NASA Experiment: ಅಮೆರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ ಕೇವಲ ವಿಜ್ಞಾನಿಗಳು ಹಾಗೂ ಸಂಶೋಧಕರಷ್ಟೇ ಲಕ್ಷಾಂತರ ರೂ.ವೇತನ ಪಡೆಯುವುದಿಲ್ಲ. ಸಂಸ್ಥೆ ಇದೀಗ 24 ಜನರ ಹುಡುಕಾಟದಲ್ಲಿ ತೊಡಗಿದ್ದು, ಎರಡು ತಿಂಗಳುಗಳ ಕಾಲ ಹಾಸಿಗೆಯಲ್ಲಿಯೇ ಕಾಲ ಕಳೆಯಲು ಬಯಸುವವರು ಬೇಕಾಗಿದ್ದಾರೆ. ಇಂತಹ ಜನರಿಗೆ ಸಂಸ್ಥೆ 1 ಲಕ್ಷಕ್ಕೂ ಅಧಿಕ ವೇತನ ನೀಡುವುದಾಗಿ ಹೇಳಿದೆ. ನಿಮಗೆ ಅಥವಾ ನಿಮ್ಮ ಯಾವುದೇ ಸ್ನೇಹಿತನಿಗೆ ಮಲಗುವುದು ಇಷ್ಟವಾಗುತ್ತದೆ ಎಂದರೆ ಈ ಸುವರ್ಣಾವಕಾಶದ ಕುರಿತು ನೀವೂ ಕೂಡ ಖಂಡಿತ ತಿಳಿದುಕೊಳ್ಳಬೇಕು.


COMMERCIAL BREAK
SCROLL TO CONTINUE READING

ಈ ರೀತಿಯ ಜನರನ್ನು ಕಲೆಹಾಕಿ ಅವರನ್ನು ಹಾಸಿಗೆಯ ಮೇಲೆ ಮಲಗಿಸಿ ಅವರ ದತಾಂಶ ಕಲೆಹಾಕುವ ಉದ್ದೇಶ ಸಂಸ್ಥೆ ಹೊಂದಿದೆ. ಒಂದು ವಿಶೇಷ ರೀತಿಯ ವಾತಾವರಣದಲ್ಲಿ ಕೃತಕ ಗುರುತ್ವಾಕರ್ಷಣೆಯಲ್ಲಿ ಈ ಜನರು ಕಾಲ ಕಳೆಯಬೇಕು. ಇಂತಹ ಪರಿಸ್ಥಿತಿಯಲ್ಲಿ ದೀರ್ಘ ಕಾಲ ಕಳೆದ ಬಳಿಕ ವ್ಯಕ್ತಿಯ ಮೇಲೆ ಯಾವ ರೀತಿಯ ಪ್ರಭಾವ ಉಂಟಾಗುತ್ತದೆ ಮತ್ತು ಅದರ ಪ್ರತ್ಯಕ್ಷ ಮತ್ತು ದೂರಗಾಮಿ ಪರಿಣಾಮಗಳೇನು ಎಂಬುದು ತಿಳಿದುಕೊಳ್ಳುವುದು ಸಂಸ್ಥೆಯ ಉದ್ದೇಶವಾಗಿದೆ.

ಈ ರೀತಿ ಮಾಡಿದರೆ ನಿಮಗೆ 1.52 ಲಕ್ಷ ಸಿಗಲಿದೆ
ಯುರೋಪಿಯನ್ ಸ್ಪೇಸ್ ಏಜನ್ಸಿ ಹಾಗೂ ನಾಸಾದ ಜರ್ಮನ್ ಏರೋಸ್ಪೇಸ್ ಸೆಂಟರ್ ಜಂಟಿಯಾಗಿ ಕೃತಕ ಗುರುತ್ವಾಕರ್ಷಣದಲ್ಲಿ ಬೆಡ್ ರೆಸ್ಟ್ ಕುರಿತು ಅಧ್ಯಯನ ನಡೆಸಲು ಮುಂದಾಗಿವೆ. ಈ ಅಧ್ಯಯನದಲ್ಲಿ ಪಾಲ್ಗೊಳ್ಳುವ ವಾಲಂಟಿಯರ್ ಗಳು ಕೃತಕ ಗುರುತ್ವಾಕರ್ಷಣದಲ್ಲಿ ಸುಮಾರು ಎರಡು ತಿಂಗಳು ಹಾಸಿಗೆಯ ಮೇಲೆ ಮಲಗಿಕೊಂಡೆ ವಿಶ್ರಾಂತಿ ಪಡೆಯುತ್ತಾ ಕಾಲ ಕಳೆಯಬೇಕು. ಇದರ ಪ್ರತಿಯಾಗಿ ಪ್ರತಿಯೊಬ್ಬರಿಗೆ 18,500 (ರೂ.1,53,000) ಡಾಲರ್ ಸಿಗಲಿದೆ.


ಇದನ್ನೂ ಓದಿ-Health Tips: ಹೊಕ್ಕುಳಕ್ಕೆ ಆಲಿವ್ ಎಣ್ಣೆ ಅನ್ವಯಿಸುವುದರಿಂದ ಆಗುವ ಈ ಲಾಭಗಳು ನಿಮಗೆ ತಿಳಿದಿವೆಯೇ?

ಸಂಸ್ಥೆ ಈ ರೀತಿಯ ಪ್ರಯೋಗ ಏಕೆ ಮಾಡುತ್ತಿದೆ?
ಬಾಹ್ಯಾಕಾಶಕ್ಕೆ ತೆರಳುವ ಯಾತ್ರಿಗಳು ಹಾಗೂ ವೈಜ್ಞಾನಿಕರು ಪ್ರಸ್ತುತ ಶೂನ್ಯ ಗುರುತ್ವಾಕರ್ಷಣೆಯಲ್ಲಿ ಕೆಲಸ ಮತ್ತು ಪ್ರಯೋಗಗಳನ್ನು ಮಾಡುತ್ತಾರೆ. ಇದರಿಂದ ಶರೀರದ ಮೇಲೆ ಕೆಲ ನಕಾರಾತ್ಮಕ ಪ್ರಭಾವಗಳು ಬೀಳುತ್ತವೆ. ಹೀಗಾಗಿ ಸಂಸ್ಥೆ ಇದೆ ಮೊದಲ ಬಾರಿಗೆ ಕೃತಕ ಗುರುತ್ವಾಕರ್ಷಣೆಯ ಪ್ರಭಾವವನ್ನು ತಿಳಿಯಲು ಮತ್ತು ಪರೀಕ್ಷಿಸಲು ಬಯಸುತ್ತಿದೆ. ಈ ಪ್ರಯೋಗದ ಭಾಗವಾಗಲು 24 ರಿಂದ 55 ವರ್ಷ ವಯಸ್ಸಿನ್ನೋಳಗಿನ 12 ಪುರುಷ ಮತ್ತು 12 ಮಹಿಳಾ ಸದಸ್ಯರು ಬೇಕಾಗಿದ್ದಾರೆ. ಆದರೆ, ಅವರು ಜರ್ಮನ್ ಭಾಷೆ ತಿಳಿದವರಾಗಿರಬೇಕು.


ಇದನ್ನೂ ಓದಿ-Booster Dose ಹಾಕಿಸಿಕೊಳ್ಳುವುದು ಎಷ್ಟು ಸೇಫ್? ಆರೋಗ್ಯದ ಮೇಲೆ ಈ ರೀತಿ ಪ್ರಭಾವ, ಸಂಶೋಧನೆಯಲ್ಲಿ ಮಾಹಿತಿ ಬಹಿರಂಗ

ಮಲಗಿರುವ ಸ್ಥಿತಿಯಲ್ಲಿಯೇ ಎಲ್ಲಾ ಕಾರ್ಯಗಳನ್ನು ನಿರ್ವಹಿಸಬೇಕು
ಈ ಅಧ್ಯಯನದಲ್ಲಿ ಪಾಲ್ಗೊಳ್ಳುವ ಸದಸ್ಯರಿಗಾಗಿ ಜರ್ಮನಿಯ ಏರೋಸ್ಪೇಸ್ ಸೆಂಟರ್ ನ ಏರೋಸ್ಪೇಸ್ ಮೆಡಿಸಿನ್ ಇನ್ಸ್ಟಿಟ್ಯೂಟ್ ನಲ್ಲಿ ಈ ವಿಶೇಷ ಹಾಸಿಗೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಒರಿಯಂಟೆಷನ್ ನಿಂದ ಹಿಡಿದು ಒಟ್ಟು 89 ದಿನಗಳವರೆಗೆ ಸದಸ್ಯರು ಅಲ್ಲಿ ಕಾಲ ಕಳೆಯಬೇಕಾಗಲಿದೆ. ಇದರಲ್ಲಿ ಒಟ್ಟು 60 ದಿನಗಳ ಬೆಡ್ ರೆಸ್ಟ್ ಶಾಮೀಲಾಗಿವೆ. ಈ ಅವಧಿಯಲ್ಲಿ ಅವರು ತಿಂಡಿ ತಿನಿಸು ಸೇರಿದಂತೆ ತಮ್ಮ ದಿನನಿತ್ಯದ ಎಲ್ಲಾ ಕೆಲಸಗಳನ್ನು ಹಾಸಿಗೆಯಲ್ಲಿ ಮಲಗಿಕೊಂಡೆ ನಿರ್ವಹಿಸಬೇಕು ಮತ್ತು ಯಾವುದೇ ರೀತಿಯ ಮೂವ್ಮೆಂಟ್ ಮಾಡಬಾರದು ಎನ್ನಲಾಗಿದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.