Vivo Y02s : ಚೀನೀ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ವಿವೋ ಮತ್ತೊಮ್ಮೆ ತನ್ನ ಬಳಕೆದಾರರಿಗೆ ಅಗ್ಗದ ದರದಲ್ಲಿ ಸೊಗಸಾದ ಸ್ಮಾರ್ಟ್‌ಫೋನ್ ಪರಿಚಯಿಸಲಿದೆ. ಈ ಸ್ಮಾರ್ಟ್‌ಫೋನ್ ಕಂಪನಿಯು ಮುಂಬರುವ ದಿನಗಳಲ್ಲಿ ಹೊಸ ಸ್ಮಾರ್ಟ್‌ಫೋನ್ Vivo Y02s ಅನ್ನು ಬಿಡುಗಡೆ ಮಾಡಲಿದೆ. ಇದು ಬಜೆಟ್ ಸ್ಮಾರ್ಟ್‌ಫೋನ್ ಆಗಿದ್ದು ಹತ್ತು ಸಾವಿರ ರೂ.ಗಳಿಗಿಂತ ಕಡಿಮೆ ಬೆಲೆಯಲ್ಲಿ ದೊರೆಯಲಿದೆ ಎಂದು ಹೇಳಲಾಗುತ್ತಿದೆ. 


COMMERCIAL BREAK
SCROLL TO CONTINUE READING

ನೋಡಲು ಸಾಕಷ್ಟು ಸ್ಟೈಲಿಶ್ ಆಗಿರುವ ಈ ಸ್ಮಾರ್ಟ್‌ಫೋನ್ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಈ ಫೋನ್ ಯಾವಾಗ ಬಿಡುಗಡೆಯಾಗುತ್ತಿದೆ? ಇದರ ವಿಶೇಷಣಗಳೇನು? ಇದರ ಬೆಲೆ ಎಷ್ಟು ಎಂದು ತಿಳಿಯೋಣ...


ವಿವೋ ವೈ02ಎಸ್ ಬಿಡುಗಡೆ ದಿನಾಂಕ: 
ಮುಂಬರುವ ಜುಲೈ 28 ರಂದು ಈ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ದಿನಾಂಕದಂದು, ಈ ಫೋನ್ ಜಾಗತಿಕವಾಗಿ ಬಿಡುಗಡೆಯಾಗಲಿದೆ, ಅಂದರೆ, ಭಾರತದಲ್ಲಿಯೂ ಇದನ್ನು ಮಾರಾಟ ಮಾಡುವ ಸಾಧ್ಯತೆಗಳಿವೆ ಎಂದು ವರದಿ ಆಗಿದೆ. 


ಇದನ್ನೂ ಓದಿ- ಮೊಬೈಲ್‌ನಿಂದ ಮೆದುಳಿಗೆ ಬರಬಹುದು ಮಾರಣಾಂತಿಕ ಕಾಯಿಲೆ: ಈ ವಿಷಯ ನೆನಪಿಟ್ಟುಕೊಳ್ಳಿ


Vivo Y02s ಬೆಲೆ :
Vivo Y02s ಸ್ಮಾರ್ಟ್‌ಫೋನ್‌ನ ದೊಡ್ಡ ವೈಶಿಷ್ಟ್ಯವೆಂದರೆ ಇದು ಎಲ್ಲರಿಗೂ ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುವ ಸ್ಮಾರ್ಟ್‌ಫೋನ್ ಆಗಿದೆ. . 3GB RAM ಮತ್ತು 32GB ಸ್ಟೋರೇಜ್ ಹೊಂದಿರುವ ಈ ಸ್ಮಾರ್ಟ್‌ಫೋನ್‌ನ ಸಿಂಗಲ್ ವೆರಿಯಂಟ್ ಅನ್ನು $113 (ಸುಮಾರು 9 ಸಾವಿರ ರೂಪಾಯಿ) ಬೆಲೆಯಲ್ಲಿ ಖರೀದಿಸಬಹುದು ಎಂದು ಹೇಳಲಾಗುತ್ತಿದೆ.


Vivo Y02s ವಿಶೇಷಣಗಳು :
ಮಾಧ್ಯಮ ವರದಿಗಳು ಮತ್ತು ಸೋರಿಕೆಗಳ ಪ್ರಕಾರ, ನೀವು Vivo Y02s ನಲ್ಲಿ 6.51-ಇಂಚಿನ HD + ರೆಸಲ್ಯೂಶನ್ ಡಿಸ್ಪ್ಲೇ ಮತ್ತು 60Hz ರಿಫ್ರೆಶ್ ದರವನ್ನು ಪಡೆಯಬಹುದು. ಈ ಫೋನ್ Mediatek Helio P35 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಬಲ್ಲದು ಮತ್ತು ಇದರಲ್ಲಿ ನೀವು LED ಫ್ಲಾಷ್ ಜೊತೆಗೆ 8MP ಪ್ರಾಥಮಿಕ ಕ್ಯಾಮೆರಾವನ್ನು ಒದಗಿಸಲಾಗಿದೆ ಎಂದು ತಿಳಿದುಬಂದಿದೆ. 


ಇದನ್ನೂ ಓದಿ- ಬಳಕೆದಾರರ ದೊಡ್ಡ ಸಮಸ್ಯೆಗೆ ಪರಿಹಾರ ನೀಡಿದ ವಾಟ್ಸಾಪ್


Vivo Y02s 5MP ಫ್ರಂಟ್ ಕ್ಯಾಮೆರಾದೊಂದಿಗೆ ಬರಬಹುದು ಮತ್ತು  10W ಚಾರ್ಜಿಂಗ್ ಬೆಂಬಲ ಮತ್ತು 5W ರಿವರ್ಸ್ ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿಯನ್ನು ಇದರಲ್ಲಿ ಒದಗಿಸುವ ಸಾಧ್ಯತೆ ಇದೆ. ಆದಾಗ್ಯೂ,  ವಿವೋ ಕಂಪನಿಯು Vivo Y02s ನ ಸ್ಮಾರ್ಟ್‌ಫೋನ್ ಕುರಿತು ಯಾವುದೇ ಅಧಿಕೃತ ಮಾಹಿತಿ ಬಿಡುಗಡೆ ಮಾಡಿಲ್ಲ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.