Volkswagen id.4 Electric Car : ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಇದರೊಂದಿಗೆ ಕಾರು ತಯಾರಕರು ಕೂಡ ಹೊಸ ಹೊಸ  ಆಯ್ಕೆಗಳೊಂದಿಗೆ  ವಾಹನಗಳನ್ನು ರಸ್ತೆಗಿಳಿಸುತ್ತಿದ್ದಾರೆ.  ಈ ಮಧ್ಯೆ,  ಜರ್ಮನಿಯ ಪ್ರಮುಖ ಕಾರು ತಯಾರಕ ವೋಕ್ಸ್‌ವ್ಯಾಗನ್ ಕೂಡಾ ಈ ವಿಭಾಗಕ್ಕೆ ಪ್ರವೇಶಿಸಲುಸಿದ್ದತೆ ನಡೆಸಿದೆ. ಕಂಪನಿಯು ತನ್ನ ಐಡಿ 4 ಎಲೆಕ್ಟ್ರಿಕ್ ಕ್ರಾಸ್ಒವರ್ (ವೋಕ್ಸ್‌ವ್ಯಾಗನ್ ಐಡಿ.4) ಅನ್ನು ಭಾರತದಲ್ಲಿ  ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಕಂಪನಿಯು ಇತ್ತೀಚೆಗೆ ಈ ಎಲೆಕ್ಟ್ರಿಕ್‌ನ GTX ಆವೃತ್ತಿಯನ್ನು ಭಾರತದಲ್ಲಿ ಪ್ರದರ್ಶಿಸಿತ್ತು. ಇದು ಜಾಗತಿಕ ಮಾರುಕಟ್ಟೆಯಲ್ಲಿ ಕಂಪನಿಯ ಅತ್ಯುತ್ತಮ ಮಾರಾಟವಾದ ಎಲೆಕ್ಟ್ರಿಕ್ ಕಾರು. ಆದರೂ ಭಾರತದಲ್ಲಿ ಫೋಕ್ಸ್‌ವ್ಯಾಗನ್‌ನ ಮೊದಲ ಎಲೆಕ್ಟ್ರಿಕ್ ಕಾರ್ ಇದಾಗಿರಲಿದೆ. ಇದು Kia EV6 ನೊಂದಿಗೆ ನೇರವಾಗಿ ಸ್ಪರ್ಧಿಸುವ ಸಾಧ್ಯತೆ ಹೆಚ್ಚು. 


COMMERCIAL BREAK
SCROLL TO CONTINUE READING

ಫುಲ್ ಚಾರ್ಜ್‌ನಲ್ಲಿ 500KM ವ್ಯಾಪ್ತಿ :
GTX ಈ ಎಲೆಕ್ಟ್ರಿಕ್ ಕಾರಿನ ಟಾಪ್ ರೂಪಾಂತರವಾಗಿದೆ. ಇದು ಆಲ್ ವೀಲ್ ಡ್ರೈವ್ ಸಿಸ್ಟಮ್‌ನೊಂದಿಗೆ ಬರುತ್ತದೆ. ಈ ಎಲೆಕ್ಟ್ರಿಕ್ ಕ್ರಾಸ್‌ಒವರ್‌ನಲ್ಲಿ 82kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ನೀಡಲಾಗುವುದು. ಫುಲ್ ಚಾರ್ಜ್‌ನಲ್ಲಿ ಈ ಕಾರು ಸುಮಾರು 500 ಕಿಲೋಮೀಟರ್  ಕ್ರಮಿಸಬಹುದು ಎಂದು ಕಂಪನಿ ಹೇಳಿದೆ. ಇದರಲ್ಲಿ ನೀಡಲಾದ ಎಲೆಕ್ಟ್ರಿಕ್ ಮೋಟಾರ್ 299 ಹಾರ್ಸ್ ಪವರ್  ಮತ್ತು 460Nm ಟಾರ್ಕ್ ಅನ್ನು ಜನರೆಟ್ ಮಾಡುತ್ತದೆ. ಇದು ಕೇವಲ 6 ಸೆಕೆಂಡುಗಳಲ್ಲಿ ಗಂಟೆಗೆ 0 ರಿಂದ 100 ಕಿಲೋಮೀಟರ್ ವೇಗವನ್ನು ಪಡೆಯುತ್ತದೆ. ಇದರ ಗರಿಷ್ಠ ವೇಗ ಗಂಟೆಗೆ 180 ಕಿಲೋಮೀಟರ್ ಎಂದು ಹೇಳಲಾಗುತ್ತಿದೆ. 


ಇದನ್ನೂ ಓದಿ : Maruti, Hyundai ಬೆವರಿಳಿಸಿದ ಟಾಟಾ ! ಈ ಕಾರಿನ ಬುಕಿಂಗ್ ಗಾಗಿ ಮುಗಿ ಬೀಳುತ್ತಿರುವ ಗ್ರಾಹಕರು


ಭಾರತದಲ್ಲಿ ಬಿಡುಗಡೆ ಯಾವಾಗ ? :
ವೋಕ್ಸ್‌ವ್ಯಾಗನ್ ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ವಿಭಾಗಕ್ಕೆ ಪ್ರವೇಶಿಸಲು ಎಲ್ಲಾ ರೀತಿಯ್ ಸಿದ್ದತೆ ಮಾಡಿಕೊಂಡಿದೆ. ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ವೆಹಿಕಲ್ (EV) SUV ID.4 ಅನ್ನು ಬಿಡುಗಡೆ ಮಾಡುವುದರೊಂದಿಗೆ ಮುಂದಿನ ವರ್ಷ EV ವಿಭಾಗಕ್ಕೆ ಪ್ರವೇಶಿಸಲು  ತಯಾರಿ ನಡೆಸಿದೆ. ವೋಕ್ಸ್‌ವ್ಯಾಗನ್ 2030 ರ ವೇಳೆಗೆ ಭಾರತದಲ್ಲಿ  ಶೇಕಡಾ 25-30 ರಷ್ಟು EV ಗಳನ್ನು ಮಾರಾಟ ಮಾಡುವ ಗುರಿಯನ್ನು ಇಟ್ಟುಕೊಂಡಿದೆ. 


ಈ ವರ್ಷ ಮಾರಾಟದಲ್ಲಿ ಶೇ.40-45ರಷ್ಟು ವೃದ್ದಿಯನ್ನು ಕಂಪನಿ ನಿರೀಕ್ಷಿಸುತ್ತಿದೆ. ತನ್ನ ಅಸ್ತಿತ್ವದಲ್ಲಿರುವ ಸಾಂಪ್ರದಾಯಿಕ ಎಂಜಿನ್ ಮಾದರಿಗಳಾದ ಟಿಗುನ್ ಮತ್ತು ವರ್ಟಸ್‌ನ ಹಲವಾರು ಹೊಸ ಆವೃತ್ತಿಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳು ನಿರೀಕ್ಷೆಗಿಂತ ವೇಗವಾಗಿ ಬೆಳೆದಿದೆ . ಈ ನಿಟ್ಟಿನಲ್ಲಿ  ವಿವಿಧ ಅಧ್ಯಯನಗಳ ಆಧಾರದ ಮೇಲೆ, 2030 ರ ವೇಳೆಗೆ, ದೇಶದಲ್ಲಿ ಇವಿಗಳ ಪಾಲು ಒಟ್ಟು ಮಾರಾಟದ ಶೇಕಡಾ 18-30 ರಷ್ಟಿರಬಹುದು ಎಂಬ ಅಂದಾಜು ಕಂಪೆನಿಯದ್ದು. 


ಇದನ್ನೂ ಓದಿ : TATA: ಅಗ್ಗದ ಬೆಲೆಯಲ್ಲಿ ಮಾರುಕಟ್ಟೆಗೆ ಬರ್ತಿದೆ TATAದ ಹೊಸ 7 ಸೀಟರ್ ಕಾರು: ಇದರ ವೈಶಿಷ್ಟ್ಯ ಅದ್ಭುತವೋ ಅದ್ಭುತ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.