TATA: ಅಗ್ಗದ ಬೆಲೆಯಲ್ಲಿ ಮಾರುಕಟ್ಟೆಗೆ ಬರ್ತಿದೆ TATAದ ಹೊಸ 7 ಸೀಟರ್ ಕಾರು: ಇದರ ವೈಶಿಷ್ಟ್ಯ ಅದ್ಭುತವೋ ಅದ್ಭುತ

Tata 7-Seater SUV: ಟಾಟಾ ಸಫಾರಿ OMEGARC ಪ್ಲಾಟ್‌’ಫಾರ್ಮ್ ಅನ್ನು ಆಧರಿಸಿದೆ. ಇದನ್ನು ಲ್ಯಾಂಡ್ ರೋವರ್‌’ನ D8 ಪ್ಲಾಟ್‌’ಫಾರ್ಮ್‌’ನಲ್ಲಿ ಕೆಲವು ಮಹತ್ವದ ಬದಲಾವಣೆಗಳೊಂದಿಗೆ ನಿರ್ಮಿಸಲಾಗಿದೆ. ಇದರಲ್ಲಿ ಎರಡು ಬಗೆಯ ಸೀಟರ್’ಗಳ ವ್ಯವಸ್ಥೆ ಇದೆ. ಅಂದರೆ 6 ಸೀಟರ್ ಮತ್ತು 7 ಸೀಟರ್. 6 ಸೀಟರ್ ವೇರಿಯೆಂಟ್’ನಲ್ಲಿ ಮಧ್ಯದ ಸಾಲು ಕ್ಯಾಪ್ಟನ್ ಸೀಟ್ ಆಗಿರುತ್ತದೆ

Written by - Bhavishya Shetty | Last Updated : Apr 18, 2023, 06:24 PM IST
    • ಮಾರ್ಚ್ ತಿಂಗಳಲ್ಲಿ ಎರಡನೇ ಅತಿ ಹೆಚ್ಚು ಮಾರಾಟವಾದ SUV ಕಾರು
    • ಟಾಟಾ ಸಫಾರಿ OMEGARC ಪ್ಲಾಟ್‌’ಫಾರ್ಮ್ ಅನ್ನು ಆಧರಿಸಿದೆ.
    • ಇದನ್ನು ಲ್ಯಾಂಡ್ ರೋವರ್‌’ನ D8 ಪ್ಲಾಟ್‌’ಫಾರ್ಮ್‌’ನಲ್ಲಿ ಕೆಲವು ಮಹತ್ವದ ಬದಲಾವಣೆಗಳೊಂದಿಗೆ ನಿರ್ಮಿಸಲಾಗಿದೆ.
TATA: ಅಗ್ಗದ ಬೆಲೆಯಲ್ಲಿ ಮಾರುಕಟ್ಟೆಗೆ ಬರ್ತಿದೆ TATAದ ಹೊಸ 7 ಸೀಟರ್ ಕಾರು: ಇದರ ವೈಶಿಷ್ಟ್ಯ ಅದ್ಭುತವೋ ಅದ್ಭುತ title=
Tata 7-Seater SUV

Tata 7-Seater SUV: ಟಾಟಾ ಮೋಟಾರ್ಸ್‌’ನ ನೆಕ್ಸಾನ್ ಮಾಡೆಲ್ ಬಗ್ಗೆ ದೇಶದಲ್ಲಿ ಉತ್ತಮ ಅಭಿಪ್ರಾಯವಿದೆ. ಇದು ಮಾರ್ಚ್ ತಿಂಗಳಲ್ಲಿ ಎರಡನೇ ಅತಿ ಹೆಚ್ಚು ಮಾರಾಟವಾದ SUV ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು 5 ಸೀಟರ್’ಗಳ SUV ಆಗಿದ್ದು, ಇದರ ಬೆಲೆ ರೂ 7.80 ಲಕ್ಷದಿಂದ ರೂ 14.35 ಲಕ್ಷದವರೆಗೆ ಇದೆ (ಎಕ್ಸ್ ಶೋ ರೂಂ). ಇನ್ನು ಹೈ ಕ್ಲಾಸ್ ಆನ್-ರೋಡ್ ಬೆಲೆ ಸುಮಾರು 16.56 ಲಕ್ಷ (ದೆಹಲಿಯಲ್ಲಿ) ಇದೆ. ಇದೀಗ ಮತ್ತೊಂದು ಮಾಡೆಲ್ ಮಾರುಕಟ್ಟೆಗೆ ಕಾಲಿಡಲಿದ್ದು, ಈ ಟಾಟಾ ಸಫಾರಿಯ ಆರಂಭಿಕ ಬೆಲೆ ರೂ 15.65 ಲಕ್ಷ (ಎಕ್ಸ್ ಶೋ ರೂಂ).

ಇದನ್ನೂ ಓದಿ:6 ಏರ್’ಬ್ಯಾಗ್, ಡಬಲ್ ಸಿಲಿಂಡರ್ ಸಹಿತ ಬರಲಿದೆ TATA CNG ಕಾರು: ವಿಶೇಷ ಕಾರಿನ ಬೆಲೆ ಕೇಳಿದ್ರೆ ಶಾಕ್ ಆಗ್ತೀರ!

ಟಾಟಾ ಸಫಾರಿ OMEGARC ಪ್ಲಾಟ್‌’ಫಾರ್ಮ್ ಅನ್ನು ಆಧರಿಸಿದೆ. ಇದನ್ನು ಲ್ಯಾಂಡ್ ರೋವರ್‌’ನ D8 ಪ್ಲಾಟ್‌’ಫಾರ್ಮ್‌’ನಲ್ಲಿ ಕೆಲವು ಮಹತ್ವದ ಬದಲಾವಣೆಗಳೊಂದಿಗೆ ನಿರ್ಮಿಸಲಾಗಿದೆ. ಇದರಲ್ಲಿ ಎರಡು ಬಗೆಯ ಸೀಟರ್’ಗಳ ವ್ಯವಸ್ಥೆ ಇದೆ. ಅಂದರೆ 6 ಸೀಟರ್ ಮತ್ತು 7 ಸೀಟರ್. 6 ಸೀಟರ್ ವೇರಿಯೆಂಟ್’ನಲ್ಲಿ ಮಧ್ಯದ ಸಾಲು ಕ್ಯಾಪ್ಟನ್ ಸೀಟ್ ಆಗಿರುತ್ತದೆ. ಈ ಸಫಾರಿ XE, XM, XMS, XT+, XZ ಮತ್ತು XZ+ ಒಟ್ಟು 6 ಟ್ರಿಮ್‌ಗಳಲ್ಲಿ ಬರಲಿದೆ. ಇದರ ಒರಿಜಿನಲ್ ವೇರಿಯೆಂಟ್ XE ಆಗಿದೆ. ಈ ವಾಹನದಲ್ಲಿ ಹಲವು ವೈಶಿಷ್ಟ್ಯಗಳು ಲಭ್ಯವಿವೆ.

ಟಾಟಾ ಸಫಾರಿ ಎಕ್ಸ್‌ಇ ಒರಿಜಿನಲ್ ವೇರಿಯೆಂಟ್: ಡಿಆರ್‌’ಎಲ್‌’ಗಳೊಂದಿಗೆ ಪ್ರೊಜೆಕ್ಟರ್ ಹೆಡ್‌’ಲ್ಯಾಂಪ್‌’ಗಳು, ಟಿಲ್ಟ್ ಮತ್ತು ಟೆಲಿಸ್ಕೋಪಿಕ್ ಅಡ್ಜಸ್ಟೇಬಲ್ ಸ್ಟೀರಿಂಗ್ ವೀಲ್, ಡ್ಯುಯಲ್ ಏರ್‌’ಬ್ಯಾಗ್‌ಗಳು, ಎಬಿಎಸ್ ಜೊತೆ ಇಬಿಡಿ, ಇಎಸ್‌’ಪಿ, ಸೀಟ್-ಬೆಲ್ಟ್ ರಿಮೈಂಡರ್ ಸಿಸ್ಟಮ್, ರಿಯರ್ ಪಾರ್ಕಿಂಗ್ ಸೆನ್ಸರ್‌, ಸ್ಪೀಡ್ ಅಲರ್ಟ್ ಸಿಸ್ಟಮ್, ಹಿಲ್ ಹೋಲ್ಡ್ ಕಂಟ್ರೋಲ್, ರೋಲ್ ಓವರ್ ಮಿಟಿಗೇಷನ್,  ನಾಲ್ಕು ಚಕ್ರಗಳಿಗೂ ಡಿಸ್ಕ್ ಬ್ರೇಕ್, ಟ್ರಾಕ್ಷನ್ ಕಂಟ್ರೋಲ್, ರೂಫ್ ರೈಲ್ಸ್ ಹಾಗೂ ಎರಡನೇ ಸೀಟ್’ನಲ್ಲಿ ರಿಕ್ಲೈನಿಂಗ್ ಮಾಡಿಕೊಳ್ಳುವ ಸೌಲಭ್ಯ ಕೂಡ ಲಭ್ಯವಿದೆ.

ಇದನ್ನೂ ಓದಿ: ವಿದ್ಯುತ್ ಬಿಲ್ ಅರ್ಧದಷ್ಟು ಕಡಿಮೆ ಮಾಡುತ್ತದೆ ಈ ಡಿವೈಸ್ ! ಅಳವಡಿಸಿದ ಒಂದು ವಾರದಲ್ಲೇ ಪರಿಣಾಮ

ಇನ್ನು ಟಾಟಾ ಸಫಾರಿ 2-ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 170PS ಪವರ್ ಮತ್ತು 350Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯೊಂದಿಗೆ ಬರುತ್ತದೆ. ಇತ್ತೀಚೆಗೆ ಟಾಟಾ ಸಫಾರಿಯ ರೆಡ್ ಡಾರ್ಕ್ ಆವೃತ್ತಿಯನ್ನು ಸಹ ಬಿಡುಗಡೆ ಮಾಡಿದೆ. ಅದರಲ್ಲಿ ADAS ಸೇರಿದಂತೆ ಹಲವು ಹೊಸ ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News