ಟ್ವಿಟರ್, ಫೇಸ್‌ಬುಕ್ ಆಯಿತು, ಇನ್ನು ಗೂಗಲ್‌ನಲ್ಲಿಯೂ ಬ್ಲೂ ಟಿಕ್ !

BIMI ಅನ್ನು ಅಳವಡಿಸಿಕೊಳ್ಳುವ ಬಳಕೆದಾರರು ಕಳುಹಿಸುವ ಇಮೇಲ್‌ನಲ್ಲಿ ಹೆಸರಿನ ಮುಂದೆ ಚೆಕ್‌ಮಾರ್ಕ್ ಕಾಣಿಸುತ್ತದೆ. ಇದರೊಂದಿಗೆ, ಇಮೇಲ್ ರಿಸಿವ್ ಮಾಡಿಕೊಳ್ಳುವವರಿಗೆ ಇಮೇಲ್ ಅನ್ನು ಯಾರು ಕಳುಹಿಸಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. 

Written by - Ranjitha R K | Last Updated : May 5, 2023, 12:18 PM IST
  • ದೈತ್ಯ ಗೂಗಲ್ ತನ್ನ ಬಳಕೆದಾರರಿಗೆ ಬ್ಲೂ ಟಿಕ್ ಮಾರ್ಕ್ ನೀಡುತ್ತದೆ.
  • ಹೆಸರಿನೊಂದಿಗೆ ಕಾಣಿಸುತ್ತದೆ ಚೆಕ್‌ಮಾರ್ಕ್
  • ವಂಚನೆ ತಡೆಗೆ ಇದು ಸಹಾಯ ಮಾಡುತ್ತದೆ
ಟ್ವಿಟರ್, ಫೇಸ್‌ಬುಕ್ ಆಯಿತು, ಇನ್ನು ಗೂಗಲ್‌ನಲ್ಲಿಯೂ ಬ್ಲೂ ಟಿಕ್ ! title=

ಬೆಂಗಳೂರು : ಟ್ವಿಟರ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ನಂತರ, ಈಗ ಟೆಕ್ ದೈತ್ಯ ಗೂಗಲ್ ತನ್ನ ಬಳಕೆದಾರರಿಗೆ ಬ್ಲೂ ಟಿಕ್ ಮಾರ್ಕ್ ಅನ್ನು ನೀಡುತ್ತದೆ.  ವಂಚನೆಯನ್ನು ತಪ್ಪಿಸುವ ಉದ್ದೇಶದಿಂದ ಬ್ಲೂ ಟಿಕ್ ನೀಡಲು ಕಂಪನಿ ಮುಂದಾಗಿದೆ. ಈ ಬ್ಲೂ ಟಿಕ್ ಮೂಲಕ ಸೂಕ್ತ ಬಳಕೆದಾರರಿಂದಲೇ ಇಮೇಲ್ ಸ್ವೀಕರಿಸುತ್ತಿದ್ದಾರೆಯೇ ಎನ್ನುವುದನ್ನು ಗುರುತಿಸುವುದು ಸುಲಭವಾಗುತ್ತದೆ. 2021ರಲ್ಲಿ ಮೊದಲ ಬಾರಿಗೆ, ಕಂಪನಿಯು Gmail ನಲ್ಲಿ ಬ್ರಾಂಡ್ ಇಂಡಿಕೇಟರ್ಸ್ ಫಾರ್  ಮೆಸೇಜ್ ಐಡೆಂಟಿಫಿಕೇಶನ್ ಅನ್ನು ಪರಿಚಯಿಸಿತ್ತು. ಈ ವೈಶಿಷ್ಟ್ಯದ ಮೂಲಕ, ಇಮೇಲ್ ಕಳುಹಿಸುವವರ ಬ್ರ್ಯಾಂಡ್ ಲೋಗೋ ಅವರ ಇಮೇಲ್ ಜೊತೆಗೆ ಗೋಚರಿಸುತ್ತದೆ.

ಹೆಸರಿನೊಂದಿಗೆ ಕಾಣಿಸುತ್ತದೆ ಚೆಕ್‌ಮಾರ್ಕ್ :
ಆ ವೈಶಿಷ್ಟ್ಯವನ್ನು ಇನ್ನಷ್ಟು ಉತ್ತಮಗೊಳಿಸಲಾಗಿದೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. BIMI ಅನ್ನು ಅಳವಡಿಸಿಕೊಳ್ಳುವ ಬಳಕೆದಾರರು ಕಳುಹಿಸುವ ಇಮೇಲ್‌ನಲ್ಲಿ ಹೆಸರಿನ ಮುಂದೆ ಚೆಕ್‌ಮಾರ್ಕ್ ಕಾಣಿಸುತ್ತದೆ. ಇದರೊಂದಿಗೆ, ಇಮೇಲ್ ರಿಸಿವ್ ಮಾಡಿಕೊಳ್ಳುವವರಿಗೆ ಇಮೇಲ್ ಅನ್ನು ಯಾರು ಕಳುಹಿಸಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. Google Workspace, G Suite Basic ಮತ್ತು Businessನ ಎಲ್ಲಾ ಗ್ರಾಹಕರು ಈ ವೈಶಿಷ್ಟ್ಯವನ್ನು ಬಳಸಿಕೊಳ್ಳಬಹುದಾಗಿದೆ. ಇದರೊಂದಿಗೆ ವೈಯಕ್ತಿಕ ಗೂಗಲ್ ಖಾತೆದಾರರಿಗೂ ಈ ಸೌಲಭ್ಯವನ್ನು ನೀಡಲಾಗುತ್ತಿದೆ.

ಇದನ್ನೂ ಓದಿ : ಸೂಪರ್ ಮೈಲೇಜ್, ವೈಶಿಷ್ಟ್ಯ ಹೊಂದಿರುವ SUV!ಅಗ್ಗದ ಬೆಲೆಯ ಈ ಕಾರಿನ ಸೇಫ್ಟಿ ಫೀಚರ್ ಅದ್ಭುತ !

BIMI ವೈಶಿಷ್ಟ್ಯವನ್ನು ಅಳವಡಿಸಿಕೊಂಡ ತೆಗೆದುಕೊಂಡ ಕಂಪನಿಗಳು ಸ್ವಯಂಚಾಲಿತವಾಗಿ ಚೆಕ್‌ಮಾರ್ಕ್ ಅನ್ನು ಪಡೆಯುತ್ತವೆ. ಇಮೇಲ್‌ನ ವೆರಿಫೈಡ್ ಗ್ರಾಹಕರು ಮತ್ತು ಇಮೇಲ್ ಭದ್ರತಾ ವ್ಯವಸ್ಥೆಯು ಸ್ಪ್ಯಾಮ್ ಅನ್ನು ಗುರುತಿಸಿ ಅದನ್ನು ತಡೆಯಲು ಇದು ಸಹಾಯ ಮಾಡುತ್ತದೆ ಎಂದು ಟೆಕ್ ಕಂಪನಿ ಹೇಳಿದೆ. ಇಮೇಲ್ ಕಳುಹಿಸುವವರಿಗೆ ತಮ್ಮ ಬ್ರ್ಯಾಂಡ್ ನಂಬಿಕೆಯನ್ನು ಹೆಚ್ಚಿಸಲು ಅವಕಾಶವನ್ನು ನೀಡುತ್ತದೆ. 

ಎಲೋನ್ ಮಸ್ಕ್ ಅವರ ಕಂಪನಿ ಟ್ವಿಟರ್ ಎಲ್ಲಾ ಪಾರಂಪರಿಕ ನೀಲಿ ಬ್ಯಾಡ್ಜ್‌ಗಳನ್ನು ತೆಗೆದುಹಾಕಿದ ನಂತರ ಇದೀಗ ಗೂಗಲ್ ನೀಲಿ ಚೆಕ್‌ಮಾರ್ಕ್ ಅನ್ನು ಬಿಡುಗಡೆ ಮಾಡಿದೆ. Google ನ ಪೋಷಕ ಕಂಪನಿ Meta ಸಹ Instagram ಮತ್ತು Facebook ನಲ್ಲಿ ಪಾವತಿ ಆಧಾರಿತ  ವೆರಿಫಿಕೆಶನ್ ನಡೆಸುತ್ತಿದೆ. ಇಲ್ಲಿ ವೆಬ್‌ಗೆ 
ತಿಂಗಳಿಗೆ $ 11.99 ಮತ್ತು ಮೊಬೈಲ್‌ಗೆ $ 14.99 ನಂತೆ ಇದರ ಶುಲ್ಕವನ್ನು ಪಾವತಿಸಬೇಕಾಗುತ್ತದೆ. 

ಇದನ್ನೂ ಓದಿ : Ola Electric Update: ತನ್ನ ಗ್ರಾಹಕರಿಗೆ ಭರ್ಜರಿ ಉಡುಗೊರೆ ನೀಡಲು ಮುಂದಾದ ಓಲಾ ಎಲೆಕ್ಟ್ರಿಕ್!

ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರು ಮೆಟಾ ವೆರಿಫೈಡ್ ಅಕೌಂಟ್ ಬಳಕೆದಾರರಿಗೆ ವೆರಿಫೈಡ್  ಬ್ಯಾಡ್ಜ್ ಅನ್ನು ನೀಡುತ್ತಾರೆ. ಇದರಿಂದ  ಎರಡೂ ಪ್ಲಾಟ್‌ಫಾರ್ಮ್‌ಗಳಲ್ಲಿ ಅವರ ವಿಸಿಬಿಲಿಟಿ  ಹೆಚ್ಚುತ್ತದೆ. ಆದ್ಯತೆಯ ಆಧಾರದ ಮೇಲೆ ಅವರಿಗೆ ಕಸ್ಟಮ್ ಬೆಂಬಲವನ್ನು ನೀಡುತ್ತದೆ. ಈ ವೈಶಿಷ್ಟ್ಯವನ್ನು ಫೆಬ್ರವರಿಯಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಪ್ರಾರಂಭಿಸಲಾಯಿತು.   ಶೀಘ್ರದಲ್ಲೇ ಇದನ್ನು ಇತರ ದೇಶಗಳಲ್ಲಿಯೂ ಹೊರತರಲಾಗುವುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News