WhatsApp Trick : ವಾಟ್ಸಾಪ್‌ ತನ್ನ ಬಳಕೆದಾರರ ಅನುಕೂಲಕ್ಕಾಗಿ ಹಲವು ವೈಶಿಷ್ಟ್ಯಗಳನ್ನು ಪರಿಚಯಿಸುತ್ತಲೇ ಇದೆ. ಈ ಪೈಕಿ ಕೆಲವು ಫೀಚರ್ ಗಳ ಬಗ್ಗೆ ಬಳಕೆದಾರರಿಗೆ ಅರಿವೇ ಇರುವುದಿಲ್ಲ. ಇಂಥಹ ವೈಶಿಷ್ಟ್ಯಗಳಲ್ಲಿ ಒಂದರ ಬಗ್ಗೆ ನಾವಿಲ್ಲಿ ಮಾಹಿತಿ ನೀಡುತ್ತಿದ್ದೇವೆ. ಈ ವೈಶಿಷ್ಟ್ಯವನ್ನು ಬಳಸಿಕೊಂಡು ನಂಬರ್ ಸೇವ್ ಮಾಡದೆಯೇ ಅವರೊಂದಿಗೆ ಚಾಟ್ ಮಾಡಬಹುದು. whatsapp ನಲ್ಲಿ ನಂಬರ್ ಸೇವ್ ಮಾಡಿದಾಗ ಮಾತ್ರ ಅದು ಚಾಟ್‌ನಲ್ಲಿ ಗೋಚರಿಸುತ್ತದೆ. ಆದರೆ ನಾವು ಹೇಳಲು ಹೊರಟಿರುವ ವಿಧಾನವು ಸ್ವಲ್ಪ ವಿಭಿನ್ನವಾಗಿದೆ.   


COMMERCIAL BREAK
SCROLL TO CONTINUE READING

ನಂಬರ್ ಸೇವ್ ಮಾಡದೇ ಹೇಗೆ ಚಾಟ್ ಮಾಡಬಹುದು? : 
WhatsApp ನಲ್ಲಿ ನೀವು ಯಾವುದದರೊಂದು ನಂಬರ್ ಸೇವ್ ಮಾಡದೇ ಚಾಟ್ ಮಾಡಬೇಕು ಎಂದಾದರೆ ಅದಕ್ಕೆ ಸುಲಭ ಮಾರ್ಗವಿದೆ. ಕೆಲವು ಸರಳ ಹಂತಗಳನ್ನು ಅನುಸರಿಸುವ ಮೂಲಕ ಸೇವ್ ಮಾಡದಿರುವ ನಂಬರ್ ಜೊತೆಗೂ ಸುಲಭವಾಗಿ ಚಾಟ್ ಮಾಡಬಹುದು.


ಇದನ್ನೂ ಓದಿ : Zomato Feature: ಶಾಕಾಹಾರಿಗಳಿಗೊಂದು ಸಂತಸದ ಸುದ್ದಿ ಪ್ರಕಟಿಸಿದ Zomato, ಬಿಡುಗಡೆಯಾಗಿದೆ ಹೊಸ ವೈಶಿಷ್ಟ್ಯ!


ಈ ಟ್ರಿಕ್ ಅನ್ನು ಬಳಸಬಹುದು :
1. ಸ್ಮಾರ್ಟ್‌ಫೋನ್‌ನ ಕಾಂಟಾಕ್ಟ್ ಅಪ್ಲಿಕೇಶನ್‌ನಲ್ಲಿ ನೀವು  ಚಾಟ್ ಬಯಸುವ ಬಳಕೆದಾರರ  ನಂಬರ್ ಡಯಲ್ ಮಾಡಬೇಕು. 
2. ಈಗ ಆ ಬಳಕೆದಾರರ ನಂಬರ್ ಅನ್ನು ಲಾಂಗ್ ಪ್ರೆಸ್ ಮಾಡುವ ಮೂಲಕ ಅದನ್ನು  ಕಾಪಿ ಮಾಡಬೇಕು. 
3. ಈಗ WhatsApp ಅನ್ನು ತೆರೆಯಬೇಕಾಗುತ್ತದೆ.
4. ಈಗ  ಮೈ ಕಾಂಟಾಕ್ಟ್ ನಲ್ಲಿ ಚಾಟ್ ಬಾಕ್ಸ್‌ನಲ್ಲಿ ಆ ನಂಬರ್ ಅನ್ನು ಪೇಸ್ಟ್ ಮಾಡಿ. 
5. ಈಗ ನಿಮಗೆ ಈ ನಂಬರ್ ಅನ್ನು ಸೆಂಡ್ ಮಾಡಿಕೊಳ್ಳಿ. 
6. ನಂಬರ್ ಕಳುಹಿಸಿದ ನಂತರ, ಆ ನಂಬರ್ ಮೇಲೆ  ಸಿಂಗಲ್ ಟ್ಯಾಪ್ ಮಾಡಬೇಕಾಗುತ್ತದೆ.
7. ಈಗ ಪಾಪ್-ಅಪ್ ವಿಂಡೋ ತೆರೆಯುತ್ತದೆ.
8. ಈಗ ಇಲ್ಲಿ ನಿಮಗೆ ಚಾಟ್ ಅಥವಾ ಕಾಲ್ ಆಯ್ಕೆಯನ್ನು ನೀಡಲಾಗುವುದು 
9. ಇದರಲ್ಲಿ ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಟ್ಯಾಪ್ ಮಾಡಬಹುದು.
10. ಈ ಆಯ್ಕೆಗಳಲ್ಲಿ ಯಾವುದಾದರೂ ಒಂದನ್ನು ಟ್ಯಾಪ್ ಮಾಡಿದ ತಕ್ಷಣ,  ಬಳಕೆದಾರರ WhatsApp ಚಾಟ್  ಪೇಜ್ ತೆರೆಯುತ್ತದೆ. 


ಇದನ್ನೂ ಓದಿ :  WhatsApp New Feature: ಶೀಘ್ರದಲ್ಲೇ ಸ್ಟೇಟಸ್ ನಲ್ಲಿ ನೀವು ಈ ಕೆಲಸ ಮಾಡಬಹುದು! ಸಿಗಲಿದೆ ಜಬರ್ದಸ್ತ್ ವೈಶಿಷ್ಟ್ಯ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ