ಬೆಂಗಳೂರು : ಭಾರತದಲ್ಲಿ ಬ್ಲೂಟೂತ್ ಸ್ಪೀಕರ್‌ಗಳ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.  ಅನೇಕ ಕಂಪನಿಗಳು ಕಡಿಮೆ ಬೆಲೆಯ ಸ್ಪೀಕರ್ ಗಳನ್ನು ಕೂಡಾ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ.   ಇತ್ತೀಚಿನ ದಿನಗಳಲ್ಲಿ ಬಿಡುಗಡೆಯಾಗುತ್ತಿರುವ ಸ್ಪೀಕರ್ ಗಳು, ವಿನ್ಯಾಸದಲ್ಲಿಯೂ ಕೂಡಾ ಗ್ರಾಹಕರ ಮನಸೂರೆಗೊಳ್ಳುತ್ತಿವೆ. UBON 5 ರೀತಿಯಲ್ಲಿ ಉಪಯೋಗಕ್ಕೆ ಬರುವ ಸ್ಪೀಕರ್ ಗಳನ್ನೂ ಬಿಡುಗಡೆ ಮಾಡಿದೆ. ಇದಕ್ಕೆ ಹವಾ ಹವಾಯಿ ಎಂದು ಹೆಸರಿಡಲಾಗಿದೆ. ಇದರ ಪೂರ್ಣ ಹೆಸರು, SP-135 5 ಇನ್ 1 ಹವಾ ಹವಾಯಿ ಸೋಲಾರ್  ವೈರ್‌ಲೆಸ್ ಸ್ಪೀಕರ್‌. ಇದರ ಬೆಲೆ ತುಂಬಾ ಕಡಿಮೆಯಾಗಿದ್ದು, ಗ್ರಾಹಕರ ಕೈಗೆಟಕುವಂತಿದೆ. 


COMMERCIAL BREAK
SCROLL TO CONTINUE READING

UBON SP-135 5 in 1 ಹವಾ ಹವಾಯಿ ಸೋಲಾರ್ ವೈರ್‌ಲೆಸ್ ಸ್ಪೀಕರ್‌ ವೈಶಿಷ್ಟ್ಯಗಳು : 
 ಇದರ ಹೆಸರೇ ಸೂಚಿಸುವಂತೆ, ಈ ಬ್ಲೂಟೂತ್ ಸ್ಪೀಕರ್ ಅನ್ನು 5 ರೀತಿಯಲ್ಲಿ ಬಳಸಬಹುದಾಗಿದೆ. ಈ ಡಿವೈಸ್  ಇನ್ ಬಿಲ್ಟ್ ಟಾರ್ಚ್, ಮೇಲ್ಭಾಗದಲ್ಲಿ ಫ್ಯಾನ್, FM ರೇಡಿಯೋ, ಸೌರ ಚಾಲಿತ ಚಾರ್ಜಿಂಗ್ ಅನ್ನು ಒಳಗೊಂಡಿದೆ. ಈ ಸ್ಪೀಕರ್ ನ ವಿನ್ಯಾಸ ಉಳಿದ ಸ್ಪೀಕರ್‌ಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ. 
 
ಇದನ್ನೂ ಓದಿ : 
 Google Search: ಗೂಗಲ್‌ನಲ್ಲಿ ಈ 5 ವಿಷಯಗಳ ಹುಡುಕಾಟ ಶಿಕ್ಷಾರ್ಹ ಅಪರಾಧ


UBON SP-135 5 in 1 ಹವಾ ಹವಾಯಿ ಸೋಲಾರ್ ವೈರ್‌ಲೆಸ್ ಸ್ಪೀಕರ್‌ ಬ್ಯಾಟರಿ :
ಸ್ಪೀಕರ್‌ನ ಹಿಂಭಾಗದಲ್ಲಿ ಎಫ್‌ಎಂ ಪ್ಲೇ ಮಾಡಲು ಸಹಾಯ ಮಾಡುವ ಆಂಟೆನಾ ಇದೆ. 1200mAh ಬ್ಯಾಟರಿಯು ಸ್ಪೀಕರ್‌ ನೊಂದಿಗೆ ಬರುತ್ತದೆ. ಇದು ಪೂರ್ಣ ಚಾರ್ಜ್‌ನಲ್ಲಿ 4 ಗಂಟೆಗಳವರೆಗೆ ಆಡಿಯೊ ಪ್ಲೇಬ್ಯಾಕ್ ಅನ್ನು ನೀಡುತ್ತದೆ. ಇದನ್ನು ವೈಯರ್ ನಿಂದ ಚಾರ್ಜ್ ಮಾಡುವುದು ಮರೆತರೆ ಸೂರ್ಯನ ಬೆಳಕಿನಿಂದಲೂ ಚಾರ್ಜ್ ಮಾಡಬಹುದು.  


ಭಾರತದಲ್ಲಿ UBON SP-135 5 ಹವಾ ಹವಾಯಿ ಸೋಲಾರ್ ವೈರ್‌ಲೆಸ್ ಸ್ಪೀಕರ್‌ಗಳ ಬೆಲೆ :
ಬ್ಲೂಟೂತ್ ಸ್ಪೀಕರ್‌ನ ಇತರ ವೈಶಿಷ್ಟ್ಯಗಳೆಂದರೆ ಬ್ಲೂಟೂತ್ 5.0, USB ಪೋರ್ಟ್, ಮೈಕ್ರೊ SD ಕಾರ್ಡ್ ಸ್ಲಾಟ್ ಮತ್ತು AUX ಪೋರ್ಟ್. ಹವಾ ಹವಾಯಿ ಸೋಲಾರ್ ವೈರ್‌ಲೆಸ್ ಸ್ಪೀಕರ್‌ಗಳು ಹಲವು ಬಣ್ಣಗಳಲ್ಲಿ ಲಭ್ಯವಿದೆ. ಸ್ಪೀಕರ್ ಅನ್ನು ಕಪ್ಪು, ಕೆಂಪು ಮತ್ತು ನೀಲಿ ಆಯ್ಕೆಗಳಲ್ಲಿ ಖರೀದಿಸಬಹುದು. ಇನ್ನು ಈ ವೈರ್‌ಲೆಸ್ ಸ್ಪೀಕರ್‌ಗಳ ಬೆಲೆ 1,999 ರೂ. ಇದನ್ನು ಆಫ್‌ಲೈನ್ ಸ್ಟೋರ್‌ಗಳಲ್ಲಿ ಖರೀದಿಸಬಹುದು.


ಇದನ್ನೂ ಓದಿ :  Lava Blaze NXT: ಇಂದು ಮಾರುಕಟ್ಟೆಗೆ ಲಗ್ಗೆ ಇಡಲಿದೆ 10 ಸಾವಿರದೊಳಗಿನ ಲಾವಾ ಸ್ಮಾರ್ಟ್‌ಫೋನ್


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.