ಮಾರಾಟದಲ್ಲಿ ಎಲ್ಲಾ ವಾಹನಗಳನ್ನು ಹಿಂದಿಕ್ಕಿ ನಂಬರ್ ಒನ್ ಸ್ಥಾನಕ್ಕೆ ಏರಿದ SUV ಇಲ್ಲಿದೆ ನೋಡಿ!
Best Selling SUV :ಮಾರ್ಚ್‌ನಲ್ಲಿ ಮಾರಾಟವಾದ ಟಾಪ್ 5 ಎಸ್‌ಯುವಿಗಳ ಪಟ್ಟಿಯಲ್ಲಿ ಮಾರುತಿ ಬ್ರೆಝಾ ಅಗ್ರಸ್ಥಾನದಲ್ಲಿದೆ. ಫೆಬ್ರವರಿಯಲ್ಲಿ ಕೂಡಾ ಇದೇ ಕಾರು ಅತಿ ಹೆಚ್ಚು ಮಾರಾಟವಾದ ಎಸ್ಯುವಿ ಪೈಕಿ ಮೊದಲ ಸ್ಥಾನದಲ್ಲಿತ್ತು. ಅಂದರೆ ಸತತ ಎರಡನೇ ಮಾಸದಲ್ಲಿಯೂ ಮಾರುತಿ ಬ್ರೆಝಾ ತನ್ನ ಸ್ಥಾನವನ್ನು ಕಾಯ್ದುಕೊಂಡಿದೆ.
Best Selling SUV : ಫೆಬ್ರವರಿ ತಿಂಗಳಂತೆ, ಮಾರ್ಚ್‌ನಲ್ಲಿಯೂ ಹೆಚ್ಚು ಮಾರಾಟವಾದ SUV ಮಾರುತಿ ಸುಜುಕಿ ಬ್ರೆಝಾ ಆಗಿದೆ. ಟಾಟಾ ನೆಕ್ಸಾನ್ ಮತ್ತು ಹ್ಯುಂಡೈ ಕ್ರೆಟಾದಂತಹ ಎಸ್‌ಯುವಿಗಳನ್ನು ಮಣಿಸಿರುವ ಮಾರುತಿ ಸುಜುಕಿ ಬ್ರೆಝಾ ಮೊದಲ ಸ್ಥಾನದಲ್ಲಿದೆ. ಮಾರುತಿ ಸುಜುಕಿ ಬ್ರೆಝಾ ಸತತವಾಗಿ ಎರಡು ತಿಂಗಳಿನಿಂದ ಹೆಚ್ಚು ಮಾರಾಟವಾಗುವ SUV ಆಗಿ ಹೊರಹೊಮ್ಮಿದೆ. ಮಾರ್ಚ್‌ನಲ್ಲಿ ಮಾರಾಟವಾದ ಟಾಪ್ 5 ಎಸ್‌ಯುವಿಗಳ ಬಗ್ಗೆ ಮಾತನಾಡುವುದಾದರೆ, ಪಟ್ಟಿಯಲ್ಲಿ ಮಾರುತಿ ಬ್ರೆಝಾ ಅಗ್ರಸ್ಥಾನದಲ್ಲಿದೆ. ಟಾಟಾ ನೆಕ್ಸಾನ್ ಎರಡನೇ ಸ್ಥಾನದಲ್ಲಿದ್ದು, ಹುಂಡೈ ಕ್ರೆಟಾ ಮೂರನೇ ಸ್ಥಾನದಲ್ಲಿ, ಟಾಟಾ ಪಂಚ್ ನಾಲ್ಕನೇ ಮತ್ತು ಮಾರುತಿ ಗ್ರ್ಯಾಂಡ್ ವಿಟಾರಾ ಐದನೇ ಸ್ಥಾನದಲ್ಲಿದೆ.
1. ಸತತ ಎರಡನೇ ತಿಂಗಳು ಅಗ್ರ ಸ್ಥಾನದಲ್ಲಿ :
ಮಾರ್ಚ್‌ನಲ್ಲಿಯೂ ಹೆಚ್ಚು ಮಾರಾಟವಾದ SUV ಎನ್ನುವ ಹೆಗ್ಗಳಿಕೆಗೆ ಮಾರುತಿ ಬ್ರೆಝಾ ಪಾತ್ರವಾಗಿದೆ. ಮಾರ್ಚ್ 2023 ರಲ್ಲಿ, ಬ್ರೆಝಾದ 16,227 ಯುನಿಟ್‌ಗಳು ಮಾರಾಟವಾಗಿವೆ. ಹಿಂದಿನ ತಿಂಗಳು ಅಂದರೆ ಫೆಬ್ರವರಿ 2023 ರಲ್ಲಿ, 15,787 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ಅಂದರೆ ಒಂದು ತಿಂಗಳಲ್ಲಿ ಮಾರಟವಾದ ಕಾರುಗಳ ಸಂಖ್ಯೆಯಲ್ಲಿಯೂ ಹೆಚ್ಚಳ ಕಂಡು ಬಂದಿದೆ. ಮಾರುತಿ ಬ್ರೆಝಾ ಬೆಲೆ ರೂ.8.27 ಲಕ್ಷದಿಂದ ರೂ.14.13 ಲಕ್ಷದವರೆಗೆ ಇರುತ್ತದೆ.
ಇದನ್ನೂ ಓದಿ : ಸರ್ಕಾರದ ಈ ಯೋಜನೆಯನ್ನು ಸದುಪಯೋಗಪಡಿಸಿಕೊಂಡರೆ ಉಚಿತವಾಗಿ ಸಿಗಲಿದೆ ವಿದ್ಯುತ್
2. ಟಾಟಾ ನೆಕ್ಸಾನ್ :
ಟಾಟಾ ನೆಕ್ಸಾನ್ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಮಾರ್ಚ್ 2023 ರಲ್ಲಿ ಒಟ್ಟು 14,769 ಯುನಿಟ್‌ಗಳನ್ನು ಮಾರಾಟವಾಗಿರುವ ಈ ಕಾರು, ಫೆಬ್ರವರಿಯಲ್ಲಿ 14,518 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಒಟ್ಟಾರೆ ಕಾರು ಮಾರಾಟದಲ್ಲಿ ಟಾಟಾ ನೆಕ್ಸಾನ್ ಎರಡನೇ ಸ್ಥಾನದಲ್ಲಿದೆ.
3. ಹ್ಯುಂಡೈ ಕ್ರೆಟಾ :
ಹ್ಯುಂಡೈ ಕ್ರೆಟಾ ಮಾರ್ಚ್ 2023 ರಲ್ಲಿ ಮೂರನೇ ಅತ್ಯುತ್ತಮ ಮಾರಾಟವಾದ SUV ಆಗಿದೆ. ಹಿಂದಿನ ತಿಂಗಳಿಗೆ ಹೋಲಿಸಿದರೆ ಈ ತಿಂಗಳು 1,160 ಯೂನಿಟ್ ಗಳ ಹೆಚ್ಚಳ ಕಂಡು ಬಂದಿದೆ. ಮಾರ್ಚ್ ತಿಂಗಳಲ್ಲಿ ಒಟ್ಟು 14,026 ಯುನಿಟ್‌ಗಳು ಮಾರಾಟವಾಗಿದೆ.
4. ಟಾಟಾ ಪಂಚ್ :
ಈ ಮೈಕ್ರೋ SUV ಮಾರಾಟವಾದ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಮಾರ್ಚ್ 2023 ರಲ್ಲಿ ಒಟ್ಟು 10,894 ಯುನಿಟ್‌ಗಳು ಮಾರಾಟವಾಗಿದ್ದರೆ, ಫೆಬ್ರವರಿ 2023 ರಲ್ಲಿ ಇದು 9,592 ಯುನಿಟ್‌ಗಳನ್ನು ಮಾರಾಟ ಮಾಡಿದೆ.
ಇದನ್ನೂ ಓದಿ : ಬೇಸಿಗೆಯಲ್ಲಿ ಸೊಳ್ಳೆ ಕಾಟ ಜಾಸ್ತಿ ಆಗಿದ್ಯಾ? ನಿಮ್ಮ ಸಮಸ್ಯೆಗೆ ಪರಿಹಾರ ನೀಡುತ್ತೇ ಈ ಪುಟ್ಟ ಲ್ಯಾಂಪ್
5. ಮಾರುತಿ ಸುಜುಕಿ ಗ್ರಾಂಡ್ ವಿಟಾರಾ :
ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಮೊದಲ ಬಾರಿಗೆ ದೇಶದಲ್ಲಿ 10 ಹೆಚ್ಚು ಮಾರಾಟವಾಗುವ ಕಾರುಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಮಾರ್ಚ್ 2023 ರಲ್ಲಿ, ಒಟ್ಟು 10,045 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದ್ದು, ಅತಿ ಹೆಚ್ಚು ಮಾರಾಟವಾದ SUV ಲಿಸ್ಟ್ ನಲ್ಲಿ ಐದನೇ ಸ್ಥಾನ ಪಡೆದುಕೊಂಡಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.