Valentine’s Day: ಆನ್ಲೈನ್ ಡೇಟಿಂಗ್ ನಲ್ಲಿ ಈ ತಪ್ಪುಗಳನ್ನು ಮಾಡಬೇಡಿ, ಇಲ್ಲದಿದ್ರೆ ಭಾರಿ ಹಾನಿ ಎದುರಿಸಬೇಕಾಗಬಹುದು?
Valentine`s Day Scams - ಈ ಪ್ರೇಮಿಗಳ ದಿನದಂದು (Valentine`s Day) ನೀವು ಆನ್ಲೈನ್ ಡೇಟಿಂಗ್ (Online Dating) ಮೂಲಕ ಅಥವಾ ಸಾಮಾಜಿಕ ಮಾಧ್ಯಮದ ಮೂಲಕ (Social Media Scams) ಹೊಸ ಜನರೊಂದಿಗೆ ಸಂಬಂಧವನ್ನು ಬೆಳೆಸಲು ಪ್ರಯತ್ನಿಸುತ್ತಿದ್ದರೆ, ನಾವು ನಿಮಗೆ ಎಚ್ಚರಿಕೆ ನೀಡಲು ಬಯಸುತ್ತೇವೆ. ನೀವು ಈ ಕೆಳಗೆ ನೀಡಲಾಗಿರುವ ವಿಷಯಗಳ ಬಗ್ಗೆ ಕಾಳಜಿ ವಹಿಸದಿದ್ದರೆ, ನಿಮ್ಮ ಖಾತೆಯು ಖಾಲಿಯಾಗಬಹುದು ಮತ್ತು ನೀವು ಭಾರೀ ನಷ್ಟವನ್ನುಅನುಭವಿಸಬೇಕಾಗಬಹುದು.
ನವದೆಹಲಿ: ದಕ್ಷಿಣದ ದೇಶಗಳ ಆಚಾರ-ವಿಚಾರಗಳನ್ನು ಇದೀಗ ಭಾರತಕ್ಕೂ ಕೂಡ ಎಂಟ್ರಿ ನೀಡಿವೆ. ಪ್ರತಿ ವರ್ಷ ಫೆಬ್ರವರಿ 14 (14 February) ರಂದು ದೇಶದಲ್ಲಿ ಪ್ರೇಮಿಗಳ ದಿನವನ್ನು ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ತಾವು ಪ್ರೀತಿಸುವ ವ್ಯಕ್ತಿಗೆ ಹೃದಯದ ಮಾತು ಹೇಳಿ ಉಡುಗೊರೆ ನೀಡುವ ಪ್ರೀತಿಸುವವರ ಈ ದಿನವನ್ನು ಪ್ರೇಮಿಗಳ ದಿನ (Valentine's Day) ಎಂದು ಪರಿಗಣಿಸಲಾಗುತ್ತದೆ. ಆದರೆ, ವ್ಯಾಲೆಂಟೈನ್ಸ್ ಡೇ ಹೆಸರಿನಲ್ಲಿ ನಿಮ್ಮನ್ನು ವಂಚಿಸುವ (Online Dating Scams) ಕೆಲವು ಸಾಮಾನ್ಯ ಹಗರಣಗಳ ಬಗ್ಗೆ ನಾವು ಇಂದು ನಿಮಗೆ ಮಾಹಿತಿ ನೀಡಲಿದ್ದು, ಅವುಗಳಿಂದ ನೀವು ಅಪಾರ ಹಾನಿ ಎದುರಿಸಬಹುದು.
ಆನ್‌ಲೈನ್ ಡೇಟಿಂಗ್ ಹೆಸರಿನಲ್ಲಿ ವಂಚನೆಗಳು ನಡೆಯುತ್ತಿವೆ
ಆನ್‌ಲೈನ್ ಡೇಟಿಂಗ್ ಸಂಸ್ಕೃತಿಯು ಈಗ ಭಾರತದಲ್ಲಿ ಸಾಕಷ್ಟು ಜನಪ್ರಿಯವಾಗಿದೆ ಮತ್ತು ಪ್ರೀತಿಯನ್ನು ಹುಡುಕಲು ಆನ್‌ಲೈನ್ ಡೇಟಿಂಗ್ ಅಪ್ಲಿಕೇಶನ್‌ಗಳು ಮತ್ತು ಕೆಲವೊಮ್ಮೆ ಸಾಮಾಜಿಕ ಮಾಧ್ಯಮವನ್ನು ಬಳಸುವ ಅನೇಕ ಯುವಕರಿದ್ದಾರೆ. ಈ ಪ್ಲಾಟ್‌ಫಾರ್ಮ್‌ಗಳಲ್ಲಿ ಹಗರಣಗಳು ಹೇಗೆ ನಡೆಸಲಾಗುತ್ತಿದೆ ಎಂದು ನೀವೂ ಯೋಚಿಸುತ್ತಿರುವಿರಾ? ಇದರಲ್ಲಿ ಮೊದಲು ವಂಚಕರು ಎದುರಿಗಿರುವ ವ್ಯಕ್ತಿಯೊಂದಿಗೆ ಸಂಭಾಷಣೆಯನ್ನು ಪ್ರಾರಂಭಿಸುತ್ತಾನೆ ಮತ್ತು ಬಹಳ ಸಮಯ ಪ್ರೀತಿಯಿಂದ ಮಾತನಾಡುತ್ತಲೇ ಇರುತ್ತಾನೆ ಮತ್ತು ಒಂದು ಕ್ಷಣದಲ್ಲಿ ನೀವು ಅವನನ್ನು ನಂಬಲು ಆರಂಭಿಸುತ್ತಿರಿ.
ನಿಮ್ಮ ಬ್ಯಾಂಕ್ ಖಾತೆಯು ಈ ರೀತಿ ಖಾಲಿಯಾಗಬಹುದು
ಈ ಸಮಯದಲ್ಲಿ ಕಳ್ಳನು ಮುಂದೆ ಇರುವ ವ್ಯಕ್ತಿಯನ್ನು ಭೇಟಿಯಾಗಲು ಬರುವವರ ಎಲ್ಲಾ ಬಾಗಿಲುಗಳನ್ನು ಮುಚ್ಚುತ್ತಾನೆ ಎಂಬುದನ್ನು ನೀವು ಗಮನಿಸಬಹುದು. ಅಷ್ಟೇ ಯಾಕೆ ವ್ಯಕ್ತಿ ಸರಿಯಾಗಿಲ್ಲ ಎಂಬುದಕ್ಕೆ ಇದು ಪ್ರಬಲ ಕಾರಣ ಕೂಡ ಹೌದು. ಇದರ ನಂತರ, ವಂಚನ ತಪ್ಪು ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳಲು ನಿಮ್ಮನ್ನು ಒತ್ತಾಯಿಸುತ್ತಾರೆ, ಕೆಲವು ಆಕರ್ಷಕ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ನಿಮ್ಮನ್ನು ಬೆಳಬಹುದು. ನಿಮ್ಮ ಬಳಿ ಕೆಲವು ತಪ್ಪು ಸಮಸ್ಯೆಯನ್ನು ಉಲ್ಲೇಖಿಸಿ ಹಣವನ್ನು ಕೇಳುವುದು ಇತ್ಯಾದಿ. ನಂತರ ಒಂದು ದಿನ ಇದ್ದಕ್ಕಿದ್ದಂತೆ ಅವರೊಂದಿಗೆ ನಿಮ್ಮ ಸಂಪರ್ಕವನ್ನು ಕಳೆದುಕೊಳ್ಳುತ್ತೀರಿ. ಏಕೆಂದರೆ ಅವರು ವಂಚಕರಾಗಿದ್ದು, ನಿಮ್ಮ ಖಾತೆ ಖಾಲಿ ಮಾಡಿದ ಬಳಿಕ ಅವರು ಇದೇ ರೀತಿಯ ಜಾಲ ಬೀಸಿ ಇತರರನ್ನು ಸಿಲುಕಿಸಲು ಮುಂದಾಗುತ್ತಾರೆ.
ಇದನ್ನ ಓದಿ-Turkey: ವ್ಯಕ್ತಿಯೊಬ್ಬನ Covid-19 ವರದಿ 78 ಬಾರಿ ಸಕಾರಾತ್ಮಕ ಬಂದಿದೆಯಂತೆ!
ಈ ತಪ್ಪುಗಳನ್ನು ಮಾಡುವುದನ್ನು ತಪ್ಪಿಸಿ (Online Dating Frauds)
ಆನ್ಲೈನ್ ಡೇಟಿಂಗ್ ನಲ್ಲಿ ಪಠ್ಯ ಸಂದೇಶಗಳನ್ನು ಹೊರತುಪಡಿಸಿಯು ಕೂಡ ನಿಮ್ಮ ಜೊತೆಗೆ ವಂಚನೆ ನಡೆಯಬಹುದು. ಇವುಗಳಲ್ಲಿ ವೈರ್ ಟ್ರಾನ್ಸ್ ಫರ್ ಕಂಪನಿಗಳ ಮೂಲಕ ಕ್ಯಾಶ್ ವೈರ್ ಮಾಡಿಸುವುದು, ಗಿಫ್ಟ್ ಕಾರ್ಡ್ ಕಳುಹಿಸುವುದು ಹಾಗೂ ರೀಲೋಡೆಬಲ್ ಡೆಬಿಟ್ ಕಾರ್ಡ್ ಬಳಕೆ ಮಾಡುವುದು ಸಾಮಾನ್ಯ ವಂಚನೆಗಳಾಗಿವೆ. ಇವುಗಳ ಮಾಧ್ಯಮದ ಮೂಲಕ ವಂಚಕರು ತಮ್ಮ ಆನ್ಲೈನ್ ಸಂಗಾತಿಯನ್ನು ವಂಚಿಸುತ್ತಾರೆ.
ಇದನ್ನೂ ಓದಿ-Udupi : ನಾಳೆಯಿಂದ 19 ರ ವರೆಗೆ ಉಡುಪಿಯಲ್ಲಿ ಸೆಕ್ಷನ್ 144 ಜಾರಿ!
ಈ ರೀತಿ ನಿಮ್ಮನ್ನು ಸುರಕ್ಷಿತವಾಗಿರಿಸಿಕೊಳ್ಳಿ
ಅಂತಹ ವಂಚನೆಗಳನ್ನು ತಪ್ಪಿಸಲು ನೀವು ಏನು ಮಾಡಬೇಕು ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿದ್ದರೆ, ನಾವು ನಿಮಗೆ ಕೆಲ ಸಲಹೆಗಳನ್ನು ನೀಡುತ್ತೇವೆ. ನೀವು ಆನ್‌ಲೈನ್‌ನಲ್ಲಿ ಯಾರೊಂದಿಗಾದರೂ ಡೇಟಿಂಗ್ ಮಾಡುತ್ತಿದ್ದರೆ, ಮೊದಲು ನಿಮ್ಮ ಯಾವುದೇ ಆಪ್ತರು ಅಥವಾ ಸಂಬಂಧಿಕರಿಗೆ ಇದರ ಬಗ್ಗೆ ತಿಳಿಸಿ ಏಕೆಂದರೆ ಅವರ ದೃಷ್ಟಿ ತುಂಬಾ ತೀಕ್ಷ್ಣವಾಗಿರುತ್ತದೆ. ಅಲ್ಲದೆ, ಸಾಮಾಜಿಕ ಮಾಧ್ಯಮದಲ್ಲಿ ನಿಮ್ಮ ಸಂಗಾತಿಯ ವಿವರಗಳನ್ನು ಒಮ್ಮೆ ಪರಿಶೀಲಿಸುವುದನ್ನು ಖಚಿತಪಡಿಸಿಕೊಳ್ಳಿ. ಕೊನೆಯದಾಗಿ, ನೀವು ನಿಮ್ಮ ಪಾರ್ಟ್ನರ್ ನನ್ನು ಆನ್‌ಲೈನ್‌ನಲ್ಲಿ ಮಾತ್ರ ಭೇಟಿ ಮಾಡಿದ್ದರೆ, ಅವರಿಂದ ಉಡುಗೊರೆ ಕಾರ್ಡ್‌ಗಳು (Gift Cards Frauds) ಮತ್ತು ಆನ್‌ಲೈನ್ ಪಾವತಿಗಳನ್ನು ಸ್ವೀಕರಿಸಲು ಸ್ಪಷ್ಟವಾಗಿ ನಿರಾಕರಿಸಿ. ನಿಮ್ಮ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ಪ್ರೊಫೈಲ್‌ಗಳು ಖಾಸಗಿಯಾಗಿಡಲು ಪ್ರಯತ್ನಿಸಿ. ಏಕೆಂದರೆ ಕಳ್ಳರು ಆ ವೇದಿಕೆಯನ್ನು ಮಾಧ್ಯಮವಾಗಿ ಬಳಸುತ್ತಾರೆ.
ಇದನ್ನೂ ಓದಿ-IPL 2022: ಭಾರತಕ್ಕೆ U-19 ವಿಶ್ವಕಪ್ ಗೆದ್ದು ಕೊಟ್ಟ ನಾಯಕ ಯಶ್ ಧುಲ್ ಗೆ ಖುಲಾಯಿಸಿದ ಅದೃಷ್ಟ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.