊಂದಿದೆ. ಇದಾದ ಬಳಿಕ 7.57 ಲಕ್ಷ ಹಿಂಬಾಲಕರ ಜೊತೆಗೆ ಬ್ಯಾಂಕ್ ಆಫ್ ಇಂಡೋನೇಷ್ಯಾ ಇದೆ. ವಿಶ್ವದ ಅತ್ಯಂತ ಶಕ್ತಿಶಾಲಿ ಸೆಂಟ್ರಲ್ ಬ್ಯಾಂಕ್ ಎಂದೇ ಖ್ಯಾತ ಫೆಡರಲ್ ರಿಸರ್ವ್ ಟ್ವಿಟ್ಟರ್ ನಲ್ಲಿ 6.67 ಲಕ್ಷ ಹಿಂಬಾಲಕರನ್ನು ಹೊಂದಿದ್ದು, ನಾಲ್ಕನೇ ಸ್ಥಾನದಲ್ಲಿದೆ. ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ 5.91ಲಕ್ಷ ಫಾಲೋವರ್ಸ್ ಗಳನ್ನು ಹೊಂದಿದೆ.

ಇದನ್ನು ಓದಿ-ಮುಂದಿನ ತಿಂಗಳಿನಿಂದ Money Transfer ನಿಯಮದಲ್ಲಾಗಲಿದೆ ಬದಲಾವಣೆ... ನೀವೂ ತಿಳಿದುಕೊಳ್ಳಿ

ಸೆಂಟ್ರಲ್ ಬ್ಯಾಂಕ್ ಆಫ್ ಬ್ರೆಜಿಲ್ (3.82 ಲಕ್ಷ) ಆರನೇ ಸ್ಥಾನ, ಬ್ಯಾಂಕ್ ಆಫ್ ಇಂಗ್ಲೆಂಡ್ (3.17 ಲಕ್ಷ ) ಏಳನೇ ಸ್ಥಾನದಲ್ಲಿದೆ. ಬ್ಯಾಂಕ್ ಆಫ್ ಕೆನಡಾ (1.80 ಲಕ್ಷ) 8 ನೇ ಸ್ಥಾನದಲ್ಲಿದೆ. ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ್ (1.16 ಲಕ್ಷ ) 9ನೇ ಸ್ಥಾನದಲ್ಲಿದ್ದರೆ, 10 ನೆ ಸ್ಥಾನದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಆಸ್ಟ್ರೇಲಿಯಾ (49,200) ಇದೆ.

ಇದನ್ನು ಓದಿ- ನಿಮ್ಮ ಖಾತೆಯಲ್ಲಿ 5 ಲಕ್ಷ ರೂಪಾಯಿಗಿಂತ ಹೆಚ್ಚಿನ ಹಣವನ್ನು ಏಕೆ ಇಡಬಾರದು?

2012 ರಲ್ಲಿ ಟ್ವಿಟ್ಟರ್ ಮೇಲೆ ಲಗ್ಗೆ ಇಟ್ಟ RBI 
ಅಮೆರಿಕಾದ ಸೆಂಟ್ರಲ್ ಬ್ಯಾಂಕ್ ಮಾರ್ಚ್ 2009 ರಲ್ಲಿ ಟ್ವಿಟ್ಟರ್ ಸೇರಿತ್ತು. ECB ಅದೇ ವರ್ಷದ ಅಕ್ಟೋಬರ್ ನಲ್ಲಿ ಜೋಡಣೆಯಾಗಿತ್ತು. 85 ವರ್ಷಗಳಷ್ಟು ಇತಿಹಾಸ ಹೊಂದಿರುವ ಭಾರತೀಯ ರಿಸರ್ವ್ ಬ್ಯಾಂಕ್ ಜನವರಿ 2012 ರಲ್ಲಿ ಟ್ವಿಟ್ಟರ್ ಗೆ ಲಗ್ಗೆ ಇಟ್ಟಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಪ್ರತ್ಯೇಕ ಟ್ವಿಟ್ಟರ್ ಖಾತೆಯನ್ನು ಹೊಂದಿದ್ದಾರೆ. ಅವರ ಖಾತೆಗೆ 1.35 ಲಕ್ಷ ಹಿಂಬಾಲಕರಿದ್ದಾರೆ.

Trending News