Asia Cup 2023 : ಏಷ್ಯಾ ಕಪ್ 2023 ರಲ್ಲಿ ಇಂದು ಭಾರತ ಮತ್ತು ನೇಪಾಳ ನಡುವೆ ಪಂದ್ಯ ನಡೆಯಲಿದೆ. ಪಾಕಿಸ್ತಾನ ವಿರುದ್ಧದ ಭಾರತ ಪಂದ್ಯ ಮಳೆಯಿಂದಾಗಿ ಡ್ರಾ ಆಗಿತ್ತು. ಇಂದು ನೇಪಾಳ ವಿರುದ್ಧ ಭಾರತ ಗೆದ್ದರೆ (ಭಾರತ-ನೇಪಾಳ ಪಂದ್ಯ) ಸೂಪರ್-4 ಹಂತ ತಲುಪಲಿದೆ. ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ. ಭಾರತ ನೇಪಾಳದೊಂದಿಗೆ ಏಕದಿನ ಪಂದ್ಯವನ್ನು ಆಡುತ್ತಿರುವುದು ಇದೇ ಮೊದಲು. ಪಂದ್ಯ ಇಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ. 


COMMERCIAL BREAK
SCROLL TO CONTINUE READING

ಭಾರತ vs ನೇಪಾಳ ಆನ್ಲೈನ್ನಲ್ಲಿ ಉಚಿತ : 
ಏಷ್ಯಾ ಕಪ್ 2023 ಅನ್ನು ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಅಪ್ಲಿಕೇಶನ್‌ನಲ್ಲಿ HD ಗುಣಮಟ್ಟದಲ್ಲಿ ಉಚಿತವಾಗಿ ಲೈವ್ ಸ್ಟ್ರೀಮ್ ಮಾಡುವುದಾಗಿ ಘೋಷಿಸಿದೆ. ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಮಾಡಿದ ಪ್ರಕಟಣೆಯ ಪ್ರಕಾರ, ಕ್ರಿಕೆಟ್ ಅಭಿಮಾನಿಗಳು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಹಾಟ್‌ಸ್ಟಾರ್ ಅಪ್ಲಿಕೇಶನ್ ಅನ್ನು  ಇನ್ಸ್ಟಾಲ್ ಮಾಡಬಹುದು. ಇನ್ಸ್ಟಾಲ್  ಮಾಡಿಕೊಂಡ ಬಳಿಕ ಯಾವುದೇ ಚಂದಾದಾರಿಕೆ ಇಲ್ಲದೆ ಯಾವುದೇ ಲೈವ್ ಪಂದ್ಯವನ್ನು ವೀಕ್ಷಿಸಬಹುದು.


ಇದನ್ನೂ ಓದಿ : ಬದಲಾಗಲಿದೆ ಸಿಮ್ ಕಾರ್ಡ್‌ನ ನಿಯಮ: ಈ ಕೆಲಸ ಮಾಡದಿದ್ರೆ ಬೀಳುತ್ತೇ 10 ಲಕ್ಷ ರೂ. ದಂಡ


ಫೋನ್‌ನಲ್ಲಿ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡುವುದು ಹೇಗೆ :
ಹಂತ 1: ನಿಮ್ಮ ಫೋನ್‌ನಲ್ಲಿ ಅಪ್ಲಿಕೇಶನ್ ಇನ್ ಸ್ಟಾಲ್ ಆಗಿಲ್ಲದಿದ್ದರೆ  ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್‌ಗೆ ಹೋಗುವ ಮೂಲಕ ಡಿಸ್ನಿ + ಹಾಟ್‌ಸ್ಟಾರ್ ಅನ್ನು ಡೌನ್‌ಲೋಡ್ ಮಾಡಿ.
ಹಂತ 2: ಅದರ ನಂತರ ಡಿಸ್ನಿ+ ಹಾಟ್‌ಸ್ಟಾರ್ ತೆರೆಯಿರಿ.
ಹಂತ 3: ಲೈವ್ ಮ್ಯಾಚ್ ಬರುತ್ತಿದ್ದರೆ, ಅದು ತೆರೆದ ತಕ್ಷಣ ಮುಂಭಾಗದ ಬ್ಯಾನರ್‌ನಲ್ಲಿ ಕಾಣಿಸಿಕೊಳ್ಳುತ್ತದೆ. 
ಹಂತ 4: ಹೆಚ್ಚಿನ ಪಂದ್ಯಗಳಿಗಾಗಿ ನೀವು ಸ್ಪೋರ್ಟ್ಸ್ ಟ್ಯಾಬ್‌ಗೆ ಹೋಗಬಹುದು.


ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್‌ನಲ್ಲಿ ವೀಕ್ಷಿಸುವುದಾದರೆ ಏನು ಮಾಡಬೇಕು : 
Disney +ಹಾಟ್‌ಸ್ಟಾರ್‌ನ ವೆಬ್‌ಸೈಟ್‌ನಲ್ಲಿ ಏಷ್ಯಾ ಕಪ್ 2023 ಅನ್ನು ಉಚಿತವಾಗಿ ಸ್ಟ್ರೀಮ್ ಮಾಡುತ್ತಿಲ್ಲ. ಅಂದರೆ, ಲ್ಯಾಪ್‌ಟಾಪ್, ಕಂಪ್ಯೂಟರ್ ಅಥವಾ ಸ್ಮಾರ್ಟ್ ಟಿವಿಯಲ್ಲಿ ಪಂದ್ಯವನ್ನು ವೀಕ್ಷಿಸಲು ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆ ಲಭ್ಯವಿರುತ್ತದೆ. ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ನ 
299 ರೂಪಾಯಿ ಸೂಪರ್ ಪ್ಲಾನ್ ನಲ್ಲಿ  3 ತಿಂಗಳ ಮಾನ್ಯತೆ ಸಿಗುತ್ತದೆ.  ಇನ್ನು 899 ರೂಪಾಯಿ ಪ್ಲಾನ್ ಕೂಡಾ ಇದೆ. ಇದರಲ್ಲಿ 12 ತಿಂಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ.  ಇದಲ್ಲದೆ 499 ಮತ್ತು 1,499 ರೂಪಾಯಿಗಳ ಪ್ರೀಮಿಯಂ ಪ್ಲಾನ್ ಗಳೊಂದಿಗೆ ಬರುತ್ತದೆ. ಇದರ ಮಾನ್ಯತೆ ಕ್ರಮವಾಗಿ 3 ತಿಂಗಳು ಮತ್ತು 12 ತಿಂಗಳುಗಳವರೆಗೆ ಇರುತ್ತದೆ.   


ಇದನ್ನೂ ಓದಿ : ಶೀಘ್ರದಲ್ಲಿ ಕಣ್ಮರೆಯಾಗಲಿದೆ ವಾಟ್ಸ್ ಆಪ್, ಇದುವರೆಗಿನ ಅತಿ ದೊಡ್ಡ ಬದಲಾವಣೆಗೆ ರೇಡಿಯಾಗಿ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.