Dangerous Apps List: ಸ್ಮಾರ್ಟ್‌ಫೋನ್‌ಗಳಲ್ಲಿ ಅಗತ್ಯ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲಾಗುತ್ತದೆ. ಕೆಲವೊಮ್ಮೆ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುವ ವೇಳೆ ಜನರು ನಕಲಿ ಆಪ್'ಗಳನ್ನು ಇನ್ಸ್ಟಾಲ್ ಮಾಡಿರುತ್ತಾರೆ. ಇದರಿಂದ ಅವರ ಖಾತೆ ಸಂಪೂರ್ಣವಾಗಿ ಖಾಲಿಯಾಗಬಹುದು ಎಂದು ನಿಮಗೆ ತಿಳಿದಿದೆಯೇ? 


COMMERCIAL BREAK
SCROLL TO CONTINUE READING

ಸಾಮಾನ್ಯವಾಗಿ, ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡುವ ಅಪ್ಲಿಕೇಶನ್‌ಗಳು ಅಸಲಿ ಎಂದು ನಾವು ಭಾವಿಸುತ್ತೇವೆ. ಆದರೆ, ತ್ವರಿತ ಸಾಲದ ಹೆಸರಿನಲ್ಲಿ ಹಲವು ಆಪ್ ಗಳನ್ನು ಡೌನ್‌ಲೋಡ್ ಮಾಡಲಾಗುತ್ತಿದ್ದು, ಇದು ಜನರನ್ನು ಮೋಸದ ಜಾಲದಲ್ಲಿ ಸಿಲುಕಿಸುತ್ತಿದೆ. ಇದರಿಂದ ಕೋಟ್ಯಾಂತರ ರೂಪಾಯಿಯನ್ನು ಜನ ಕಳೆದುಕೊಂಡಿದ್ದಾರೆ ಎಂದು ವರದಿಯೊಂದು ತಿಳಿಸಿದೆ. 


ಇದನ್ನೂ ಓದಿ- ಸಾರ್ವಜನಿಕ ವೈ-ಫೈ ಬಳಸುವವರೇ ಹುಷಾರ್! ಇದರ ಅನುಕೂಲಗಳ ಬಗ್ಗೆ ಎಚ್ಚರ! ಎಚ್ಚರ! 


ವಾಸ್ತವವಾಗಿ, ಸ್ಮಾರ್ಟ್‌ಫೋನ್‌ನಲ್ಲಿ ಕೆಲವು ಅಪ್ಲಿಕೇಶನ್‌ಗಳು ಬಳಕೆದಾರರ ಹೆಸರು, ವಿಳಾಸ, ಫೋನ್ ನಂಬರ್, ಬ್ಯಾಂಕ್ ವಿವರಗಳಂತಹ ವೈಯಕ್ತಿಕ ಮಾಹಿತಿಗಳನ್ನು ಕದಿಯಬಹುದು. ಇಂತಹ ಅಪ್ಲಿಕೇಶನ್‌ಗಳು ಬ್ಯಾಂಕ್ ಖಾತೆಯಿಂದ ಹಣ ವಂಚಿಸಿರುವ ಬಗ್ಗೆ ವರದಿಗಳು ಮುನ್ನಲೆಗೆ ಬಂದ ಹಿನ್ನಲೆಯಲ್ಲಿ ಗೂಗಲ್ ಪ್ಲೇ ಸ್ಟೋರ್ ನಿಂದ ಅವುಗಳನ್ನು ತೆಗೆದುಹಾಕಲಾಗಿದೆ. 


ಇದನ್ನೂ ಓದಿ- iPhone ಬಳಕೆದಾರರಿಗೆ ಸರ್ಕಾರದಿಂದ ರೆಡ್ ಅಲರ್ಟ್..! ನಿರ್ಲಕ್ಷಿಸಿದ್ರೆ ಅಪಾಯ ಖಂಡಿತ...!


ಲಭ್ಯವಿರುವ ಮಾಹಿತಿಯ ಪ್ರಕಾರ, ಗೂಗಲ್ ಪ್ಲೇ ಸ್ಟೋರ್ ನಿಂದ ಅಂತಹ 15 ಅಪ್ಲಿಕೇಶನ್‌ಗಳನ್ನು ತೆಗೆದುಹಾಕಲಾಗಿದೆ. ಒಂದೊಮ್ಮೆ ನೀವೂ ಕೂಡ ಈ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿದ್ದರೆ ನಿಮ್ಮ ಖಾತೆ ಖಾಲಿ ಆಗುವುದನ್ನು ತಪ್ಪಿಸಲು ಕೂಡಲೇ ಈ ಅಪ್ಲಿಕೇಶನ್‌ಗಳನ್ನು ಅನ್ಇನ್ಸ್ಟಾಲ್ ಮಾಡಿ. ಅಂತಹ ಅಪ್ಲಿಕೇಶನ್‌ಗಳು ಯಾವುವೆಂದರೆ... 
1. Préstamo Seguro-Rápido, seguro
2. Préstamo Rápido-Credit Easy
3. ได้บาทง่ายๆ-สินเชื่อด่วน
4, RupiahKilat-Dana cair
5. ยืมอย่างมีความสุข – เงินกู้
6. เงินมีความสุข – สินเชื่อด่วน
7. KreditKu-Uang Online
8. Dana Kilat-Pinjaman kecil
9. Cash Loan-Vay tiền
10. RapidFinance
11. PrêtPourVous
12. Huayna Money 
13. IPréstamos: Rápido
14. ConseguirSol-Dinero Rápido
15. ÉcoPrêt Prêt En Ligne


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.