ಪ್ರಾಗ್:  Water Transformed In To Gold - ಮನೆಯಲ್ಲಿರುವ ನೀರನ್ನು ನೀವು ಚಿನ್ನವಾಗಿ ಪರಿವರ್ತಿಸಬಹುದು ಎಂದರೆ ನೀವು ನಂಬುತ್ತೀರಾ?  ಕೇಳಲು ವಿಚಿತ್ರ ಎನಿಸಿದರು ಇದು ಸತ್ಯ. ಹೌದು, ವಿಜ್ಞಾನ ಇದನ್ನು ಮಾಡಿ ತೋರಿಸಿದೆ. ಪ್ರಾಗ್ ನ ಜೆಕ್ ಅಕಾಡೆಮಿ ಆಫ್ ಸೈನ್ಸಸ್ ನಲ್ಲಿ ಭೌತ ರಸಾಯನ ಶಾಸ್ತ್ರಜ್ಞರು ಈ ಸಾಧನೆಯನ್ನು ಮಾಡಿದ್ದಾರೆ. ವಿಜ್ಞಾನಿಗಳು ನೀರನ್ನು ಒಂದು ವಿಶಿಷ್ಟವಾದ ತಂತ್ರದಿಂದ ಚಿನ್ನದಂತೆ ಹೊಳೆಯುವ ಲೋಹವಾಗಿ ಪರಿವರ್ತಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ- Alert! ಉಪ್ಪಿನ ಜಾಗದಲ್ಲಿ ನೀವೂ ಕೂಡ ಪ್ಲಾಸ್ಟಿಕ್ ಸೇವಿಸುತ್ತಿಲ್ಲವಲ್ಲ? ಸಂಶೋಧನೆಯಿಂದ ಬೆಚ್ಚಿಬೀಳಿಸುವ ಮಾಹಿತಿ ಬಹಿರಂಗ


ನೀರನ್ನು ಲೋಹವಾಗಿ ಪರಿವರ್ತನೆ
ಸಾಮಾನ್ಯವಾಗಿ ಯಾವುದೇ ಒಂದು ವಸ್ತುವಿನ ಮೇಲೆ ಅತಿ ಹೆಚ್ಚು ಒತ್ತಡ ಹೇರಿದರೆ, ಅದು ಲೋಹವಾಗಿ ಪರಿವರ್ತನೆಯಾಗುತ್ತದೆ. ಅವುಗಳಲ್ಲಿರುವ ಅಣುಗಳು ಅಥವಾ ಮಾಲಿಕ್ಯೂಲ್ ಗಳು ಎಷ್ಟೊಂದು ಹತ್ತಿರಕ್ಕೆ ಬರುತ್ತವೆ ಎಂದರೆ ಅವುಗಳ ಮೂಲಕ ಹೊರ ಇಲೆಕ್ಟ್ರಾನ್ ಗಳು ಹಂಚಿಕೆಯಾಗುತ್ತವೆ ಹಾಗೂ ಅವುಗಳಿಂದ ವಿದ್ಯುತ್ ಶಕ್ತಿ ಪ್ರವಾಹ ಆರಂಭವಾಗುತ್ತದೆ. ನೀರಿನ ಮೇಲೆಯೂ ಕೂಡ ಇದೆ ರೀತಿ 1.5 ಕೋಟಿ ಅಟ್ಮಾಸ್ಫಿರಿಕ್ ಒತ್ತಡ ಹೇರಿದರೆ ಉಂಟಾಗುತ್ತದೆ . ಆದರೆ ಪ್ರಸ್ತುತ ಲ್ಯಾಬ್ ಗಳಲ್ಲಿರುವ ತಂತ್ರಜ್ಞಾನದಿಂದ ಇದು ಸಾಧ್ಯವಿಲ್ಲ. ಪ್ರಸ್ತುತ ಪ್ರಕಟಗೊಂಡಿರುವ ಹೊಸ ಅಧ್ಯಯನದ ಸಹ-ಲೇಖಕರಾಗಿರುವ (Scientist) ಪಾವೆಲ್ ಜಂಗ್ವರ್ಥ್  (Pavel Jungwirth) ಇದಕ್ಕಾಗಿ ಬೇರೆ ವಿಧಾನವೊಂದನ್ನೇ ಕಂಡುಕೊಂಡಿದ್ದಾರೆ. ಇಲೆಕ್ಟ್ರಾನ್ ಹಂಚಿಕೆಗಾಗಿ ಅವರು ಕ್ಷಾರೀಯ ಲೋಹವನ್ನು (Alkaline Metal) ಬಳಕೆ ಮಾಡಿದ್ದಾರೆ. 


ಇದನ್ನೂ ಓದಿ- Corona Delta Variant: ಸಿಡುಬಿನಂತೆ ಹರಡುತ್ತದೆ ಕೊರೊನಾ ವೈರಸ್ ನ ಈ ರೂಪಾಂತರಿ, ವಿಜ್ಞಾನಿಗಳ ಎಚ್ಚರಿಕೆ!


ಈ ರೀತಿ ಪ್ರಯೋಗ ನಡೆಸಲಾಗಿದೆ
ನೇಚರ್ ವೆಬ್‌ಸೈಟ್‌ನಲ್ಲಿ (Nature Website) ಪ್ರಕಟಗೊಂಡ ವರದಿಯ ಪ್ರಕಾರ, ಕ್ಷಾರ ಲೋಹಗಳು ಸೋಡಿಯಂ - ಪೊಟ್ಯಾಸಿಯಮ್‌ನಂತಹ ಪ್ರತಿಕ್ರಿಯಾತ್ಮಕ ಅಂಶಗಳ ಗುಂಪಾಗಿದೆ. ಆದರೆ, ಇದು ಒಂದು ಸವಾಲಾಗಿತ್ತು. ಏಕೆಂದರೆ ನೀರಿನೊಂದಿಗೆ ಸಂಪರ್ಕದಲ್ಲಿರುವಾಗ ಅವು ಭಯಾನಕ ಸ್ಫೋಟಕಗಳಾಗಿ ಬದಲಾಗುತ್ತವೆ. ಹೀಗಾಗಿ  ಪ್ರತಿಕ್ರಿಯೆ ನಿಧಾನಗೊಂಡು ಸ್ಫೋಟವಾಗದೆ ಇರುವಂತಹ  ಪ್ರಯೋಗವನ್ನು ಸಿದ್ಧ ಪಡಿಸಲಾಗಿದೆ. ಸಿರಿಂಜ್ ಅನ್ನು ಪೊಟ್ಯಾಸಿಯಮ್ ಮತ್ತು ಸೋಡಿಯಂನಿಂದ ತುಂಬಿಸಲಾಯಿತು, ಅದನ್ನು ಕೋಣೆಯ ಉಷ್ಣಾಂಶದಲ್ಲಿ ದ್ರವವಾಗಿದ್ದು, ನಿರ್ವಾತ ಕೊಠಡಿಯಲ್ಲಿ ಇರಿಸಲಾಯಿತು. ಇದರ ನಂತರ, ಈ ಮಿಶ್ರಣದ ಹನಿಗಳನ್ನು ಸಿರಿಂಜ್‌ಗಳಿಂದ ತೆಗೆಯಲಾಯಿತು, ಇದರಲ್ಲಿ ಸ್ವಲ್ಪ ಪ್ರಮಾಣದ ಹಬೆಯನ್ನು ನೀಡಲಾಯಿತು. ಈ ಹನಿಗಳ ಮೇಲಿನ ನೀರು ಕೆಲವು ಸೆಕೆಂಡುಗಳ ಕಾಲ ಹೆಪ್ಪುಗಟ್ಟುತ್ತದೆ. ನಿರೀಕ್ಷೆಯಂತೆ, ಮಿಶ್ರಣದ ಹನಿಗಳು ಎಲೆಕ್ಟ್ರಾನ್‌ಗಳನ್ನು ನೀರಿಗೆ ಒಯ್ಯುತ್ತವೆ, ಮತ್ತು ಕೆಲವು ಸೆಕೆಂಡುಗಳ ಕಾಲ ನೀರು ಚಿನ್ನದ ಬಣ್ಣಕ್ಕೆ ತಿರುಗುತ್ತದೆ.


ಇದನ್ನೂ ಓದಿ-OMG ! ಕೋಳಿಗಳಿಂದ ತಯಾರಾಗಲಿದೆ Biodiesel!, ಡಿಸೇಲ್ ಗಿಂತಲೂ ಅಗ್ಗ, ಎವರೇಜ್ ಎಷ್ಟು?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...


Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ