IPL 2021: : ಲೈವ್ ಪಂದ್ಯಗಳನ್ನು ವೀಕ್ಷಿಸಿ Paytmನಲ್ಲಿ 100% ಕ್ಯಾಶ್ಬ್ಯಾಕ್ ಪಡೆಯಿರಿ, ಆಫರ್ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ
Paytmನಲ್ಲಿ ಮೊಬೈಲ್ ರೀಚಾರ್ಜ್ ಅತ್ಯಂತ ಜನಪ್ರಿಯ ಸೇವೆಗಳಲ್ಲಿ ಒಂದಾಗಿದೆ. ಮುಂಬರುವ ಕ್ರಿಕೆಟ್ ಋತುವಿನಲ್ಲಿ, ನಾವು ನಮ್ಮ ಬಳಕೆದಾರರಿಗೆ ವಿಶೇಷ ಸತ್ಕಾರವನ್ನು ನೀಡಲು ಬಯಸುತ್ತೇವೆ ಮತ್ತು 100% ಕ್ಯಾಶ್‌ಬ್ಯಾಕ್‌ನ ವಿಶೇಷ ಕೊಡುಗೆಯೊಂದಿಗೆ ಆಟದ ಸಂಭ್ರಮವನ್ನು ಸಂಭ್ರಮಿಸಲಿದ್ದೇವೆ ಎಂದು, Paytm ವಕ್ತಾರರು ತಿಳಿಸಿದ್ದಾರೆ.
ನವದೆಹಲಿ : ಪ್ರಸಕ್ತ ಐಪಿಎಲ್ ಋತುವಿನಲ್ಲಿ ಪೇಟಿಎಂ (Paytm) ಅತ್ಯಾಕರ್ಷಕ ಕ್ಯಾಶ್ ಬ್ಯಾಕ್ ಗಳನ್ನು ಘೋಷಿಸಿದೆ. ಮೊಬೈಲ್ ರೀಚಾರ್ಜ್‌ನಲ್ಲಿ ಈ ಕ್ಯಾಶ್‌ಬ್ಯಾಕ್ (Cashback) ಆಫರ್ ಗಳನ್ನು ಪೇಟಿಎಂ ಪರಿಚಯಿಸಿದೆ. ಪ್ರತಿದಿನ, ಮೊದಲ 1,000 ಬಳಕೆದಾರರು ಬ್ರೇಕ್ ಸಮಯದಲ್ಲಿ ತಮ್ಮ ಮೊಬೈಲ್ ರೀಚಾರ್ಜ್ (Mobile recharge)ಮಾಡಿದರೆ 100 ಪ್ರತಿಶತ ಕ್ಯಾಶ್ಬ್ಯಾಕ್ ಪಡೆಯುತ್ತಾರೆ. ಈ ಆಫರ್ ಜಿಯೋ, ವಿಐ, ಏರ್‌ಟೆಲ್, ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್‌ಗಳಿಗೆ 10 ರೂ ಮತ್ತು ಅದಕ್ಕಿಂತ ಹೆಚ್ಚಿನ ಎಲ್ಲಾ ರೀಚಾರ್ಜ್‌ಗಳಿಗೆ ಅನ್ವಯಿಸುತ್ತದೆ.
ಕಂಪನಿ ಹೇಳಿದ್ದೇನು?
'ಹೊಸ ಬಳಕೆದಾರರಿಗೆ 1 GB ಡೇಟಾ ರೀಚಾರ್ಜ್ ಮೊತ್ತಕ್ಕೆ ಸಮನಾದ ಕ್ಯಾಶ್‌ಬ್ಯಾಕ್ (cashback) 11, 21 ಮತ್ತು 51ರೂ, ಜಿಯೋ ಡೇಟಾ ಪ್ಯಾಕ್‌ಗಳು, 16,ಮತ್ತು 48 ರೂ. ಗಳ ವೋಡಾಫೋನ್ ಐಡಿಯಾ ಡೇಟಾ ಪ್ಯಾಕ್ ಮತ್ತು ಏರ್‌ಟೆಲ್ ನ 48 ರೂ. ಡೇಟಾ ಪ್ಯಾಕ್ ಸಿಗುತ್ತದೆ. ಆಫರ್ ಐಪಿಎಲ್ (IPL) ಪಂದ್ಯಗಳು ನಡೆಯುವ ವೇಳೆ, ಪ್ರತಿದಿನ ಸಂಜೆ 7.30 ರಿಂದ ರಾತ್ರಿ 11 ರವರೆಗೆ ಅನ್ವಯವಾಗಲಿದೆ. ಪ್ರತಿ ರೀಚಾರ್ಜ್‌ನಲ್ಲಿ ಗ್ರಾಹಕರು, ಖಚಿತವಾದ ಕ್ಯಾಶ್‌ಬ್ಯಾಕ್ ಪಾಯಿಂಟ್‌ಗಳನ್ನು ಪಡೆಯುತ್ತಾರೆ. ಇದನ್ನು ಅದ್ಭುತ ಡೀಲ್‌ಗಳು ಮತ್ತು ಉನ್ನತ ಬ್ರಾಂಡ್‌ಗಳಿಂದ ಉಡುಗೊರೆ ವೋಚರ್‌ಗಳಿಗಾಗಿ ರಿಡೀಮ್ ಮಾಡಬಹುದು.
ಇದನ್ನೂ ಓದಿ : Realme ಲಾಂಚ್ ಮಾಡಿದೆ 12 ಸಾವಿರ ರೂ.ಗಿಂತ ಕಡಿಮೆ ಬೆಲೆ ಅದ್ಬುತ Smartphone
Paytmನಲ್ಲಿ ಮೊಬೈಲ್ ರೀಚಾರ್ಜ್ ಅತ್ಯಂತ ಜನಪ್ರಿಯ ಸೇವೆಗಳಲ್ಲಿ ಒಂದಾಗಿದೆ. ಮುಂಬರುವ ಕ್ರಿಕೆಟ್ ಋತುವಿನಲ್ಲಿ, ನಾವು ನಮ್ಮ ಬಳಕೆದಾರರಿಗೆ ವಿಶೇಷ ಸತ್ಕಾರವನ್ನು ನೀಡಲು ಬಯಸುತ್ತೇವೆ ಮತ್ತು 100% ಕ್ಯಾಶ್‌ಬ್ಯಾಕ್‌ನ ವಿಶೇಷ ಕೊಡುಗೆಯೊಂದಿಗೆ ಆಟದ ಸಂಭ್ರಮವನ್ನು ಸಂಭ್ರಮಿಸಲಿದ್ದೇವೆ ಎಂದು, Paytm ವಕ್ತಾರರು ತಿಳಿಸಿದ್ದಾರೆ.
ತನ್ನ ಬಳಕೆದಾರರಿಗೆ ಹೆಚ್ಚಿನ ಅನುಕೂಲವಾಗುವಂತೆ, ಪೇಟಿಎಂ (Paytm) ಇತ್ತೀಚೆಗೆ 3-ಕ್ಲಿಕ್ ತ್ವರಿತ ರೀಚಾರ್ಜ್ ಮತ್ತು ಯೂಸರ್ ಫ್ರೆಂಡ್ಲಿ ಡಿಸ್ಪ್ಲೇ ಆಫ್ ಪ್ಲಾನ್ ಸೌಲಭ್ಯಗಳೊಂದಿಗೆ ಮೊಬಯಲ್ ರೀಚಾರ್ಜ್ ಅನುಭವವನ್ನು ಉತ್ತಮಗೊಳಿಸಿದೆ. ಪೇಟಿಎಂ ತನ್ನ ಬಳಕೆದಾರರಿಗೆ ಪೇಟಿಎಂ ಯುಪಿಐ (UPI), ಪೇಟಿಎಂ ವಾಲೆಟ್, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳು, ನೆಟ್‌ಬ್ಯಾಂಕಿಂಗ್ (Netbanking) ಅಥವಾ ಪೇಟಿಎಂ ಪೋಸ್ಟ್‌ಪೇಯ್ಡ್‌ನಿಂದ ತಮ್ಮ ಆದ್ಯತೆಯ ಪಾವತಿ ಮೋಡ್ ಅನ್ನು ಆಯ್ಕೆ ಮಾಡಲು ಅನುಮತಿಸುತ್ತದೆ. ಅಲ್ಲದೆ ಬಳಕೆದಾರರ ರೀಚಾರ್ಜ್ ಪ್ಲಾನ್ (Recharge plan) ಯಾವಾಗ ಮುಕ್ತಾಯವಾಗಲಿದೆ ಎನ್ನುವ ಬಗ್ಗೆಯೂ, ಪೇಟಿಎಂ ರಿಮೈಂಡ್ ಮಾಡುತ್ತಿರುತ್ತದೆ.
ಇದನ್ನೂ ಓದಿ : ಭಾರತದಲ್ಲಿ ಫ್ಲೆಕ್ಸ್ ಇಂಜಿನ್ ಗಳನ್ನು ಕಡ್ಡಾಯ ಮಾಡುವುದಾಗಿ ನಿತಿನ್ ಗಡ್ಕರಿ ಘೋಷಣೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.