ಉಚಿತವಾಗಿ Netflix, Amazon Prime, Disney+Hotstar ಬೇಕೇ?: ಹಾಗಾದರೆ ಈ ಕೆಲಸ ಮಾಡಿ
ನೀವು ನೆಟ್‌ಫ್ಲಿಕ್ಸ್ (Netflix), ಅಮೆಜಾನ್ ಪ್ರೈಮ್ (Amazon Prime) ಮತ್ತು ಡಿಸ್ನಿ + ಹಾಟ್‌ಸ್ಟಾರ್(Disney + Hotstar)ನಂತಹ ಪ್ಲಾಟ್‌ಫಾರ್ಮ್‌ಗಳಿಗೆ ಉಚಿತ ಚಂದಾದಾರಿಕೆ ಪಡೆಯಬಹುದು.
ನವದೆಹಲಿ: ಇಂದು ಪ್ರತಿಯೊಬ್ಬರೂ OTT ಪ್ಲಾಟ್‌ಫಾರ್ಮ್‌ಗಳಲ್ಲಿ ಸಿನಿಮಾ ನೋಡಲು ಇಷ್ಟಪಡುತ್ತಾರೆ. ಆದರೆ ಈ ಪ್ಲಾಟ್‌ಫಾರ್ಮ್‌ಗಳಲ್ಲಿ ಚಲನಚಿತ್ರ ಮತ್ತು ವೆಬ್ ಸಿರೀಸ್ ವೀಕ್ಷಿಸಲು ನೀವು ಸದಸ್ಯತ್ವ ಶುಲ್ಕ ಪಾವತಿಸಬೇಕಾಗುತ್ತದೆ. ಈ ಅಪ್ಲಿಕೇಶನ್‌ಗಳ ಶುಲ್ಕಗಳು ಸಹ ತುಂಬಾ ದುಬಾರಿ. ನೀವು ನೆಟ್‌ಫ್ಲಿಕ್ಸ್ (Netflix), ಅಮೆಜಾನ್ ಪ್ರೈಮ್ (Amazon Prime) ಮತ್ತು ಡಿಸ್ನಿ + ಹಾಟ್‌ಸ್ಟಾರ್(Disney + Hotstar)ನಂತಹ ಪ್ಲಾಟ್‌ಫಾರ್ಮ್‌ಗಳಿಗೆ ಉಚಿತ ಚಂದಾದಾರಿಕೆ ಪಡೆಯಬಹುದು. ಇದು ಹೇಗಂತೀರಾ..? ಏರ್‌ಟೆಲ್ (Airtel), ರಿಲಯನ್ಸ್ ಜಿಯೋ(Reliance Jio) ಮತ್ತು ವೊಡಾಫೋನ್ ಐಡಿಯಾ(Vodafone Idea)ಗಳ ಪೋಸ್ಟ್ ಪೇಯ್ಡ್ ಪ್ಲಾನ್ ರಿಚಾರ್ಜ್ ಮಾಡಿದರೆ OTT ಪ್ಲಾಟ್‌ಫಾರ್ಮ್‌ಗಳಲ್ಲಿ ನೀವು ಉಚಿತವಾಗಿ ಅನ್ ಲಿಮಿಟೆಡ್ ಮನರಂಜನೆ ಪಡೆಯಬಹುದು. 1 ಸಾವಿರ ರೂ.ಗಿಂತಲೂ ಕಡಿಮೆ ಮೊತ್ತದ ಪ್ಲಾನ್ ರಿಚಾರ್ಜ್ ಮಾಡಿದರೆ ನಿಮಗೆ OTT ಚಂದಾದಾರಿಕೆ ಉಚಿತವಾಗಿ ಲಭ್ಯವಿರುತ್ತದೆ.
ಈ ಪೋಸ್ಟ್ ಪೇಯ್ಡ್ ಯೋಜನೆಗಳಲ್ಲಿ OTT ಉಚಿತ
ಇಂದು ನಾವು ಏರ್‌ಟೆಲ್, ರಿಲಯನ್ಸ್ ಜಿಯೋ ಮತ್ತು ವೊಡಾಫೋನ್ ಐಡಿಯಾದ 1,000 ರೂ.ಗಳ ಪೋಸ್ಟ್ ಪೇಯ್ಡ್ ಯೋಜನೆಗಳ ಬಗ್ಗೆ ಹೇಳಲಿದ್ದೇವೆ. ಇದು Unlimited ಡೇಟಾ ಮತ್ತು ಧ್ವನಿ ಕರೆಗಳಂತಹ ಪ್ರಯೋಜನ ನೀಡುವುದಲ್ಲದೆ ನೀವು OTT ಪ್ಲಾಟ್‌ಫಾರ್ಮ್‌ಗಳ ಉಚಿತ ಚಂದಾದಾರಿಕೆ ಸಹ ಪಡೆಯುತ್ತೀರಿ. ಪ್ರತಿಯೊಂದು ಕಂಪನಿಯು 1 ಸಾವಿರ ರೂ.ಗಿಂತ ಕಡಿಮೆ ಬೆಲೆಯಲ್ಲಿ ಇಂತಹ ಅನೇಕ ಯೋಜನೆಗಳನ್ನು ನೀಡುತ್ತಿದೆ. ಇವುಗಳ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿರಿ.
ಇದನ್ನೂ ಓದಿ: Flipkart Realme Festive Days: ಈ 5G Smartphone ಮೇಲೆ ಸಿಗಲಿದೆ 20 ಸಾವಿರಗಳ ರಿಯಾಯಿತಿ
ಏರ್‌ಟೆಲ್ 999 ರೂ. ಪೋಸ್ಟ್ ಪೇಯ್ಡ್ ಯೋಜನೆ
ಏರ್‌ಟೆಲ್‌ನ ಈ ಪೋಸ್ಟ್ ಪೇಯ್ಡ್ ಪ್ಲಾನ್ 999 ರೂ.ಗೆ ಲಭ್ಯವಿದೆ. ಈ ಪ್ಲಾನ್ ರಿಚಾರ್ಜ್ ಮಾಡಿಸಿದರೆ ಬಳಕೆದಾರರು ಪ್ರತಿ ತಿಂಗಳು 150GB ಡೇಟಾವನ್ನು ಪಡೆಯುತ್ತಾರೆ. ಇದು 200GB ವರೆಗಿನ ರೋಲ್‌ಓವರ್ ಪ್ರಯೋಜನಗಳೊಂದಿಗೆ ಬರುತ್ತದೆ. ಬಳಕೆದಾರರು ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಧ್ವನಿ ಕರೆ ಮತ್ತು ದಿನಕ್ಕೆ 100 SMSಗಳ ಪ್ರಯೋಜನಗಳನ್ನು ಸಹ ಪಡೆಯುತ್ತಾರೆ. OTT ಕುರಿತು ಮಾತನಾಡುವುದಾದರೆ 1 ವರ್ಷದ Amazon Prime ವಿಡಿಯೋ ಮತ್ತು Disney + Hotstar ಮೊಬೈಲ್ ಅಪ್ಲಿಕೇಶನ್ ಚಂದಾದಾರಿಕೆಯು ಈ ಯೋಜನೆಯಲ್ಲಿ ಲಭ್ಯವಿದೆ. ಈ ಯೋಜನೆಯ ಸಿಂಧುತ್ವವು ಬಳಕೆದಾರರ Bill Cycleನ್ನು ಅವಲಂಬಿಸಿರುತ್ತದೆ.
ಜಿಯೋದ 999 ರೂ. ಪೋಸ್ಟ್ ಪೇಯ್ಡ್ ಯೋಜನೆ
ಜಿಯೋದ ಈ ಯೋಜನೆಯಲ್ಲಿ ನೀವು ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಧ್ವನಿ ಕರೆ, ದಿನಕ್ಕೆ 100 SMS ಮತ್ತು ಒಟ್ಟಾರೆ 200GB ಇಂಟರ್ನೆಟ್ ಅನ್ನು ಪಡೆಯುತ್ತೀರಿ. ಈ ಯೋಜನೆಯಲ್ಲಿ 500GB ವರೆಗಿನ ಡೇಟಾ ರೋಲ್‌ಓವರ್ ಸಹ ಸಿಗಲಿದೆ. OTT ಪ್ರಯೋಜನಗಳ ಕುರಿತು ಮಾತನಾಡುವುದಾದರೆ ಈ ಯೋಜನೆಯಲ್ಲಿ ನೀವು ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಡಿಸ್ನಿ + ಹಾಟ್‌ಸ್ಟಾರ್‌ನ ಚಂದಾದಾರಿಕೆಯನ್ನು ಜಿಯೋ ಅಪ್ಲಿಕೇಶನ್‌ಗಳೊಂದಿಗೆ ಪಡೆಯುತ್ತೀರಿ. ಈ ಯೋಜನೆಯ ಸಿಂಧುತ್ವವು ಬಳಕೆದಾರರ Bill Cycleನ್ನು ಅವಲಂಬಿಸಿರುತ್ತದೆ.
ಇದನ್ನೂ ಓದಿ: Flash Back 2021: ವರ್ಷ 2021ರಲ್ಲಿ ಭಾರಿ ಸದ್ದು ಮಾಡಿದ 5 ಸ್ಮಾರ್ಟ್ ಫೋನ್ ಗಳು ಇಲ್ಲಿವೆ
Vi ನ 999 ರೂ. ಪೋಸ್ಟ್ ಪೇಯ್ಡ್ ಯೋಜನೆ
Vodafone Idea ಅಥವಾ Vi ನಿಂದ 999 ರೂ. ಬೆಲೆಯ ಈ ರಿಚಾರ್ಜ್ ಪ್ಲಾನ್ 3 ಆಡ್-ಆನ್ ಸಂಪರ್ಕಗಳೊಂದಿಗೆ ಬರುತ್ತದೆ. ನಿಮಗೆ ಒಟ್ಟು 220GB ಇಂಟರ್ನೆಟ್ ಸಿಗಲಿದ್ದು, ಪ್ರಾಥಮಿಕ ಸಂಪರ್ಕಕ್ಕಾಗಿ 140GB ಮತ್ತು ದ್ವಿತೀಯ ಸಂಪರ್ಕಕ್ಕಾಗಿ 40GB ಡೇಟಾ ಸಿಗಲಿದೆ. ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಧ್ವನಿ ಕರೆ ಜೊತೆಗೆ ಈ ಯೋಜನೆಯಲ್ಲಿ ನೀವು ಪ್ರತಿ ತಿಂಗಳು 3 ಸಾವಿರ SMS ಸೌಲಭ್ಯವನ್ನು ಸಹ ಪಡೆಯುತ್ತೀರಿ. ಈ ಯೋಜನೆಯಲ್ಲಿ 200GB ವರೆಗೆ ಡೇಟಾ ರೋಲ್‌ಓವರ್ ಆಯ್ಕೆಯನ್ನು ಸಹ ನೀಡಲಾಗಿದೆ. ಸ್ಟ್ರೀಮಿಂಗ್ ಪ್ರಯೋಜನಗಳ ಬಗ್ಗೆ ಹೇಳುವುದಾದರೆ ನೀವು Amazon Prime ವಿಡಿಯೋಗೆ 1 ವರ್ಷದ ಚಂದಾದಾರಿಕೆ ಪಡೆಯುತ್ತೀರಿ. Disney+Hotstarನ ಮೊಬೈಲ್ ಆವೃತ್ತಿಗೆ 1 ವರ್ಷದ ಚಂದಾದಾರಿಕೆ ಮತ್ತು Vi Movies & TV ಗೆ ಉಚಿತ ಪ್ರವೇಶವನ್ನು ಪಡೆಯುತ್ತೀರಿ.
Jio, Airtel ಮತ್ತು Vi ನ ಪೋಸ್ಟ್ ಪೇಯ್ಡ್ ಪ್ಲಾನ್‌ಗಳ ಕುರಿತು ನೀವು OTT ಪ್ಲಾಟ್‌ಫಾರ್ಮ್‌ಗಳ ಮಾಹಿತಿ ಇದಾಗಿದೆ. ಈಗ ನೀವು ಆಯ್ಕೆ ಮಾಡಿ ಮತ್ತು 3 ಕಂಪನಿಗಳಲ್ಲಿ ಯಾರ ಯೋಜನೆಯು ಹೆಚ್ಚು ಪ್ರಯೋಜನಗಳನ್ನು ಪಡೆಯುತ್ತಿದೆ ಎಂಬುದನ್ನು ನೀವೇ ನಿರ್ಧರಿಸಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.