Republic Day Sale 2024: ಈ ದಿನದಿಂದ ಆರಂಭಗೊಳ್ಳಲಿದೆ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್, ದಿನಾಂಕ ಘೋಷಣೆ!

Republic Day Sale 2024: ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ 2024 ರ ದಿನಾಂಕವನ್ನು ಘೋಷಿಸಲಾಗಿದೆ. ಮಾರಾಟದಲ್ಲಿ, ನೀವು ಐಫೋನ್ 13, ಸ್ಯಾಂಸಂಗ್ ಗ್ಯಾಲಕ್ಸಿ ಎಸ್23 ಮತ್ತು ಒನ್ ಪ್ಲಸ್ 11ಆರ್ ನಂತಹ ಫೋನ್‌ಗಳನ್ನು ದೊಡ್ಡ ರಿಯಾಯಿತಿಯಲ್ಲಿ ದರದಲ್ಲಿ ಖರೀದಿಸಲು ಸಾಧ್ಯವಾಗಲಿದೆ. (Technology News In Kannada)

Written by - Nitin Tabib | Last Updated : Jan 8, 2024, 08:34 PM IST
  • ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ 2024 ದಿನಾಂಕವನ್ನು ಪ್ರಕಟಿಸಲಾಗಿದೆ
  • ಜನವರಿ 14 ರಿಂದ ಮಾರಾಟ ಆರಂಭಗೊಳ್ಳಲಿದೆ
  • ಮಾರಾಟದಲ್ಲಿ ಅನೇಕ ಪ್ರೀಮಿಯಂ ಫೋನ್‌ಗಳು ಅಗ್ಗದ ದರದಲ್ಲಿ ಸಿಗಲಿವೆ.
Republic Day Sale 2024: ಈ ದಿನದಿಂದ ಆರಂಭಗೊಳ್ಳಲಿದೆ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್, ದಿನಾಂಕ ಘೋಷಣೆ! title=

ನವದೆಹಲಿ: ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ 2024 ರ ಮಾರಾಟದ ದಿನಾಂಕವನ್ನು ಘೋಷಿಸಲಾಗಿದೆ. ಇ-ಕಾಮರ್ಸ್ ದೈತ್ಯ ಕೆಲ ಸಮಯದ ಹಿಂದೆ ಈ ಮಾರಾಟವನ್ನು ಘೋಷಿಸಿತ್ತು. ಸೇಲ್ ಗಾಗಿ ಮೀಸಲೀಡಲಾದ ಮೈಕ್ರೋಸೈಟ್ ಲೈವ್ ಆಗಿದೆ. ಇದೇ ವೇಳೆ ಇದೀಗ  ಕಂಪನಿಯು ಅಂತಿಮವಾಗಿ ಮಾರಾಟದ ದಿನಾಂಕಗಳನ್ನು ಪ್ರಕಟಿಸಿದೆ. ಈ ಮಾರಾಟದ ಸಮಯದಲ್ಲಿ, ವಿವಿಧ ಸ್ಮಾರ್ಟ್‌ಫೋನ್‌ಗಳನ್ನು ದೊಡ್ಡ ರಿಯಾಯಿತಿ ಕೊಡುಗೆಗಳೊಂದಿಗೆ ಖರೀದಿಸಬಹುದು. ಇದಲ್ಲದೇ ಬ್ಯಾಂಕ್ ಕಾರ್ಡ್ ಆಫರ್, ನೋ-ಕಾಸ್ಟ್ ಇಎಂಐ ಮತ್ತು ಎಕ್ಸ್ ಚೇಂಜ್ ಆಫರ್ ಕೂಡ ಸೇಲ್ ನಲ್ಲಿ ಲಭ್ಯವಿರಲಿವೆ. ಈ ಮಾರಾಟಕ್ಕಾಗಿ ಅಮೆಜಾನ್ ಎಸ್‌ಬಿಐ ಬ್ಯಾಂಕ್‌ನೊಂದಿಗೆ ಪಾಲುದಾರಿಕೆ ಹೊಂದಿದೆ. ಅಲ್ಲದೆ, ಎಂದಿನಂತೆ, ಅಮೆಜಾನ್ ಪ್ರೈಮ್ ಚಂದಾದಾರರು 1 ದಿನ ಮುಂಚಿತವಾಗಿ ಮಾರಾಟಕ್ಕೆ ಪ್ರವೇಶವನ್ನು ಪಡೆಯುತ್ತಾರೆ. ಮಾರಾಟದ ದಿನಾಂಕಗಳು ಮತ್ತು ಮಾರಾಟದಲ್ಲಿ ಲಭ್ಯವಿರುವ ಉನ್ನತ ಕೊಡುಗೆಗಳ ವಿವರಗಳನ್ನು ತಿಳಿದುಕೊಳ್ಳೋನ ಬನ್ನಿ. (Technology News In Kannada)

ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ 2024 ರ ದಿನಾಂಕಗಳನ್ನು ಘೋಷಿಸಲಾಗಿದೆ. ಈ ಮಾರಾಟವು 14 ಜನವರಿ 2024 ರಿಂದ ಆರಂಭಗೊಳ್ಳಲಿದೆ. ನಾವು ಈ ಮೊದಲು ಹೇಳಿದಂತೆ, ಇ-ಕಾಮರ್ಸ್ ದೈತ್ಯ ಈ ಮಾರಾಟಕ್ಕಾಗಿ ಎಸ್‌ಬಿಐ ಬ್ಯಾಂಕ್‌ನೊಂದಿಗೆ ಪಾಲುದಾರಿಕೆ ಹೊಂದಿದೆ. ಇಂತಹ ಪರಿಸ್ಥಿತಿಯಲ್ಲಿ, ಎಸ್ಬಿಐ ಬ್ಯಾಂಕ್ ಕಾರ್ಡ್ ಬಳಕೆದಾರರು ಪ್ರತಿ ಖರೀದಿಯ ಮೇಲೆ ಪ್ರತ್ಯೇಕ 10 ಪ್ರತಿಶತ ರಿಯಾಯಿತಿಯ ಪ್ರಯೋಜನವನ್ನು ಪಡೆಯುತ್ತಾರೆ. ಹೆಚ್ಚುವರಿಯಾಗಿ, ಪ್ರೈಮ್ ಚಂದಾದಾರರು ಆರಂಭಿಕ ಮಾರಾಟಕ್ಕೆ ಪ್ರವೇಶವನ್ನು ಪಡೆಯುತ್ತಾರೆ. ಇದರರ್ಥ ಪ್ರೈಮ್ ಚಂದಾದಾರರು 1 ದಿನ ಮುಂಚಿತವಾಗಿ ಈ ಮಾರಾಟಕ್ಕೆ ಪ್ರವೇಶವನ್ನು ಪಡೆಯಲು ಸಾಧ್ಯವಾಗಲಿದೆ.

ಈ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳಲ್ಲಿ ನೀವು ದೊಡ್ಡ ರಿಯಾಯಿತಿಗಳನ್ನು ಪಡೆಯಬಹುದೂ
ಐಕ್ಯೂ 12 

ಐಕ್ಯೂ 12 ಫೋನ್ ಅನ್ನು ಅಮೆಜಾನ್ ಮಾರಾಟದಲ್ಲಿ XX,XX9 ಗಾಗಿ ಖರೀದಿಸಬಹುದು. ಈ ಫೋನ್‌ನ ಬೆಲೆ 52,999 ರೂ ಆಗಿದ್ದು, ಇದರಲ್ಲಿ 12GB RAM ಮತ್ತು 256GB ಸ್ಟೋರೇಜ್ ಲಭ್ಯವಿದೆ. ಫೋನ್ 50MP + 50MP + 64MP ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು 120W ವೇಗದ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ.

ಐಫೋನ್ 13
ಈ ಮೈಕ್ರೋಸೈಟ್‌ನಲ್ಲಿ ಐಫೋನ್ 13 ರ ಕೊಡುಗೆಯನ್ನು ಸಹ ಲೈವ್ ಮಾಡಲಾಗಿದೆ. ಈ ಫೋನ್‌ನ ಬೆಲೆ ರೂ 59,900, ಆದರೆ ಇದನ್ನು ಮಾರಾಟದಲ್ಲಿ ರೂ XX,XX9 ಗೆ ಖರೀದಿಸಬಹುದು. ಈ ಫೋನ್ 6.1 ಇಂಚಿನ ಡಿಸ್ಪ್ಲೇ, 12MP ಬ್ಯಾಕ್ ಕ್ಯಾಮೆರಾ ಮತ್ತು A15 ಬಯೋನಿಕ್ ಚಿಪ್ ಸೆಟ್ ಹೊಂದಿದೆ.

ಇದನ್ನೂ ಓದಿ-Ration Card ನಲ್ಲಿ ಮಕ್ಕಳ ಹೆಸರು ಸೇರಿಸಬೇಕೆ? ಸರ್ಕಾರಿ ಕಚೇರಿಗೆ ಹೋಗುವ ಅವಶ್ಯಕತೆ ಇಲ್ಲ, ಇಲ್ಲಿದೆ ಡೀಟೈಲ್ಸ್!

ಸ್ಯಾಂಸಂಗ್ ಗ್ಯಾಲಕ್ಸಿ ಎಸ್23 
ಸ್ಯಾಂಸಂಗ್ ಗ್ಯಾಲಕ್ಸಿ ಎಸ್23 ಫೋನ್‌ನ ಬೆಲೆ ಇತ್ತೀಚೆಗೆ 10 ಸಾವಿರ ರೂಪಾಯಿಗಳಷ್ಟು ಕಡಿಮೆಯಾಗಿದೆ. ಬೆಲೆ ಕಡಿತದ ನಂತರ, ನೀವು ಅದನ್ನು ರೂ. XX,XX9 ಗೆ ಖರೀದಿಸಲು ಸಾಧ್ಯವಾಗುತ್ತದೆ.

ಇದನ್ನೂ ಓದಿ-Union Budget 2024: ದೇಶಾದ್ಯಂತದ ಕೋಟ್ಯಾಂತರ ರೈತ ಬಾಂಧವರಿಗೊಂದು ಭಾರಿ ಸಂತಸದ ಸುದ್ದಿ!

ಒನ್ ಪ್ಲಸ್ 11ಆರ್ 
ಒನ್ ಪ್ಲಸ್ 11ಆರ್ ಫೋನ್‌ನ ಬೆಲೆ ರೂ 39,999 ಆಗಿದೆ, ಆದರೆ ಇದನ್ನು ಮಾರಾಟದಲ್ಲಿ ರೂ XX, XX9 ಗೆ ಖರೀದಿಸಬಹುದು. ಈ ಫೋನ್ Qualcomm Snapdragon 8 Gen 2 ಪ್ರೊಸೆಸರ್ ಮತ್ತು 100W ವೇಗದ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News