ಹೊಸ ಬಣ್ಣದಲ್ಲಿ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡುತ್ತಿದೆ ವಿವೋ : ಜನರಿಂದ ಭಾರೀ ಮೆಚ್ಚುಗೆ

ವಿವೋ ಎಕ್ಸ್ 70 ಪ್ರೊ ಸ್ಮಾರ್ಟ್ಫೋನ್ ಮೂರು ಬಣ್ಣಗಳಲ್ಲಿ ಬಿಡುಗಡೆಯಾಗಲಿದೆ. ಕಪ್ಪು, ನೀಲಿ ಮತ್ತು ಕಿತ್ತಳೆ. ಕಪ್ಪು ಬಣ್ಣದ ರೂಪಾಂತರವು ಗ್ಲಾಸ್ ಬ್ಯಾಕ್ ಅನ್ನು ಹೊಂದಿದ್ದರೆ, ನೀಲಿ ಬಣ್ಣ ಮತ್ತು ಕಿತ್ತಳೆ ಬಣ್ಣದ ಮಾದರಿಗಳು ಹಿಂಭಾಗದ ಫಲಕದಲ್ಲಿ ಲೆದರ್ ಫಿನಿಶಿಂಗ್ ಅನ್ನು ಹೊಂದಿದೆ. 

Written by - Ranjitha R K | Last Updated : Sep 13, 2021, 01:33 PM IST
  • ವಿವೋ ಎಕ್ಸ್ 70 ಸೀರೀಜ್ ಬಿಡುಗಡೆ
  • ವಿವೋ ಎಕ್ಸ್ 70 ಪ್ರೊ + ಹೊಸ ಬಣ್ಣದಲ್ಲಿ ಬಿಡುಗಡೆ
  • ತಿಂಗಳಾಂತ್ಯದಲ್ಲಿ ಈ ಫೋನ್ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ
ಹೊಸ ಬಣ್ಣದಲ್ಲಿ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡುತ್ತಿದೆ ವಿವೋ :  ಜನರಿಂದ ಭಾರೀ ಮೆಚ್ಚುಗೆ  title=
ವಿವೋ ಎಕ್ಸ್ 70 ಸೀರೀಜ್ ಬಿಡುಗಡೆ (photo zee news)

ನವದೆಹಲಿ : ಕೆಲವು ದಿನಗಳ ಹಿಂದೆ, ವಿವೋ ತನ್ನ ಹೊಸ ಎಕ್ಸ್-ಸರಣಿಯ ಸ್ಮಾರ್ಟ್‌ಫೋನ್- Vivo X70ಯನ್ನು ಘೋಷಿಸಿತ್ತು. ಈ ಸರಣಿಯು ಮೂರು ಡಿವೈಸ್ ಗಳನ್ನು ಒಳಗೊಂಡಿದೆ . ಇವುಗಳಲ್ಲಿ - X70, X70 Pro, ಮತ್ತು X70 Pro+  ಸೇರಿವೆ. ಇನ್ನು ಹೆಸರೇ ಸೂಚಿಸುವಂತೆ, ವಿವೋ X70 Pro+ ಸರಣಿಯಲ್ಲಿ ಅಗ್ರ ಮಾದರಿಯಾಗಿದೆ. ವಿವೋ ಪ್ರಾಡಕ್ಟ್  ಮ್ಯಾನೇಜರ್ ಈಗ ವೀವೋದಲ್ಲಿನ ತನ್ನ ಖಾತೆಯ ಮೂಲಕ ವಿವೋ ಎಕ್ಸ್ 70 ಪ್ರೊ+ ಸ್ಮಾರ್ಟ್ ಫೋನಿನ ನೀಲಿ ಬಣ್ಣವು ಈ ತಿಂಗಳ ಅಂತ್ಯದ ವೇಳೆಗೆ ಅಂದರೆ ಸೆಪ್ಟೆಂಬರ್ 2021 ರೊಳಗೆ ಮಾರುಕಟ್ಟೆಯಲ್ಲಿ  ಲಭ್ಯವಿರಲಿದೆ ಎನ್ನುವುದನ್ನು ದೃಢಪಡಿಸಿದ್ದಾರೆ. 

ವಿವೋ ಎಕ್ಸ್ 70 ಪ್ರೊ (Vivo X70 pro) ಸ್ಮಾರ್ಟ್ಫೋನ್ ಮೂರು ಬಣ್ಣಗಳಲ್ಲಿ ಬಿಡುಗಡೆಯಾಗಲಿದೆ. ಕಪ್ಪು, ನೀಲಿ ಮತ್ತು ಕಿತ್ತಳೆ. ಕಪ್ಪು ಬಣ್ಣದ ರೂಪಾಂತರವು ಗ್ಲಾಸ್ ಬ್ಯಾಕ್ ಅನ್ನು ಹೊಂದಿದ್ದರೆ, ನೀಲಿ ಬಣ್ಣ ಮತ್ತು ಕಿತ್ತಳೆ ಬಣ್ಣದ ಮಾದರಿಗಳು ಹಿಂಭಾಗದ ಫಲಕದಲ್ಲಿ ಲೆದರ್ ಫಿನಿಶಿಂಗ್ ಅನ್ನು ಹೊಂದಿದೆ. 

ಇದನ್ನೂ ಓದಿ : WhatsApp Tricks:ಟೈಪ್ ಮಾಡದೇ ಇನ್ನು ನೀವು ಸಂದೇಶಗಳನ್ನು ಕಳುಹಿಸುವುದು ಹೇಗೆ ಗೊತ್ತಾ?

ವಿವೋ ಎಕ್ಸ್ 70 ಪ್ರೊ+ ನ ವಿಶೇಷತೆಗಳು :
Vivo X70 Pro+ 6.78-inch 2K ಡಿಸ್ಪ್ಲೇ ಯೊಂದಿಗೆ 3200 x 1440 ಪಿಕ್ಸೆಲ್‌ಗಳ ಸ್ಕ್ರೀನ್ ರೆಸಲ್ಯೂಶನ್ ಹೊಂದಿದೆ. 10-ಬಿಟ್ ಪ್ಯಾನಲ್ ಸ್ಯಾಮ್‌ಸಂಗ್‌ನ E5 AMOLED ಮತ್ತು 120Hz ವೇರಿಯಬಲ್ ರಿಫ್ರೆಶ್ ರೇಟ್, 1500 ನಿಟ್‌ಗಳ ಗರಿಷ್ಠ ಬ್ರೈಟ್ ನೆಸ್ , 300 Hz ಟಚ್ ಸೈಪ್ಲಿಂಗ್ ರೇಟ್, 1000Hz ಗರಿಷ್ಠ) ಅನ್ನು ಹೊಂದಿದೆ. ಡಿಸ್ಪ್ಲೇ ಯು, ಡಿಸ್ಪ್ಲೇಮೇಟ್ ನಿಂದ A+ ಪ್ರಮಾಣೀಕರಣ ರೇಟಿಂಗ್ ಅನ್ನು ಪಡೆದಿದೆ.

ವಿವೋ ಎಕ್ಸ್ 70 ಪ್ರೊ+ ಕ್ಯಾಮೆರಾ :
ಡಿವೈಸ್,  ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 888+ ಪ್ರೊಸೆಸರ್‌ನಿಂದ 5GB RAM ಮತ್ತು UFS 3.1 ಸ್ಟೋರೇಜ್ ಹೊಂದಿದೆ.  12GB RAM ಮತ್ತು 512GB ಇಂಟರ್ನಲ್ ಸ್ಟೋರೇಜ್ ಅನ್ನು ಒಳಗೊಂಡಿದೆ. ಕ್ಯಾಮರಾ ವಿಭಾಗದಲ್ಲಿ, ಹಿಂಭಾಗದಲ್ಲಿ ಕ್ವಾಡ್-ಕ್ಯಾಮೆರಾ ಸೆಟಪ್ ಇದೆ, ಇದರಲ್ಲಿ 48MP ಮೈಕ್ರೋ-ಪ್ಯಾನ್-ಟಿಲ್ಟ್ ಅಲ್ಟ್ರಾವೈಡ್ ಆಂಗಲ್ ಕ್ಯಾಮೆರಾ 360 ° ಹಾರಿಜೆಂಟಲ್ ಲೆವೆಲಿಂಗ್ ಸ್ಟೆಬಿಲೈಸೇಶನ್ ಇದೆ. ರೆಕಾರ್ಡಿಂಗ್ ಮಾಡುವಾಗ ಫೋನ್ ಅನ್ನು ತಿರುಗಿಸಿದರೂ  ಸ್ಥಿರ ವೀಡಿಯೊ ಪಡೆಯುವುದು ಇದರಿಂದ ಸಾಧ್ಯವಾಗುತ್ತದೆ. 

ಇದನ್ನೂ ಓದಿ : Nokia Smartphone: Telecom ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಬರಲಿದೆ Nokia ಕಂಪನಿಯ ಎಲ್ಲಕ್ಕಿಂತ ‘Secure’ 5G Smartphone

50MP ಸ್ಯಾಮ್‌ಸಂಗ್ GN1 ಮುಖ್ಯ ಕ್ಯಾಮೆರಾ, 12MP Sony IMX663 ಪೊಟ್ರೆಟ್ ಕ್ಯಾಮೆರಾ ಮತ್ತು 8MP ಟೆಲಿಸ್ಕೋಪ್ ಕ್ಯಾಮೆರಾ 5x ಆಪ್ಟಿಕಲ್ ಜೂಮ್ ಮತ್ತು 60x ಸೂಪರ್-ಜೂಮ್ ಅನ್ನು ಹೊಂದಿದೆ. ವಿವೋ ವಿ 1 ಐಎಸ್‌ಪಿ ಚಿಪ್‌ನೊಂದಿಗೆ ಬಂದ ಮೊದಲ ಸ್ಮಾರ್ಟ್‌ಫೋನ್ ಇದಾಗಿದೆ.

ವಿವೋ X70 ಪ್ರೊ+ ಬೆಲೆ  :
ಆಂಡ್ರಾಯ್ಡ್ 11 ಆಪರೇಟಿಂಗ್ ಸಿಸ್ಟಮ್ ಆಧಾರಿತ ಒರಿಜಿನೋಸ್ ನಲ್ಲಿ ಸ್ಮಾರ್ಟ್ ಫೋನ್ (Smartphone) ರನ್ ಆಗುತ್ತದೆ. ಇದು. ಇದು ಮೂರು ರೂಪಾಂತರಗಳಲ್ಲಿ ಬರುತ್ತದೆ - 8GB RAM 256GB ಇಂಟರ್ನಲ್ ಸ್ಟೋರೇಜ್ 12GB RAM 256GB ಸಂಗ್ರಹಣೆ ಮತ್ತು 12GB RAM 512GB ಇಂಟರ್ನಲ್ ಸ್ಟೋರೇಜ್, ಬೆಲೆ ರೂ. 62,751 , ರೂ. 68,423 ಮತ್ತು ರೂ. 79,839 ಆಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News