World Social Media Day 2021: ಇಂದು ಸಾಮಾಜಿಕ ಮಾಧ್ಯಮವು ಸಾಮಾನ್ಯ ಜನರ ಜೀವನಶೈಲಿಯನ್ನು ಸಂಪೂರ್ಣವಾಗಿ ಬದಲಾಯಿಸಿದೆ. ಕೆಲಸ ಸಣ್ಣದಾಗಲಿ, ದೊಡ್ಡದಾಗಲಿ, ಎಲ್ಲವೂ ಸಾಮಾಜಿಕ ಮಾಧ್ಯಮಗಳ ಮೂಲಕ ಪೂರ್ಣಗೊಳ್ಳುತ್ತಿವೆ. ಶಾಪಿಂಗ್, ಸಂವಹನ, ಬ್ರಾಂಡ್ ಪ್ರಚಾರ ಮತ್ತು ಸ್ನೇಹಿತರು ಹಾಗೂ ಕುಟುಂಬದೊಂದಿಗೆ ಸಂಪರ್ಕ ಸಾಧಿಸುವಂತಹ ಎಲ್ಲಾ ವಿಷಯಗಳು ಸಾಮಾಜಿಕ ಮಾಧ್ಯಮಗಳ ಮೂಲಕ ಪೂರ್ಣಗೊಳ್ಳುತ್ತಿವೆ. ವಿಶ್ವ ಸಾಮಾಜಿಕ ಮಾಧ್ಯಮ ದಿನವನ್ನು ಪ್ರತಿವರ್ಷ ಆಚರಿಸಲಾಗುತ್ತದೆ. ಇದರ ಮೂಲಕ, ಸಾಮಾಜಿಕ ಮಾಧ್ಯಮವು ಸಂವಹನದ ಪ್ರಮುಖ ಸಾಧನವಾಗಿ ಹೊರಹೊಮ್ಮಿದೆ ಎಂದು ಹೇಳಲಾಗುತ್ತದೆ, ಇದರಿಂದ ವಿಶ್ವದ ವಿವಿಧ ಭಾಗಗಳಲ್ಲಿ ಇರುವ ಜನರ ಜತೆಗೂ ಕೂಡ ಸಂಪರ್ಕಸಾಧಿಸಬಹುದು. ಇದರ ಜೊತೆಗೆ ಸಾಂಕ್ರಾಮಿಕ ರೋಗದ ಕಾಲದಲ್ಲಿಯೂ ಕೂಡ ಸಾಮಾಜಿಕ ಮಾಧ್ಯಮ ಒಂದು ಪ್ರಮುಖ ವೇದಿಕೆಯಾಗಿ ಹೊರಹೊಮ್ಮಿದೆ. ಸಾರ್ವಜನಿಕರಿಗೆ ಪ್ರತಿಯೊಂದು ಸೌಲಭ್ಯವನ್ನು ಒದಗಿಸಲು ತನ್ನ ಅತ್ಯುತ್ತಮ ಪ್ರಯತ್ನ ಸಾಮಾಜಿಕ ಮಧ್ಯಮ ನಡೆಸಿದೆ ಎಂದರೆ ತಪ್ಪಾಗಲಾರದು.
ಯಾವಾಗ ಮತ್ತು ಎಂದಿನಿಂದ ಈ ದಿನವನ್ನು ಆಚರಿಸಲಾಗುತ್ತದೆ? World Social Media Day
ಜೂನ್ 30ರಂದು ಮೊಟ್ಟಮೊದಲ ಬಾರಿಗೆ ವಿಶ್ವ ಸಾಮಾಜಿಕ ಮಾಧ್ಯಮ ದಿನವನ್ನಾಗಿ (World Social Meida Day 2021) ಆಚರಿಸಲಾಗಿತ್ತು. ಗ್ಲೋಬಲ್ ಕಮ್ಯೂನಿಕೇಶನ್ (Global Communication) ಹಾಗೂ ಇನ್ಸ್ಪೆಕ್ಟಗಾಗಿ (Inspect) ಸಾಮಾಜಿಕ ಮಾಧ್ಯಮದ (Social Media) ಕೊಡುಗೆಯನ್ನು ಪ್ರಮುಖವಾಗಿ ಬಿಂಬಿಸಲಾಗಿತ್ತು. 1997 ರಲ್ಲಿ ಮೊಟ್ಟಮೊದಲ ಸಾಮಾಜಿಕ ಮಾಧ್ಯಮ ವೇದಿಕೆ Sixdegrees ಆರಂಭಗೊಂಡಿತ್ತು (World's First Social Media Platform), ಆಂಡ್ರೂ ವೆನ್ರಿಚ್ ಈ ವೇದಿಕೆಯನ್ನು ಸ್ಥಾಪಿಸಿದ್ದರು. ಈ ವೇದಿಕೆ ಬಳಕೆದಾರರಿಗೆ ತಮ್ಮ ಬಂಧು-ಮಿತ್ರರ ಜೊತೆಗೆ ಸಂಪರ್ಕ ಸಾಧಿಸಲು ಲಿಸ್ಟಿಂಗ್ (Listing), ಬುಲೆಟಿನ್ ಬೋರ್ಡ್ (Bulletin Board) ಹಾಗೂ ಪ್ರೊಫೈಲ್ (Profile) ಗಳಂತಹ ಹಲವು ವೈಶಿಷ್ಟ್ಯಗಳನ್ನು ನೀಡಲಾಗಿತ್ತು.
2001ರಲ್ಲಿ ಈ ವೆಬ್ ಸೈಟ್ ಅನ್ನು ಸ್ಥಗಿತಗೊಳಿಸಲಾಗಿತ್ತು. ಆರಂಭದ ಹಂತದಲ್ಲಿ ಜನರು ಫ್ರೆಂಡ್ಸ್ಟಾರ್ (FrenStar), ಮೈ ಸ್ಪೇಸ್ (My Space) ಹಾಗೂ ಫೇಸ್ಬುಕ್ (Facebook) ಗಳನ್ನುಕೇವಲ ಪರಸ್ಪರ ಮಾತನಾಡಲು ಮಾತ್ರ ಬಳಕೆ ಮಾಡುತ್ತಿದ್ದರು. ಆದರೆ, ಇಂದು ಫೇಸ್ಬುಕ್, ಇನ್ಸ್ಟಾಗ್ರಾಮ್ ಗಳಂತಹ ಸಾಮಾಜಿಕ ಮಾಧ್ಯಮ ಆಪ್ ಗಳು ಜನರಿಗೆ ತಮ್ಮ ಬಿಸಿನೆಸ್ ನಡೆಸಲು ಹಾಗೂ ಅವುಗಳನ್ನು ಪ್ರಮೋಟ್ ಮಾಡಲು ಸಹಾಯ ಮಾಡುತ್ತಿವೆ. ಇನ್ಸ್ಟಾಗ್ರಾಮ್ (Instagram), ಫೇಸ್ಬುಕ್, ವಾಟ್ಸ್ ಆಪ್(WhatsApp), ಟ್ವಿಟ್ಟರ್ (Twitter), ಸ್ನಾಪ್ ಚಾಟ್ ಗಳು (Snapchat) ಇದೀಗ ಜನರಿಗೆ ಹಣಗಳಿಕೆಯ ಅವಕಾಶ ಕೂಡ ನೀಡುತ್ತಿವೆ.
ಇದನ್ನೂ ಓದಿ-WhatsApp Pay: ಈಗ ನೀವು ಚಾಟ್ ಮೂಲಕವೂ ಪಾವತಿಸಬಹುದು, ಅದನ್ನು ಹೇಗೆ? ಯಾರು ಬಳಸಬಹುದು ಎಂದು ತಿಳಿಯಿರಿ
ವಿಶ್ವ ಸಾಮಾಜಿಕ ಮಾಧ್ಯಮ ದಿನಾಚರಣೆಯ ಮಹತ್ವ (Importance Of World Social Media Day 2021)
>> ಇಂದಿನ ಯುಗದಲ್ಲಿ ಸಾಮಾಜಿಕ ಮಾಧ್ಯಮಗಳು ಎಷ್ಟೊಂದು ಮಹತ್ವ ಪಡೆದುಕೊಂಡಿವೆ ಎಂಬುದನ್ನು ಸಾರಲು ಹಾಗೂ ನೆನಪಿಸಿಕೊಳ್ಳಲು ಪ್ರತಿ ವರ್ಷ ಜೂನ್ 30ರಂದು ಜಾಗತಿಕ ಸಾಮಾಜಿಕ ಮಾಧ್ಯಮ ದಿನಾಚರಣೆಯನ್ನು ಆಚರಿಸಲಾಗುತ್ತದೆ.
>> ಸಾಮಾಜಿಕವಾಗಿ ಫೇಸ್ ಬುಕ್, ಇನ್ಸ್ಟಾಗ್ರಾಮ್ ನಂತಹ ಆಪ್ ಗಳ ಮೂಲಕ ನೀವು ವಿಶ್ವದ ಯಾವುದೇ ಮೂಲೆಗಳಲ್ಲಿರುವ ಜನರ ಜೊತೆಗೆ ಸಂಪರ್ಕ ಸಾಧಿಸಬಹುದು.
>> ಇದಲ್ಲದೆ ನೀವು ನಿಮ್ಮ ಬಿಸಿನೆಸ್ ಕೂಡ ಆರಂಭಿಸಿ ಅದರ ಬ್ರಾಂಡ್ ನ ಜಾಹೀರಾತುಗಳನ್ನು ನೀಡಿ ಗ್ರಾಹಕರ ಜೊತೆಗೆ ಸಂಬರ್ಕ ಸಾಧಿಸಬಹುದು.
>> ನಿಪುಣತೆಯನ್ನು ಹಂಚಿಕೊಂಡು ಅದರ ನೋಟಗಳನ್ನು ಹೆಚ್ಚಿಸಲು ಹಾಗೂ ಜನರಿಗೆ ಶಿಕ್ಷಣ ನೀಡಲು ಕೂಡ ಸಾಮಾಜಿಕ ಮಾಧ್ಯಮಗಳನ್ನು ಬಳಸಬಹುದಾಗಿದೆ.
>> ಸಾಮಾಜಿಕ ಮಾಧ್ಯಮಗಳಲ್ಲಿ ಇಂದು ಎಲ್ಲಾ ರೀತಿಯ ಮಾಹಿತಿಗಳನ್ನು ಹಂಚಿಕೊಳ್ಳಲಾಗುತ್ತದೆ. ಶಿಕ್ಷಣವಾಗಿರಲಿ ಅಥವಾ ಪ್ರವಾಸಕ್ಕೆ ಸಂಬಂಧಿಸಿದ ಮಾಹಿತಿಯಾಗಲಿ ಅಥವಾ ಇತರ ಯಾವುದೇ ಅತ್ಯಾವಶ್ಯಕ ಕೆಲಸವಾಗಿರಲಿ ಸಾಮಾಜಿಕ ಮಾಧ್ಯಮದ ಮೂಲಕ ನೀವು ಎಲ್ಲ ಕಾರ್ಯಗಳನ್ನು ಮಾಡಬಹುದು.
ಇದನ್ನೂ ಓದಿ-ಫೋನ್ ಕಳೆದು ಹೋಗಿದ್ದರೆ ಕಾಂಟಾಕ್ಟ್ ಗಳನ್ನು ಮರಳಿ ಪಡೆಯಲು ಏನು ಮಾಡಬೇಕು ತಿಳಿಯಿರಿ
ವಿಶ್ವಾದ್ಯಂತ ಮತ್ತು ಭಾರತದಲ್ಲಿ ಬಳಕೆದಾರರ ಸಂಖ್ಯೆ
ಅಂಕಿಅಂಶಗಳ ಪ್ರಕಾರ, ಕಳೆದ ಒಂದು ವರ್ಷದಲ್ಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆ ಶೇ.7.6ರಷ್ಟು ವೃದ್ಧಿಯಾಗಿದೆ. ಈ ಮೊದಲು ಈ ಅಂಕಿ ಶೇ.4.72ರಷ್ಟಿತ್ತು. ಇದು ವಿಶ್ವದ ಒಟ್ಟು ಜನಸಂಖ್ಯೆಯ ಶೇ.60 ಕ್ಕಿಂತ ಹೆಚ್ಚಿಗೆ ಸಮನಾಗಿದೆ. ಏಪ್ರಿಲ್ 2021ರವರೆಗಿನ ಅಂಕಿಸಂಖ್ಯೆಗಳ ಕುರಿತು ಹೇಳುವುದಾದರೆ. ವಿಶ್ವದ ಸುಮಾರು 4.33 ಬಿಲಿಯನ್ ಬಳಕೆದಾರರು ಸಾಮಾಜಿಕ ಮಾಧ್ಯಮದೊಂದಿಗೆ ಸೇರಿಕೊಂಡಿದ್ದಾರೆ. ಭಾರತದ ಕುರಿತು ಹೇಳುವುದಾದರೆ, WhatsApp ದೇಶದಲ್ಲಿ ಅತಿ ಹೆಚ್ಚು ಬಳಕೆಯಾಗುವ ಸಾಮಾಜಿಕ ಮಾಧ್ಯಮ ವೇದಿಕೆಯಾಗಿದೆ. ಪ್ರಸ್ತುತ ದೇಶದಲ್ಲಿ ಸುಮಾರು 53 ಕೋಟಿ ಜನರು ವಾಟ್ಸ್ ಆಪ್ ಬಳಸುತ್ತಾರೆ. ನಂತರದ ಸ್ಥಾನದಲ್ಲಿ ಯುಟ್ಯೂಬ್ (44.8 ಕೋಟಿ), ಫೇಸ್ಬುಕ್ (41 ಕೋಟಿ), ಇನ್ಸ್ಟಾಗ್ರಾಮ್ (21 ಕೋಟಿ) ಹಾಗೂ ಟ್ವಿಟ್ಟರ್ (1.75 ಕೋಟಿ) ಗಳಿವೆ.
ಇದನ್ನೂ ಓದಿ-ಡೌನ್ ಲೋಡ್ ಮಾಡಿಕೊಳ್ಳುವ ಮೊದಲು ತಿಳಿದುಕೊಳ್ಳಿ ಏನಿದು GB WhatsApp? ಇಲ್ಲವಾದರೆ ಭಾರೀ ನಷ್ಟವಾದೀತು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.