5,000mAh ಬ್ಯಾಟರಿ ಸಾಮರ್ಥ್ಯದ Vivo Y12G ಸ್ಮಾರ್ಟ್ಫೋನ್ ಬಿಡುಗಡೆ; ಇದರ ಬೆಲೆ, ವಿಶೇಷತೆ ತಿಳಿಯಿರಿ
Vivo Y12G ಸ್ಮಾರ್ಟ್ಫೋನ್ ಶಕ್ತಿಯುತ ಬ್ಯಾಟರಿಯನ್ನು ಹೊಂದಿದೆ ಮತ್ತು ಫೋಟೋಗ್ರಫಿಗಾಗಿ ಇದು ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ.
ನವದೆಹಲಿ: Vivo Y12G ಸ್ಮಾರ್ಟ್‌ಫೋನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಕಂಪನಿಯ ಬಜೆಟ್ ಶ್ರೇಣಿಯ ಸ್ಮಾರ್ಟ್ ಫೋನ್ ಆಗಿದ್ದು ಇದರಲ್ಲಿ ಹಲವು ವಿಶೇಷತೆಗಳನ್ನು ನೀಡಲಾಗಿದೆ. ಸ್ಮಾರ್ಟ್‌ಫೋನ್‌ನಲ್ಲಿ, ಬಳಕೆದಾರರಿಗೆ 5,000mAh ನ ಬಲವಾದ ಬ್ಯಾಟರಿಯನ್ನು ನೀಡಲಾಗಿದೆ. ಇದು ದೀರ್ಘಾವಧಿಯ ಬ್ಯಾಕಪ್ ಅನ್ನು ನೀಡುತ್ತದೆ. ಮತ್ತೊಂದೆಡೆ, ಫೋಟೋಗ್ರಫಿಗಾಗಿ, ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಮತ್ತು ಎರಡು ಕಲರ್ ವೆರಿಯಂಟ್‌ಗಳನ್ನು ಇದರಲ್ಲಿ ನೀಡಲಾಗಿದೆ. ಈ ಸ್ಮಾರ್ಟ್‌ಫೋನ್‌ನ ಬೆಲೆ ಮತ್ತು ವೈಶಿಷ್ಟ್ಯಗಳ ಬಗ್ಗೆ ವಿವರವಾಗಿ ತಿಳಿಯಿರಿ...
Vivo Y12G: ಬೆಲೆ ಮತ್ತು ಲಭ್ಯತೆ
ವಿವೋ ವೈ 12 ಜಿ (Vivo Y12G) ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಒಂದೇ ಬಣ್ಣದ ರೂಪಾಂತರದಲ್ಲಿ ಬಿಡುಗಡೆ ಮಾಡಲಾಗಿದೆ. ಇದು 3GB RAM ನೊಂದಿಗೆ 32GB ಇಂಟರ್ನಲ್ ಸ್ಟೋರೇಜ್ ಹೊಂದಿದೆ ಮತ್ತು ಇದರ ಬೆಲೆ 10,999 ರೂ. ಈ ಸ್ಮಾರ್ಟ್ ಫೋನ್ ಅನ್ನು ಕಂಪನಿಯ ಅಧಿಕೃತ ವೆಬ್ ಸೈಟ್ ನಲ್ಲಿ ಮಾರಾಟಕ್ಕೆ ಪಟ್ಟಿ ಮಾಡಲಾಗಿದೆ. ಇದನ್ನು ಫ್ಯಾಂಟಮ್ ಬ್ಲ್ಯಾಕ್ ಮತ್ತು ಗ್ಲೇಸಿಯರ್ ಬ್ಲೂ ಬಣ್ಣಗಳಲ್ಲಿ ಖರೀದಿಸಬಹುದು. ಸ್ಮಾರ್ಟ್‌ಫೋನ್‌ನೊಂದಿಗೆ ನೋ ಕಾಸ್ಟ್ ಇಎಂಐ ಆಯ್ಕೆ ಮತ್ತು ಎಕ್ಸ್‌ಚೇಂಜ್ ಆಫರ್ ಅನ್ನು ಒದಗಿಸಲಾಗುತ್ತಿದೆ.
ಇದನ್ನೂ ಓದಿ- Redmi Note 10: ರೆಡ್ಮಿಯ ಈ ಸ್ಮಾರ್ಟ್ಫೋನ್ ನೀರಿನಲ್ಲಿಯೂ ಹಾಳಾಗುವುದಿಲ್ಲವಂತೆ!
Vivo Y12G: ವಿಶೇಷಣಗಳು ಮತ್ತು ವೈಶಿಷ್ಟ್ಯಗಳು
ವಿವೋ ವೈ 12 ಜಿ ಸ್ಮಾರ್ಟ್‌ಫೋನ್ (Vivo Y12G Smartphone) 6.51 ಇಂಚಿನ ಡ್ಯೂ-ಡ್ರಾಪ್ ನಾಚ್ ಡಿಸ್‌ಪ್ಲೇ ಜೊತೆಗೆ ಎಚ್‌ಡಿ + ರೆಸಲ್ಯೂಶನ್ ಹೊಂದಿದೆ. ಇದರ ಸ್ಕ್ರೀನ್ ರೆಸಲ್ಯೂಶನ್ 720 x 1600 ಪಿಕ್ಸೆಲ್‌ಗಳು. ಆಂಡ್ರಾಯ್ಡ್ 11 ಓಎಸ್ ಆಧರಿಸಿ, ಈ ಸ್ಮಾರ್ಟ್ ಫೋನ್ ಅನ್ನು ಕ್ವಾಲ್ಕಾಮ್ ಸ್ನಾಪ್ ಡ್ರಾಗನ್ (Qualcomm Snapdragon) 439 ಪ್ರೊಸೆಸರ್ ನಲ್ಲಿ ಪರಿಚಯಿಸಲಾಗಿದೆ. ಇದು 3GB RAM ನೊಂದಿಗೆ 32GB ಇಂಟರ್ನಲ್ ಸ್ಟೋರೇಜ್ ಹೊಂದಿದೆ. ವಿಸ್ತರಿಸಬಹುದಾದ ಸಂಗ್ರಹಣೆಗಾಗಿ, ಮೈಕ್ರೊ ಎಸ್ಡಿ ಕಾರ್ಡ್ ಬೆಂಬಲವನ್ನು ಇದರಲ್ಲಿ ನೀಡಲಾಗಿದೆ. ಇದರ ಸಹಾಯದಿಂದ 256 ಜಿಬಿ ವರೆಗೆ ಡೇಟಾವನ್ನು ವಿಸ್ತರಿಸಬಹುದು.
ಇದನ್ನೂ ಓದಿ- Amazon Great Freedom Festival ಸೇಲ್‌ನಲ್ಲಿ ಈ ಸ್ಮಾರ್ಟ್‌ಫೋನ್‌ಗಳು ಭಾರೀ ರಿಯಾಯಿತಿಯಲ್ಲಿ ಲಭ್ಯ
ವಿವೋ ವೈ 12 ಜಿ ಸ್ಮಾರ್ಟ್‌ಫೋನ್‌ನಲ್ಲಿ ಫೋಟೋಗ್ರಫಿಗಾಗಿ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಇದಕ್ಕೆ ಡ್ಯುಯಲ್ ಎಲ್‌ಇಡಿ ಫ್ಲ್ಯಾಷ್ ನೀಡಲಾಗಿದೆ. ಇದು 13 ಎಂಪಿ ಪ್ರಾಥಮಿಕ ಸೆನ್ಸಾರ್ ಹೊಂದಿದ್ದು, 2 ಎಂಪಿ ಆಳ ಸಂವೇದಕವನ್ನು ಹೊಂದಿದೆ. ವೀಡಿಯೊ ಕರೆ ಮತ್ತು ಸೆಲ್ಫಿಗಾಗಿ 8MP ಮುಂಭಾಗದ ಕ್ಯಾಮರಾ ಇದೆ. ಪವರ್ ಬ್ಯಾಕಪ್‌ಗಾಗಿ, ಈ ಸ್ಮಾರ್ಟ್‌ಫೋನ್ 5,000mAh ಬ್ಯಾಟರಿಯನ್ನು 10W ಚಾರ್ಜಿಂಗ್ ಬೆಂಬಲದೊಂದಿಗೆ ಹೊಂದಿದೆ. ಭದ್ರತೆಗಾಗಿ, ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು ಫೇಸ್ ಅನ್‌ಲಾಕ್‌ನಂತಹ ವೈಶಿಷ್ಟ್ಯಗಳನ್ನು ಇದರಲ್ಲಿ ನೀಡಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ