ವಿವೋ ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಕಡಿತ: ವಿವೋ ಕಂಪನಿಯು ಭಾರತದಲ್ಲಿ ತನ್ನ ಎರಡು ಜನಪ್ರಿಯ ಸ್ಮಾರ್ಟ್‌ಫೋನ್‌ಗಳ ಬೆಲೆಯನ್ನು ಕಡಿಮೆ ಮಾಡಿದೆ. ವಿವೋ ವೈ33ಎಸ್  ಮತ್ತು ವಿವೋ ವೈ33ಟಿ  ಈ ಎರಡೂ  ಸ್ಮಾರ್ಟ್‌ಫೋನ್‌ಗಳ  ಬೆಲೆಯಲ್ಲಿ ಕಂಪನಿಯು  ಕಡಿತ ಘೋಷಿಸಿದೆ. ವಿವೋದ ಈ ಎರಡೂ ಮಾದರಿಗಳು ದೊಡ್ಡ ಸ್ಕ್ರೀನ್, ಸ್ಟ್ರಾಂಗ್ ಬ್ಯಾಟರಿಗಳು ಮತ್ತು 50 ಮೆಗಾ ಪಿಕ್ಸಲ್ ಕ್ಯಾಮರಾದೊಂದಿಗೆ ಗ್ರಾಹಕರಿಗೆ ಲಭ್ಯವಾಗಲಿದೆ. ಬೆಲೆ ಇಳಿಕೆ ಬಳಿಕ ವಿವೋ ವೈ33ಎಸ್  ಮತ್ತು ವಿವೋ ವೈ33ಟಿ  ಸ್ಮಾರ್ಟ್‌ಫೋನ್‌ಗಳ  ಹೊಸ ಬೆಲೆ ಹಾಗೂ ವೈಶಿಷ್ಟ್ಯಗಳ ಬಗ್ಗೆ ಇಲ್ಲಿದೆ ಮಾಹಿತಿ...


COMMERCIAL BREAK
SCROLL TO CONTINUE READING

ವಿವೋ ವೈ33ಎಸ್  ಮತ್ತು ವಿವೋ ವೈ33ಟಿ  ಸ್ಮಾರ್ಟ್‌ಫೋನ್‌ಗಳ  ಬೆಲೆ:
ವಿವೋ ವೈ33ಎಸ್  ಮತ್ತು ವಿವೋ ವೈ33ಟಿ  ಎರಡೂ ಸ್ಮಾರ್ಟ್‌ಫೋನ್‌ಗಳು ಈಗ ಭಾರತದಲ್ಲಿ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ. ಕಂಪನಿಯು ವಿವೋ ವೈ33ಟಿ  ಸ್ಮಾರ್ಟ್‌ಫೋನ್‌ ಅನ್ನು  ರೂ.18,990 ಕ್ಕೆ ಬಿಡುಗಡೆ ಮಾಡಿತ್ತು. ಇದೀಗ ಇದರ ಬೆಲೆಯಲ್ಲಿ ಸಾವಿರ ರೂ. ಇಳಿಕೆ ಮಾಡಲಾಗಿದ್ದು ಇದರ ಬೆಲೆ  17,990 ರೂ. ಆಗಿದೆ. ಆದರೆ, ವಿವೋ ವೈ33ಎಸ್ ಅನ್ನು ರೂ.  17,990 ಕ್ಕೆ ಲಾಂಚ್ ಮಾಡಲಾಗಿತ್ತು. ಇದೀಗ ಇದರ ಬೆಲೆ ಏರಿಕೆಯಾಗಿದ್ದು 18,990 ಆಗಲಿದೆ. 


ಇದನ್ನೂ ಓದಿ- ಜಿಯೋ ಫೈಬರ್ ಹೊಸ ಮನರಂಜನಾ ಪ್ಲಾನ್ಸ್: ಕೇವಲ 100 ರೂ.ಗಳಲ್ಲಿ 6 ಒಟಿಟಿ ಅಪ್ಲಿಕೇಶನ್‌ಗಳನ್ನು ಆನಂದಿಸಿ


ವಿವೋ ವೈ33ಟಿ  ವಿಶೇಷಣಗಳು:
ವಿವೋ ವೈ33ಟಿ  ಸ್ಮಾರ್ಟ್‌ಫೋನ್‌ 90Hz ರಿಫ್ರೆಶ್ ರೇಟ್ ಮತ್ತು 2408×1080 ಪಿಕ್ಸೆಲ್ ರೆಸಲ್ಯೂಶನ್ ಜೊತೆಗೆ 6.58-ಇಂಚಿನ FHD+ ಡಿಸ್ಪ್ಲೇಯನ್ನು ಬೆಂಬಲಿಸುತ್ತದೆ. ಇದು Qualcomm Snapdragon 680 SoC ಅನ್ನು ಪ್ಯಾಕ್ ಮಾಡುತ್ತದೆ, 8ಜಿಬಿ ರಾಮ್ ಮತ್ತು 128ಜಿಬಿ ಆಂತರಿಕ ಸಂಗ್ರಹಣೆಯೊಂದಿಗೆ ಜೋಡಿಸಲಾಗಿದೆ. ವೈ33ಟಿ ಆಂಡ್ರಾಯ್ಡ್ 12 ಔಟ್-ಆಫ್-ಬಾಕ್ಸ್ ಅನ್ನು ರನ್ ಮಾಡುತ್ತದೆ. ಸಾಧನವು ಹಿಂಭಾಗದಲ್ಲಿ 50-ಮೆಗಾಪಿಕ್ಸೆಲ್ ಟ್ರಿಪಲ್ ಕ್ಯಾಮೆರಾ ಸಂವೇದಕವನ್ನು ಪ್ಯಾಕ್ ಮಾಡುತ್ತದೆ, ಇದರ ಮುಂಭಾಗದಲ್ಲಿ 16-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಒದಗಿಸಲಾಗಿದೆ.


ಇದನ್ನೂ ಓದಿ- ಸ್ಮಾರ್ಟ್‌ಫೋನ್ ಚಾರ್ಜಿಂಗ್ ಸಲಹೆಗಳು: ಫೋನ್ ಚಿಟಿಕೆಯಲ್ಲಿ ಫುಲ್ ಚಾರ್ಜ್ ಆಗಲು ಇಲ್ಲಿದೆ ಸಲಹೆ


ವಿವೋ ವೈ33ಎಸ್  ವಿಶೇಷಣಗಳು:
ವಿವೋ ವೈ33ಎಸ್  ಇದೇ ರೀತಿಯ 6.58-ಇಂಚಿನ FHD+ LCD ಡಿಸ್ಪ್ಲೇ ಜೊತೆಗೆ 2,400×1,080 ಪಿಕ್ಸೆಲ್‌ಗಳ ರೆಸಲ್ಯೂಶನ್ ಅನ್ನು ಬೆಂಬಲಿಸುತ್ತದೆ. ಇದು MediaTek Helio G80 SoC ಜೊತೆಗೆ 8ಜಿಬಿ ರಾಮ್ ಮತ್ತು 128ಜಿಬಿ ಆಂತರಿಕ ಸಂಗ್ರಹಣೆಯೊಂದಿಗೆ ಬರುತ್ತದೆ.  ವೈ33ಎಸ್ ಆಂಡ್ರಾಯ್ಡ್ 11 ನೊಂದಿಗೆ ಬರುತ್ತದೆ. ಹಿಂಭಾಗದಲ್ಲಿ, ಇದು 50-ಮೆಗಾಪಿಕ್ಸೆಲ್ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ, ಆದರೆ ಮುಂಭಾಗವು 16-ಮೆಗಾಪಿಕ್ಸೆಲ್ ಸಂವೇದಕವನ್ನು ಹೊಂದಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.