ನವದೆಹಲಿ: ವೊಡಾಫೋನ್ ಐಡಿಯಾ (VI) ಹೊಸ ವರ್ಷದಲ್ಲಿ ಶೀಘ್ರದಲ್ಲೇ ಮೊಬೈಲ್ ವಲಯದಲ್ಲಿ 3 ಜಿ ಸೇವೆಗಳನ್ನು ಸ್ಥಗಿತಗೊಳಿಸುವುದಾಗಿ ಪ್ರಕಟಿಸಿದೆ. ಜನವರಿ 15 ರಿಂದ ದೆಹಲಿ ಸರ್ಕಲ್‌ನಲ್ಲಿ Vi ಯ 4G ಸೇವೆ ಬಳಕೆದಾರರಿಗೆ ಲಭ್ಯವಾಗಲಿದೆ ಎಂದು ಕಂಪನಿ ತಿಳಿಸಿದೆ. ಇದಕ್ಕೂ ಮೊದಲು ಬಳಕೆದಾರರು ತಮ್ಮ ಸಿಮ್ ಕಾರ್ಡ್‌ಗೆ ಅಪ್‌ಗ್ರೇಡ್ ಮಾಡಬೇಕು. ಈ ಹಿಂದೆ ಅದು ತನ್ನ 3G ಸೇವೆಗಳನ್ನು ಮುಂಬೈ ಮತ್ತು ದೆಹಲಿ ವಲಯಗಳಲ್ಲಿ ನಿಲ್ಲಿಸಿದೆ.


COMMERCIAL BREAK
SCROLL TO CONTINUE READING

ನಿಮ್ಮ ಸಿಮ್ ಅನ್ನು ನೀವು ಇಲ್ಲಿಂದ ಬದಲಾಯಿಸಬಹುದು :
ರಾಷ್ಟ್ರ ರಾಜಧಾನಿಯ Vi ಗ್ರಾಹಕರು ತಮ್ಮ ಹತ್ತಿರದ ಸರ್ವಿಸ್ ಸೆಂಟರ್ ಗೆ ಭೇಟಿ ನೀಡುವ ಮೂಲಕ ತಮ್ಮ ಅಸ್ತಿತ್ವದಲ್ಲಿರುವ ಸಿಮ್ ಅನ್ನು 4G ಗೆ ಅಪ್‌ಗ್ರೇಡ್ ಮಾಡಬೇಕಾಗುತ್ತದೆ. ಸ್ವಿಚ್ ಬಗ್ಗೆ ಗ್ರಾಹಕರಿಗೆ ತಿಳಿಸಲು ವಿ (VI) ದೆಹಲಿ ವಲಯದಲ್ಲಿರುವ ತನ್ನ ಗ್ರಾಹಕರಿಗೆ ಎಸ್‌ಎಂಎಸ್ ಕಳುಹಿಸಲು ಪ್ರಾರಂಭಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಬಳಕೆದಾರರು ತಮ್ಮ ಫೋನ್‌ಗಳಲ್ಲಿ ನಿರಂತರ ಸೇವೆಯನ್ನು ಪಡೆಯಲು ಜನವರಿ 15 ರ ಮೊದಲು ತಮ್ಮ ಸಿಮ್ ಅನ್ನು 4 ಜಿ ಗೆ ಅಪ್‌ಗ್ರೇಡ್ ಮಾಡಬೇಕು ಎಂದು ಎಸ್‌ಎಂಎಸ್ ಸಂದೇಶದಲ್ಲಿ ತಿಳಿಸಲಾಗಿದೆ.


ಇದನ್ನೂ ಓದಿ : BSNL : 365 ರೂ ರಿಚಾರ್ಜ್ ಮಾಡಿದರೆ ಸಿಗಲಿದೆ ಒಂದು ವರ್ಷದ ವಾಲಿಡಿಟಿ


ಧ್ವನಿ ಕರೆ 2G ಯಲ್ಲಿ ಲಭ್ಯ :
ತಮ್ಮ ಸಿಮ್ ಅನ್ನು 4G ಗೆ ಅಪ್‌ಗ್ರೇಡ್ ಮಾಡಲು ಸಾಧ್ಯವಾಗದ ಗ್ರಾಹಕರಿಗೆ 2 ಜಿ ಮೂಲಕ ಧ್ವನಿ ಕರೆ ನೀಡುವುದನ್ನು Vi ಮುಂದುವರಿಸಲಿದೆ. ಆದ್ದರಿಂದ ಹಳೆಯ ಸಿಮ್ ಸಂಪರ್ಕಗಳಲ್ಲಿ ಡೇಟಾ ಸೇವೆಗಳು ಲಭ್ಯವಿರುವುದಿಲ್ಲ. ಈ ಬದಲಾವಣೆಯು ಈಗಾಗಲೇ  Vi 4G ಸಿಮ್ ಬಳಸುತ್ತಿರುವ ಬಳಕೆದಾರರ ಮೇಲೂ ಪರಿಣಾಮ ಬೀರುವುದಿಲ್ಲ ಎಂದು ಹೇಳಲಾಗಿದೆ.


ಸ್ಪೆಕ್ಟ್ರಮ್ ಸುಧಾರಣೆಯಿಂದ (ಮರುಸಂಯೋಜನೆ), ಅಲ್ಲಿ 4G ವೇಗ ಹೆಚ್ಚಾಗುತ್ತದೆ ಎಂದು ಕಂಪನಿ ಹೇಳಿದೆ. 2100 ಮೆಗಾಹರ್ಟ್ ಬ್ಯಾಂಡ್ನ ಸ್ಪೆಕ್ಟ್ರಮ್ ಅನ್ನು 5G ನೆಟ್ವರ್ಕ್ಗಾಗಿ ಬಳಸುತ್ತಿರುವ ಸಮಯದಲ್ಲಿ ಕಂಪನಿಯು ಈ ಕ್ರಮವನ್ನು ತೆಗೆದುಕೊಂಡಿದೆ. ವೊಡಾ-ಐಡಿಯಾ (Vodafone Idea) ತನ್ನ 2G ಸೇವೆಗಳನ್ನು ಮುಂಬೈನಲ್ಲಿ ಮುಂದುವರಿಸಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.


ಇದನ್ನೂ ಓದಿ :  BSNL ತನ್ನ ಗ್ರಾಹಕರಿಗಾಗಿ ತರುತ್ತಿದೆ 3 ಹೊಸ ಧಮಾಕ ಪ್ಲಾನ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 


ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.