UPI LIte ಸೇವೆಯನ್ನು ಫೋನ್ ಪೇನಲ್ಲಿ ಹೇಗೆ ಸಕ್ರೀಯಗೊಳಿಸಬೇಕು? ಇಲ್ಲಿದೆ ಸುಲಭ ವಿಧಾನ
UPI LIte ಮೂಲಕ ನೀವು ಪಿನ್ ನಮೂದಿಸದೆಯೇ ರೂ 200 ವರೆಗೆ ಹಣವನ್ನು ಪಾವತಿ ಮಾಡಬಹುದು. ಫೋನ್ ಪೇನಲ್ಲಿ ಈ ವಿಶೇಷ ಸೇವೆಯನ್ನು ಹೇಗೆ ಸಕ್ರೀಯಗೊಳಿಸಬೇಕು ಎಂಬುದನ್ನು ಹಂತಹಂತವಾಗಿ ತಿಳಿದುಕೊಳ್ಳೋಣ ಬನ್ನಿ, (Technology News In Kannada)
ಬೆಂಗಳೂರು: ಭಾರತೀಯ ರಿಸರ್ವ್ ಬ್ಯಾಂಕ್ 2022 ರಲ್ಲಿ ಯುಪಿಐ ಲೈಟ್ ಸೇವೆಯನ್ನು ಆರಂಭಿಸಿದೆ. ಇದು ಯುಪಿಐ ಪಾವತಿ ವ್ಯವಸ್ಥೆಯ ಸ್ವಲ್ಪ ಸರಳವಾದ ಆವೃತ್ತಿಯಾಗಿದೆ, ಇದನ್ನು ಸಣ್ಣ ಮೊತ್ತದ ವಹಿವಾಟುಗಳಿಗಾಗಿ ಬಿಡುಗಡೆ ಮಾಡಲಾಗಿದೆ. ಮೂಲ ಯುಪಿಐ ಮೂಲಕ, ನೀವು ರೂ 1 ಲಕ್ಷದವರೆಗೆ ದೈನಂದಿನ ವಹಿವಾಟುಗಳನ್ನು ಮಾಡಬಹುದು, ಆದರೆ ಯುಪಿಐ ಲೈಟ್‌ನಲ್ಲಿ, ರೂ 200 ಕ್ಕಿಂತ ಕಡಿಮೆ ದೈನಂದಿನ ವಹಿವಾಟುಗಳನ್ನು ನಡೆಸಬಹುದು. ಇಂತಹ ಪರಿಸ್ಥಿತಿಯಲ್ಲಿ, ಪ್ರತಿದಿನ ಕನಿಷ್ಠ ಪ್ರಮಾಣದ ಯುಪಿಐ ವಹಿವಾಟುಗಳನ್ನು ಮಾಡುವ ಬಳಕೆದಾರರಿಗೆ ಯುಪಿಐ ಲೈಟ್ ಅತ್ಯುತ್ತಮ ಆಯ್ಕೆಯಾಗಿದೆ. ವಿಶೇಷವೆಂದರೆ ಯುಪಿಐ ಲೈಟ್ ನ ಸಣ್ಣ ವಹಿವಾಟುಗಳಿಗೆ, ಬಳಕೆದಾರರು ಯುಪಿಐ ಪಿನ್ ಅನ್ನು ನಮೂದಿಸುವ ಅಗತ್ಯವಿಲ್ಲ. (Technology News In Kannada)
ಯುಪಿಐ ಲೈಟ್ ಸಿಸ್ಟಮ್ ಅನ್ನು ಆರಂಭಿಸಿದಾಗನಿಂದ, ಅನೇಕ ಜನಪ್ರಿಯ ಪಾವತಿ ಅಪ್ಲಿಕೇಶನ್‌ಗಳು ಈ ಸೇವೆಯನ್ನು ತಮ್ಮ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳುತ್ತಿವೆ. ಇವುಗಳಲ್ಲಿ ಗೂಗಲ್ ಪೇ, ಫೋನ್ ಪೇ ಮತ್ತು ಪೇಟಿಎಂ ನಂತಹ ಅಪ್ಲಿಕೇಶನ್‌ಗಳು ಸೇರಿವೆ. ನೀವು ಫೋನ್ ಪೇ ಬಳಕೆದಾರರಾಗಿದ್ದರೆ ಮತ್ತು ನೀವು ಸಣ್ಣ ವಹಿವಾಟುಗಳಿಗಾಗಿ ಯುಪಿಐ ಲೈಟ್ ಸೇವೆಯನ್ನು ಬಳಸಲು ಬಯಸಿದರೆ, ಈ ಲೇಖನವು ಕೇವಲ ನಿಮಗಾಗಿ. ಇಂದು ನಾವು ಫೋನ್ ಪೇ ನಲ್ಲಿ ಯುಪಿಐ ಲೈಟ್ ಸೇವೆಯನ್ನು ಸಕ್ರಿಯಗೊಳಿಸುವ ಸುಲಭ ಪ್ರಕ್ರಿಯೆಯನ್ನು ಹೇಳಿಕೊಡಳಲಿದ್ದೇವೆ.
ಇದನ್ನೂ ಓದಿ-WhatsApp ನಲ್ಲಿ ಇನ್ಮುಂದೆ ವಿಡಿಯೋ ಕಾಲ್ ಅವಧಿಯಲ್ಲಿ ಈ ಕೆಲಸವನ್ನು ಕೂಡ ನೀವು ಮಾಡಬಹುದು!
ಫೋನ್ ಪೇ ನಲ್ಲಿ ಯುಪಿಐ ಲೈಟ್ ಅನ್ನು ಹೇಗೆ ಬಳಸಬೇಕು?
ಫೋನ್ ಪೇನಲ್ಲಿ ಯುಪಿಐ ಲೈಟ್ ಸೇವೆಯನ್ನು ಪ್ರಾರಂಭಿಸುವುದು ಹೇಗೆ? ಸಂಪೂರ್ಣ ಪ್ರಕ್ರಿಯೆಯನ್ನು ಹಂತ ಹಂತವಾಗಿ ಈ ಕೆಳಗೆ ನೀಡಲಾಗಿದೆ
>> ಹಂತ 1- ಮೊದಲು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಫೋನ್ ಪೇ ಅಪ್ಲಿಕೇಶನ್ ತೆರೆಯಿರಿ.
>> ಹಂತ 2- ಈಗ ನೀವು ಫೋನ್ ಪೇನ ಮುಖಪುಟದಲ್ಲಿ ಯುಪಿಐ ಲೈಟ್ ಐಕಾನ್ ಅನ್ನು ನೋಡುತ್ತೀರಿ.
>> ಹಂತ 3- ಈ ಬ್ಯಾನರ್ ಮೇಲೆ ಕ್ಲಿಕ್ ಮಾಡಿ.
>> ನಾಲ್ಕನೇ ಹಂತ- ಇದರ ಹೊರತಾಗಿ, ನಿಮ್ಮ ಪ್ರೊಫೈಲ್ ಅನ್ನು ಟ್ಯಾಪ್ ಮಾಡುವ ಮೂಲಕ ನೀವು ಯುಪಿಐ ಲೈಟ್ ಆಯ್ಕೆಯನ್ನು ನೋಡಲು ಸಾಧ್ಯವಾಗುತ್ತದೆ.
>> ಹಂತ 5- ಯುಪಿಐ ಲೈಟ್ ಆಯ್ಕೆಯನ್ನು ಕ್ಲಿಕ್ ಮಾಡಿದ ನಂತರ, "ಹಣವನ್ನು ಸೇರಿಸಿ" ಅಡಿಯಲ್ಲಿ ಯುಪಿಐ ಲೈಟ್‌ನಲ್ಲಿ ಬ್ಯಾಲೆನ್ಸ್ ಸೇರಿಸಲು ನಿಮ್ಮನ್ನು ಕೋರಲಾಗುತ್ತದೆ.
>> ಆರನೇ ಹಂತ- ನೀವು ಯುಪಿಐ ಲೈಟ್‌ನಲ್ಲಿ ರೂ 200 ವರೆಗೆ ಬ್ಯಾಲೆನ್ಸ್ ಸೇರಿಸಬಹುದು.
>>ಏಳನೇ ಹಂತ- ಯುಪಿಐ ಲೈಟ್‌ನಲ್ಲಿ ಬ್ಯಾಲೆನ್ಸ್ ಸೇರಿಸಿದ ನಂತರವೇ ನೀವು ಅದನ್ನು ಬಳಸಲು ಸಾಧ್ಯವಾಗುತ್ತದೆ.
>> ಎಂಟನೇ ಹಂತ- ನೀವು ಪಿನ್ ನಮೂದಿಸದೆಯೇ ಯುಪಿಐ ಲೈಟ್ ಮೂಲಕ ರೂ 200 ವರೆಗೆ ಪಾವತಿ ಮಾಡಲು ಸಾಧ್ಯವಾಗುತ್ತದೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ