Intimate Movement In MRI Machine: ವೈದ್ಯಕೀಯ ವಿಜ್ಞಾನ ಹಲವು ಬಾರಿ ಮಾನವನ ಅಧ್ಯಯನದ ಪ್ರಯತ್ನಗಳಲ್ಲಿ ಸಾಕಷ್ಟು ಆಸಕ್ತಿಯನ್ನು ಉಂಟು ಮಾಡುತ್ತವೆ. ಹಲವು ವರ್ಷಗಳ ಹಿಂದೆಯೇ ಸಾಕಷ್ಟು ರೋಚಕತೆ ಮೂಡಿಸಿದ ಇಂತಹುದೇ ಒಂದು ಘಟನೆಯ ಕುರಿತು ಇತ್ತೀಚಿನ ದಿನಗಳಲ್ಲಿ ಹಲವೆಡೆ ಭಾರಿ ಚರ್ಚೆಗೆ ಗ್ರಾಸವಾಗಿದೆ. ಹೌದು, ದಂಪತಿಗಳು ಪ್ರಣಯದಲ್ಲಿ ತೊಡಗಿರುವಾಗ ಅವರ ದೇಹದ ಆಂತರಿಕ ಭಾಗಗಳ ಚಲೆನೆಗಳು ಹೇಗಿರುತ್ತವೆ ಎಂಬುದನ್ನು ಸೆರೆಹಿಡಿಯಲು ಎಂಆರ್ಐ ಮಶೀನ್ ಬಳಸಲಾಗಿದೆ ಮತ್ತು ಅದರಲ್ಲಿ ಎಲ್ಲವನ್ನು ಕೂಡ ಸೆರೆಹಿಡಿಯಲಾಗಿದೆ.

COMMERCIAL BREAK
SCROLL TO CONTINUE READING

ಎಂಆರ್ಐ ಮಶೀನ್ ಒಳಗೆ ಜೋಡಿಯ ಪ್ರಣಯ
ಹಾಗೆ ನೋಡಿದರೆ ಇದು ಒಂದು ರೀತಿಯ ಅಧ್ಯಯನವಾಗಿತ್ತು. ಮಾಧ್ಯಮ ವರದಿಗಳ ಪ್ರಕಾರ, ಅದರ ಫಲಿತಾಂಶವನ್ನು ಬ್ರಿಟಿಷ್ ಮೆಡಿಕಲ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ. ಅಷ್ಟೇ ಅಲ್ಲ, ಈ ಅಧ್ಯಯನಕ್ಕೆ ಸಂಬಂಧಿಸಿದ ಚಿತ್ರಗಳು ಮತ್ತು ವೀಡಿಯೊಗಳನ್ನು ಆ ಸಮಯದಲ್ಲಿ ಪ್ರಕಟಿಸಲಾಗಿದೆ. ಸರಳವಾಗಿ ಹೇಳುವುದಾದರೆ, MRI ಒಳಗೆ ಜೋಡಿಗಳ ಪ್ರಣಯ ಚಿತ್ರಗಳು ಮತ್ತು ವೀಡಿಯೊಗಳನ್ನು ತೋರಿಸಲಾಗಿದೆ.


ಅಧ್ಯಯನವು ಬಹಳ ಹಿಂದೆಯೇ ನಡೆದಿದೆ
ಈ ಅಧ್ಯಯನವನ್ನು 1991 ಮತ್ತು 1999 ರ ನಡುವೆ ಹಲವಾರು ಬಾರಿ ನಡೆಸಲಾಗಿದೆ. ಇದರಲ್ಲಿ ಇಡಾ ಸಬೆಲ್ಲಿಸ್ ಮತ್ತು ಅವಳ ಪಾರ್ಟ್ನರ್ ಜುಪ್ ಶಾಮೀಲಾಗಿದ್ದಾರೆ. ಪ್ರಯೋಗಕ್ಕಾಗಿ, ದಂಪತಿಗಳು MRI ಯಂತ್ರದಲ್ಲಿ ಪ್ರಣಯ ನಡೆಸಿದ್ದರು. ಆದಾಗ್ಯೂ, ಈ ಅಧ್ಯಯನವು ದೀರ್ಘಕಾಲದವರೆಗೆ ನಡೆದಿದೆ ಎಂದು ಕೆಲವು ವರದಿಗಳಲ್ಲಿ ಹೇಳಲಾಗಿದೆ, ಆದ್ದರಿಂದ ಈ ಇಬ್ಬರನ್ನು ಹೊರತುಪಡಿಸಿ ಇತರ ಅನೇಕ ತಜ್ಞರು ಸಹ ಇದರಲ್ಲಿ ಭಾಗವಹಿಸಿದ್ದಾರೆ ಎನ್ನಲಾಗಿದೆ.


ಇದನ್ನೂ ಓದಿ-Viral Video: ವಾಹನಗಳ ಮಧ್ಯೆ ಭೀಕರ ಅಪಘಾತ, ಗಾಳಿಯಲ್ಲಿ ತೂರಲ್ಪಟ್ಟ ಡ್ರೈವರ್, ಬೆಚ್ಚಿ ಬೀಳಿಸುವ ವಿಡಿಯೋ ಇಲ್ಲಿದೆ


ಖಾಸಗಿ ಅಂಗಗಳಿಗೆ ಸಂಬಂಧಿಸಿದಂತೆ ಹೊಸ ವಿಷಯಗಳನ್ನು ಪ್ರಕಟಿಸಲಾಗಿದೆ
ಈ ಅಧ್ಯಯನದಿಂದ ದೇಹದ ಖಾಸಗಿ ಅಂಗಗಳಿಗೆ ಸಂಬಂಧಿಸಿದಂತೆ ಹಲವು ಹೊಸ ವಿಷಯಗಳು ಮುನ್ನೆಲೆಗೆ ಬಂದಿವೆ ಎಂದೂ ಹೇಳಲಾಗಿದೆ. ಇದೇ ವೇಳೆ ಮತ್ತೊಂದು ಮಾಧ್ಯಮ ವರದಿಯ ಪ್ರಕಾರ, ಅದರ ಚಿತ್ರಗಳು ಮತ್ತು ವೀಡಿಯೊಗಳನ್ನು 24 ಡಿಸೆಂಬರ್ 1999 ರಂದು ಬ್ರಿಟಿಷ್ ಮೆಡಿಕಲ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ ಎಂದು ಹೇಳಲಾಗಿದೆ. ಇದರ ನಂತರ, ಇಪ್ಪತ್ತು ವರ್ಷಗಳ ನಂತರ 2019 ರಲ್ಲಿ, ಬ್ರಿಟಿಷ್ ಮೆಡಿಕಲ್ ಜರ್ನಲ್ ಅದನ್ನು ಮತ್ತೆ ಪ್ರಕಟಿಸಿದೆ.


ಇದನ್ನೂ ಓದಿ-Viral Video: ಸ್ಟಂಟ್ ಮಾಡಲು ಹೋಗಿ ಮೊಸಳೆ ಬಾಯಿಗೆ ಕೈಹಾಕಿದ ವ್ಯಕ್ತಿ, ನಂತರ ಏನಾಯ್ತು ನೀವೇ ನೋಡಿ


ಅಧ್ಯಯನವು ಇದೀಗ ಮತ್ತೆ ಚರ್ಚೆಯ ವಿಷಯವಾಗಿದೆ
ಪ್ರಸ್ತುತ, ಇತ್ತೀಚೆಗೆ ಅಮೇರಿಕನ್ ಸಾಮಾಜಿಕ ಮಾಧ್ಯಮ ಬಳಕೆದಾರರು ಅದರ ವೀಡಿಯೊವನ್ನು ಇತರ ಅನೇಕ ರೀತಿಯ ಅಧ್ಯಯನಗಳೊಂದಿಗೆ ಎಡಿಟ್ ಮಾಡುವ ಮೂಲಕ ತಮ್ಮ YouTube ಚಾನಲ್‌ನಲ್ಲಿ ಪ್ರಕಟಿಸಿದ್ದಾರೆ, ಹೀಗಾಗಿ ಈ ಅಧ್ಯಯನವು ಮತ್ತೆ ಜನರ ಗಮನ ಸೆಳೆಯುತ್ತಿದ್ದು, ಈ ಬಗ್ಗೆ ಜನರೂ ಪ್ರತಿಕ್ರಿಯೆ ನೀಡುತ್ತಿದ್ದು, ಈಗ ಅನೇಕರು ಈ ಬಗ್ಗೆ ಮಾಹಿತಿ ಸಂಗ್ರಹಿಸಲು ಮುಂದಾಗಿದ್ದಾರೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.