ಅಗ್ಗದ ಬೆಲೆಯಲ್ಲಿ ಬೊಂಬಾಟ್ ಯೋಜನೆ ಪರಿಚಯಿಸಿದ ಜಿಯೋ

ಜಿಯೋ ತನ್ನ ಗ್ರಾಹಕರಿಗಾಗಿ ಅಗ್ಗದ ದರದಲ್ಲಿ ಭರ್ಜರಿ ಪ್ಲಾನ್ ಪರಿಚಯಿಸಿದ್ದು ಇದರಲ್ಲಿ ಪ್ರತಿದಿನ 2.5GB ಡೇಟಾ ಜೊತೆಗೆ ಹಲವು ಪ್ರಯೋಜನಗಳು ಲಭ್ಯವಿದೆ. ಈ ಯೋಜನೆಯ ಬಗ್ಗೆ ತಿಳಿಯೋಣ...

Written by - Yashaswini V | Last Updated : Jul 19, 2022, 01:17 PM IST
  • ಜಿಯೋ ಅನೇಕ ದೀರ್ಘಾವಧಿಯ ಯೋಜನೆಗಳನ್ನು ಹೊಂದಿದೆ.
  • ಈ ಯೋಜನೆಯಲ್ಲಿ 365 ದಿನಗಳ ವ್ಯಾಲಿಡಿಟಿ ಲಭ್ಯವಿದೆ.
  • ಇದಲ್ಲದೆ, 2.5ಜಿಬಿ ಡೇಟಾ ಪ್ರತಿದಿನ ಲಭ್ಯವಿದೆ ಮತ್ತು ಡಿಸ್ನಿ + ಹಾಟ್‌ಸ್ಟಾರ್ ಪ್ರವೇಶವೂ ಉಚಿತವಾಗಿದೆ.
ಅಗ್ಗದ ಬೆಲೆಯಲ್ಲಿ ಬೊಂಬಾಟ್ ಯೋಜನೆ ಪರಿಚಯಿಸಿದ ಜಿಯೋ title=
Jio best prepaid plans

ಜಿಯೋ ಪ್ರಿಪೇಯ್ಡ್ ಪ್ಲಾನ್ಸ್: ಟೆಲಿಕಾಂ ಜಗತ್ತಿನಲ್ಲಿ ಸಂಚಲನ ಸೃಷ್ಟಿಸಿದ್ದ ರಿಲಯನ್ಸ್ ಜಿಯೋ ಪ್ರಿಪೇಯ್ಡ್ ಯೋಜನೆಗಳು ಸಾಕಷ್ಟು ಜನಪ್ರಿಯವಾಗಿವೆ. ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಪ್ರಯೋಜನಗಳನ್ನು ಒದಗಿಸುವಲ್ಲಿ ಹೆಸರುವಾಸಿ ಆಗಿರುವ ಜಿಯೋ  ಅನೇಕ ಅಗ್ಗದ ಮತ್ತು ಕನಿಷ್ಠ ವ್ಯಾಲಿಡಿಟಿ ಯೋಜನೆಗಳನ್ನು ಹೊಂದಿದೆ. 

ವಾಸ್ತವವಾಗಿ, ರಿಲಯನ್ಸ್ ಜಿಯೋ 20 ದಿನ ಅಥವಾ ಒಂದು ವರ್ಷದ ಅವಧಿಯ ಹಲವು ಯೋಜನೆಗಳನ್ನು ಹೊಂದಿದೆ. ಆದರೆ, ಅವುಗಳಲ್ಲಿ ತಿಂಗಳ ಯೋಜನೆಗಳು ಹೆಚ್ಚು ಜನಪ್ರಿಯವಾಗಿವೆ. ಇಂದು ನಾವು ನಿಮಗೆ ಅಂತಹದ್ದೇ ಒಂದು ಯೋಜನೆಯ ಬಗ್ಗೆ ಮಾಹಿತಿ ನೀಡಲಿದ್ದೇವೆ. ಈ ಯೋಜನೆಯು ಕಡಿಮೆ ವೆಚ್ಚದಲ್ಲಿ ನಿತ್ಯ 2.5ಜಿಬಿ ಡೇಟಾ ಸೌಲಭ್ಯದ ಜೊತೆಗೆ ಇನ್ನೂ ಹಲವು ಪ್ರಯೋಜನಗಳನ್ನು ಒದಗಿಸುತ್ತದೆ. ಅದೇ ಜಿಯೋದ 2,999 ರೂ. ಯೋಜನೆ. 

ಇದನ್ನೂ ಓದಿ- ಶೀಘ್ರದಲ್ಲೇ 10,000ರೂ.ಗಳಲ್ಲಿ 5G ಸ್ಮಾರ್ಟ್‌ಫೋನ್ ಪರಿಚಯಿಸಲಿದೆ ಸ್ಯಾಮ್‌ಸಂಗ್

ಜಿಯೋದ  2,999 ರೂ. ಯೋಜನೆಯ ಪ್ರಯೋಜನಗಳು :
ಜಿಯೋ ಅನೇಕ ದೀರ್ಘಾವಧಿಯ ಯೋಜನೆಗಳನ್ನು ಹೊಂದಿದೆ. ಅವುಗಳಲ್ಲಿ ಜಿಯೋದ  2,999 ರೂ. ಯೋಜನೆಯೂ ಒಂದು. ಈ ಯೋಜನೆಯಲ್ಲಿ 365 ದಿನಗಳ ವ್ಯಾಲಿಡಿಟಿ ಲಭ್ಯವಿದೆ. 2.5ಜಿಬಿ ಡೇಟಾ ಪ್ರತಿದಿನ ಲಭ್ಯವಿದೆ ಮತ್ತು ಡಿಸ್ನಿ + ಹಾಟ್‌ಸ್ಟಾರ್ ಪ್ರವೇಶವೂ ಉಚಿತವಾಗಿದೆ. ಈ ಯೋಜನೆಯಲ್ಲಿ ಅನಿಯಮಿತ ಕರೆ ಮತ್ತು 100 ಎಸ್ಎಂಎಸ್ ಲಭ್ಯವಿದೆ. 12 ತಿಂಗಳ ಪ್ರಕಾರ ಒಂದು ತಿಂಗಳ ವೆಚ್ಚ 230 ರೂ.  ಅಂದರೆ ಒಂದು ವರ್ಷದ ಈ ಯೋಜನೆಯು ಇತರ ಯೋಜನೆಗಳಿಗಿಂತ ಹೆಚ್ಚು ಲಾಭದಾಯಕ ಎಂದು ಸಾಬೀತುಪಡಿಸುತ್ತದೆ. 

ಇದನ್ನೂ ಓದಿ- ಕೇವಲ 49 ರೂಪಾಯಿಯ ರಿಚಾರ್ಜ್ ಪ್ಲಾನ್ ಪರಿಚಯಿಸಿದ ಬಿಎಸ್‌ಎನ್‌ಎಲ್‌

ಇದಲ್ಲದೆ ಈ ಯೋಜನೆಯಲ್ಲಿ ಉಚಿತ ಡಿಸ್ನಿ + ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯು ಜಿಯೋದಿಂದ ಲಭ್ಯವಿರುತ್ತದೆ, ಇದು ವರ್ಷಕ್ಕೆ 499 ರೂ. ಇದಲ್ಲದೆ, ಬಳಕೆದಾರರು JioTV, JioCinema, JioSecurity ಮತ್ತು JioCloud ಪ್ರವೇಶವನ್ನು ಸಹ ಪಡೆಯುತ್ತಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News