Flash Back 2021: ವರ್ಷ 2021ರಲ್ಲಿ ಭಾರಿ ಸದ್ದು ಮಾಡಿದ 5 ಸ್ಮಾರ್ಟ್ ಫೋನ್ ಗಳು ಇಲ್ಲಿವೆ

ನವದೆಹಲಿ:  Best Smartphones 2021 - ಪ್ರತಿ ವರ್ಷ ವಿವಿಧ ಸ್ಮಾರ್ಟ್‌ಫೋನ್ ತಯಾರಕ ಕಂಪನಿಗಳು ಹಲವಾರು ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತವೆ. ಈ ವರ್ಷದ ಕೊನೆಯ ತಿಂಗಳು ಆರಂಭಗೊಂಡಿದೆ ಮತ್ತು ಇಂತಹ ಪರಿಸ್ಥಿತಿಯಲ್ಲಿ, ಇಂದು ನಾವು ಈ ವರ್ಷ ಬಿಡುಗಡೆಯಾದ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳ ಕುರಿತು ನಿಮಗೆ ಮಾಹಿತಿ ನೀಡಲಿದ್ದೇವೆ. 

ನವದೆಹಲಿ:  Best Smartphones 2021 - ಪ್ರತಿ ವರ್ಷ ವಿವಿಧ ಸ್ಮಾರ್ಟ್‌ಫೋನ್ ತಯಾರಕ ಕಂಪನಿಗಳು ಹಲವಾರು ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತವೆ. ಈ ವರ್ಷದ ಕೊನೆಯ ತಿಂಗಳು ಆರಂಭಗೊಂಡಿದೆ ಮತ್ತು ಇಂತಹ ಪರಿಸ್ಥಿತಿಯಲ್ಲಿ, ಇಂದು ನಾವು ಈ ವರ್ಷ ಬಿಡುಗಡೆಯಾದ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳ ಕುರಿತು ನಿಮಗೆ ಮಾಹಿತಿ ನೀಡಲಿದ್ದೇವೆ. ಆಪಲ್ ಮತ್ತು ಸ್ಯಾಮ್‌ಸಂಗ್‌ನಿಂದ ಒಪ್ಪೋವರೆಗೆ, ಎಲ್ಲಾ ಕಂಪನಿಗಳು (Smartphone Companies) ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿವೆ. ಅವುಗಳಲ್ಲಿ ವೈಶಿಷ್ಟ್ಯಗಳ ಆಧಾರದ ಮೇಲೆ ಬೆಸ್ಟ್ 5 ಫೋನ್ ಗಳು ಯಾವುವು ನೋಡೋಣ ಬನ್ನಿ.

 

ಇದನ್ನೂ ಓದಿ-Harnaaz Sandhu Photos:'ಮಿಸ್ ಯೂನಿವರ್ಸ್ 2021' ಹರ್ನಾಜ್ ಸಂಧು ಫಿನಾಲೆ ಫೋಟೋಗಳು

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

1. iPhone 13 Pro Max - ಈ ವರ್ಷ Apple ನ iPhone 13 ಸರಣಿಗಾಗಿ ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದರು ಎಂದು ಹೇಳಬಹುದು. ಈ ಸರಣಿಯ ಉನ್ನತ ಮಾದರಿ, iPhone 13 Pro Max, ಕಂಪನಿಯ A15 ಬಯೋನಿಕ್ ಚಿಪ್‌ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಹೊಸ ಸೂಪರ್-ರೆಟಿನಾ XDR ಡಿಸ್ಪ್ಲೇ ಮತ್ತು ಪ್ರೊ-ಮೋಷನ್ ವೈಶಿಷ್ಟ್ಯದೊಂದಿಗೆ ಉತ್ತಮ ಕ್ಯಾಮೆರಾದೊಂದಿಗೆ ಬರುತ್ತದೆ. ನೀವು ಇದನ್ನು ಫ್ಲಿಪ್‌ಕಾರ್ಟ್‌ನಿಂದ 1,29,900 ರೂ.ಗೆ ಖರೀದಿಸಬಹುದು.  

2 /5

2. OPPO Reno 6 Pro - Oppo ಕಂಪನಿಯ ಈ ಸ್ಮಾರ್ಟ್‌ಫೋನ್ ಕ್ವಾಡ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ, ಇದರಲ್ಲಿ ಮುಖ್ಯ ಸಂವೇದಕ 64MP ಆಗಿದೆ. 6.5-ಇಂಚಿನ AMOLED ಕರ್ವ್ಡ್ FHD + ಡಿಸ್ಪ್ಲೇ ಹೊಂದಿರುವ ಈ ಸ್ಮಾರ್ಟ್‌ಫೋನ್ ಅನ್ನು ಹೊಂದಿರುವ ಈ ಸ್ಮಾರ್ಟ್ ಫೋನ್ ಅನ್ನು ನೀವು ಫ್ಲಿಪ್‌ಕಾರ್ಟ್‌ನಿಂದ ರೂ 46,990 ಬದಲಿಗೆ ರೂ 39,990 ಕ್ಕೆ ಖರೀದಿಸಬಹುದು.

3 /5

3. Samsung Galaxy Z Flip - ಸ್ಯಾಮ್‌ಸಂಗ್‌ನ ಈ ಫೋಲ್ಡಬಲ್ ಸ್ಮಾರ್ಟ್‌ಫೋನ್ ಎರಡು ಡಿಸ್ಪ್ಲೇಗಳೊಂದಿಗೆ ಬರುತ್ತದೆ. ಇದು 6.7-ಇಂಚಿನ FHD + ಡೈನಾಮಿಕ್ AMOLED ಮೆನ್ ಡಿಸ್ಪ್ಲೇ ಹೊಂದಿದೆ. ಇದರ ಕವರ್ ಸ್ಕ್ರೀನ್ 1.9-ಇಂಚಿನ ಸೂಪರ್ AMOLED ಪ್ಯಾನೆಲ್ ಆಗಿದೆ. 128GB ಅಥವಾ 256GB ಇಂಟರ್ನಲ್ ಸ್ಟೋರೇಜ್ ಆಯ್ಕೆಗಳಲ್ಲಿ ಇದು ಲಭ್ಯವಿದೆ, ಈ ಫೋನ್‌ನ ಬೆಲೆ ರೂ 95,999 ಆದರೆ ಇದನ್ನು ಫ್ಲಿಪ್‌ಕಾರ್ಟ್‌ನಿಂದ ರೂ 84,999 ಗೆ ಖರೀದಿಸಬಹುದು.

4 /5

4. OnePlus 9 Pro - ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಕುರಿತು ಹೇಳುವುದಾದರೆ, ಒನ್‌ಪ್ಲಸ್‌ನ ಹೆಸರು ಬಹುಶಃ ಮೊದಲು ಬರುತ್ತದೆ. OnePlus 9 Pro 4,500mAh ಬ್ಯಾಟರಿ, 65W ವಾರ್ಪ್ ಚಾರ್ಜ್ ಬೆಂಬಲ ಮತ್ತು 6.7-ಇಂಚಿನ ಕರ್ವ್ಡ್ ಕ್ವಾಡ್ HD+ ಡಿಸ್ಪ್ಲೇಯೊಂದಿಗೆ ಬರುತ್ತದೆ.Android 11 ನಲ್ಲಿ ಕಾರ್ಯನಿರ್ವಹಿಸುವ ಈ  ಈ ಸ್ಮಾರ್ಟ್‌ಫೋನ್ ಅನ್ನು ನೀವು Amazon ನಿಂದ ರೂ 69,999 ಬದಲಿಗೆ ರೂ 64,999 ಗೆ ಖರೀದಿಸಬಹುದು.

5 /5

5. JioPhone Next - ಇದು Jio ಕಂಪನಿಯ ಮೊದಲ 4G ಸ್ಮಾರ್ಟ್‌ಫೋನ್, ಇದು ವಿಶ್ವದ ಅತ್ಯಂತ ಅಗ್ಗದ 4G ಫೋನ್ ಎಂದು ಹೇಳಲಾಗಿದೆ. . Google ಮತ್ತು Jio ಕಂಪನಿಗಳಿಂದ ತಯಾರಿಸಲ್ಪಟ್ಟ ಈ ಫೋನ್‌ನಲ್ಲಿ, ನೀವು 5.5-ಇಂಚಿನ HD + ಸ್ಕ್ರೀನ್ ಮತ್ತು 3,500mAh ಬ್ಯಾಟರಿಯನ್ನು ಪಡೆಯುತ್ತೀರಿ. ಈ ಸ್ಮಾರ್ಟ್‌ಫೋನ್‌ ಅನ್ನು ನೀವು ಕೇವಲ 1999 ಡೌನ್ ಪೇಮೆಂಟ್ ನೀಡುವ ಮೂಲಕ ಖರೀದಿಸಬಹುದು.