What Happens If Earth Stops Rotation: ಭೂಮಿ ಒಂದು ಸೆಕೆಂಡ್ ತಿರುಗುವುದನ್ನು ನಿಲ್ಲಿಸಿದರೆ ಏನಾಗುತ್ತೆ? ಎಷ್ಟು ಹಾನಿಯಾಗಲಿದೆ?
What Happens If Earth Stops Rotation - ಭೂಮಿ ತನ್ನ ಅಕ್ಷದ ಸುತ್ತ ಒಂದು ಸೆಕೆಂಡ್ ಸುತ್ತುವುದನ್ನು ನಿಲ್ಲಿಸಿದರೆ ಪರಿಸ್ಥಿತಿ ತುಂಬಾ ಭೀಕರವಗಿರಲಿದೆ ಎಂದು ಅಮೆರಿಕಾದ ಖಗೋಳ ಶಾಸ್ತ್ರಜ್ಞ Neil deGrasse Tyson ಹೇಳಿದ್ದಾರೆ. ಟಿವಿ ಹಾಗೂ ರೇಡಿಯೋ ನಿರೂಪಕ ಲ್ಯಾರಿ ಕಿಂಗ್ ಗೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡುತ್ತಿದ್ದರು.
ನವದೆಹಲಿ: What Happens If Earth Stops Rotation - ಭೂಮಿಯು (Earth)ತನ್ನ ಅಕ್ಷದ ಸುತ್ತ ಒಂದು ಸೆಕೆಂಡ್ ಸುತ್ತುವುದನ್ನು ನಿಲ್ಲಿಸಿದರೆ ಏನಾಗುತ್ತದೆ ಮತ್ತು ಎಷ್ಟು ಹಾನಿಯಾಗುತ್ತದೆ ಎಂಬುದನ್ನು ಎಂದಾದರೂ ಊಹಿಸಿದ್ದೀರಾ? ಭೂಮಿಯು ತನ್ನ ಅಕ್ಷದ ಸುತ್ತ ಸುತ್ತುತ್ತದೆ ಮತ್ತು ತನ್ನ ತಿರುಗುವಿಕೆಯನ್ನು 23 ಗಂಟೆ 56 ನಿಮಿಷ 4.1 ಸೆಕೆಂಡುಗಳಲ್ಲಿ ಪೂರ್ಣಗೊಳಿಸುತ್ತದೆ. ಈ ಕಾರಣದಿಂದಾಗಿ ಭೂಮಿಯ ಒಂದು ಬದಿಯಲ್ಲಿ ಹಗಲು ಮತ್ತು ಇನ್ನೊಂದು ಬದಿಯಲ್ಲಿ ರಾತ್ರಿ ಇರುತ್ತದೆ. ಅಮೆರಿಕದ ಪ್ರಖ್ಯಾತ ಖಗೋಳ ಭೌತಶಾಸ್ತ್ರಜ್ಞ (Astrophysist) ನೀಲ್ ಡಿ ಗ್ರಾಸೆ ಟೈಸನ್ ಭೂಮಿ ಒಂದು ಸೆಕೆಂಡ್ ತಿರುಗುವುದನ್ನು ನಿಲ್ಲಿಸಿದರೆ ಏನಾಗಬಹುದು ಎಂಬುದರ ಕುರಿತು ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ.
ಭಯಾನಕ ಸ್ಥಿತಿ ನಿರ್ಮಾಣಗೊಳ್ಳುವ ಸಾಧ್ಯತೆ ಇದೆ
ಭೂಮಿಯು ತನ್ನ ಅಕ್ಷದ ಸುತ್ತಒಂದು ಸೆಕೆಂಡ್ ತಿರುಗುವುದನ್ನು ನಿಲ್ಲಿಸಿದರೆ, ಪರಿಸ್ಥಿತಿ ಭೀಕರವಗಿರಲಿದೆ ಎಂದು ಅಮೆರಿಕಾದ ಖಗೋಳ ಶಾಸ್ತ್ರಜ್ಞ Neil deGrasse Tyson ಟಿವಿ ಹಾಗೂ ರೇಡಿಯೋ ನಿರೂಪಕ ಲ್ಯಾರಿ ಕಿಂಗ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ನಾವೆಲ್ಲರೂ ಭೂಮಿಯೊಂದಿಗೆ ಪೂರ್ವದ ಕಡೆಗೆ ಚಲಿಸುತ್ತಿದ್ದೇವೆ ಮತ್ತು ಒಂದು ಸೆಕೆಂಡ್ ಭೂಮಿ ನಿಂತು ಹೋದರೆ, ಭಯಾನಕ ಪರಿಸ್ಥಿತಿಗಳು ಉಂಟಾಗಬಹುದು ಎಂದು ಟೈಸನ್ ಹೇಳಿದ್ದಾರೆ.
ಭೂಮಿಯು ತನ್ನ ಅಕ್ಷದ ಸುತ್ತ ಗಂಟೆಗೆ 8000 ಮೈಲಿಗಳ ವೇಗದಲ್ಲಿ ತಿರುಗುತ್ತಿದೆ ಮತ್ತು ನಾವೆಲ್ಲರೂ ಅದರೊಂದಿಗೆ ಚಲಿಸುತ್ತಿದ್ದೇವೆ ಎಂದು ಟೈಸನ್ ಹೇಳಿದ್ದಾರೆ. ಇದು ಒಂದು ಸೆಕೆಂಡ್ ನಿಲ್ಲಿಸಿದರೆ, ಭೂಮಿಯ ಮೇಲೆ ಇರುವ ಜನರ ಜೀವ ಕೂಡ ಹೋಗಬಹುದು ಎಂದು ಅವರು ಹೇಳಿದ್ದಾರೆ.
ಕಾರ್ ಆಕ್ಸಿಡೆಂಟ್ ರೀತಿಯ ಪರಿಸ್ಥಿತಿ ನಿರ್ಮಾಣಗೊಳ್ಳುವ ಸಾಧ್ಯತ ಇದೆ
ಜನರು ತಮ್ಮ ಕಿಟಕಿಯಿಂದ ಹಾರಿ ಕೆಳಗೆ ಬೀಳಬಹುದು ಮತ್ತು ಅದನ್ನು ನೋಡುವುದು ತುಂಬಾ ಭಾಯಾನಕವಗಿರಲಿದೆ. ಟೈಸನ್ ಪ್ರಕಾರ, ಇದು ಕಾರು ಅಪಘಾತದಂತಹ ಪರಿಸ್ಥಿತಿ. ಒಂದು ಕಾರು ಅತಿ ವೇಗದಲ್ಲಿ ಹೋಗುತ್ತಿದ್ದರೆ ಮತ್ತು ಅದು ಅಪಘಾತಕ್ಕೀಡಾಗಿದ್ದರೆ, ಸೀಟ್ ಬೆಲ್ಟ್ ಇಲ್ಲದ ಕಾರಿನಲ್ಲಿ ಕುಳಿತಿದ್ದ ಜನರು ತಮ್ಮ ಆಸನಗಳಿಂದ ಜಿಗಿದು ಬೀಳುವ ಹಾಗೆ ಈ ಪರಿಸ್ಥಿತಿ ಇರಲಿದೆ.
ಈ ಮೊದಲು ಕೂಡ ಟ್ವೀಟ್ ಮಾಡುವ ಮೂಲಕ ಟೈಸನ್ ಸುದ್ದಿಯಲ್ಲಿದ್ದರು ಎಂಬುದು ಇಲ್ಲಿ ಉಲ್ಲೇಖನೀಯ. ಈ ಮೊದಲು ಅವರು ಅಮೆಜಾನ್ (Amazon) ಸಂಸ್ಥಾಪಕ ಜೆಫ್ ಬೆಜೋಸ್ (Jeff Bezos) ಸಂಪತ್ತಿನ ಕುರಿತು ಟ್ವೀಟ್ ಮಾಡುವ ಮೂಲಕ ಸುದ್ದಿ ಮಾಡಿದ್ದರು. ಜೆಫ್ ಬೆಜೋಸ್ ಬಳಿ ಇರುವ 200 ಬಿಲಿಯನ್ ಡಾಲರ್ಸ್ ಆಸ್ತಿಯಿಂದ 180 ಬಾರಿಗೆ ಭೂಮಿಯನ್ನು ಸುತ್ತಬಹುದು ಹಾಗೂ 30 ಬಾರಿ ಭೂಮಿಯಿಂದ ಚಂದ್ರನವರೆಗೆ ಹೋಗಿ ಬರಬಹುದು ಎಂದು ಅವರು ಹೇಳಿದ್ದರು. ರಿಚರ್ಡ್ ಬ್ರೆನ್ಸನ್ ಅವರ ಸ್ಪೇಸ್ ಯಾತ್ರೆಯ ಕುರಿತು ಕೂಡ ಅವರು ಇದೆ ರೀತಿ ಹೇಳಿಕೆ ನೀಡಿದ್ದರು.
ಇದನ್ನೂ ಓದಿ-Mars-Venus Conjunction: ಬಾನಂಗಳದಲ್ಲಿ ಇಂದು ಗ್ರಹಗಳ ಅದ್ಭುತ ಮಿಲನ, ಈ ರೀತಿ ನೋಡಿ ಈ ವಿಶಿಷ್ಟ ದೃಶ್ಯ
ದಿನ ಮಿತಿ ಮೀರಿ ದೊಡ್ಡದಾಗಬಹುದು
ಇಂತಹ ಪರಿಸ್ಥಿತಿಯಲ್ಲಿ ಭೂಮಿಯ ಮೇಲಿರುವ ಪ್ರತಿಯೊಬ್ಬ ವ್ಯಕ್ತಿ ಸ್ಲೋಡೌನ್ ಆಗಿ ತನ್ನ ವೇಗವನ್ನು ಕಡಿಮೆ ಮಾಡಿಕೊಳ್ಳಬಹುದು ಎಂದು ಟೈಸನ್ ಸ್ಪಷ್ಟಪಡಿಸಿದ್ದಾರೆ ಮತ್ತು ಇದರಿಂದ ಯಾರಿಗೂ ಕೂಡ ಹಾನಿಯಾಗುವುದಿಲ್ಲ. ಈ ಸ್ಥಿತಿಯಿಂದ ನಿರ್ಮಾಣಗೊಳ್ಳುವ ಪರಿಸ್ಥಿತಿಯಲ್ಲಿ ದಿನದ ಅವಧಿ ಮಿತಿಮೀರಲಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ-ಬ್ರಹ್ಮಾಂಡ ಅನಂತ ಅಲ್ಲ..! ಅದಕ್ಕೂ ಇದೆ ಒಂದು ಗಡಿ ರೇಖೆಯ ಮಿತಿ
ನೀಲ್ ಟೈಸನ್ ಯಾರು?
Neil deGrasse Tyson ಕುರಿತು ಹೇಳುವುದಾದರೆ, 9 ವರ್ಷ ವಯಸ್ಸಿನಲ್ಲಿಯೇ ಖಗೋಳ ವಿಜ್ಞಾನದಲ್ಲಿ ಆಸಕ್ತಿ ಬೆಳೆಸಿಕೊಂಡಿರುವ ನೀಲ್, ಬಳಿಕ ಅಮೇರಿಕನ್ ಮ್ಯೂಸಿಯಂ ಆಫ್ಗ್ ನ್ಯಾಚುರಲ್ ಹಿಸ್ಟರಿಗೆ ಹೋಗಿದ್ದರು. ನಂತರ ಖಗೋಳ ವಿಜ್ಞಾನದಲ್ಲಿ ಅವರ ಆಸಕ್ತಿ ಅಪಾರ ಹೆಚ್ಚಾಗಿದೆ. 1980ರಲ್ಲಿ ಟೈಸನ್ ಹಾರ್ವರ್ಡ್ ಯುನಿವರ್ಸಿಟಿಯಿಂದ ತಮ್ಮ ಪದವಿ ಮುಗಿಸಿ 1983ರಲ್ಲಿ ಯುನಿವರ್ಸಿಟಿ ಆಫ್ ಟೆಕ್ಸಾಸ್ ನಲ್ಲಿ ಅಸ್ಟ್ರಾನಾಮಿಯಲ್ಲಿ (Astronomy) ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಇದನ್ನೂ ಓದಿ-Holocaust On Earth-ಆಗಸದಿಂದ ಭೂಮಿಗಪ್ಪಳಿಸಲಿವೆ ಬೆಂಕಿ ಚೆಂಡುಗಳು, ಇದು ಭೂ- ವಿನಾಶದ ಸಂಕೇತವೇ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.