ಟ್ವಿಟರ್ನ ಅತ್ಯುತ್ತಮ ಪರ್ಯಾಯ ಸ್ಥಳೀಯ ಅಪ್ಲಿಕೇಶನ್ Kooಗೆ ಜನಮನ್ನಣೆ
ಆತ್ಮನಿರ್ಭರ್ ಅಪ್ಲಿಕೇಶನ್ ಇನ್ನೋವೇಶನ್ ಸವಾಲು (AatmaNirbhar App Innovation Challenge)ನಲ್ಲಿ ಈ ಅಪ್ಲಿಕೇಶನ್ ತನ್ನ ವಿಭಾಗದಲ್ಲಿ ಜಯಗಳಿಸಿದೆ. ಈ ಅಪ್ಲಿಕೇಶನ್ 10 ಕ್ಕೂ ಹೆಚ್ಚು ಭಾರತೀಯ ಭಾಷೆಗಳನ್ನು ಬೆಂಬಲಿಸುತ್ತದೆ. ಈ ಆ್ಯಪ್ ಅನ್ನು ಸದ್ಗುರು, ರವಿಶಂಕರ್ ಪ್ರಸಾದ್, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್ ಅವರಂತಹ ಪ್ರಮುಖ ವ್ಯಕ್ತಿಗಳು ಸಹ ಬಳಸುತ್ತಿದ್ದಾರೆ.
ನವದೆಹಲಿ: ನೀವು ಟ್ವಿಟರ್‌ಗೆ ಉತ್ತಮ ಪರ್ಯಾಯವನ್ನು ಹುಡುಕುತ್ತಿದ್ದರೆ \ಸ್ಥಳೀಯ ಅಪ್ಲಿಕೇಶನ್ ಕೂ (Koo) ಅನ್ನು ಪ್ರಯತ್ನಿಸಬಹುದು. ಟ್ವಿಟ್ಟರ್ (Twitter)ನಂತಹ ವೈಶಿಷ್ಟ್ಯಗಳೊಂದಿಗೆ ಬರುವ ಈ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್ (Google play store) ನಲ್ಲಿ 1 ಮಿಲಿಯನ್ಗಿಂತ ಹೆಚ್ಚು ಬಾರಿ ಡೌನ್ಲೋಡ್ ಮಾಡಲಾಗಿದೆ. ವಾಸ್ತವವಾಗಿ ಇದು ಸುದ್ದಿ ಮತ್ತು ಅಭಿಪ್ರಾಯ ಹಂಚಿಕೆ ಮೈಕ್ರೋ ಬ್ಲಾಗಿಂಗ್ ವೇದಿಕೆಯಾಗಿದೆ. ಸುದ್ದಿ ಮತ್ತು ವಿವಿಧ ವಿಷಯಗಳನ್ನು ಇಲ್ಲಿ ಚರ್ಚಿಸಬಹುದು.
ಆತ್ಮನಿರ್ಭರ್ ಅಪ್ಲಿಕೇಶನ್ ಇನ್ನೋವೇಶನ್ ಸವಾಲು (AatmaNirbhar App Innovation Challenge)ನಲ್ಲಿ ಈ ಅಪ್ಲಿಕೇಶನ್ ತನ್ನ ವಿಭಾಗದಲ್ಲಿ ಜಯಗಳಿಸಿದೆ. ಈ ಅಪ್ಲಿಕೇಶನ್ 10 ಕ್ಕೂ ಹೆಚ್ಚು ಭಾರತೀಯ ಭಾಷೆಗಳನ್ನು ಬೆಂಬಲಿಸುತ್ತದೆ. ಈ ಆ್ಯಪ್ ಅನ್ನು ಸದ್ಗುರು, ರವಿಶಂಕರ್ ಪ್ರಸಾದ್, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್ ಅವರಂತಹ ಪ್ರಮುಖ ವ್ಯಕ್ತಿಗಳು ಸಹ ಬಳಸುತ್ತಿದ್ದಾರೆ. ಈ ಅಪ್ಲಿಕೇಶನ್‌ಗೆ ಸಂಬಂಧಿಸಿದ ಕೆಲವು ವಿಶೇಷ ವೈಶಿಷ್ಟ್ಯಗಳ ಬಗ್ಗೆ ತಿಳಿದುಕೊಳ್ಳೋಣ ...
ನಿಮ್ಮ ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಆಟೋ ಪ್ಲೇ ವೀಡಿಯೊಗಳನ್ನು ಆಫ್ ಮಾಡಲು ಹೀಗೆ ಮಾಡಿ
ಈ ಅಪ್ಲಿಕೇಶನ್‌ನಲ್ಲಿ ವಿಶೇಷತೆ ಏನು?
ಈ ವೇದಿಕೆಯ ವಿಶೇಷವೆಂದರೆ ಇಲ್ಲಿ ನೀವು ನಿಮ್ಮ ಆಲೋಚನೆಗಳನ್ನು ಪಠ್ಯ / ವಿಡಿಯೋ / ಆಡಿಯೊ (Text / Audio / Video) ಮೂಲಕ ಭಾರತೀಯ ಭಾಷೆಗಳಲ್ಲಿ ಹಂಚಿಕೊಳ್ಳಬಹುದು. ಟ್ವಿಟರ್‌ನಂತೆ ನೀವು ದೇಶ ಮತ್ತು ವಿದೇಶದ ವಿವಿಧ ವಿಷಯಗಳನ್ನು ಇತ್ತೀಚಿನ ಮತ್ತು ಬ್ರೇಕಿಂಗ್ ನ್ಯೂಸ್ಗಳೊಂದಿಗೆ ಚರ್ಚಿಸಬಹುದು. ನೀವು ಟ್ವಿಟರ್‌ನಲ್ಲಿ ಟ್ವೀಟ್ ಅನ್ನು ರಚಿಸುವ ರೀತಿ ಇಲ್ಲಿ ಕೂ (KOO) ಅನ್ನು ರಚಿಸಬಹುದು.
ಈ ದೇಶದಲ್ಲಿ Facebook, Twitter ವಿರುದ್ಧ ಕಾನೂನು ಕ್ರಮ, ಇದೇ ಅದಕ್ಕೆ ಕಾರಣ
ನೀವು ಅದರ ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದರೆ ನೀವು ಇಲ್ಲಿ ಅಭಿಪ್ರಾಯವನ್ನು ಹಂಚಿಕೊಳ್ಳಬಹುದು. ಟ್ರೆಂಡಿಂಗ್‌ನಲ್ಲಿರುವದನ್ನು ನೀವು ಗಮನಿಸಬಹುದು. ನಿಮ್ಮ ಭಾಷೆಯಲ್ಲಿ ನೀವು ಸುದ್ದಿಗಳನ್ನು ಚರ್ಚಿಸಬಹುದು. ನೆಚ್ಚಿನ ಮತ್ತು ಕ್ಷೇತ್ರ ಸಂಬಂಧಿತ ಜನರನ್ನು ಅನುಸರಿಸಬಹುದು. ನೀವು ಪತ್ರಿಕೆಯ ಸುದ್ದಿಯನ್ನು ನೋಡಬಹುದು. ಇದು ಮಾತ್ರವಲ್ಲ ಬ್ರೇಕಿಂಗ್ ನ್ಯೂಸ್ ಆಯ್ಕೆಯು ಎಕ್ಸ್‌ಪ್ಲೋರ್ ವಿಭಾಗದಲ್ಲಿಯೂ ಲಭ್ಯವಿದೆ. ನೀವು ಬಯಸಿದರೆ ನೀವು ಅದನ್ನು ಟ್ವಿಟರ್‌ಗೆ ಪರ್ಯಾಯವಾಗಿ ಸಹ ಬಳಸಬಹುದು. ಈ ಅಪ್ಲಿಕೇಶನ್ ಅನ್ನು 10 ಲಕ್ಷಕ್ಕೂ ಹೆಚ್ಚು ಬಾರಿ ಡೌನ್ಲೋಡ್ ಮಾಡಲಾಗಿದೆ. ಇದು ಆಂಡ್ರಾಯ್ಡ್ ಮತ್ತು ಐಒಎಸ್ ಸಾಧನಗಳಿಗೆ ಲಭ್ಯವಿದೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಇದರ ಬಳಕೆದಾರರ ರೇಟಿಂಗ್ 4.7 ಆಗಿದೆ.