ಎರಡು ಫೋನ್ ಗಳನ್ನು ಬಿಡುಗಡೆ ಮಾಡಿದ Vivo, ವಯರ್ ಲೆಸ್ ಚಾರ್ಜಿಂಗ್, ಅದ್ಬುತ ಕ್ಯಾಮೆರಾದೊಂದಿಗೆ ಇರಲಿದೆ ಈ ವೈಶಿಷ್ಟ್ಯ
ಭಾರತದಲ್ಲಿ Vivo X70 Pro ಮತ್ತು Vivo X70 Pro+ ಖರೀದಿಸುವ ಅವಕಾಶ ಸಿಗುತ್ತದೆ. ಈ ಹೊಸ ಸ್ಮಾರ್ಟ್ಫೋನ್ ಸರಣಿಯು ಅದ್ಭುತ ಕ್ಯಾಮೆರಾ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ಕಂಪನಿ ಹೇಳಿದೆ.
ನವದೆಹಲಿ : ಚೀನೀ ಸ್ಮಾರ್ಟ್ಫೋನ್ ತಯಾರಕ ವಿವೋ, ತನ್ನ ಹೊಸ ಸ್ಮಾರ್ಟ್ಫೋನ್ ಸರಣಿ Vivo X70 ಸರಣಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಸರಣಿಯಲ್ಲಿ ಒಟ್ಟು ಮೂರು ಸ್ಮಾರ್ಟ್‌ಫೋನ್‌ಗಳಿವೆ. ಆದರೆ ಭಾರತದಲ್ಲಿ Vivo X70 Pro ಮತ್ತು Vivo X70 Pro+ ಖರೀದಿಸುವ ಅವಕಾಶ ಮಾತ್ರ ಸಿಗುತ್ತದೆ. ಈ ಹೊಸ ಸ್ಮಾರ್ಟ್ಫೋನ್ ಸರಣಿಯು ಅದ್ಭುತ ಕ್ಯಾಮೆರಾ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ಕಂಪನಿ ಹೇಳಿದೆ.
Vivo X70 Pro ವೈಶಿಷ್ಟ್ಯಗಳು :
Vivo X70 Pro 6.56 ಇಂಚು FHD+ AMOLED ಕರ್ವ್ಡ್ ಡಿಸ್ಪ್ಲೇಯೊಂದಿಗೆ ಬರುತ್ತದೆ ಮತ್ತು 120Hz ರಿಫ್ರೆಶ್ ರೇಟ್ ಅನ್ನು ಹೊಂದಿದೆ. ಈ ಫೋನ್ ಸ್ಯಾಮ್‌ಸಂಗ್ ಎಕ್ಸಿನೋಸ್ 1080 SoC ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು 8GB ಅಥವಾ 12GB RAM ಮತ್ತು 128GB ಮತ್ತು 256GB ಇಂಟರ್ನಲ್ ಸ್ಟೋರೇಜ್ ನೊಂದಿಗೆ ಬರುತ್ತದೆ. ಮುಂಭಾಗದಲ್ಲಿ, HDR10 ಬೆಂಬಲದೊಂದಿಗೆ 32MP ಸೆಲ್ಫಿ ಕ್ಯಾಮೆರಾ ಸ್ಕ್ರೀನ್ ಮಧ್ಯದಲ್ಲಿ ಪಂಚ್ ಹೋಲ್ ಇದೆ.
ಇದನ್ನೂ ಓದಿ : Motorola's Tablet: ಕಡಿಮೆ ಬೆಲೆಯಲ್ಲಿ ಸಿಗಲಿದೆ ಹಲವು ವೈಶಿಷ್ಟ್ಯಗಳು
Vivo X70 Pro ಕ್ಯಾಮೆರಾ ಮತ್ತು ಬ್ಯಾಟರಿ :
ಫೋನ್ 50 ಎಂಪಿ ಪ್ರೈಮರಿ ಕ್ಯಾಮೆರಾ, ಎರಡು 12 ಎಂಪಿ ಪೊಟ್ರೆಟ್ ಮತ್ತು ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್‌ಗಳು ಮತ್ತು 8 ಎಂಪಿ ಪೆರಿಸ್ಕೋಪ್ ಲೆನ್ಸ್‌ಗಳನ್ನು ಒಳಗೊಂಡಿರುವ ಕ್ವಾಡ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. ಪ್ರೈಮರಿ ಶೂಟರ್ ನಲ್ಲಿ ಗಿಂಬಲ್ ಸ್ಟೆಬಿಲೈಸೆಶನ್ ಇದ್ದು, ಎಲ್ಲಾ ಲೆನ್ಸ್ Zeiss ಕೋಟಿಂಗ್ ನೊಂದಿಗೆ ಬರುತ್ತದೆ. ಈ ವಿವೋ ಸ್ಮಾರ್ಟ್ಫೋನ್ (Smartphone) 4,540mAh ಬ್ಯಾಟರಿಯನ್ನು ಹೊಂದಿದ್ದು 44W ಫ್ಲಾಶ್ ಬೆಂಬಲದೊಂದಿಗೆ ಬರುತ್ತದೆ.
Vivo X70 Pro+ ನ ವೈಶಿಷ್ಟ್ಯಗಳು :
ವಿವೋ ಎಕ್ಸ್ 70 ಸರಣಿಯ ಅತ್ಯುತ್ತಮ ಸ್ಮಾರ್ಟ್ಫೋನ್ ವಿವೋ ಎಕ್ಸ್ 70 ಪ್ರೊ+ 6.78 ಇಂಚಿನ 2 ಕೆ ಡಿಸ್ಪ್ಲೇ, 10-ಬಿಟ್ ಸ್ಯಾಮ್ಸಂಗ್ ಇ 5 ಅಮೋಲೆಡ್ ಸ್ಕ್ರೀನ್, 120Hz ರಿಫ್ರೆಶ್ ರೇಟ್, 1500 ನಿಟ್ಸ್ ಗರಿಷ್ಠ ಬ್ರೈಟ್ನೆಸ್ ಮತ್ತು 300Hz ಟಚ್ ಸ್ಯಾಂಪ್ಲಿಂಗ್ ರೇಟ್ ಅನ್ನು ಹೊಂದಿದೆ. ಈ ಫೋನ್ ನ ಡಿಸ್‌ಪ್ಲೇಗೆ ಡಿಸ್ಪ್ಲೇಮೇಟ್‌ನಿಂದ A+ ಪ್ರಮಾಣಪತ್ರ ಕೂಡಾ ದೊರೆತಿದೆ. ಸಾಧನವು Qualcomm Snapdragon 888+ ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು LPDDR5 ಮೆಮೊರಿ ಮತ್ತು UFS 3.1 ಸ್ಟೋರೇಜ್ ನೊಂದಿಗೆ ಬರುತ್ತದೆ. ಭಾರತದಲ್ಲಿ, ಇದು 12GB RAM ಮತ್ತು 256GB ಇಂಟರ್ನಲ್ ಸ್ಟೋರೇಜ್ ನೊಂದಿಗೆ ಲಭ್ಯವಿದೆ.
ಇದನ್ನೂ ಓದಿ : Amazonನಲ್ಲಿ Vivo 5G Smartphone ಮೇಲೆ ಸಿಗಲಿದೆ 24 ಸಾವಿರ ರೂಪಾಯಿಗಳ ರಿಯಾಯಿತಿ, ಇತರ ಆಫರ್ ಗಳ ಬಗ್ಗೆ ಪೂರ್ಣ ಮಾಹಿತಿ
Vivo X70 Pro+ ಕ್ಯಾಮೆರಾ ಮತ್ತು ಬ್ಯಾಟರಿ :
ಈ X70 ಸರಣಿಯ ಸ್ಮಾರ್ಟ್‌ಫೋನ್ 50MP ಪ್ರಾಥಮಿಕ ಸೆನ್ಸಾರ್‌ನೊಂದಿಗೆ ಬರುತ್ತದೆ ಅದು ಸ್ಯಾಮ್‌ಸಂಗ್‌ನ GN1 ಸೆನ್ಸಾರ್ ಅನ್ನು ಬಳಸುತ್ತದೆ. ಹೆಚ್ಚುವರಿಯಾಗಿ, 48MP ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್, 12MP ಪೋಟ್ರೇಟ್ ಲೆನ್ಸ್ ಮತ್ತು 8MP ಪೆರಿಸ್ಕೋಪ್ ಲೆನ್ಸ್ ಅನ್ನು ಕೂಡಾ ಒಳಗೊಂಡಿದೆ.
ಈ ಫೋನ್‌ಗಳ ಬೆಲೆ :
ವಿವೋ X70 ಪ್ರೊನ 8GB RAM ಮತ್ತು 128GB ರೂಪಾಂತರವು 46,990 ರೂ. ಗೆ ಲಭ್ಯವಿರುತ್ತದೆ. 8GB RAM ಮತ್ತು 256GB ವೇರಿಯಂಟ್ ಖರೀದಿಸಿದರೆ 49,990 ರೂ. ಪಾವತಿಸಬೇಕಾಗುತ್ತದೆ. ಮತ್ತು 12GB RAM ಮತ್ತು 256GB ನ ವೆರಿಯೇಂಟ್ 52,990 ರೂ.ಗಳಿಗೆ ಸಿಗುತ್ತದೆ. ಈ ಸ್ಮಾರ್ಟ್ಫೋನ್ ಅರೋರಾ ಡಾನ್ ಮತ್ತು ಕಾಸ್ಮಿಕ್ ಬ್ಲಾಕ್ ಹೀಗೆ ಎರಡು ಬಣ್ಣಗಳಲ್ಲಿ ಲಭ್ಯವಿದೆ.
ಇದನ್ನೂ ಓದಿ : WhatsApp ಬಳಕೆದಾರರಿಗೆ ಸಿಹಿ ಸುದ್ದಿ : ನಿಮಗಾಗಿ ವಾಟ್ಸಾಪ್ ತರುತ್ತಿದೆ ಭರ್ಜರಿ ಫೀಚರ್!
ವಿವೋ ಎಕ್ಸ್ 70 ಪ್ರೊ + ಅನ್ನು 79,990 ರೂ.ಗಳಿಗೆ ಖರೀದಿಸಬಹುದು. ಎನಿಗ್ಮಾ ಬ್ಲಾಕ್ ಒಂದೇ ಬಣ್ಣದಲ್ಲಿ ಲಭ್ಯವಿರುತ್ತದೆ. Vivo X70 Pro ಮತ್ತು Vivo X70 Pro + ನ ಪ್ರಿ-ಆರ್ಡರ್‌ಗಳು ಆರಂಭವಾಗಿದ್ದು, ಅವುಗಳ ಮಾರಾಟವು ಅಕ್ಟೋಬರ್ 12 ರಿಂದ ಆರಂಭವಾಗಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.