Twitter Grievance Officer: ಭಾರತದಲ್ಲಿ ಕುಂದುಕೊರತೆ ನಿರ್ವಹಣಾ ಅಧಿಕಾರಿಯನ್ನು ನೇಮಕ ಮಾಡಿದ Twitter
Twitter Appoints Resident Grievance Officer - ನೂತನ ಸಾಮಾಜಿಕ ಮಾಧ್ಯಮ ನಿಯಮಗಳಿಗೆ ಸಂಬಂಧಿಸಿದಂತೆ ಪ್ರಸ್ತುತ Twitter ಭಾರತದಲ್ಲಿ ಸರ್ಕಾರದೊಂದಿಗೆ ವಿವಾದ ಎದುರಿಸುತ್ತಿದ್ದು, ಭಾರತದಲ್ಲಿ ಸಾಮಾಜಿಕ ಮಾಧ್ಯಮ ತನ್ನ ಕಾನೂನು ಅಸ್ತ್ರವನ್ನು ಕಳೆದುಕೊಂಡಿದೆ. ಈಗ ಅದು ಬಳಕೆದಾರರಿಂದ ಹಾಕಲಾಗುವ ಯಾವುದೇ ವಿವಾದಾತ್ಮಕ ವಿಷಯಕ್ಕೆ ಹೊಣೆ ಹೊರುವ ಪರಿಸ್ಥಿತಿ ಎದುರಾಗಿದೆ.
Twitter Appoints Resident Grievance Officer - ಖ್ಯಾತ ಸಾಮಾಜಿಕ ಜಾಲತಾಣಗಳಲ್ಲಿ ಒಂದಾಗಿರುವ ಟ್ವಿಟ್ಟರ್ ಭಾರತದಲ್ಲಿ ವಿನಯ್ ಪ್ರಕಾಶ (Vinay Prakash)ಅವರನ್ನು ನಿವಾಸಿ ಕುಂದುಕೊರತೆ ನಿವಾರಣಾ ಅಧಿಕಾರಿಯನ್ನಾಗಿ ನೇಮಕ ಮಾಡಿದೆ. ಇದಲ್ಲದೆ ವಿಭಿನ್ನ ಪ್ರಕರಣಗಳಲ್ಲಿ ಟ್ವಿಟ್ಟರ್ ಖಾತೆಗಳ ವಿರುದ್ಧ ಕೈಗೊಂಡ ಕ್ರಮಗಳ ಮಾಸಿಕ ವರದಿಯನ್ನು ಕೂಡ ನೀಡಿದೆ. ಕಂಪನಿಯ ಅಧಿಕೃತ ವೆಬ್ ಸೈಟ್ ಮೇಲೆ ಈ ಮಾಹಿತಿಯನ್ನು ನೀಡಲಾಗಿದೆ. ಈ ಕುರಿತು ಗುರುವಾರ ದೆಹಲಿ ಹೈಕೋರ್ಟ್ ಗೆ ಮಾಹಿತಿ ನೀಡಿದ್ದ ಸಂಸ್ಥೆ, ಹೊಸ ಐಟಿ ನಿಯಮಗಳ ಅಡಿ Resident Grievance Officer ನೇಮಕ ಪ್ರಕ್ರಿಯೇಯಲ್ಲಿರುವುದಾಗಿ ಹೇಳಿಕೆ ನೀಡಿತ್ತು, ಅಷ್ಟೇ ಅಲ್ಲ ಜುಲೈ 11ರೊಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದಿತ್ತು.
ಭಾರತದಲ್ಲಿ (India) ಜಾರಿಗೆ ಬಂದ ನೂತನ ಐಟಿ ನಿಮಯಗಳ ಪಾಲನೆ ಮಾಡದೇ ಹಿನ್ನೆಲೆ ಕಳೆದ ಹಲವು ದಿನಗಳಿಂದ ಟ್ವಿಟ್ಟರ್ (Twitter) ವಿವಾದದ ಕೇಂದ್ರಬಿಂದುವಾಗಿತ್ತು. ಹೊಸ ಐಟಿ ನಿಮಯಗಳ ಪ್ರಕಾರ 50 ಲಕ್ಷಕ್ಕಿಂತ ಅಧಿಕ ಬಳಕೆದಾರರನ್ನು ಹೊಂದಿರುವ ಸಾಮಾಜಿಕ ಮಾಧ್ಯಮಗಳಿಗೆ (Social Media Platforms) ಮೂರು ಮಹತ್ವದ ನೇಮಕಾತಿಗಳನ್ನು ಕಡ್ಡಾಯಗೊಳಿಸಲಾಗಿದೆ. ಈ ಮೂರು ನೇಮಕಾತಿಗಳಲ್ಲಿ ಮುಖ್ಯ ಅನುಸರಣಾ ಅಧಿಕಾರಿ, ನೋಡಲ್ ಅಧಿಕಾರಿ ಹಾಗೂ ಕುಂದುಕೊರತೆ ನಿವಾರಣಾ ಅಧಿಕಾರಿಯ ನೇಮಕಾತಿಗಳು ಶಾಮೀಲಾಗಿವೆ. ಈ ಮೂರೂ ಅಧಿಕಾರಿಗಳು ಭಾರತದ ನಿವಾಸಿ ಅಧಿಕಾರಿಗಳಾಗಿರಬೇಕು ಎನ್ನಲಾಗಿದೆ.
ಇದನ್ನೂ ಓದಿ-Jio Cheapest Plans : ಜಿಯೋದಿಂದ 3, 6 ಮತ್ತು 7, 8 ರ ಅಗ್ಗದ ಡೈಲಿ ಪ್ಲಾನ್ : ಇಲ್ಲಿದೆ ಈ ಯೋಜನೆಯ ಮಾಹಿತಿ
ಈ ಸಂದರ್ಭದಲ್ಲಿ ಕಂಪನಿ ಮೇ 26, 2021 ರಿಂದ ಜೂನ್ 25, 2021 ರವರೆಗಿನ ತನ್ನ ಅನುಸರಣಾ ವರದಿಯನ್ನು ಕೂಡ ಪ್ರಕಟಿಸಿದೆ. ಮೇ 26ರಂದು ಜಾರಿಗೊಳಿಸಲಾಗಿರುವ ನೂತನ ಐಟಿ ನಿಯಮಗಳ ಅಡಿ ಮತ್ತೊಂದು ಆನಿವಾರ್ಯತೆಯನ್ನು ಟ್ವಿಟ್ಟರ್ ಪಾಲಿಸಬೇಕಿದೆ. ಇದಕ್ಕೂ ಮೊದಲು ಟ್ವಿಟ್ಟರ್ ನೂತನ ಐಟಿ ನಿಯಮಗಳ ಅಡಿ ಧರ್ಮೇಂದ್ರ ಚತುರ ಅವರನ್ನು ಭಾರತದ ನಿವಾಸಿ ಕುಂದುಕೊರತೆ ನಿರ್ವಹಣಾ ಅಧಿಕಾರಿಯನ್ನಾಗಿ ನೇಮಕ ಮಾಡಿತ್ತು. ಆದರೆ, ಚತುರ ಕಳೆದ ತಿಂಗಳವಷ್ಟೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಪ್ರಸ್ತುತ ಟ್ವಿಟ್ಟರ್ ಭಾರತದಲ್ಲಿ 1.75 ಕೋಟಿ ಬಳಕೆದಾರರನ್ನು ಹೊಂದಿದೆ.
ಇದನ್ನೂ ಓದಿ-WhatsApp Setting : ನೀವು ಈ ಸೆಟ್ಟಿಂಗ್‌ಗಳನ್ನು WhatsAppನಲ್ಲಿ ಮಾಡಿದ್ದೀರಾ? ತಕ್ಷಣ ಬದಲಾಯಿಸಿ! ಇಲ್ಲದಿದ್ರೆ ಅಪಾಯ
ಪ್ರಕರಣವೇನು?
ಮೇ 31ರಂದು ಅಮಿತ್ ಆಚಾರ್ಯ ಎಂಬುವವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ್ದ ದೆಹಲಿ ಹೈಕೋರ್ಟ್ ಮೈಕ್ರೋ ಬ್ಲಾಗಿಂಗ್ ಸೈಟ್ ಆಗಿರುವ ಟ್ವಿಟ್ಟರ್ ಗೆ ನೋಟಿಸ್ ಜಾರಿಮಾಡಿತ್ತು. ಕೆಲ ದಿನಗಳ ಹಿಂದೆಯಷ್ಟೇ ಕೇಂದ್ರ ಸರ್ಕಾರ ಭಾರತದಲ್ಲಿ (Government Of India) ನೂತನ ಐಟಿ ನಿಯಮಗಳನ್ನು (New IT Rules) ಜಾರಿಗೆ ತಂದಿದೆ ಹಾಗೂ ಎಲ್ಲ ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ಅದನ್ನು ಜಾರಿಗೆ ತರಲು ಮೂರು ತಿಂಗಳ ಕಾಲಾವಕಾಶ ನೀಡಿತ್ತು. ಆದರೆ, ಎಲ್ಲಾ ರೀತಿಯ ಎಚ್ಚರಿಕೆಯ ಹೊರತಾಗಿಯೂ ಕೂಡ ಟ್ವಿಟ್ಟರ್ ಇದಕ್ಕೆ ಸಂಬಂಧಿಸಿದಂತೆ ಯಾವುದೇ ಸಕಾರಾತ್ಮಕ ಕ್ರಮ ಕೈಗೊಂಡಿರಲಿಲ್ಲ. ಇದಾದ ಬಳಿಕ ಪ್ರಕರಣ ದೆಹಲಿ ಹೈಕೋರ್ಟ್ ಮೆಟ್ಟಿಲೇರಿತ್ತು. ಗುರುವಾರ ಈ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಟ್ವಿಟ್ಟರ್ ಪರ ವಾದ ಮಂಡಿಸಿದ್ದ ವಕೀಲರು ನಿವಾಸಿ ಕುಂದುಕೊರತೆ ಅಧಿಕಾರಿ ನೇಮಕಕ್ಕೆ 8 ವಾರಗಳ ಕಾಲಾವಕಾಶ ಬೇಕಾಗಲಿದೆ ಎಂದು ಹೇಳಿದ್ದರು.
ಇದನ್ನೂ ಓದಿ-ಟೈಪ್ ಮಾಡದೆಯೇ whatsappನಲ್ಲಿ Message ಕಳುಹಿಸುವ ಸುಲಭ ವಿಧಾನ ಇಲ್ಲಿದೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ