IPL 2022: ಇನ್ನೇನು ಕೆಲವೇ ದಿನಗಳಲ್ಲಿ ಐಪಿಎಲ್ 2022 (IPL 2022)  ಆರಂಭವಾಗಲಿದ್ದು, ಕ್ರಿಕೆಟ್ ಅಭಿಮಾನಿಗಳು ತುಂಬಾ ಉತ್ಸುಕರಾಗಿದ್ದಾರೆ. IPL ಅನ್ನು ಡಿಸ್ನಿ+ ಹಾಟ್‌ಸ್ಟಾರ್ OTT ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್ ಮಾಡಲಾಗುತ್ತದೆ, ಆದ್ದರಿಂದ ಅನೇಕ ಬಳಕೆದಾರರು ಪ್ಲಾಟ್‌ಫಾರ್ಮ್‌ಗೆ ಚಂದಾದಾರರಾಗಲು ಬಯಸುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಟೆಲಿಕಾಂ ಆಪರೇಟರ್‌ಗಳು ಪ್ಲಾಟ್‌ಫಾರ್ಮ್‌ನಲ್ಲಿ ತಮ್ಮ ಪ್ರಿಪೇಯ್ಡ್ ಯೋಜನೆಗಳೊಂದಿಗೆ Disney + Hotstar ಚಂದಾದಾರಿಕೆಯನ್ನು ನೀಡುತ್ತಿವೆ. Jio, Airtel ಮತ್ತು Vi ಇಂತಹ ಹಲವು ಯೋಜನೆಗಳನ್ನು ಹೊಂದಿದ್ದು, ಅದರೊಂದಿಗೆ Disney + Hotstar ಚಂದಾದಾರಿಕೆಯನ್ನು ಉಚಿತವಾಗಿ ನೀಡಲಾಗುತ್ತದೆ. ನೀವೂ ಸಹ  ಐಪಿಎಲ್ ಲೈವ್ ವೀಕ್ಷಿಸಲು  ಬಯಸಿದರೆ, ಕೆಳಗಿನ ಯೋಜನೆಗಳನ್ನು ಪರಿಶೀಲಿಸಿ ಮತ್ತು ತಕ್ಷಣವೇ ರೀಚಾರ್ಜ್ ಮಾಡಿ...


COMMERCIAL BREAK
SCROLL TO CONTINUE READING

ರಿಲಯನ್ಸ್ ಜಿಯೋ ಡಿಸ್ನಿ + ಹಾಟ್‌ಸ್ಟಾರ್ ಯೋಜನೆಗಳು:
* ಮೊದಲ ಯೋಜನೆಯು 601 ರೂ.ಗಳ ಯೋಜನೆಯಾಗಿದ್ದು ಇದರ ಮಾನ್ಯತೆ 28 ದಿನಗಳು. ಈ ಯೋಜನೆಯಲ್ಲಿ ಗ್ರಾಹಕರು ಅನಿಯಮಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 ಉಚಿತ SMS ಜೊತೆಗೆ ದಿನಕ್ಕೆ 3GB ಡೇಟಾವನ್ನು ಪಡೆಯುತ್ತಾರೆ. ದಿನಕ್ಕೆ 3GB ಡೇಟಾ ಜೊತೆಗೆ, ಯೋಜನೆಯು ಹೆಚ್ಚುವರಿ 6GB ಡೇಟಾವನ್ನು ಸಹ ನೀಡುತ್ತದೆ. 
* Jio 499 ರೂ.ಗಳ ಪ್ರಿಪೇಯ್ಡ್ ಯೋಜನೆಯನ್ನು ಸಹ ನೀಡುತ್ತದೆ, ಇದು ಅನಿಯಮಿತ ಧ್ವನಿ ಕರೆಗಳು ಮತ್ತು 100SMS/ದಿನದೊಂದಿಗೆ 28 ​​ದಿನಗಳ ಅವಧಿಗೆ ದಿನಕ್ಕೆ 2GB ಡೇಟಾವನ್ನು ನೀಡುತ್ತದೆ. ಜಿಯೋ ಉಲ್ಲೇಖಿಸಿರುವ ಎರಡೂ ಯೋಜನೆಗಳು ಒಂದು ವರ್ಷದ ಡಿಸ್ನಿ + ಹಾಟ್‌ಸ್ಟಾರ್ (Disney + Hotstar) ಮೊಬೈಲ್ ಪ್ರವೇಶದೊಂದಿಗೆ ಬರುತ್ತವೆ. ಇದರಲ್ಲಿ ಜಿಯೋ ಸಿನಿಮಾ, ಜಿಯೋ ಟಿವಿ ಮತ್ತು ವಿವಿಧ ಜಿಯೋ ಅಪ್ಲಿಕೇಶನ್‌ಗಳನ್ನು ಬಳಕೆದಾರರು ಆನಂದಿಸಬಹುದು. ಇದಲ್ಲದೆ, ದೈನಂದಿನ ಡೇಟಾ ಮಿತಿಯನ್ನು ಬಳಸಿದ ನಂತರ, ಬಳಕೆದಾರರು 64 Kbps ಇಂಟರ್ನೆಟ್ ವೇಗವನ್ನು ಆನಂದಿಸಬಹುದು.


ಇದನ್ನೂ ಓದಿ- IPL 2022: ಐಪಿಎಲ್‌ನಲ್ಲಿ ಮತ್ತೆ ಪ್ರಸಿದ್ಧ ಮಹಿಳಾ ಆ್ಯಂಕರ್‌ ಎಂಟ್ರಿ


ವೊಡಾಫೋನ್ ಐಡಿಯಾದ ಡಿಸ್ನಿ+ ಹಾಟ್‌ಸ್ಟಾರ್ ಯೋಜನೆಗಳು:
ಮತ್ತೊಂದೆಡೆ Vodafone Idea ಸಹ 601 ರೂಪಾಯಿಗಳ ಯೋಜನೆಯನ್ನು ನೀಡುತ್ತದೆ. Vi ನ 601 ರೂ.  ಯೋಜನೆಯು ತನ್ನ ಗ್ರಾಹಕರಿಗೆ ದಿನಕ್ಕೆ 100 SMS ನೊಂದಿಗೆ ಅನಿಯಮಿತ ಕರೆ ಸೌಲಭ್ಯವನ್ನು ನೀಡುತ್ತದೆ. Vi ನ ಈ ಯೋಜನೆಯು ದಿನಕ್ಕೆ 3GB ಡೇಟಾವನ್ನು ನೀಡುತ್ತದೆ ಮತ್ತು 28 ದಿನಗಳ ಮಾನ್ಯತೆಯ ಅವಧಿಯೊಂದಿಗೆ ಬರುತ್ತದೆ. 
ಇದಲ್ಲದೆ Vi 901 ರೂ.ಗಳ ಪ್ರಿಪೇಯ್ಡ್ ಯೋಜನೆಯಲ್ಲಿ ದಿನಕ್ಕೆ 3GB ಡಾಟಾವನ್ನು ನೀಡುತ್ತದೆ. ಈ ಯೋಜನೆಯು 70 ದಿನಗಳ ಮಾನ್ಯತೆಯ ಅವಧಿಯೊಂದಿಗೆ ಬರುತ್ತದೆ ಮತ್ತು ದಿನಕ್ಕೆ 100 SMS ಜೊತೆಗೆ ಅನಿಯಮಿತ ಧ್ವನಿ ಕರೆಗಳನ್ನು ನೀಡುತ್ತದೆ. ಬಂಡಲ್ ಮಾಡಿದ OTT ಪ್ಲಾಟ್‌ಫಾರ್ಮ್‌ಗಳ ಬಗ್ಗೆ ಹೇಳುವುದಾದರೆ ಈ ಯೋಜನೆಗಳಲ್ಲಿ ಟೆಲ್ಕೋ ಡಿಸ್ನಿ + ಹಾಟ್‌ಸ್ಟಾರ್ ಗೆ ಒಂದು ವರ್ಷದ ಪ್ರವೇಶವನ್ನು ನೀಡುತ್ತದೆ. ಇದಲ್ಲದೆ, ಬಳಕೆದಾರರು ರೂ. 601 ಮತ್ತು ರೂ. 901 ಯೋಜನೆಗಳೊಂದಿಗೆ ಕ್ರಮವಾಗಿ  ಹೆಚ್ಚುವರಿ 16GB ಮತ್ತು 48GB ಡೇಟಾವನ್ನು ಪಡೆಯುತ್ತಾರೆ.


ಇದನ್ನೂ ಓದಿ- ಕೇವಲ 3 ಶಬ್ದಗಳನ್ನು ಬಳಸಿ ಈ ರೀತಿ Freeಯಾಗಿ Internet Speed ಪರಿಶೀಲಿಸಿ


ಏರ್‌ಟೆಲ್‌ನ ಡಿಸ್ನಿ+ ಹಾಟ್‌ಸ್ಟಾರ್ ಯೋಜನೆಗಳು:
ಭಾರತದ ಮುಂಚೂಣಿಯಲ್ಲಿರುವ ಟೆಲಿಕಾಂ ಕಂಪನಿಗಳಲ್ಲಿ ಒಂದಾದ ಭಾರ್ತಿ ಏರ್‌ಟೆಲ್ ಕುರಿತು ಹೇಳುವುದಾದರೆ, ಅದರ "ಟ್ರೂಲಿ ಅನ್‌ಲಿಮಿಟೆಡ್" ಪ್ಯಾಕ್ ಅಡಿಯಲ್ಲಿ ರೂ. 599 ಯೋಜನೆಯನ್ನು ನೀಡುತ್ತಿದೆ, ಇದು ಇತರ ಎರಡು ರೀತಿಯ ಪ್ರಯೋಜನಗಳನ್ನು ಹೊಂದಿದೆ. ಈ ಯೋಜನೆಯು ತನ್ನ ಬಳಕೆದಾರರಿಗೆ ಅನಿಯಮಿತ ಕರೆ ಸೌಲಭ್ಯವನ್ನು ನೀಡುತ್ತದೆ ಮತ್ತು ಈ ಪ್ಯಾಕ್‌ನ ಮಾನ್ಯತೆಯ ಅವಧಿಯು 28 ದಿನಗಳು. ಇದರೊಂದಿಗೆ, ಬಳಕೆದಾರರು ದಿನಕ್ಕೆ ಒಟ್ಟು 100 SMS ಅನ್ನು ಸಹ ಪಡೆಯುತ್ತಾರೆ. ಇದಲ್ಲದೆ, ಬಳಕೆದಾರರು ಮಾನ್ಯತೆಯ ಅವಧಿಯವರೆಗೆ ಪ್ರತಿದಿನ 3GB ಇಂಟರ್ನೆಟ್ ಡೇಟಾವನ್ನು ಸಹ ಪಡೆಯುತ್ತಾರೆ. ಏರ್‌ಟೆಲ್ 838 ರೂ. ಯೋಜನೆಯು 56 ದಿನಗಳ ಮಾನ್ಯತೆಯ ಅವಧಿಯೊಂದಿಗೆ ಬರುತ್ತದೆ.  ಈ ಯೋಜನೆಯಲ್ಲಿ ಗ್ರಾಹಕರು 2GB ದೈನಂದಿನ ಡೇಟಾದ ಜೊತೆಗೆ ದಿನಕ್ಕೆ 100 SMS ಮತ್ತು  ಅನಿಯಮಿತ ಧ್ವನಿ ಕರೆ ಸೌಲಭ್ಯವನ್ನು ಪಡೆಯುತ್ತಾರೆ.


  https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.