Vodafone- Idea ರೀಚಾರ್ಜ್ ಯೋಜನೆ, ಕೇವಲ 2.76 ರೂ.ಗೆ ಸಿಗುತ್ತಿದೆ 1GB ಡೇಟಾ
Vi ಯ ರೀಚಾರ್ಜ್ ಯೋಜನೆಗಳು ಇತರ ಕಂಪನಿಗಳಿಗಿಂತ ಸ್ವಲ್ಪ ಹೆಚ್ಚು ದುಬಾರಿಯಾಗಿದೆ. ಆದರೆ ಕಂಪನಿಯ ವಿಶಿಷ್ಟ ಯೋಜನೆಗಳು ಇತರ ಕಂಪನಿಗಳಿಗಿಂತ ಹೆಚ್ಚಾಗಿ ಪ್ರಯೋಜನಕಾರಿ. Vi ಚಂದಾದಾರರ ಸಂಖ್ಯೆಯನ್ನೂ ಹೆಚ್ಚಿಸಲು ಇದು ಕಾರಣವಾಗಿದೆ.
ನವದೆಹಲಿ: ಮೊಬೈಲ್ ಗ್ರಾಹಕರಲ್ಲಿ ಇಂಟರ್ನೆಟ್ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಬಳಕೆದಾರರು ಡೇಟಾ ಸೌಲಭ್ಯ ಹೆಚ್ಚಿರುವ ರೀಚಾರ್ಜ್ ಯೋಜನೆಗಳ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಸಾಮಾನ್ಯವಾಗಿ, ಹೆಚ್ಚಿನ ಮೊಬೈಲ್ ಬಳಕೆದಾರರಿಗೆ ಒಂದು ದಿನದಲ್ಲಿ 1-2 ಜಿಬಿ ಡೇಟಾ ಸುಲಭವಾಗಿ ಮುಗಿದು ಹೋಗುತ್ತದೆ. ಅಂತಹ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ವೊಡಾಫೋನ್- ಐಡಿಯಾ (Vodafone- Idea) ವಿಶೇಷ ಯೋಜನೆಯನ್ನು ತಂದಿದೆ. ಈ ಯೋಜನೆಯಲ್ಲಿ, ಬಳಕೆದಾರರಿಗೆ ಕೇವಲ 2.76 ರೂ.ಗೆ 1 ಜಿಬಿ ಡೇಟಾವನ್ನು ನೀಡಲಾಗುತ್ತಿದೆ.
ವೊಡಾಫೋನ್- ಐಡಿಯಾದ ರೀಚಾರ್ಜ್ ಯೋಜನೆ :
Vi ಯ ರೀಚಾರ್ಜ್ ಯೋಜನೆಗಳು ಇತರ ಕಂಪನಿಗಳಿಗಿಂತ ಸ್ವಲ್ಪ ಹೆಚ್ಚು ದುಬಾರಿಯಾಗಿದೆ. ಆದರೆ ಕಂಪನಿಯ ವಿಶಿಷ್ಟ ಯೋಜನೆಗಳು ಇತರ ಕಂಪನಿಗಳಿಗಿಂತ ಅಧಿಕ ಪ್ರಯೋಜನಕಾರಿ. ವೊಡಾಫೋನ್- ಐಡಿಯಾದ (Vodafone- Idea) ಚಂದಾದಾರರ ಸಂಖ್ಯೆ ಹೆಚ್ಚಾಗಲು ಇದು ಬಹುಮುಖ್ಯ ಕಾರಣವಾಗಿದೆ.
ಇದನ್ನೂ ಓದಿ - ತನ್ನ ಗ್ರಾಹಕರಿಗಾಗಿ ವಿಶಿಷ್ಟ ಪ್ಲಾನ್ ಪರಿಚಯಿಸಿದ BSNL, ಈಗ ಚಿಲ್ಲರ್‌ನಲ್ಲಿ ಲಭ್ಯ ಫುಲ್ ಟಾಕ್‌ಟೈಮ್
Vi ಅವರ 801 ರೂಪಾಯಿ ಯೋಜನೆ :
Vi ನ 801 ರೂ. ರೀಚಾರ್ಜ್ ಯೋಜನೆ (Recharge Plans) ಅತ್ಯುತ್ತಮವಾಗಿದೆ. ಈ ಯೋಜನೆಯ ವೆಚ್ಚದ ಬಗ್ಗೆ ಯೋಚಿಸಬೇಡಿ. ಈ ಯೋಜನೆಯ ಪ್ರಯೋಜನಗಳನ್ನು ನೀವು ಒಮ್ಮೆ ನೋಡಿದ ನಂತರ, ಅದನ್ನು ನಿರ್ಲಕ್ಷಿಸುವುದು ಕಷ್ಟ. 801 ರೂ.ಗಳ ಈ ಯೋಜನೆಯ ಸಿಂಧುತ್ವವು 84 ದಿನಗಳು. ಈ ಯೋಜನೆಯಲ್ಲಿ, ಬಳಕೆದಾರರಿಗೆ ಪ್ರತಿದಿನ 3 ಜಿಬಿ ಡೇಟಾವನ್ನು ನೀಡಲಾಗುತ್ತದೆ. ಅಂದರೆ, 84 ದಿನಗಳಲ್ಲಿ ಒಟ್ಟು 252 ಜಿಬಿ ಡೇಟಾವನ್ನು ಸ್ವೀಕರಿಸಲಾಗುತ್ತಿದೆ. ಆದರೆ ಈ ವಿಶೇಷ ಯೋಜನೆಯಲ್ಲಿ ಕಂಪನಿಯು 48 ಜಿಬಿ ಬೋನಸ್ ಡೇಟಾವನ್ನು ಸಹ ನೀಡುತ್ತಿದೆ. ಒಟ್ಟಾರೆಯಾಗಿ, ಗ್ರಾಹಕರು 801 ರೂಪಾಯಿಗೆ 300 ಜಿಬಿ ಡೇಟಾವನ್ನು ಪಡೆಯುತ್ತಿದ್ದಾರೆ. ನೀವು ಪ್ರತಿದಿನ ಲೆಕ್ಕ ಹಾಕಿದರೆ, ಗ್ರಾಹಕರು ಕೇವಲ 2.76 ರೂ.ಗೆ 1 ಜಿಬಿ ಡೇಟಾವನ್ನು ಪಡೆಯುತ್ತಿದ್ದಾರೆ.
ಇದನ್ನೂ ಓದಿ - Best Prepaid Plan: 100 ರೂ.ಗಿಂತ ಕಡಿಮೆ ಬೆಲೆಗೆ Airtel, Jio, Vi ರೀಚಾರ್ಜ್ ಕೂಪನ್ಸ್
ಈ ಯೋಜನೆಯಿಂದ ಇನ್ನೂ ಅನೇಕ ಪ್ರಯೋಜನಗಳಿವೆ:
801 ರೂಪಾಯಿ ಯೋಜನೆ ಕೇವಲ ಅಗ್ಗದ ಡೇಟಾಗೆ ಮಾತ್ರ ಸೀಮಿತವಾಗಿಲ್ಲ. ಈ ಯೋಜನೆಯಲ್ಲಿ ನೀವು ಅನಿಯಮಿತ ಕರೆ ಮತ್ತು ದಿನಕ್ಕೆ 100 ಉಚಿತ ಎಸ್‌ಎಂಎಸ್ ಸಹ ಪಡೆಯುತ್ತೀರಿ. ಇದಲ್ಲದೆ, ಗ್ರಾಹಕರಿಗೆ ವಾರಾಂತ್ಯದ ಡೇಟಾ ರೋಲ್‌ಓವರ್ ಮತ್ತು ಬಿಂಜ್ ಆಲ್ ನೈಟ್ ಸೌಲಭ್ಯವನ್ನು ಸಹ ನೀಡಲಾಗುತ್ತಿದೆ.
ಸಿಗಲಿದೆ ಒಟಿಟಿ ಪ್ರಯೋಜನ:
ಈ ಯೋಜನೆಯಲ್ಲಿ ಇನ್ನೂ ಅನೇಕ ಪ್ರಯೋಜನಗಳಿವೆ. ಉದಾಹರಣೆಗೆ, ಅನೇಕ ಒಟಿಟಿ ಚಾನಲ್‌ಗಳು ಉಚಿತವಾಗಿ ಲಭ್ಯವಿದೆ. ನೀವು ಡಿಸ್ನಿ + ಹಾಟ್‌ಸ್ಟಾರ್ ವಿಐಪಿಗೆ (Disney+ Hotstar VIP) ವರ್ಷಪೂರ್ತಿ ಚಂದಾದಾರಿಕೆಯನ್ನು ಉಚಿತವಾಗಿ ಪಡೆಯುತ್ತೀರಿ. ಇದಲ್ಲದೆ Vi Movies ಮತ್ತು TVಯಲ್ಲಿ ಅನಿಯಮಿತ ಕಂಟೆಂಟ್ ಗೆ ಪ್ರವೇಶಿಸಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.