TRAI Master Plan: ನಕಲಿ ಕರೆಗಳಿಂದ ಜನರನ್ನು ರಕ್ಷಿಸಲು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಹೊಸ ಸೌಲಭ್ಯವನ್ನು ಪರಿಚಯಿಸಲು ಸಿದ್ದತೆ ನಡೆಸಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಟ್ರಾಯ್, ಭಾರತೀಯ ಮೊಬೈಲ್ ನೆಟ್‌ವರ್ಕ್ ಆಪರೇಟರ್‌ಗಳಿಗೆ ಕರೆ ಮಾಡುವ ಹೆಸರು ಪ್ರಸ್ತುತಿ (CNAP) ಸೇವೆಯನ್ನು ಪ್ರಾರಂಭಿಸಲಿದೆ ಎಂದು ತಿಳಿದುಬಂದಿದೆ. 


COMMERCIAL BREAK
SCROLL TO CONTINUE READING

ವಾಸ್ತವವಾಗಿ, ಟ್ರಾಯ್ ಪರಿಚಯಿಸಲಿರುವ CNAP ಸೇವೆಯ ಅಡಿಯಲ್ಲಿ, ಯಾವುದೇ ಗ್ರಾಹಕರು ತಮ್ಮ ಫೋನ್‌ನಲ್ಲಿ ಅಪರಿಚಿತ ಕರೆ ಸ್ವೀಕರಿಸಿದಾಗ ಆ ವೇಳೆ ಕರೆ ಮಾಡಿದವರ ಹೆಸರು ಮತ್ತು ಅದಕ್ಕೆ ಸಂಬಂಧಿಸಿದ ವಿವರಗಳು ಫೋನ್‌ನ ಡಿಸ್ಪ್ಲೇಯಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ ಎನ್ನಲಾಗಿದೆ. 


ಹೆಸರೇ ಸೂಚಿಸುವಂತೆ, ಈ ಹೊಸ ಸೇವೆಯ ಮೂಲಕ, ಯಾವುದೇ ಫೋನ್ ಗ್ರಾಹಕರು  ಅಪರಿಚಿತ ಸಂಖ್ಯೆಯಿಂದ ಕರೆ ಸ್ವೀಕರಿಸಿದಾಗ,  ಆ ಸಂದರ್ಭದಲ್ಲಿ ಫೋನ್ ಸಂಖ್ಯೆ ಮಾತ್ರವಲ್ಲದೆ ಅವರ ಹೆಸರು ಮತ್ತು ಅವರಿಗೆ ಸಂಬಂಧಿಸಿದ ಇತರ ವಿವರಗಳನ್ನು ಫೋನ್ ಪರದೆಯಲ್ಲಿ ಕಾಣಬಹುದಾಗಿದೆ. 


WhatsApp ಹೊಸ ವೈಶಿಷ್ಟ್ಯ: ಇನ್ಮುಂದೆ ಪ್ರೊಫೈಲ್ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಲು ಯಾರಿಗೂ ಸಾಧ್ಯವಿಲ್ಲ


ವಾಸ್ತವವಾಗಿ, ಇತ್ತೀಚಿನ ದಿನಗಳಲ್ಲಿ ವಂಚನೆ ಕರೆಗಳು, ಸ್ಪ್ಯಾಮ್ ಕರೆಗಳಂತಹ ನಕಲಿ ಕರೆಗಳ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿಂದೆ ಲ್ಯಾಂಡ್‌ಲೈನ್ ಸಂಖ್ಯೆಗಳಿಂದ ಇಂತಹ ಕರೆಗಳು ಬರುತ್ತಿದ್ದವು, ಆದರೆ ಈಗ ಸ್ಕ್ಯಾಮರ್‌ಗಳು ಅಂತಹ ಅಪರಾಧಗಳನ್ನು ನಡೆಸಲು ನೈಜವಾಗಿ ಕಾಣುವ ಮೊಬೈಲ್ ಸಂಖ್ಯೆಗಳನ್ನು ಬಳಸಲಾರಂಭಿಸಿದ್ದಾರೆ. ಬಳಕೆದಾರರು ಈ ನಕಲಿ ಕರೆಗಳನ್ನು ನಿಜವಾದ ಕರೆಗಳು ಎಂದು ತಪ್ಪಾಗಿ ಗ್ರಹಿಸುತ್ತಾರೆ ಮತ್ತು ನಂತರ ವಂಚನೆಗೆ ಬಲಿಯಾಗುತ್ತಾರೆ. ಇಂತಹ ಘಟನೆಗಳಿಗೆ ಕಡಿವಾಣ ಹಾಕಲು ಟ್ರಾಯ್ ಟೆಲಿಕಾಂ ಕಂಪನಿಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದೆ. ಇದರ ಭಾಗವಾಗಿ, ಈ ಹೊಸ ಕಾಲಿಂಗ್ ನೇಮ್ ಪ್ರೆಸೆಂಟೇಶನ್ (CNAP) ಸಲಹೆಯನ್ನು ಈಗ ಪರಿಚಯಿಸಲಾಗಿದೆ.  


ಗಂನಾರ್ಹವಾಗಿ, ಟ್ರಾಯ್ ನ ಈ ಹೊಸ ಕಾಲಿಂಗ್ ನೇಮ್ ಪ್ರೆಸೆಂಟೇಶನ್ (CNAP) ಸಲಹೆಯನ್ನು  ಭಾರತೀಯ ಟೆಲಿಕಾಂ ಕಂಪನಿಗಳಾದ Jio, Airtel ಮತ್ತು Vodafone Idea ಗಳಿಗೆ ನೀಡಲಾಗಿದ್ದು,  ಎಲ್ಲಾ ಸೇವಾ ಪೂರೈಕೆದಾರರು ತಮ್ಮ ದೂರವಾಣಿ ಚಂದಾದಾರರಿಗೆ ಅವರ ಕೋರಿಕೆಯ ಮೇರೆಗೆ ಕರೆ ಮಾಡುವ ಹೆಸರು ಪ್ರಸ್ತುತಿ (CNAP) ಸೇವೆಯನ್ನು ಒದಗಿಸಬೇಕು ಎಂದು ತಿಳಿಸಲಾಗಿದೆ. 


ಇದನ್ನೂ ಓದಿ- Online Shopping: ಆನ್‌ಲೈನ್ ಶಾಪಿಂಗ್ ಕ್ರೇಜ್ ಮಹಿಳೆಯರಿಗಿಂತ ಪುರುಷರಿಗೇ ಹೆಚ್ಚು! ಇಲ್ಲಿದೆ ವರದಿ


ಇನ್ನು ಅಗತ್ಯವಿಲ್ಲ Truecaller ನಂತಹ ಥರ್ಡ್-ಪಾರ್ಟಿ ಅಪ್ಲಿಕೇಶನ್‌ಗಳು: 
ಪ್ರಸ್ತುತ, ಯಾವುದೇ ಗ್ರಾಹಕರು ತಮ್ಮ ಫೋನ್‌ನಲ್ಲಿ ಸೇವ್ ಮಾಡಿರದ ಸಂಪರ್ಕ ಸಂಖ್ಯೆಗಳ ಕುರಿತು ಮಾಹಿತಿ ಪಡೆಯಲು Truecaller ನಂತಹ ಥರ್ಡ್-ಪಾರ್ಟಿ ಅಪ್ಲಿಕೇಶನ್‌ಗಳನ್ನು ಬಳಸುತ್ತಾರೆ. ಆದರೆ, ಟ್ರಾಯ್ ಹೊಸ ಸೇವೆಯ ಪರಿಚಯದಿಂದಾಗಿ, Truecaller ನಂತಹ ಥರ್ಡ್-ಪಾರ್ಟಿ ಅಪ್ಲಿಕೇಶನ್‌ಗಳು ಸ್ಪರ್ಧೆಯನ್ನು ಪಡೆಯುತ್ತವೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.