Twitter rules- ಕರೋನಾ ಲಸಿಕೆ ಬಗ್ಗೆ ವದಂತಿ ಹರಡಿದರೆ ಹುಷಾರ್
ಟ್ವಿಟರ್ ಖಾತೆಯಿಂದ ಉದ್ದೇಶಪೂರ್ವಕವಾಗಿ ಪುನರಾವರ್ತಿತ ತಪ್ಪು ಮಾಹಿತಿಯನ್ನು ಹರಡಿದರೆ, ಟ್ವಿಟರ್ ಆ ಖಾತೆಯನ್ನು ಶಾಶ್ವತವಾಗಿ ನಿರ್ಬಂಧಿಸುತ್ತದೆ.
ನವದೆಹಲಿ : ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟರ್ ಕರೋನಾ ಲಸಿಕೆಗೆ ಸಂಬಂಧಿಸಿದ ತಪ್ಪು ಮಾಹಿತಿಯನ್ನು ಹಂಚಿಕೊಳ್ಳುವ ಖಾತೆಗಳನ್ನು ಮೇಲ್ವಿಚಾರಣೆ ಮಾಡುತ್ತಿರುವುದಾಗಿ ಘೋಷಿಸಿದೆ. ಇದಕ್ಕಾಗಿ ಅದು ಮಾನವ ಮಾನಿಟರ್‌ಗಳನ್ನು ಸಹ ನಿಯೋಜಿಸಿದೆ. ಅಂದರೆ, ಕೃತಕ ಬುದ್ಧಿಮತ್ತೆಯ ಸಹಾಯದಿಂದ ಹಿಡಿಯಲಾಗದ್ದನ್ನು ಮೇಲ್ವಿಚಾರಣೆ ಮಾಡಲು ಮಾನವ ಮಾನಿಟರ್‌ಗಳನ್ನು ಸಹ ನಿಯೋಜಿಸಿರುವ ಟ್ವಿಟರ್ ಹೆಚ್ಚಿನ ನಿಗಾ ವಹಿಸಿದೆ. ಈ ಮೂಲಕ ಕರೋನಾ ವ್ಯಾಕ್ಸಿನೇಷನ್‌ಗೆ ಸಂಬಂಧಿಸಿದಂತೆ ವದಂತಿಗಳನ್ನು ಹರಡುವ ಖಾತೆಯನ್ನು ಶಾಶ್ವತವಾಗಿ ನಿರ್ಬಂಧಿಸಬಹುದು ಎಂದು ಎಚ್ಚರಿಕೆಯನ್ನು ನೀಡಿದೆ.
ಸ್ಟ್ರೈಕ್ ನೀತಿ (Strike policy) :
ಇದಕ್ಕಾಗಿ ಟ್ವಿಟರ್ ಸ್ಟ್ರೈಕ್ ನೀತಿಯನ್ನು ಪ್ರಕಟಿಸಿದೆ. ಇದು ಮಾತ್ರವಲ್ಲ, ಟ್ವಿಟ್ಟರ್ ಹ್ಯಾಂಡಲ್‌ನಿಂದ ಮೊದಲ ಬಾರಿಗೆ ತಪ್ಪು ಮಾಹಿತಿಯನ್ನು ಪೋಸ್ಟ್ ಮಾಡಿದ್ದರೆ, ಟ್ವಿಟರ್ (Twitter) ಅದರ ಮೇಲೆ ಒಂದು ಮಟ್ಟದ ನಿಗಾ ಇಡಲಿದೆ. ಆದರೆ ಖಾತೆಯಿಂದ ಉದ್ದೇಶಪೂರ್ವಕವಾಗಿ ಪುನರಾವರ್ತಿತ ತಪ್ಪು ಮಾಹಿತಿಯನ್ನು ಹರಡಿದರೆ, ಟ್ವಿಟರ್ ಆ ಖಾತೆಯನ್ನು ಶಾಶ್ವತವಾಗಿ ನಿರ್ಬಂಧಿಸುತ್ತದೆ.
ಇದನ್ನೂ ಓದಿ - ಮನೆಯಲ್ಲಿಯೇ Corona Vaccine ಪಡೆದು ವಿವಾದಕ್ಕೆ ಗುರಿಯಾದ ಸಚಿವ BC Patil
ಕರೋನಾ ವ್ಯಾಕ್ಸಿನೇಷನ್ (Corona Vaccination) ಬಗ್ಗೆ ವಿಶ್ವದಾದ್ಯಂತ ಹರಡಿರುವ ತಪ್ಪು ಮಾಹಿತಿಯನ್ನು ತಡೆಯಲು ಟ್ವಿಟರ್ ಈ ಕ್ರಮ ಕೈಗೊಂಡಿದೆ. ಅಮೆರಿಕದಲ್ಲಿ ಕ್ಯಾಪಿಟಲ್ ಹಿಲ್ಸ್ ಹಿಂಸಾಚಾರದ ನಂತರ ಟ್ವಿಟರ್ ಆ ಸಂದರ್ಭದಲ್ಲಿ ಅಮೆರಿಕದ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ ಅವರ ಖಾತೆಯನ್ನು ಶಾಶ್ವತವಾಗಿ ಮುಚ್ಚಿದೆ ಎಂಬುದು ಗಮನಾರ್ಹ ಸಂಗತಿಯಾಗಿದೆ.
ವರ್ಧಿತ ಮಾನವ ಮೇಲ್ವಿಚಾರಣೆ (Enhanced human monitoring) :
ಇಲ್ಲಿಯವರೆಗೆ, ಯಾವುದೇ ಮಾಹಿತಿ ವರದಿಯಾದಾಗಲೆಲ್ಲಾ ಟ್ವಿಟರ್ ಕೃತಕ ಬುದ್ಧಿಮತ್ತೆಯ ಮೂಲಕ ಕ್ರಮ ಕೈಗೊಳ್ಳುತ್ತಿತ್ತು. ಅಂತಹ ಪರಿಸ್ಥಿತಿಯಲ್ಲಿ, ಅನೇಕ ತಪ್ಪು ಮಾಹಿತಿಯನ್ನು ನಿಲ್ಲಿಸಲಾಗಲಿಲ್ಲ. ಆದರೆ ಈಗ ಮಾನವ ಮೇಲ್ವಿಚಾರಣೆಯಿಂದಾಗಿ ತಕ್ಷಣದ ಕ್ರಮ ಕೈಗೊಳ್ಳಲಾಗುವುದು ಎಂದು ಕಂಪನಿ ತಿಳಿಸಿದೆ.
ಇದನ್ನೂ ಓದಿ - ಸಾಮಾಜಿಕ ಮಾಧ್ಯಮಗಳನ್ನು ನಿಯಂತ್ರಿಸಲು ಸರ್ಕಾರ ಜಾರಿಗೆ ತರಲಿದೆ ಕಾನೂನು
11.5 ದಶಲಕ್ಷಕ್ಕೂ ಹೆಚ್ಚಿನ ಖಾತೆಗಳನ್ನು ಮೇಲ್ವಿಚಾರಣೆ ಮಾಡಲಾಗಿದೆ (Over 11.5 million accounts monitored) :
ಕರೋನಾ ವ್ಯಾಕ್ಸಿನೇಷನ್‌ಗೆ ಸಂಬಂಧಿಸಿದ 8400 ಟ್ವೀಟ್‌ಗಳನ್ನು ತೆಗೆದುಹಾಕಿದೆ ಮತ್ತು 11.5 ಮಿಲಿಯನ್ ಟ್ವಿಟರ್ ಖಾತೆಗಳ ಮೇಲೆ ನಿಗಾ ಇಡಲಾಗುತ್ತಿದೆ ಎಂದು ಟ್ವಿಟರ್ ಹೇಳಿದೆ. ಮೊದಲು ಖಾತೆಗಳಿಗೆ ಎಚ್ಚರಿಕೆ ನೀಡಲಾಗುವುದು ಮತ್ತು ಅದರ ಮೇಲೆ ನಿಗಾ ವಹಿಸಲಾಗುವುದು ಎಂದು ಟ್ವಿಟರ್ ಹೇಳಿದೆ. ಆದರೆ ಮತ್ತೆ ತಪ್ಪು ಮಾಹಿತಿ ಹರಡಿದರೆ, ಖಾತೆಯನ್ನು ನೇರವಾಗಿ ನಿರ್ಬಂಧಿಸಲಾಗುತ್ತದೆ ಎಂದು ಟ್ವಿಟ್ಟರ್ ಹೇಳಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.