Rose Flower Remedies: ಧನ ಪ್ರಾಪ್ತಿಯ ಜೊತೆಗೆ ಮನೆಯಲ್ಲಿ ಸದಾ ಸುಖ-ಸಮೃದ್ಧಿ ನೆಲೆಸಲು ಈ ಉಪಾಯ ಅನುಸರಿಸಿ

Rose Flower Home Remedies - ಹೂವುಗಳಿಂದ ಜೀವನದಲ್ಲಿ ಖುಷಿ-ಸಂತೋಷ ಹರಿದುಬರುತ್ತದೆ. ಇದೆ ಕಾರಣದಿಂದ ಜನರು ಮನೆಯಲ್ಲಿ ವಿವಿಧ ರೀತಿಯ ಹೂವುಗಳ ಸಸಿಗಳನ್ನು ನೆಡುತ್ತಾರೆ. ಗುಲಾಬಿ ಹೂವುಗಳ ಈ ಉಪಾಯಗಳು (Rose Remedies) ಧನಲಾಭಕ್ಕೆ (Rose Flower For Wealth)  ತುಂಬಾ ವಿಶೇಷ ಎಂದು ಪರಿಗಣಿಸಲಾಗುತ್ತದೆ. 

Rose Flower Home Remedies - ಹೂವುಗಳಿಂದ ಜೀವನದಲ್ಲಿ ಖುಷಿ-ಸಂತೋಷ ಹರಿದುಬರುತ್ತದೆ. ಇದೆ ಕಾರಣದಿಂದ ಜನರು ಮನೆಯಲ್ಲಿ ವಿವಿಧ ರೀತಿಯ ಹೂವುಗಳ ಸಸಿಗಳನ್ನು ನೆಡುತ್ತಾರೆ. ಗುಲಾಬಿ ಹೂವುಗಳ ಈ ಉಪಾಯಗಳು (Rose Remedies) ಧನಲಾಭಕ್ಕೆ (Rose Flower For Wealth)  ತುಂಬಾ ವಿಶೇಷ ಎಂದು ಪರಿಗಣಿಸಲಾಗುತ್ತದೆ. ಈ ಉಪಾಯಗಳನ್ನು ಅನುಸರಿಸುವುದರಿಂದ ಮನೆಯಲ್ಲೂ ಸುಖ-ಸಮೃದ್ಧಿ ನೆಲೆಸುತ್ತದೆ. ಧನ ಪ್ರಾಪ್ತಿಗೆ ಗುಲಾಬಿ (Rose) ಹೂವಿನ ಯಾವ ಹೂವುಗಳನ್ನು ಅನುಸರಿಸಬೇಕು ತಿಳಿಯೋಣ ಬನ್ನಿ 

 

(Disclaimer -  ಇಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

 

ಇದನ್ನೂ ಓದಿ-ಸ್ನೇಹಿತರ ರೂಪದಲ್ಲಿರುವ ಶತ್ರುಗಳಾಗಿರುತ್ತಾರೆ ಈ ರಾಶಿಯವರು, ನಿಮ್ಮ ಸುತ್ತಲೂ ಇದ್ದಾರಾ ನೋಡಿಕೊಳ್ಳಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

1. ಧನಲಾಭಕ್ಕಾಗಿ ಗುಲಾಬಿ - ಯಾವುದೇ ಒಂದು ಶುಕ್ರವಾರ ಗುಲಾಬಿ ಹೂವಿನಲ್ಲಿ ಕರ್ಪೂರವನ್ನಿಟ್ಟು ಉರಿಸಿ. ಕರ್ಪೂರ ಸುಟ್ಟುಹೋದ ಬಳಿಕ ಆ ಹೂವನ್ನು ಲಕ್ಷ್ಮಿಗೆ ಅರ್ಪಿಸಿ. ಹೀಗೆ ಮಾಡುವುದರಿಂದ ಧನಲಾಭ ಉಂಟಾಗುತ್ತದೆ.

2 /5

2. ಮನೋಕಾಮನೆಗಳ ಈಡೇರಿಕೆಗೆ - ಯಾವುದೇ ಶುಕ್ಲ ಪಕ್ಷದ ಮೊದಲ ಮಂಗಳವಾರದಂದು ಹನುಮನಿಗೆ 11 ತಾಜಾ ಗುಲಾಬಿ ಹೂವುಗಳನ್ನು ಅರ್ಪಿಸಿ. ಸತತ 11 ಮಂಗಳವಾರ ಈ ರೀತಿ ಮಾಡುವುದರಿಂದ ಶ್ರೀ ಆಂಜನೇಯ ನಿಮ್ಮ ಇಷ್ಟಾರ್ಥಗಳನ್ನು ಪೂರೈಸುತ್ತಾನೆ.

3 /5

3. ಮನೆಯಲ್ಲಿ ಸಮೃದ್ಧಿಗಾಗಿ ಈ ಉಪಾಯ ಅನುಸರಿಸಿ - ಮನೆಯಲ್ಲಿ ಸಮೃದ್ಧಿಗಾಗಿ  ಮಂಗಳವಾರದಂದು ಕೆಂಪು ಬಟ್ಟೆಯಲ್ಲಿ ಕೆಂಪು ಚಂದನ, ಕೆಂಪು ಗುಲಾಬಿ ಮತ್ತು ಕುಂಕುಮವನ್ನು ಕಟ್ಟಿಕೊಳ್ಳಿ. ನಂತರ ಅದನ್ನು ಒಂದು ವಾರದವರೆಗೆ ಆಂಜನೇಯನ ದೇವಸ್ಥಾನದಲ್ಲಿ ಇರಿಸಿ. ಬಳಿಕ ಅದನ್ನು ತಂದು ಮನೆ ಅಥವಾ ಅಂಗಡಿಯ ತಿಜೋರಿಯಲ್ಲಿರಿಸಿ ಇರಿಸಿ. ಗುಲಾಬಿಯ ಈ ಉಪಾಯ  ಮನೆಯಲ್ಲಿ ಸಮೃದ್ಧಿಯನ್ನು ತರುತ್ತದೆ. ಜೊತೆಗೆ ಹಣವೂ ವ್ಯರ್ಥ ಖರ್ಚಾಗುವುದಿಲ್ಲ.

4 /5

4. ರೋಗ ನಿವಾರಣೆಗೆ ಈ ಉಪಾಯ ಅನುಸರಿಸಿ - ಮನೆಯಲ್ಲಿ ಯಾರಾದರು ಅನಾರೋಗ್ಯದಿಂದ ಬಳಸುತ್ತಿದ್ದ ಪರಿಸ್ಥಿತಿಯಲ್ಲಿ ಗುಲಾಬಿ ಹೂವು ಮತ್ತು ಹಾಗಲಕಾಯಿಯನ್ನು ವೀಳ್ಯದೆಲೆಯಲ್ಲಿ ಇರಿಸಿ, ಅದನ್ನು ರೋಗಿಯ ಮೇಲೆ 11 ಬಾರಿ ನಿವಾಳಿಸಿ ನಾಲ್ಕು ಕವಲು ದಾರಿಗಳನ್ನು ಹೊಂದಿರುವ ಸರ್ಕಲ್ ನಲ್ಲಿ ಎಸೆಯಿರಿ. ಈ ಉಪಾಯದಿಂದ ರೋಗಿಯ ಸ್ಥಿತಿ ಸುಧಾರಿಸುತ್ತದೆ.

5 /5

5. ಸಾಲ ಮುಕ್ತಿಗಾಗಿ ಈ ಉಪಾಯ ಅನುಸರಿಸಿ - ಕೆಂಪು ದಳಗಳಿರುವ ಐದು ಗುಲಾಬಿ ಹೂವುಗಳನ್ನು ಒಂದು ಬಿಳಿ ಬಣ್ಣದ ವಸ್ತ್ರದ ನಾಲ್ಕೂ ಮೂಲೆಗಳಲ್ಲಿ ಮತ್ತು ಮಧ್ಯ ಭಾಗದಲ್ಲಿ ಒಂದೊಂದಾಗಿ ಕಟ್ಟಿಕೊಳ್ಳಿ, ನಂತರ ಅದನ್ನು ಗಂಟು ಕಟ್ಟಿ ಹರಿಯುವ ನದಿಯಲ್ಲಿ ಹರಿದುಬಿಡಿ. ಗುಲಾಬಿ ಹೂವಿನ ಈ ಉಪಾಯದಿಂದ ಸಾಲಬಾಧೆಯಿಂದ ಮುಕ್ತಿ ಸಿಗುತ್ತದೆ.