Vu Vibe QLED ಟಿವಿಯನ್ನು ಜುಲೈನಲ್ಲಿ ಪ್ರಾರಂಭಿಸಲಾಯಿತು.ಈಗ,ಕಂಪನಿಯು Vu GloLED TV 2025 ಅನ್ನು ಪ್ರಾರಂಭಿಸಿದೆ.ಇದು 2022ರಲ್ಲಿ ಬಿಡುಗಡೆಯಾದ   GloLED ಟಿವಿಯ ಹೊಸ ಮಾದರಿಯಾಗಿದೆ.ಈ ಸ್ಮಾರ್ಟ್ ಟಿವಿ ಮೂರು ವಿಭಿನ್ನ ಗಾತ್ರಗಳಲ್ಲಿ ಬರುತ್ತದೆ.ಇದು 24W ಸ್ಪೀಕರ್‌ಗಳು,ಡಾಲ್ಬಿ ವಿಷನ್, ಡಾಲ್ಬಿ ಆಡಿಯೋ, HDR, ವೀಡಿಯೊ ಕರೆ ಸೇರಿದಂತೆ ಅನೇಕ ವೈಶಿಷ್ಟ್ಯಗಳನ್ನೂ ಒಳಗೊಂಡಿದೆ. Vu GloLED TV 2025 ಬೆಲೆ ಮತ್ತು ವೈಶಿಷ್ಟ್ಯಗಳು ಯಾವುವು ನೋಡೋಣ. 


COMMERCIAL BREAK
SCROLL TO CONTINUE READING

ಭಾರತದಲ್ಲಿ Vu GloLED TV 2025 ಬೆಲೆ : 
ಹೊಸ Vu GloLED TV 2025 ಅನ್ನು ಭಾರತದಲ್ಲಿ ಮೂರು ವಿಭಿನ್ನ ಗಾತ್ರಗಳಲ್ಲಿ ಬಿಡುಗಡೆ ಮಾಡಲಾಗಿದೆ. 43 ಇಂಚುಗಳು, 50 ಇಂಚುಗಳು ಮತ್ತು 55 ಇಂಚುಗಳಲ್ಲಿ ಈ ಟಿವಿಯನ್ನು ಬಿಡುಗಡೆ ಮಾಡಲಾಗಿದೆ. ವಿಶೇಷವೆಂದರೆ ಈ ಸ್ಮಾರ್ಟ್ ಟಿವಿಯ ಬೆಲೆ 27,999 ರೂ.ಗಳಿಂದ ಆರಂಭವಾಗುತ್ತದೆ. ಈ ಟಿವಿಯನ್ನು   ಫ್ಲಿಪ್‌ಕಾರ್ಟ್‌ನಿಂದ ಖರೀದಿಸಬಹುದು.


ಇದನ್ನೂ ಓದಿ : ರಿಲಯನ್ಸ್ ಜಿಯೋ ಅಗ್ಗದ ರೀಚಾರ್ಜ್ ಪ್ಲಾನ್‌: 100 ರೂ.ಗಿಂತ ಕಡಿಮೆ ಬೆಲೆಯಲ್ಲಿ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ


Vu GloLED TV 2025 ವೈಶಿಷ್ಟ್ಯಗಳು : 
Vu GloLED TV 2025 ಅತ್ಯಂತ ಸ್ಲಿಮ್ ವಿನ್ಯಾಸವನ್ನು ಹೊಂದಿದೆ. Glo Panel, Dolby Vision, HDR, MEMC ತಂತ್ರಜ್ಞಾನ ಮತ್ತು 4K UI ಅನ್ನು ಸಪೋರ್ಟ್ ಮಾಡುತ್ತದೆ.ಈ ಸ್ಮಾರ್ಟ್ ಟಿವಿಯು 24W ಸ್ಪೀಕರ್,ಡಾಲ್ಬಿ ಆಡಿಯೋ ಮತ್ತು DTS ವರ್ಚುವಲ್ ಎಕ್ಸ್ ತಂತ್ರಜ್ಞಾನವನ್ನು ಹೊಂದಿದೆ.ಕಂಪನಿಯ ಪ್ರಕಾರ, ಈ ಹೊಸ Vu ಸ್ಮಾರ್ಟ್ ಟಿವಿಯ ಅತ್ಯಂತ ವಿಶೇಷವಾದ ವಿಷಯವೆಂದರೆ ಇದು 1.5 GHz VuOn ಪ್ರೊಸೆಸರ್ ಅನ್ನು ಹೊಂದಿದೆ. ಇದು ನಿರಂತರ ಸ್ಟ್ರೀಮಿಂಗ್ ಅನ್ನು ಒದಗಿಸುತ್ತದೆ.  ಇದಕ್ಕೆ ಬಾಹ್ಯ ಕ್ಯಾಮರಾವನ್ನು ಕೂಡಾ ಅಳವಡಿಸಬಹುದು.ಈ ಮೂಲಕ Google Meet ಅಪ್ಲಿಕೇಶನ್‌ನಿಂದ ವೀಡಿಯೊ ಕರೆಗಳನ್ನು ಮಾಡಬಹುದು.


ಇದರ ಹೊರತಾಗಿ, Vu GloLED TV 2025 ಸ್ಕ್ರೀನ್ ಮಿರರಿಂಗ್,ಕ್ಯಾಸ್ಟಿಂಗ್ ಮತ್ತು 2-ವೇ ಬ್ಲೂಟೂತ್ v5.3 ಸಂಪರ್ಕವನ್ನು ಬೆಂಬಲಿಸುತ್ತದೆ. HDMI ಮೂಲಕ ಪ್ಲೇಸ್ಟೇಷನ್ ಅಥವಾ ಇತರ ಸಾಧನಗಳನ್ನು ಸಂಪರ್ಕಿಸಬಹುದು.ಈ ಸ್ಮಾರ್ಟ್ ಟಿವಿಯಲ್ಲಿ ಗೂಗಲ್ ಅಸಿಸ್ಟೆಂಟ್ ಮತ್ತು ಆಪಲ್ ಹೋಮ್‌ಕಿಟ್ ಕೂಡಾ ಇದೆ. ವಿಶೇಷವೆಂದರೆ Vu GloLED TV 2025 ಗೂಗಲ್ ಟಿವಿ ಆಪರೇಟಿಂಗ್ ಸಿಸ್ಟಮ್ ಅನ್ನು ಹೊಂದಿದ್ದು, ಇದು ಧ್ವನಿ ರಿಮೋಟ್‌ನೊಂದಿಗೆ ಬರುತ್ತದೆ. 


ಇದನ್ನೂ ಓದಿ : ಅಮೆಜಾನ್, ಫ್ಲಿಪ್ ಕಾರ್ಟ್ ಅಲ್ಲ iPhone 15 Pro ಮೇಲೆ ಇಲ್ಲಿ ಸಿಗುವುದು ಭಾರೀ ಡಿಸ್ಕೌಂಟ್ !


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.