ಬೇಸಿಗೆಯಲ್ಲಿ ಸೊಳ್ಳೆ ಕಾಟ ಜಾಸ್ತಿ ಆಗಿದ್ಯಾ? ನಿಮ್ಮ ಸಮಸ್ಯೆಗೆ ಪರಿಹಾರ ನೀಡುತ್ತೇ ಈ ಪುಟ್ಟ ಲ್ಯಾಂಪ್

Mosquito Killer Lamp: ಬೇಸಿಗೆ ಬಂತೆಂದರೆ ಸೆಕೆ ಒಂದೆಡೆಯಾದರೆ ಈ ಸೊಳ್ಳೆಗಳ ಕಾಟ ಮತ್ತೊಂದೆಡೆ. ನೀವೂ ಕೂಡ ಸೊಳ್ಳೆಗಳ ಕಾಟದಿಂದ ಬೇಸತ್ತಿದ್ದರೆ ಈ ಸಮಸ್ಯೆಗೆ ಸುಲಭವಾಗಿ ಪರಿಹಾರವನ್ನು ಪಡೆಯಬಹುದು. ಇದಕ್ಕಾಗಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಪರಿಸರ ಸ್ನೇಹಿ ಸೊಳ್ಳೆ ಕಿಲ್ಲರ್ ಸಾಧನ. 

Written by - Yashaswini V | Last Updated : Apr 13, 2023, 08:13 AM IST
  • ಈ ಸಾಧನವು ಸೊಳ್ಳೆಗಳನ್ನು ನಾಶಪಡಿಸಲು ಬಹಳ ಪರಿಣಾಮಕಾರಿ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ.
  • ಈ ಸಾಧನದ ಮೊದಲ ಘಟಕವು ಸೊಳ್ಳೆಗಳನ್ನು ಆಕರ್ಷಿಸುವ ನೀಲಿ ಬಣ್ಣದ ದೀಪಗಳನ್ನು ಹೊಂದಿದೆ. ಸೊಳ್ಳೆಗಳು ಲೈಟಿಂಗ್ ಬಳಿ ಬಂದಾಗ, ಕೊಲ್ಲಲ್ಪಡುತ್ತವೆ.
  • ಇದರ ಎರಡನೇ ಘಟಕದಲ್ಲಿರುವ ಶಕ್ತಿಯುತ ಮೋಟಾರ್ ಅವುಗಳನ್ನು ಎಳೆದು ನಾಶಪಡಿಸುತ್ತವೆ.
ಬೇಸಿಗೆಯಲ್ಲಿ ಸೊಳ್ಳೆ ಕಾಟ ಜಾಸ್ತಿ ಆಗಿದ್ಯಾ? ನಿಮ್ಮ ಸಮಸ್ಯೆಗೆ ಪರಿಹಾರ ನೀಡುತ್ತೇ ಈ ಪುಟ್ಟ ಲ್ಯಾಂಪ್ title=
Mosquito Killer

Mosquito Killer Lamp: ಬೇರೆ ಋತುಗಳಿಗಿಂತ ಬೇಸಿಗೆಯಲ್ಲಿ ಸೊಳ್ಳೆ ಕಾಟ ಕೊಂಚ ಹೆಚ್ಚಾಗಿಯೇ ಇರುತ್ತದೆ. ಇದರಿಂದ ಮುಕ್ತಿ ಪಡೆಯಲು ಕೆಲವರು ಸೊಳ್ಳೆ ಪರದೆಗಳನ್ನು ಬಳಸಿದರೆ, ಇನ್ನೂ ಕೆಲವರು ಸೊಳ್ಳೆ ಬತ್ತಿ, ಇಲ್ಲವೇ, ಲಿಕ್ವಿಡ್ ಅನ್ನು ಬಳಸುತ್ತಾರೆ. ಆದರೆ, ಕೆಲವರಿಗೆ ಅಲರ್ಜಿ ಉಂಟಾಗುವುದರಿಂದ ಇವುಗಳನ್ನು ಬಳಸುವುದನ್ನು ತಪ್ಪಿಸುತ್ತಾರೆ. ಈ ತಂತ್ರಜ್ಞಾನ ಯುಗದಲ್ಲಿ ಪರಿಸರ ಸ್ನೇಹಿ ಸೊಳ್ಳೆ ಕಿಲ್ಲರ್ ಸಾಧನ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇದು ಸೊಳ್ಳೆಗಳಿಂದ ನಿಮಗೆ ಮುಕ್ತಿ ನೀಡುವುದು ಮಾತ್ರವಲ್ಲ ಆರೋಗ್ಯಕ್ಕೂ ಯಾವುದೇ ರೀತಿಯ ಹಾನಿಯನ್ನುಂಟು ಮಾಡುವುದಿಲ್ಲ ಎಂಬುದು ಇದರ ವಿಶೇಷತೆ. ಆ ಸಾಧನವೆ ಮಸ್ಕಿಟೊ ಕಿಲ್ಲರ್ ಲ್ಯಾಂಪ್.

ಮಸ್ಕಿಟೊ ಕಿಲ್ಲರ್ ಲ್ಯಾಂಪ್ ಅಥವಾ ಸೊಳ್ಳೆ ಕಿಲ್ಲರ್ ಲ್ಯಾಂಪ್ ಬಹಳ ಕಡಿಮೆ ವೆಚ್ಚದಲ್ಲಿ ಲಭ್ಯವಿರುವ ಸಾಧನ. ಇದನ್ನು ಅಮೆಜಾನ್ನಲ್ಲಿ ಕೇವಲ 689ರೂ.ಗಳಿಗೆ ಖರೀದಿಸಬಹುದಾಗಿದೆ.ಇದರ ಹೆಸರು ಬಗ್ ಝಾಪರ್ ಸೊಳ್ಳೆ ಮತ್ತು ಫ್ಲೈ ಕಿಲ್ಲರ್ ಇಂಡೋರ್ ಲೈಟ್ ವಿತ್ ಎಲೆಕ್ಟ್ರಿಕ್ ಕಿಲ್ಲಿಂಗ್ ಲ್ಯಾಂಪ್ ಪೋರ್ಟಬಲ್ ಯುಎಸ್‌ಬಿ ಎಲ್ಇಡಿ ಟ್ರ್ಯಾಪ್(Bug Zapper Mosquito and Fly Killer Indoor Light with Electric Killing Lamp Portable USB LED Trap). 

ಇದನ್ನೂ ಓದಿ- ತಂಪಾದ ಹವಾ ಜೊತೆಗೆ ವಿದ್ಯುತ್ ಬಿಲ್ ಉಳಿತಾಯಕ್ಕಾಗಿ ಎಸಿಯನ್ನು ಇಷ್ಟು ತಾಪಮಾನದಲ್ಲಿ ಚಲಾಯಿಸಿ!

ಈ ಮಸ್ಕಿಟೊ ಕಿಲ್ಲರ್ ಲ್ಯಾಂಪ್ ಹೇಗೆ ಕೆಲಸ ಮಾಡುತ್ತದೆ?
ಪರಿಸರ ಸ್ನೇಹಿ ಮಸ್ಕಿಟೊ ಕಿಲ್ಲರ್ ಲ್ಯಾಂಪ್ ಎರಡು ಘಟಕಗಳಿಂದ ಮಾಡಲ್ಪಟ್ಟಿದೆ. ಒಂದು ಘಟಕವು ರೇಖೆಯಂತೆ ಕಾರ್ಯನಿರ್ವಹಿಸಿದರೆ, ಇನ್ನೊಂದು ಘಟಕವು ಹೀರುವಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ವಿದ್ಯುತ್ ಮೂಲಕ ಕಾರ್ಯ ನಿರ್ವಹಿಸುವ ಎರಡು ಘಟಕಗಳಿಂದ ತಯಾರಿಸಿದ ಈ ಸಾಧನದಲ್ಲಿ, ಸೊಳ್ಳೆಗಳು ಸ್ವಯಂಚಾಲಿತವಾಗಿ ಎಳೆಯಲ್ಪಡುತ್ತವೆ. ಮಾತ್ರವಲ್ಲ, ಅವುಗಳನ್ನು ನಾಶ ಪಡಿಸುತ್ತವೆ. ಈ ಸಾಧನದ ಪ್ರಮುಖ ವಿಶೇಷತೆ ಎಂದರೆ ಇದು ಕ್ಷಣಾರ್ಧದಲ್ಲಿ ನೂರಾರು ಸೊಲ್ಲೆಗಳನ್ನು ತನ್ನತ್ತ ಸೆಳೆದು ಕೊಲ್ಲುತ್ತದೆ. 

ಇದನ್ನೂ ಓದಿ- ನಿಮ್ಮ ಫೋನಿಗೂ ಈ ಮೆಸೇಜ್ ಬಂದಿದ್ದರೆ ತಕ್ಷಣ ಡಿಲೀಟ್ ಮಾಡಿ! ಇಲ್ಲವಾದರೆ ಖಾತೆ ಆಗುವುದು ಖಾಲಿ

ಈ ಸೊಳ್ಳೆ ಕಿಲ್ಲರ್ ಸಾಧನವನ್ನು ಮನೆ, ಕಚೇರಿ ಹೀಗೆ ಎಲ್ಲಿ ಬೇಕಾದರೂ ಸುಲಭವಾಗಿ ಬಳಸಬಹುದಾಗಿದೆ. ಪರಿಸರ ಸ್ನೇಹಿಯಾದ ಈ ಮಸ್ಕಿಟೊ ಕಿಲ್ಲರ್ ಲ್ಯಾಂಪ್ ಬಳಸುವುದರಿಂದ ಆರೋಗ್ಯಕ್ಕೂ ಯಾವುದೇ ರೀತಿಯ ಹಾನಿ ಉಂಟಾಗುವುದಿಲ್ಲ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News