ನವದೆಹಲಿ: ಸರ್ಕಾರಿ ಟೆಲಿಕಾಂ ಕಂಪನಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್‌ಎನ್‌ಎಲ್) ಪೋಸ್ಟ್‌ಪೇಯ್ಡ್ ಗ್ರಾಹಕರಿಗಾಗಿ ಮೂರು ಹೊಸ ಯೋಜನೆಗಳನ್ನು ಪ್ರಾರಂಭಿಸುತ್ತಿದೆ. ಈ ಮೂರು ಯೋಜನೆಗಳನ್ನು ನಾಳೆ ಅಂದರೆ ಡಿಸೆಂಬರ್ 1 ರಂದು ಕಂಪನಿ ಬಿಡುಗಡೆ ಮಾಡುತ್ತಿದೆ. ಈ ಹೊಸ ಯೋಜನೆಗಳಲ್ಲಿ ನೀವು ಉಚಿತ ಸಿಮ್ ಕಾರ್ಡ್‌ಗಳನ್ನು ಪಡೆಯಲಿದ್ದೀರಿ. ಅಲ್ಲದೆ 75 ಜಿಬಿ ವರೆಗೆ ಡೇಟಾ ನೀಡಲಾಗುವುದು. ಈ ಹೊಸ ಯೋಜನೆಗಳ ಬಗ್ಗೆ ತಿಳಿದುಕೊಳ್ಳೋಣ ...
1. 199 ರೂ.ಗಳ BSNL Postpaid plan:
ಖಾಸಗಿ ಟೆಲಿಕಾಂ ಆಪರೇಟರ್‌ಗಳಿಗೆ ಸೆಡ್ಡು ಹೊಡೆದಿರುವ ಬಿಎಸ್ಎನ್ಎಲ್ (BSNL) ಸಹ ಕಡಿಮೆ ಬಜೆಟ್ ಯೋಜನೆಯನ್ನು ನೀಡಲು ಹೊರಟಿದೆ. ಕಂಪನಿಯು ಅಗ್ಗದ 199ರೂ. ಯೋಜನೆಯನ್ನು ಸಹ ಪ್ರಾರಂಭಿಸಲಿದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ಬಿಎಸ್‌ಎನ್‌ಎಲ್‌ನಿಂದ ಬಿಎಸ್‌ಎನ್‌ಎಲ್‌ಗೆ ಉಚಿತ ಕರೆ ಮಾಡುವ ಸೌಲಭ್ಯವನ್ನು ನೀಡಲಾಗುತ್ತಿದೆ. ಅಲ್ಲದೆ ಇತರ ನೆಟ್‌ವರ್ಕ್‌ಗಳಲ್ಲಿ 300 ನಿಮಿಷಗಳ ಉಚಿತ ಕರೆ ಸೌಲಭ್ಯ ನೀಡಲಾಗುತ್ತಿದೆ. ಪೋಸ್ಟ್‌ಪೇಯ್ಡ್ ಯೋಜನೆಯಲ್ಲಿ ಬಿಎಸ್‌ಎನ್‌ಎಲ್ 25 ಜಿಬಿ ಇಂಟರ್ನೆಟ್ ಡೇಟಾವನ್ನು ಬಳಕೆದಾರರಿಗೆ ನೀಡುತ್ತಿದೆ.
2. 798 ರೂ.ಗಳ ಬಿಎಸ್ಎನ್ಎಲ್ ಪೋಸ್ಟ್ ಪೇಯ್ಡ್ ಯೋಜನೆ:
ಪೋಸ್ಟ್‌ಪೇಯ್ಡ್ ಗ್ರಾಹಕರಿಗೆ ಬಿಎಸ್‌ಎನ್‌ಎಲ್ 798 ರೂಪಾಯಿ ಯೋಜನೆಯನ್ನು ತರುತ್ತಿದೆ. 999 ರೂ. ಯೋಜನೆಯಂತೆ ಈ ಯೋಜನೆಯಲ್ಲಿ ಅನಿಯಮಿತ ಕರೆ ಮತ್ತು 100 ಎಸ್‌ಎಂಎಸ್ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಅಲ್ಲದೆ ಬಳಕೆದಾರರಿಗೆ ಪ್ರತಿ ತಿಂಗಳು 50 ಜಿಬಿ ಡೇಟಾವನ್ನು ನೀಡಲಾಗುವುದು.
3. 999 ರೂ.ಗಳ ಬಿಎಸ್ಎನ್ಎಲ್ ಪೋಸ್ಟ್ ಪೇಯ್ಡ್ ಯೋಜನೆ:
ಡಿಸೆಂಬರ್ 1 ರಂದು ಬಿಎಸ್ಎನ್ಎಲ್ ಹೊಸ 999 ರೂಪಾಯಿ ಪೋಸ್ಟ್ ಪೇಯ್ಡ್ ಯೋಜನೆಯನ್ನು (BSNL Postpaid Plan) ಪ್ರಾರಂಭಿಸುತ್ತಿದೆ. Androidos.in ಎಂಬ ಟೆಕ್ ಸೈಟ್ ಪ್ರಕಾರ ಈ ಯೋಜನೆಯಲ್ಲಿ ಗ್ರಾಹಕರಿಗೆ ಉಚಿತವಾಗಿ ಕರೆ, 100 ಉಚಿತ ಎಸ್ಎಂಎಸ್ ಜೊತೆಗೆ ಪ್ರತಿ ತಿಂಗಳು 75 ಜಿಬಿ ಡೇಟಾವನ್ನು ನೀಡಲಾಗುತ್ತಿದೆ.