Booster Dose ಹಾಕಿಸಿಕೊಳ್ಳುವುದು ಎಷ್ಟು ಸೇಫ್? ಆರೋಗ್ಯದ ಮೇಲೆ ಈ ರೀತಿ ಪ್ರಭಾವ, ಸಂಶೋಧನೆಯಲ್ಲಿ ಮಾಹಿತಿ ಬಹಿರಂಗ

Booster Dose Study: ಇತ್ತೀಚಿಗೆ ಕೊರೊನಾ ವ್ಯಾಕ್ಸಿನ್ ನ ಬೂಸ್ಟರ್ ಡೋಸ್ ಹಾಕಿಸಿಕೊಳ್ಳುವವರ ಸಂಖ್ಯೆಯಲ್ಲಿ ಹೆಚ್ಚಳವನ್ನು ಗಮನಿಸಲಾಗಿದೆ. ಹಾಗಾದರೆ ಬನ್ನಿ ಬೂಸ್ಟರ್ ಡೋಸ್ ಗೆ ಸಂಬಂಧಿಸಿದಂತೆ ಅಧ್ಯಯನದಲ್ಲಿ ಯಾವ ಸಂಗತಿಗಳನ್ನು ಹೇಳಲಾಗಿದೆ ತಿಳಿದುಕೊಳ್ಳೋಣ ಬನ್ನಿ,  

Written by - Nitin Tabib | Last Updated : Dec 30, 2022, 02:40 PM IST
  • ಬೂಸ್ಟರ್ ಡೋಸ್ ಕುರಿತು ಸಂಶೋಧನೆಗಾಗಿ, ಟೆಲ್ ಅವಿವ್ ವಿಶ್ವವಿದ್ಯಾಲಯದ ವಿಜ್ಞಾನಿಗಳು 5 ಸಾವಿರ ಜನರಿಗೆ ಸ್ಮಾರ್ಟ್ ವಾಚ್‌ಗಳನ್ನು ಧರಿಸುವಂತೆ ಹೇಳಿದ್ದಾರೆ
  • ಮತ್ತು ನಂತರ ಸುಮಾರು 2 ವರ್ಷಗಳ ಕಾಲ ಅವರ ದೇಹದಲ್ಲಿನ ಬದಲಾವಣೆಗಳ ಮೇಲೆ ಗಮನ ಕೇಂದ್ರೀಕರಿಸಿದ್ದಾರೆ.
Booster Dose ಹಾಕಿಸಿಕೊಳ್ಳುವುದು ಎಷ್ಟು ಸೇಫ್? ಆರೋಗ್ಯದ ಮೇಲೆ ಈ ರೀತಿ ಪ್ರಭಾವ, ಸಂಶೋಧನೆಯಲ್ಲಿ ಮಾಹಿತಿ ಬಹಿರಂಗ title=
Booster Dose Safe Or Not

Booster Dose Is Safe Or Not:  ಪ್ರಸ್ತುತ ಭಾರತದ ಮೇಲೆ ಕೊರೊನಾ ವೈರಸ್ ನ ಉಪ-ವ್ಯತ್ಯಯವಾಗಿರುವ BF.7 ಭೀತಿಯ ಕಾರ್ಮೋಡ ಕವಿದಿದೆ, ಬೂಸ್ಟರ್ ಡೋಸ್ ತೆಗೆದುಕೊಳ್ಳುವ ಜನರ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಏತನ್ಮಧ್ಯೆ, ಬೂಸ್ಟರ್ ಡೋಸ್ ಬಗ್ಗೆ ಹೊಸ ಅಧ್ಯಯನವೊಂದು ಪ್ರಕಟವಾಗಿದೆ, ಇದರಲ್ಲಿ ಬೂಸ್ಟರ್ ಡೋಸ್ ಸುರಕ್ಷಿತವಾಗಿದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಹೇಳಲಾಗಿದೆ. ಇದಲ್ಲದೆ, ಬೂಸ್ಟರ್ ಡೋಸ್ ನಮ್ಮ ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಕೂಡ ಸಂಶೋಧನೆಯಲ್ಲಿ ಹೇಳಲಾಗಿದೆ. ಬೂಸ್ಟರ್ ಡೋಸ್ ಕುರಿತು ಈ ಅಧ್ಯಯನವನ್ನು ಟೆಲ್ ಅವಿವ್ ವಿಶ್ವವಿದ್ಯಾಲಯವು ಇಸ್ರೇಲ್‌ನಲ್ಲಿ ಸುಮಾರು 5 ಸಾವಿರ ಜನರ ಮೇಲೆ ನಡೆಸಿದೆ ಎನ್ನಲಾಗಿದೆ. ಈ ಅಧ್ಯಯನವನ್ನು ಸೈನ್ಸ್ ಜರ್ನಲ್ ಲ್ಯಾನ್ಸೆಟ್‌ನಲ್ಲಿ ಪ್ರಕಟಿಸಲಾಗಿದೆ. ಅಧ್ಯಯನದ ಸಮಯದಲ್ಲಿ, ಜನರಿಗೆ ಸ್ಮಾರ್ಟ್ ವಾಚ್‌ಗಳನ್ನು ಧರಿಸುವಂತೆ ಹೇಳಲಾಗಿದೆ ಮತ್ತು ನಂತರ ದತ್ತಾಂಶವನ್ನು ಸಂಗ್ರಹಿಸಲಾಗಿದೆ. ಟೆಲ್ ಅವಿವ್ ವಿಶ್ವವಿದ್ಯಾಲಯದ ಅಧ್ಯಯನದಲ್ಲಿ ಬೂಸ್ಟರ್ ಡೋಸ್ ಸುರಕ್ಷಿತವಾಗಿದೆ ಎಂದು ಹೇಳಲಾಗಿದೆ.

ಸ್ಮಾರ್ಟ್ ವಾಚ್ ಸಹಾಯದಿಂದ ಅಧ್ಯಯನ
ಬೂಸ್ಟರ್ ಡೋಸ್ ಕುರಿತು ಸಂಶೋಧನೆಗಾಗಿ, ಟೆಲ್ ಅವಿವ್ ವಿಶ್ವವಿದ್ಯಾಲಯದ ವಿಜ್ಞಾನಿಗಳು 5 ಸಾವಿರ ಜನರಿಗೆ ಸ್ಮಾರ್ಟ್ ವಾಚ್‌ಗಳನ್ನು ಧರಿಸುವಂತೆ ಹೇಳಿದ್ದಾರೆ ಮತ್ತು ನಂತರ ಸುಮಾರು 2 ವರ್ಷಗಳ ಕಾಲ ಅವರ ದೇಹದಲ್ಲಿನ ಬದಲಾವಣೆಗಳ ಮೇಲೆ ಗಮನ ಕೇಂದ್ರೀಕರಿಸಿದ್ದಾರೆ. ಈ ಪೈಕಿ 2,038 ಜನರು ಬೂಸ್ಟರ್ ಡೋಸ್ ಪಡೆದವರಾಗಿದ್ದರು. ಬೂಸ್ಟರ್ ಡೋಸ್ ಪಡೆಯುವ ಮೊದಲು ಮತ್ತು ಪಡೆದ ನಂತರ ಈ ಜನರಲ್ಲಿನ ಬದಲಾವಣೆಗಳನ್ನು ಸಂಶೋಧಕರು ಹೋಲಿಸಿದ್ದಾರೆ. ಇದಲ್ಲದೇ ಹಲವು ವೈದ್ಯಕೀಯ ಕಡತಗಳನ್ನು ಕೂಡ ವಿಶ್ಲೇಷಿಸಲಾಗಿದ್ದು, ಇದರಿಂದ ಬೂಸ್ಟರ್ ಡೋಸ್ ಸುರಕ್ಷಿತವಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ-Health Tips: ನೆಲದ ಮೇಲೆ ಕುಳಿತುಕೊಳ್ಳುವುದರಿಂದಾಗುವ ಈ ಆರೋಗ್ಯ ಲಾಭಗಳು ನಿಮಗೆ ಗೊತ್ತಾದರೆ.....!

ಬೂಸ್ಟರ್ ಡೋಸ್ ಅನ್ನು ಅನ್ವಯಿಸುವುದು ಸುರಕ್ಷಿತವೇ?
ಈ ಅಧ್ಯಯನದ ಸಮಯದಲ್ಲಿ, ವಿಜ್ಞಾನಿಗಳು ಒಟ್ಟು 3 ಮಾನದಂಡಗಳನ್ನು ಹೊಂದಿಸಿದ್ದಾರೆ. ಇದರ ಆಧಾರದ ಮೇಲೆ, ಬೂಸ್ಟರ್ ಡೋಸ್ ಸುರಕ್ಷಿತವಾಗಿದೆ ಎಂದು ಖಚಿತಪಡಿಸಲಾಗಿದೆ. ಜನರು ಏನು ವರದಿ ಮಾಡಿದ್ದಾರೆ ಎಂಬುದನ್ನು ಮೊದಲು ನೋಡಲಾಗಿದೆ. ಎರಡನೆಯದಾಗಿ, ಸ್ಮಾರ್ಟ್ ವಾಚ್ ಏನನ್ನು ಪತ್ತೆ ಹಚ್ಚಿದೆ ಮತ್ತು ಮೂರನೆಯದಾಗಿ, ಪರೀಕ್ಷೆಯಲ್ಲಿ ವೈದ್ಯರು ಏನು ಕಂಡುಕೊಂಡಿದ್ದಾರೆ ಎಂಬುದು. ಟೆಲ್ ಅವೀವ್ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಯಾಮಿನ್ ಪ್ರಕಾರ, ಜನರ ಹೃದಯ ಬಡಿತ, ಹೃದಯ ಬಡಿತದ ಏರಿಳಿತ, ನಿದ್ರೆಯ ಗುಣಮಟ್ಟ ಮತ್ತು ದೈನಂದಿನ ಹಂತಗಳು ಇತ್ಯಾದಿಗಳನ್ನು ಪತ್ತೆಹಚ್ಚಲು ಸ್ಮಾರ್ಟ್ ವಾಚ್‌ಗಳನ್ನು ಬಳಸಲಾಗುತ್ತಿತ್ತು ಎಂದಿದ್ದಾರೆ.

ಇದನ್ನೂ ಓದಿ-Healthy Eating Habits: ಚಮಚ ಬಿಟ್ಟು ನಿಮ್ಮ ಕೈಯಾರೆ ಊಟ ಮಾಡುವುದರಿಂದಾಗುವ ಈ ಆರೋಗ್ಯಕರ ಲಾಭಗಳು ನಿಮಗೆ ತಿಳಿದಿವೆಯೇ?

ಹೃದಯದ ಮೇಲೆ Booster Dos ಪರಿಣಾಮ ಏನು?
ಬೂಸ್ಟರ್ ಡೋಸ್ ಪಡೆಯುವ ಮೊದಲು ಮತ್ತು ಪಡೆದ ನಂತರ ಹೃದಯ ಬಡಿತವನ್ನು ಹೋಲಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಎರಡು ಡೋಸ್ ಲಸಿಕೆಯನ್ನು ತೆಗೆದುಕೊಂಡ ನಂತರ ಹೃದಯ ಬಡಿತವು ಹೆಚ್ಚಾಗಿದೆ ಎಂದು ಅಧ್ಯಯನದಲ್ಲಿ ಕಂಡುಬಂದಿದೆ, ಆದರೆ ಬೂಸ್ಟರ್ ಡೋಸ್ ತೆಗೆದುಕೊಂಡ ನಂತರ ಹೃದಯ ಬಡಿತವು ಲಸಿಕೆ ಪೂರ್ವದ ದರಕ್ಕೆ ಮರಳಿದೆ. ಬೂಸ್ಟರ್ ಡೋಸ್ ಸುರಕ್ಷಿತವಾಗಿದೆ ಎಂದು ಇದು ತೋರಿಸುತ್ತದೆ. ಲಸಿಕೆ ತೆಗೆದುಕೊಂಡ ನಂತರ ಯಾವುದೇ ಅಡ್ಡಪರಿಣಾಮಗಳಿಲ್ಲದ ಕೆಲವರು ಇದ್ದಾರೆ ಎಂದು ಅವರು ಹೇಳಿದ್ದಾರೆ, ಸ್ಮಾರ್ಟ್ ವಾಚ್‌ನ ಡೇಟಾ ಇದನ್ನು ಸಾಬೀತುಪಡಿಸಿದೆ. ಆದಾಗ್ಯೂ, ಅವರ ದೇಹದಲ್ಲಿ ಬದಲಾವಣೆಗಳು ಖಂಡಿತವಾಗಿಯೂ ಗೋಚರಿಸಿವೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News