IRCTC: ಟ್ರೈನ್ ಟಿಕೆಟ್ ಬುಕ್ಕಿಂಗ್`ನಿಂದ ಫುಡ್ ಆರ್ಡರ್ ಮಾಡುವವರೆಗೆ ಎಲ್ಲವನ್ನೂ ಇದೊಂದೇ ಆಪ್`ನಲ್ಲಿ ಮಾಡಿ!
IRCTC Super App: ಟ್ರೈನ್ ಟಿಕೆಟ್ ಬುಕ್ಕಿಂಗ್, ಟ್ರೈನ್ ಪಿಎನ್‌ಆರ್ ಟ್ರ್ಯಾಕಿಂಗ್ ನಿಂದ ಹಿಡಿದು ಫುಡ್ ಆರ್ಡರ್ ಮಾಡುವವರೆಗೆ ಎಲ್ಲವನ್ನೂ ಒಂದೇ ಸ್ಥಳದಲ್ಲಿ ಮಾಡಲು ಅನುಕೂಲವಾಗುವಂತೆ ಐಆರ್‌ಸಿಟಿಸಿ ಸೂಪರ್ ಅಪ್ಲಿಕೇಷನ್ ಪರಿಚಯಿಸಲು ಮುಂದಾಗಿದೆ.
IRCTC Super App: ಭಾರತೀಯ ರೈಲ್ವೆಯು ಪ್ರಯಾಣಿಕರಿಗೆ ಅನುಕೂಲವಾಗುವಂತೆ ಆಗಾಗ್ಗೆ ಹೊಸ ಹೊಸ ತಂತ್ರಜ್ಞಾನಗಳ ಬಳಕೆಯನ್ನು ಅಳವಡಿಸಿಕೊಳ್ಳುತ್ತಿರುತ್ತದೆ. ಈ ಟೆಕ್ನಾಲಜಿ ಯುಗದಲ್ಲಿ ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಎಲ್ಲವೂ ಒಂದೇ ವೇದಿಕೆಯಲ್ಲಿ ಲಭ್ಯವಾಗುವಂತೆ ಮಾಡಲು ಐಆರ್‌ಸಿಟಿಸಿ ಹೊಸ ಸೂಪರ್ ಅಪ್ಲಿಕೇಶನ್ ತರಲು ಹೊರಟಿದೆ.
ವಿಶೇಷವೆಂದರೆ ರೈಲು ಟಿಕೆಟ್ ಬುಕ್ಕಿಂಗ್, ಪಿಎನ್‌ಆರ್ ಸ್ಥಿತಿ ಪರಿಶೀಲನೆ, ಟ್ರೈನ್ ಟ್ರ್ಯಾಕಿಂಗ್, ಫುಡ್ ಆರ್ಡರ್ ಸೇರಿದಂತೆ ಎಲ್ಲವೂ ಕೂಡ ಐಆರ್‌ಸಿಟಿಸಿ ಪರಿಚಯಿಸಲು ಮುಂದಾಗಿರುವ ಈ ಹೊಸ ಅಪ್ಲಿಕೇಶನ್ ನಲ್ಲಿ ಒಂದೇ ವೇದಿಕೆಯಲ್ಲಿ ಲಭ್ಯವಾಗುವಂತೆ ಮಾಡಲು ಭಾರತೀಯ ರೈಲ್ವೆ ಕಾರ್ಯನಿರ್ವಹಿಸುತ್ತಿದೆ. ಪ್ಲಾಟ್‌ಫಾರ್ಮ್ ಟಿಕೆಟ್‌ನಿಂದ ಜನರಲ್ ಟಿಕೆಟ್ ಖರೀದಿಸುವವರೆಗೂ ಹಲವು ಪ್ರಯೋಜನಗಳು ಇದೊಂದೇ ಅಪ್ಲಿಕೇಶನ್ ನಲ್ಲಿ ಲಭ್ಯವಾಗಲಿದೆ.
ಇದನ್ನೂ ಓದಿ- WhatsAppನಲ್ಲಿ ಈ 4 ವಿಷಯಗಳನ್ನು ಶೇರ್ ಮಾಡಿದರೆ ಜೈಲು ಸೇರಬೇಕಾಗುವುದು! ಎಚ್ಚರ
ಕೋಟ್ಯಾಂತರ ರೈಲ್ವೆ ಪ್ರಯಾಣಿಕರು ಐಆರ್‌ಸಿಟಿಸಿ ರೈಲ್ ಕನೆಕ್ಟ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ, ಬಳಸುತ್ತಿದ್ದಾರೆ. ಪ್ರಸ್ತುತ, Rail Madad, UTS, Satark, TMC-Direction, IRCTC Air, Portread ನಂತಹ ಅಪ್ಲಿಕೇಶನ್‌ಗಳು ಸಾರ್ವಜನಿಕರಿಗೆ ರೈಲ್ವೆ ಸೇವೆಯನ್ನು ಒದಗಿಸುತ್ತಿದೆ. ಆದರೀಗ, "ಓಕೆ ಸೂಪರ್ ಆಪ್" ಮೂಲಕ ಈ ಎಲ್ಲಾ ಸೇವೆಗಳನ್ನು ಒಂದೆಡೆ ಒದಗಿಸಲು ಭಾರತೀಯ ರೈಲ್ವೆ ಸಿದ್ಧತೆ ನಡೆಸುತ್ತಿದೆ.
ಇದನ್ನೂ ಓದಿ- ಎಚ್ಚರ..! ಎಚ್ಚರ! UPI Refund ಹೆಸರಿನಲ್ಲಿ ಖಾಲಿಯಾದೀತು ಖಾತೆ..!
ಮೂಲಗಳಿಂದ ಲಭ್ಯವಿರುವ ಮಾಹಿತಿಯ ಪ್ರಕಾರ, ಈಗಾಗಲೇ ಈ ಅಪ್ಲಿಕೇಶನ್ ಅಭಿವೃದ್ಧಿ ಹಂತದಲ್ಲಿದೆ. ಸೆಂಟರ್ ಫಾರ್ ರೈಲ್ವೆ ಮಾಹಿತಿ ವ್ಯವಸ್ಥೆ (CRIS) ಅಭಿವೃದ್ಧಿಪಡಿಸುತ್ತಿರುವ ಈ ಸೂಪರ್ ಆಪ್ ನ್ನು ಐಆರ್‌ಸಿಟಿಸಿ ಈ ವರ್ಷಾಂತ್ಯದ ವೇಳೆಗೆ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ