Vodafone-Idea Budget Friendly Prepaid Plans: ಭಾರತದಲ್ಲೀಗ 5ಜಿ ರೇಸ್‌ನದ್ದೇ ಸದ್ದು. ಈ ನಡುವೆ ತನ್ನ 4ಜಿ ಸೇವೆಯನ್ನು ಬಲಪಡಿಸಲು ಪಣತೊಟ್ಟಿರುವ ವೋಡಾಫೋನ್-ಐಡಿಯಾ (ವಿ) ಹೊಸ ಯೋಜನೆಯನ್ನು ಪರಿಚಯಿಸಿದೆ. ಈ ಮೂಲಕ ಜನಪ್ರಿಯ ಟೆಲಿಕಾಂ ಕಂಪನಿಗಳಾದ ಜಿಯೋ- ಏರ್‌ಟೆಲ್ ಟೆನ್ಷನ್‌ ಹೆಚ್ಚಿಸಿದೆ. ಈ ಯೋಜನೆಯಲ್ಲಿ ವೋಡಾಫೋನ್-ಐಡಿಯಾ ಕಂಪನಿಯು ಗ್ರಾಹಕರು ಯಾವುದೇ ಕರೆಗಳನ್ನು ತಪ್ಪಿಸಿಕೊಳ್ಳುವುದನ್ನು ತಡೆಯಲು ಹೊಸ ಮಿಸ್ಡ್ ಕಾಲ್ ಅಲರ್ಟ್ ಸ್ಕೀಮ್ ಅನ್ನು ಕೂಡ ಪರಿಚಯಿಸಿದೆ. ಯಾವುದೀ ಯೋಜನೆ, ಏನಿದರ ಪ್ರಯೋಜನ ಎಂದು ತಿಳಿಯೋಣ... 


COMMERCIAL BREAK
SCROLL TO CONTINUE READING

ವೊಡಾಫೋನ್-ಐಡಿಯಾ 45 ರೂಪಾಯಿಯ ಹೊಸ ಪ್ಲಾನ್: 
ವೊಡಾಫೋನ್-ಐಡಿಯಾ ಕಂಪನಿಯು ತನ್ನ ಬಳಕೆದಾರರಿಗಾಗಿ 45 ರೂಪಾಯಿಗಳ ಹೊಸ ಯೋಜನೆಯನ್ನು ಆರಂಭಿಸಿದೆ. ಇದಕ್ಕೆ Vi ಮಿಸ್ಡ್ ಕಾಲ್ ಅಲರ್ಟ್ ಪ್ಲಾನ್  ಎಂದು ಹೆಸರಿಸಿದೆ. 180 ದಿನಗಳ ಮಾನ್ಯತೆಯೊಂದಿಗೆ ಬರುವ ಈ ಯೋಜನೆಯ ವಿಶೇಷತೆ ಎಂದರೆ ಈ ಯೋಜನೆಯನ್ನು ಆಕ್ಟಿವೇಟ್ ಮಾಡುವ ಗ್ರಾಹಕರಿಗೆ ಯಾವುದೇ ಕಾಲ್ ಮಿಸ್ ಆಗುವುದರ ಚಿಂತೆಯೇ ಇರುವುದಿಲ್ಲ. ಸುಮಾರು ಆರು ತಿಂಗಳುಗಳವರೆಗೆ ಲಭ್ಯವಿರುವ ಈ ಯೋಜನೆಯಲ್ಲಿ ಕರೆ ಅಥವಾ ಡೇಟಾ ಸೌಲಭ್ಯ ಇರುವುದಿಲ್ಲ. ಎಂದರೆ, ಈ ಮಿಸ್ಡ್ ಕಾಲ್ ಅಲರ್ಟ್ ಸ್ಕೀಮ್ ಜೊತೆಗೆ ನೀವು ಕರೆ ಮತ್ತು ಇನ್ನಿತರ ಸೌಲಭ್ಯಗಳಿಗಾಗಿ ನಿಯಮಿತ ಯೋಜನೆಗಳನ್ನು ಕೂಡ ರಿಚಾರ್ಜ್ ಮಾಡಬೇಕು. 


ಇದನ್ನೂ ಓದಿ- Vodafone Idea 199 ರೂ. ರೀಚಾರ್ಜ್‌ನಲ್ಲಿ ಸಿಗುತ್ತೆ 5GB ಫ್ರೀ ಡೇಟಾ ಪ್ರಯೋಜನ


ಮಿಸ್ಡ್ ಕಾಲ್‌ ಅಲರ್ಟ್ ಯೋಜನೆಯ ಪ್ರಯೋಜನಗಳು: 
ವೋಡಾಫೋನ್-ಐಡಿಯಾದ ಈ ಮಿಸ್ಡ್ ಕಾಲ್‌ ಅಲರ್ಟ್ ಯೋಜನೆಯು ಯಾವುದೇ ಗ್ರಾಹಕರು ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾಗ, ಇಲ್ಲವೇ ಮೊಬೈಲ್ ಸ್ವೀಚ್ ಆಫ್ ಆಗಿದ್ದಾಗ ನಿಮಗೆ ಮಿಸ್ ಆದ ಕರೆಗಳ ಬಗ್ಗೆ ಸಂದೇಶದ ಮೂಲಕ ಮಾಹಿತಿಯನ್ನು ಒದಗಿಸುತ್ತದೆ. 


ಇದನ್ನೂ ಓದಿ- ವೊಡಾಫೋನ್-ಐಡಿಯಾದ ಈ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ನಲ್ಲಿ ಎಲ್ಲವೂ ಅನ್ಲಿಮಿಟೆಡ್


ವಿಶೇಷವೆಂದರೆ, ಇತರೆ ಟೆಲಿಕಾಂ ಕಂಪನಿಗಳಲ್ಲೂ ಕೂಡ ಇಂತಹ ಯೋಜನೆ ಲಭ್ಯವಿದೆ. ಆದರೆ, ಕೆಲ ಕಂಪನಿಗಳು ಕೆಲವು ಆಯ್ದ ಯೋಜನೆಗಳಲ್ಲಿ ಮಾತ್ರ ಇಂತಹ ವೈಶಿಷ್ಟ್ಯವನ್ನು ಒದಗಿಸುತ್ತವೆ. ಅರ್ಥಾತ್ ಇದಕ್ಕಾಗಿ ಗ್ರಾಹಕಾರು ಪ್ರತ್ಯೇಕವಾಗಿ ರಿಚಾರ್ಜ್ ಮಾಡುವ ಅಗತ್ಯವಿರುವುದಿಲ್ಲ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.