ನವದೆಹಲಿ : ಗೂಗಲ್ (Google) ದೊಡ್ಡ ನಿರ್ಧಾರ ತೆಗೆದುಕೊಂಡಿದೆ. ಆವೃತ್ತಿ 2.3.7 ಅಥವಾ ಅದಕ್ಕಿಂತ ಕಡಿಮೆ ಇರುವ ಆಂಡ್ರಾಯ್ಡ್ ಫೋನ್‌ಗಳಲ್ಲಿ Google ಇನ್ನು ಮುಂದೆ ಸೈನ್ ಇನ್ ಅನ್ನು ಬೆಂಬಲಿಸುವುದಿಲ್ಲ. ಈ ಬದಲಾವಣೆಯು ಸೆಪ್ಟೆಂಬರ್ 27 ರಿಂದ ಜಾರಿಗೆ ಬರಲಿದೆ ಎಂದು ಬಳಕೆದಾರರಿಗೆ Google ಕಳುಹಿಸಿದ ಇಮೇಲ್ ನಲ್ಲಿ ತಿಳಿಸಲಾಗಿದೆ. ಕನಿಷ್ಠ ಆಂಡ್ರಾಯ್ಡ್ 3.0 ಹನಿಕೊಂಬ್ ಗೆ ಅಪ್‌ಡೇಟ್ ಮಾಡುವಂತೆ ಬಳಕೆದಾರರಿಗೆ ಗೂಗಲ್ ಸಲಹೆ ನೀಡಿದೆ. ಈ ಬದಲಾವಣೆಯು ಸಿಸ್ಟಮ್ ಮತ್ತು ಆ್ಯಪ್ ಸೈನಿಂಗ್ ಮೇಲೆ ಪರಿಣಾಮ ಬೀರುತ್ತದೆ. ಆದರೆ, ಬಳಕೆದಾರರು, ಜಿಮೇಲ್, ಗೂಗಲ್ ಸರ್ಚ್ (Google search) , ಗೂಗಲ್ ಡ್ರೈವ್, ಯೂಟ್ಯೂಬ್ ಮತ್ತು ಇತರ ಗೂಗಲ್ ಸೇವೆಗಳನ್ನು ಬ್ರೌಸರ್ ಮೂಲಕ ಚಲಾಯಿಸಲು ಸಾಧ್ಯವಾಗುತ್ತದೆ.
ವರದಿಯಲ್ಲಿ, 9to5Google ಈ ಬದಲಾವಣೆಯಿಂದ ಪ್ರಭಾವಿತರಾಗುವ ಬಳಕೆದಾರರಿಗೆ ಕಳುಹಿಸಿದ ಇಮೇಲ್‌ನ ಸ್ಕ್ರೀನ್‌ಶಾಟ್ ಅನ್ನು ಶೇರ್ ಮಾಡಿದೆ. ಆಂಡ್ರಾಯ್ಡ್‌ನ ಹಳೆಯ ಆವೃತ್ತಿಗಳನ್ನು (Old Android Smartphones) ಬಳಸುವವರ ಸಂಖ್ಯೆ ತೀರಾ ಕಡಿಮೆ ಎನ್ನಲಾಗಿದೆ. ಬಳಕೆದಾರರ ಡೇಟಾವನ್ನು ರಕ್ಷಿಸಲು ಮತ್ತು ಖಾತೆಗಳನ್ನು ಸುರಕ್ಷಿತವಾಗಿರಿಸಲು Google ಈ ನಡೆಯನ್ನು ಅನುಸರಿಸುತ್ತಿದೆ. ಸೆಪ್ಟೆಂಬರ್ 27 ರಿಂದ, ಆಂಡ್ರಾಯ್ಡ್ ಆವೃತ್ತಿ 2.3.7 ಮತ್ತು ಅದಕ್ಕಿಂತ ಕಡಿಮೆ ಇರುವ ಬಳಕೆದಾರರು ಫೋನ್‌ನಲ್ಲಿ ಲೋಡ್ ಆಗಿರುವ ಯಾವುದೇ Google ಅಪ್ಲಿಕೇಶನ್‌ಗಳಿಗೆ ಸೈನ್ ಇನ್ ಮಾಡಲು ಪ್ರಯತ್ನಿಸಿದಾಗ ಯುಸರ್ ನೇಮ್ ಅಥವಾ ಪಾಸ್‌ವರ್ಡ್ ಎರರ್ ತೋರಿಸುತ್ತದೆ. .
ಇದನ್ನೂ ಓದಿ : ಒಂದು ಆಧಾರ್ ಕಾರ್ಡ್ ನಿಂದ ನೀವು ಎಷ್ಟು 'SIM cards' ಖರೀದಿಸಬಹುದು ಗೊತ್ತಾ?
ಈ ಇಮೇಲ್‌ಗಳು ಇನ್ನೂ ಹಳೆಯ ಸಾಫ್ಟ್‌ವೇರ್ ಆವೃತ್ತಿಗಳನ್ನು ಬಳಸುತ್ತಿರುವ ಬಳಕೆದಾರರಿಗೆ ಎಚ್ಚರಿಕೆಯ ಸಂದೇಶವಾಗಿದೆ. ತಮ್ಮ ಸಾಫ್ಟ್‌ವೇರ್ ಅಪ್‌ಡೇಟ್ (Software update) ಮಾಡಲು ಅಥವಾ ಫೋನ್‌ಗಳನ್ನು ಬದಲಾಯಿಸುವಂತೆ ಇದು ಸೂಚಿಸುತ್ತದೆ.
ಸೆಪ್ಟೆಂಬರ್ 27 ರ ನಂತರ, ಹಳೆಯ ಆಂಡ್ರಾಯ್ಡ್ ಆವೃತ್ತಿಗಳ ಬಳಕೆದಾರರು ಗೂಗಲ್ ಉತ್ಪನ್ನಗಳು ಮತ್ತು ಸೇವೆಗಳಾದ ಜಿಮೇಲ್ (G mail), ಯೂಟ್ಯೂಬ್ ಮತ್ತು ಮ್ಯಾಪ್‌ಗಳಿಗೆ ಸೈನ್ ಇನ್ ಮಾಡಲು ಪ್ರಯತ್ನಿಸುವಾಗ ಎರರ್ ಎಂದು ತೋರಿಸುತ್ತದೆ. ಹೊಸ Google ಖಾತೆಯನ್ನು ಸೇರಿಸಲು ಅಥವಾ ರಚಿಸಲು ಪ್ರಯತ್ನಿಸಿದರೆ, ಫ್ಯಾಕ್ಟರಿ ರಿಸೆಟ್ ಮಾಡಿ ಮತ್ತೆ ಮತ್ತೆ ಸೈನ್ ಇನ್ ಮಾಡಲು ಪ್ರಯತ್ನಿಸಿದರೆ ಇದೆ ದೋಷ ಕಂಡು ಬರುತ್ತದೆ. ಒಂದು ವೇಳೆ, ಬಳಕೆದಾರನು ತನ್ನ ಪಾಸ್ವರ್ಡ್ ಅಥವಾ ಯುಸರ್ ನೇಮ್ ಬದಲಾಯಿಸಿದರೆ, ಅದರಲ್ಲೂ ಎರರ್ ಕಾಣಿಸಿಕೊಳ್ಳುತ್ತದೆ.
ಇದನ್ನೂ ಓದಿ : JioPhone ಬಳಕೆದಾರರಿಗೆ ಸಿಹಿ ಸುದ್ದಿ : Buy 1 ಗೆಟ್ 1 ರೀಚಾರ್ಜ್ ಆಫರ್ Free
ಆಂಡ್ರಾಯ್ಡ್ v2.3.7 ಬಳಕೆದಾರರ ಮುಂದೆ ಬೇರೆ ಯಾವುದೇ ಆಯ್ಕೆ ಉಳಿಯುವುದಿಲ್ಲ. Google Apps ಬಳಸಲು, ಅಪ್‌ಡೇಟ್ ಮಾಡಿದ ಫೋನ್ ಅನ್ನು ಬಳಸಬೇಕಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ