Electric Scooters Price Hike : ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಖರೀದಿ ಮೇಲಿನ ಸಬ್ಸಿಡಿಗೆ ಸಂಬಂಧಿಸಿದ ಹೊಸ ನಿಯಮಗಳು ಜೂನ್ 1 ರಿಂದ ಜಾರಿಗೆ ಬಂದಿವೆ.  ಹೊಸ ನಿಯಮದ ಪ್ರಕಾರ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೇಲೆ ನೀಡುತ್ತಿದ್ದ ಸಬ್ಸಿಡಿಯನ್ನು ಕೇಂದ್ರ ಸರಕಾರ ಕಡಿತಗೊಳಿಸುತ್ತಿದೆ. ಈ ಹಿನ್ನೆಲೆಯಲ್ಲಿ  ಎಲೆಕ್ಟ್ರಿಕ್  ವಾಹನಗಳು ದುಬಾರಿಯಾಗಿವೆ. ವಾಹನ ತಯಾರಕರಾದ ಟಿವಿಎಸ್ ಮೋಟಾರ್ ಕಂಪನಿ, ಅಥರ್ ಎನರ್ಜಿ ಮತ್ತು ಓಲಾ ಎಲೆಕ್ಟ್ರಿಕ್ ತಮ್ಮ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸಿವೆ. FAME-II ಯೋಜನೆಯನ್ನು ಪರಿಷ್ಕರಿಸಿದ ನಂತರ,  ಟಿವಿಎಸ್ ಮೋಟಾರ್ ಕಂಪನಿಯು  ರೂಪಾಂತರವನ್ನು ಅವಲಂಬಿಸಿ ಐಕ್ಯೂಬ್‌ನ ಬೆಲೆಯನ್ನು 17,000 ರಿಂದ 22,000 ರೂಪಾಯಿಗೆ ಹೆಚ್ಚಿಸಿರುವುದಾಗಿ ಹೇಳಿದೆ.


COMMERCIAL BREAK
SCROLL TO CONTINUE READING

ಈ ಹಿಂದೆ iQubeನ ಬೇಸ್ ಮಾಡೆಲ್ ಬೆಲೆ 1,06,384 ರೂ. ಮತ್ತು 'S' ಬೆಲೆ 1,16,886 ರೂ. ಆಗಿತ್ತು. ದೇಶದಲ್ಲಿ ದ್ವಿಚಕ್ರ ವಾಹನ ವಿಭಾಗದಲ್ಲಿ ವಿದ್ಯುದ್ದೀಕರಣ ಮತ್ತು ಹಸಿರು ಶಕ್ತಿಯ ಬಳಕೆಯನ್ನು ಉತ್ತೇಜಿಸಲು ಕಂಪನಿಯು ಉತ್ತಮ ಉತ್ಪನ್ನ ಆಯ್ಕೆಗಳನ್ನು ಗ್ರಾಹಕರಿಗೆ ಒದಗಿಸುವುದನ್ನು ಮುಂದುವರೆಸಲಿದೆ ಎಂದಿದ್ದಾರೆ. 


ಇದನ್ನೂ ಓದಿ : MiG-Miraj ನಂತಹ ಸಣ್ಣ ಫೈಟರ್ ಜೆಟ್ ಗಳಿಂದಲೂ ಇನ್ಮುಂದೆ ಬ್ರಹ್ಮೋಸ್ ಕ್ಷಿಪಣಿ ಉಡಾಯಿಸಬಹುದು


ಪರಿಷ್ಕೃತ FAME-2 ಸಬ್ಸಿಡಿಯನ್ನು ಗುರುವಾರದಿಂದ ಜಾರಿಗೆ ತರಲಾಗಿದೆ ಎಂದು ಅಥರ್ ಎನರ್ಜಿ  ಹೇಳಿದೆ. ಇದರೊಂದಿಗೆ ತನ್ನ ಸ್ಕೂಟರ್‌ಗಳ ಬೆಲೆಯನ್ನು ಕೂಡಾ ಕಂಪನಿ ಹೆಚ್ಚಿಸಿದೆ ಎಂದು ಹೇಳಲಾಗಿದೆ. ಇದರ 450X ಬೆಲೆ ಈಗ 1,45,000 ರೂಪಾಯಿ ಆಗಿದೆ. ಆದರೆ 450X ಪ್ರೊ ಪ್ಯಾಕ್ 8,000  ರೂಪಾಯಿ ಹೆಚ್ಚಳದೊಂದಿಗೆ  1,65,435 ರೂಪಾಯಿಗೆ ಏರಿದೆ. 


ಇವುಗಳ ಹೊರತಾಗಿ ಓಲಾ ಎಲೆಕ್ಟ್ರಿಕ್ ಕೂಡಾ ತನ್ನ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸಿದೆ. ಓಲಾ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಎಸ್1 ಪ್ರೊ ಬೆಲೆಯನ್ನು 1,39,999 ರೂ. ಎಸ್ 1 (3 ಕೆಡಬ್ಲ್ಯೂಎಚ್)  ಬೆಲೆಯನ್ನು 1,29,999 ರೂ.  ಎಸ್ 1 ಏಯರ್ (3 ಕೆಡಬ್ಲ್ಯೂಎಚ್) ಬೆಲೆಯನ್ನು 1,09,999 ರೂ. ಎಂದು ನಿಗದಿ ಮಾಡಿದೆ. ಅಂದರೆ ಈ ಸ್ಕೂಟರ್ ನ ಬೆಲೆ ಮೊದಲಿನ ಬೆಲೆಗಿಂತ  ಸುಮಾರು 15,000 ರೂ. ಏರಿಕೆ ಕಂಡಂತಾಗಿದೆ. 


ಇದನ್ನೂ ಓದಿ : iPhone 16 ಖರೀದಿಸಲು ಬಯಸುವವರಿಗೆ ಇಲ್ಲಿದೆ ಒಂದು ಸಂತಸದ ಸುದ್ದಿ!


ಭಾರೀ ಕೈಗಾರಿಕೆಗಳ ಸಚಿವಾಲಯದ ಪ್ರಕಾರ ಫೇಮ್-2 ಯೋಜನೆಯಡಿಯಲ್ಲಿ ಸಬ್ಸಿಡಿಯನ್ನು ಪ್ರತಿ ಕಿಲೋವ್ಯಾಟ್‌ಗೆ 15,000 ರೂ.ನಿಂದ 10,000 ರೂ.ಗೆ ಇಳಿಸಲಾಗಿದೆ. ಇದಲ್ಲದೆ, ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ  ಸಬ್ಸಿಡಿ ಮಿತಿಯನ್ನು 'ಎಕ್ಸ್-ಫ್ಯಾಕ್ಟರಿ' ಬೆಲೆಯ ಶೇಕಡಾ 15ರಷ್ಟಕ್ಕೆ ಮಿತಿಗೊಳಿಸಿದೆ. ಈ ಮೊದಲು ಇದು ಶೇ. 40ರಷ್ಟು ಇತ್ತು. ಮೂರು ವರ್ಷಗಳ ಅವಧಿಯ ಫೇಮ್‌ 2 ಯೋಜನೆಯು ಏಪ್ರಿಲ್ 1, 2019 ರಿಂದ ಪ್ರಾರಂಭವಾಗಿತ್ತು. ಜೂನ್ 2021ರಲ್ಲಿ ಇದನ್ನು ಎರಡು ವರ್ಷಗಳವರೆಗೆ ವಿಸ್ತರಿಸಲಾಗಿತ್ತು. ಈ ವೇಳೆ ಸಬ್ಸಿಡಿ ಯೋಜನೆಯನ್ನು ಮಾರ್ಚ್‌ 31, 2024ರವರೆಗೆ ವಿಸ್ತರಿಸಲಾಗಿತ್ತು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.