Viral Video: ಸ್ಟಂಟ್ ಮಾಡಲು ಹೋಗಿ ಮೊಸಳೆ ಬಾಯಿಗೆ ಕೈಹಾಕಿದ ವ್ಯಕ್ತಿ, ನಂತರ ಏನಾಯ್ತು ನೀವೇ ನೋಡಿ

Trending Video: ಇಲ್ಲಿ ಆಶ್ಚರ್ಯಕ್ಕೀಡುಮಾಡುವ ಸಂಗತಿ ಎಂದರೆ. ವಿಡಿಯೋದಲ್ಲಿ ಮೊದಲನೆಯ ಮೊಸಳೆಯ ಪಕ್ಕದಲ್ಲಿಯೇ ಮತ್ತೊಂದು ಮೊಸಳೆಯೂ ಕೂಡ ಮೊದಲನೇ ಮೊಸಳೆಯ ಹಾಗೆಯೇ ತನ್ನ ಬಾಯಿಯನ್ನು ತೆರೆದುಕೊಂಡು ಕುಳಿತಿದೆ. ಈ ವಿಡಿಯೋವನ್ನು ಉದ್ದೇಶಪೂರ್ವಕವಾಗಿ ಚಿತ್ರಿಕರಿಸಲಾಗಿದೆ ಅಥವಾ ಮೊಸಳೆ ತನ್ನ ಮೇಲೆ ದಾಳಿ ಇಡಲಿದೆ ಎಂಬುದು ವ್ಯಕ್ತಿಗೆ ಮೊದಲೇ ತಿಳಿದಿತ್ತು ಎಂಬಂತಿದೆ.  

Written by - Nitin Tabib | Last Updated : Dec 23, 2022, 04:46 PM IST
  • ಸಾಮಾಜಿಕ ಮಾಧ್ಯಮ ತಾಣ ಇನ್ಸ್ಟಾಗ್ರಾಮ್ ನಲ್ಲಿ ವ್ಯಕ್ತಿಯೊಬ್ಬರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
  • ನೀರು ತುಂಬಿರುವ ನೀರಿನ ಟ್ಯಾಂಕ್ ಬಳಿ ವ್ಯಕ್ತಿಯೊಬ್ಬ ಮೊಸಳೆಯ ಮುಂದೆ ಕುಳಿತುಕೊಂಡಿದ್ದಾನೆ.
  • ಆದರೆ ಇಲ್ಲಿ ಆಶ್ಚರ್ಯಕ್ಕೀಡು ಮಾಡುವ ಸಂಗತಿ ಎಂದರೆ, ಮೊಸಳೆ ಮೊದಲೇ ತನ್ನ ಬಾಯಿಯನ್ನು ತೆರೆದುಕೊಂಡಿದೆ.
Viral Video: ಸ್ಟಂಟ್ ಮಾಡಲು ಹೋಗಿ ಮೊಸಳೆ ಬಾಯಿಗೆ ಕೈಹಾಕಿದ ವ್ಯಕ್ತಿ, ನಂತರ ಏನಾಯ್ತು ನೀವೇ ನೋಡಿ title=
Viral Video

Man Put Hand In Crocodiles Jaw: ಮೊಸಳೆ ದಾಳಿ ಮಾಡುವ ಅಪಾಯಕಾರಿ ವಿಡಿಯೋಗಳು ಆಗಾಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಕೆಲವೊಮ್ಮೆ ಅವು ಜನರ ಮೇಲೆ ದಾಳಿ ನಡೆಸಿದರೆ, ಕೆಲವೊಮ್ಮೆ ನೀರಿನಲ್ಲಿಯೇ ದಾಳಿ ನಡೆಸುವ ವಿಡಿಯೋಗಳು ಮುನ್ನಲೆಗೆ ಬರುತ್ತವೆ. ಇಂತಹುದೇ ಒಂದು ಅಪಾಯಕಾರಿ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಮೊದಲು ವ್ಯಕ್ತಿ ತನ್ನ ಇಡೀ ಕೈಯನ್ನು ತುಂಬಾ ಜಾಗ್ರತೆಯಿಂದ ಮೊಸಳೆ ಬಾಯಿಗೆ ಹಾಕುತ್ತಾನೆ. ನಂತರ ಒದ್ದಾಡಲು ಶುರುಮಾಡುತ್ತಾನೆ.

ಮೊಸಳೆಯ ಬಾಯಿ ಮೊದಲೇ ತೆರೆದುಕೊಂಡಿರುತ್ತದೆ
ಸಾಮಾಜಿಕ ಮಾಧ್ಯಮ ತಾಣ ಇನ್ಸ್ಟಾಗ್ರಾಮ್ ನಲ್ಲಿ ವ್ಯಕ್ತಿಯೊಬ್ಬರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ನೀರು ತುಂಬಿರುವ ನೀರಿನ ಟ್ಯಾಂಕ್ ಬಳಿ ವ್ಯಕ್ತಿಯೊಬ್ಬ ಮೊಸಳೆಯ ಮುಂದೆ ಕುಳಿತುಕೊಂಡಿದ್ದಾನೆ. ಆದರೆ ಇಲ್ಲಿ ಆಶ್ಚರ್ಯಕ್ಕೀಡು ಮಾಡುವ ಸಂಗತಿ ಎಂದರೆ, ಮೊಸಳೆ ಮೊದಲೇ ತನ್ನ ಬಾಯಿಯನ್ನು ತೆರೆದುಕೊಂಡಿದೆ. ಈ ಸಂಪೂರ್ಣ ಪ್ರಕರಣ ಒಂದು ಸ್ಟಂಟ್ ರೀತಿ ಅಥವಾ ಷೋ ರೀತಿ ಗೋಚರಿಸುತ್ತಿದೆ.

ಇದನ್ನೂ ಓದಿ-Lion Attack: ಸಿಂಹಿಣಿಗಳ ಮಧ್ಯೆ ಸಿಲುಕಿಕೊಂಡ ಯುವಕ, ನಂತರ ನಡೆದಿದ್ದು ಎದೆ ಝಲ್ಲೆನ್ನಿಸುವಂತಿದೆ

ವ್ಯಕ್ತಿ ತನ್ನ ಕೈಯನ್ನು ಮೊಸಳೆಯ ಬಾಯಿಗೆ ಹಾಕುತ್ತಾನೆ
ವ್ಯಕ್ತಿ ಮೊಸಳೆಯ ಮುಂದೆ ಹೋಗಿ ಮೊದಲು ಒಂದು ಕಟ್ಟಿಗೆಯನ್ನು ಮೊಸಳೆಯ ಬಾಯಿಗೆ ಹಾಕಿ ಪರೀಕ್ಷಿಸುತ್ತಾನೆ. ಬಳಿಕ ಆತ ತನ್ನ ಸಂಪೂರ್ಣ ಕೈಯನ್ನು ಮೊಸಳೆ ಬಾಯಿಗೆ ಹಾಕುತ್ತಾನೆ. ಮೊದಮೊದಲು ಮೊಸಳೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ, ನಂತರ ನಡೆದಿದ್ದು ಮಾತ್ರ ಸಾಮಾಜಿಕ ಮಾಧ್ಯಮ ಜಗತ್ತಿನಲ್ಲಿ ಭಾರಿ ವೈರಲ್ ಆಗುತ್ತಿದೆ. 

ಇದನ್ನೂ ಓದಿ-Viral Video: ಪ್ರಿಯಕರನನ್ನು ಕಂಡು ಕಂಟ್ರೋಲ್ ತಪ್ಪಿದ ವಧು, ಪತಿಯ ಮುಂದೆಯೇ ಮಾಡಿದ್ಲು ಈ ಕೆಲ್ಸಾ !

ಚಟಪಡಿಸಲು ಶುರು ಮಾಡಿದ ವ್ಯಕ್ತಿ
ಅಪಾಯಕಾರಿ ಮೊಸಳೆ ವ್ಯಕ್ತಿಯ ಇಡೀ ಕೈಯನ್ನು ತನ್ನ ಬಾಯಿಯಲ್ಲಿ ಹಿಡಿದುಕೊಂಡಿರುವುದನ್ನು ನೀವು ವಿಡಿಯೋದಲ್ಲಿ ಗಮನಿಸಬಹುದು. ಬಳಿಕ ವ್ಯಕ್ತಿಯ ಒದ್ದಾಟ ಶುರುವಾಗುತ್ತದೆ ಮತ್ತು ಮೊಸಳೆಯ ಬಾಯಿಯಿಂದ ತನ್ನ ಕೈಯನ್ನು ಹೊರತೆಗೆಯುವಲ್ಲಿ ಆತ ಯಶಸ್ವಿಯಾಗುತ್ತಾನೆ. ಮೊಸಳೆ ಕಚ್ಚಿದ ಕಾರಣ ಆತನ ಕೈಗೆ ಗಂಭೀರ ಗಾಯವಾಗಿ ರಕ್ತ ಸೋರುವುದನ್ನು ನೀವು ವಿಡಿಯೋದಲ್ಲಿ ನೋಡಬಹುದು. ಬಳಿಕ ವ್ಯಕ್ತಿ ತಕ್ಷಣವೇ ಅಲ್ಲಿಂದ ಹೊರಟು ಹೋಗುತ್ತಾನೆ. ಈ ವಿಡಿಯೋ ಇದೀಗ ಭಾರಿ ವೈರಲ್ ಆಗುತ್ತಿದೆ.

 
 
 
 

 
 
 
 
 
 
 
 
 
 
 

A post shared by Earth Reels (@earth.reel)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News