ಸಾಮಾಜಿಕ ಮಾಧ್ಯಮಗಳನ್ನು ನಿಯಂತ್ರಿಸಲು ಸರ್ಕಾರ ಜಾರಿಗೆ ತರಲಿದೆ ಕಾನೂನು

ಇಂದಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮ ಎಷ್ಟೊಂದು ಪ್ರಭಾವಶಾಲಿಯಾಗಿದೆ ಎಂದರೆ ಯಾವುದೇ ಒಂದು ಸರ್ಕಾರವನ್ನು ಇದು ಉರುಳಿಸಬಹುದು ಎಂದು ಹಿರಿಯ ಬಿಜೆಪಿ ಮುಖಂಡ ರಾಮ್ ಮಾಧವ್ ಹೇಳಿದ್ದಾರೆ.

Written by - Nitin Tabib | Last Updated : Feb 21, 2021, 10:00 PM IST
  • ಸಾಮಾಜಿಕ ಮಾಧ್ಯಮಗಳಿಗೆ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡಿ ಸರ್ಕಾರ ಉರುಳಿಸುವ ಸಾಮರ್ಥ್ಯವಿದೆ.
  • ಇವುಗಳಿಗೆ ಸೂಕ್ತ ನಿಯಂತ್ರಣ ಮಾಡುವ ಅನಿವಾರ್ಯತೆ ಇದೆ.
  • ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಬಿಜೆಪಿ ಹಿರಿಯ ಮುಖಂಡ ರಾಮ್ ಮಾಧವ್
ಸಾಮಾಜಿಕ ಮಾಧ್ಯಮಗಳನ್ನು ನಿಯಂತ್ರಿಸಲು ಸರ್ಕಾರ ಜಾರಿಗೆ ತರಲಿದೆ ಕಾನೂನು title=
Ram Madhav(File Photo)

ನವದೆಹಲಿ: ಸರ್ಕಾರಗಳನ್ನು ಉರುಳಿಸಲು, ಅವ್ಯವಸ್ಥೆಯನ್ನು ಸೃಷ್ಟಿಸಲು ಮತ್ತು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಲು ಸಾಮಾಜಿಕ ಮಾಧ್ಯಮಗಳು (Social Meida) ಪ್ರಭಾವ ಬೀರಲಿವೆ  ಎಂದು ಬಿಜೆಪಿಯ ಹಿರಿಯ ನಾಯಕ ರಾಮ್ ಮಾಧವ್ (Ram Mahdav) ಹೇಳಿದ್ದಾರೆ. ಮತ್ತು ಅದನ್ನು ಎದುರಿಸಲು ಪರಿಹಾರಗಳನ್ನು ಸಾಂವಿಧಾನಿಕ ಚೌಕಟ್ಟಿನಲ್ಲಿ ಕಂಡುಹಿಡಿಯುವ ಅವಶ್ಯಕತೆಯಿದೆ. ತಮ್ಮ ಹೊಸ ಪುಸ್ತಕ 'Because India Comes First' ಬಿಡುಗಡೆಯ ಸಂದರ್ಭದಲ್ಲಿ ಮಾತನಾಡಿದ ಮಾಧವ್, ಪ್ರಜಾಪ್ರಭುತ್ವವು ಒತ್ತಡದಲ್ಲಿದೆ ಮತ್ತು ರಾಜಕೀಯೇತರ ಶಕ್ತಿಗಳ ಹೊರಹೊಮ್ಮುವಿಕೆಯೊಂದಿಗೆ ಹೊಸ ಸವಾಲುಗಳನ್ನು ಎದುರಿಸುತ್ತಿದೆ ಎಂದು ಹೇಳಿದ್ದಾರೆ.

ಪ್ರಸ್ತುತ ಇರುವ ಕಾನೂನುಗಳು ಸಾಕಾಗುವುದಿಲ್ಲ: ಮಾಧವ್
ಪ್ರಭಾ ಖೇತಾನ್ ಫೌಂಡೇಶನ್ ಶನಿವಾರ ಸಂಜೆ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರುಸಾಮಾಜಿಕ ಮಾಧ್ಯಮಗಳು ತುಂಬಾ ಬಲಿಷ್ಠವಾಗಿದ್ದು,  ಅದು ಸರ್ಕಾರಗಳನ್ನು ಉರುಳಿಸುವ ಶಕ್ತಿ ಹೊಂದಿದೆ ಹಾಗೂ ಅದನ್ನು ನಿಯಂತ್ರಿಸುವುದು ಕಷ್ಟ ಏಕೆಂದರೆ ಅದು ಗಡಿಯನ್ನು ಮೀರಿವೆ ಎಂದಿದ್ದಾರೆ.  ಈ ಶಕ್ತಿಗಳು ಅರಾಜಕತೆಯ ಪ್ರಚಾರ ಮಾಡಬಹುದು, ಅದು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತದೆ, ಆದರೆ ಸಾಂವಿಧಾನಿಕ ಚೌಕಟ್ಟಿನೊಳಗೆ ಅದಕ್ಕೆ ಪರಿಹಾರಗಳು ಇರಬೇಕು. ಇದಕ್ಕಾಗಿ ಈಗಿರುವ ಕಾನೂನುಗಳು ಸಾಕಾಗುವುದಿಲ್ಲ ಎಂದು ಅವರು ಹೇಳಿದ್ದಾರೆ. ಅವುಗಳನ್ನು ಎದುರಿಸಲು ಮತ್ತು ನಿರ್ವಹಿಸಲು ಹೊಸ ನಿಯಮಗಳು ಅಗತ್ಯವಿದೆ. ಅವರ ಪ್ರಕಾರ, ಸರ್ಕಾರ ಈಗಾಗಲೇ ಈ ದಿಕ್ಕಿನಲ್ಲಿ ಕಾರ್ಯನಿರ್ವಹಿಸುತ್ತಿದೆ.

ಇದನ್ನೂ ಓದಿ- ಹಿಟ್ಲರ್ ಮತ್ತು ಮುಸೊಲಿನಿ 'ಪ್ರಜಾಪ್ರಭುತ್ವದ ಉತ್ಪನ್ನಗಳು- ರಾಮ್ ಮಾಧವ್

ಖಾತೆಗಳನ್ನು ನಿರ್ಬಂಧಿಸುವ ಕುರಿತು ಸರ್ಕಾರ ಮತ್ತು ಟ್ವಿಟರ್ (Twitter) ನಡುವೆ ಮುಂದುವರೆದಿರುವ ವಿವಾದದ ನಡುವೆ ರಾಮ್ ಮಾಧವ್ ನೀಡಿರುವ ಈ ಹೇಳಿಕೆ ಭಾರಿ ಮಹತ್ವಪಡೆದುಕೊಂಡಿದೆ. ಇನ್ನೊಂದೆಡೆ  ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅವರು ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಅನ್ನು ಭಾರತೀಯ ಕಾನೂನನ್ನು ಅನುಸರಿಸಲು ಮನವಿ ಮಾಡಿದ್ದಾರೆ.

ಇದನ್ನೂ ಓದಿ- ಭಾರತ ಹೆಚ್ಚು ರಾಷ್ಟ್ರಗಳೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು ಎಂಬ ವಿಚಾರಕ್ಕೆ ಬಿಜೆಪಿ ಮುಕ್ತ: ರಾಮ್ ಮಾಧವ್

ಈಗಾಗಲೇ ಕೇಂದ್ರ ಹಾಗೂ ಟ್ವಿಟ್ಟರ್ ನೋಟಿಸ್ ಜಾರಿಮಾಡಿದ ಸುಪ್ರೀಂ ಕೋರ್ಟ್(Supreme Corut) ಈಗಾಗಲೇ ಈ ಕುರಿತು ಕೇಂದ್ರ ಹಾಗೂ ಟ್ವಿಟ್ಟರ್ ಗಳಿಗೆ ನೋಟೀಸ್ ಜಾರಿಮಾಡಿದ ಸರ್ವೋಚ್ಛ ನ್ಯಾಯಾಲಯ ದ್ವೇಷ ಹುಟ್ಟುಹಾಕುವ ಕಂಟೆಂಟ್ ಅನ್ನು ನಿಯಂತ್ರಿಸಲು ಸೂಚಿಸಿದೆ. ಇದಲ್ಲದೆ ನೋಟಿಸ್ ನಲ್ಲಿ ಕಾನೂನು ರಚಿಸುವುದರ ಕುರಿತು ಕೂಡ ಉಲ್ಲೇಖಿಸಲಾಗಿದೆ.  ಇದಲ್ಲದೆ ಮೋದಿ ಸರ್ಕಾರದ (Modi Government) ಹಲವು ನಿರ್ಧಾರಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ತಮ್ಮ ಹೊಸ ಪುಸ್ತಕದಲ್ಲಿ ಉಲ್ಲೇಖಿಸಿರುವುದಾಗಿ ರಾಮ್ ಮಾಧವ್ ಹೇಳಿದ್ದಾರೆ.

ಇದನ್ನೂ ಓದಿ-ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಗೆ ಅಡ್ಡಿಪಡಿಸುವವರನ್ನು ಜೈಲಿಗೆ ಹಾಕಲಾಗುವುದು-ರಾಮ್ ಮಾಧವ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News