Whatsapp Action Against Online Scam: ಭಾರತದಲ್ಲಿ ಆನ್‌ಲೈನ್ ವಂಚನೆಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವ ವಾಟ್ಸಾಪ್ (WhatsApp) ಬಳಕೆದಾರರ ಸುರಕ್ಷತೆಗೆ ಅಪಾಯ ತಂದೊಡ್ಡುವ 2 ಕೋಟಿ ಖಾತೆಗಳನ್ನು ಬ್ಯಾನ್ ಮಾಡಿದೆ. 2024 ರ ಮೊದಲ ಮೂರು ತಿಂಗಳ ಅವಧಿಯಲ್ಲಿ ವಾಟ್ಸಾಪ್ ಒಟ್ಟು 22,310,000 ಖಾತೆಗಳನ್ನು ನಿಷೇಧಿಸುರುವುದಾಗಿ ವರದಿಯಾಗಿದೆ. 


COMMERCIAL BREAK
SCROLL TO CONTINUE READING

ವಾಸ್ತವವಾಗಿ, ಆನ್‌ಲೈನ್ ಸ್ಕ್ಯಾಮ್‌ಗಳ (Online Scam) ಹೆಚ್ಚುತ್ತಿರುವ ಸವಾಲು ಮತ್ತು ಬಳಕೆದಾರರ ಸುರಕ್ಷತೆಯ ಕಾಳಜಿ ದೃಷ್ಟಿಯಿಂದ ವಾಟ್ಸಾಪ್ 2024ರ ಮೊದಲ ತ್ರೈಮಾಸಿಕದಲ್ಲಿ 2 ಕೋಟಿ ಖಾತೆಗಳನ್ನು ಬ್ಯಾನ್ ಮಾಡಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, 2023 ರಲ್ಲಿ ಅದೇ ಅವಧಿಗೆ ಹೋಲಿಸಿದರೆ ನಿಷೇಧಿತ ಖಾತೆಗಳ ಸಂಖ್ಯೆ ದ್ವಿಗುಣಗೊಂಡಿದೆ ಎಂದು ತಿಳಿದುಬಂದಿದೆ. 


ಇದನ್ನೂ ಓದಿ- Amazon, Flipkart ಭರ್ಜರಿ ಸೇಲ್ ! ಸ್ಮಾರ್ಟ್ ಫೋನ್, ಟ್ಯಾಬ್ ಗಳ ಮೇಲೆ ಭಾರೀ ಡಿಸ್ಕೌಂಟ್ !


ಜಗತ್ತಿನ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್‌ ವಾಟ್ಸಾಪ್ (WhatsApp) ಮಾಸಿಕ ವರದಿಯ ಪ್ರಕಾರ, ಮಾಹಿತಿ ತಂತ್ರಜ್ಞಾನದ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿಸಂಹಿತೆ) ನಿಯಮಗಳು, 2021 ರ ನಿಯಮ 4(1)(d) ಮತ್ತು ನಿಯಮ 3A(7) ರ ಪ್ರಕಾರ  ಈ ಭಾರತೀಯ ಖಾತೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ. 


ಇದನ್ನೂ ಓದಿ- ಫೋನ್‌ ಮಾತುಕತೆಯನ್ನು ಇನ್ನೂ ಮಜವಾಗಿಸಲು ಗೂಗಲ್ ಪರಿಚಯಿಸಿದೆ ಆಡಿಯೋ ಎಮೋಜಿ!


ಮೊದಲ ತ್ರೈಮಾಸಿಕದಲ್ಲಿ ಯಾವ್ಯಾವ ತಿಂಗಳಲ್ಲಿ ಎಷ್ಟು ಖಾತೆಗಳು ಬ್ಯಾನ್!
ಜನವರಿ 2024 ರಲ್ಲಿ, ವಾಟ್ಸಾಪ್ ಪೂರ್ವಭಾವಿಯಾಗಿ ನಿಷೇಧಿಸಲಾದ 1,358,000 ಖಾತೆಗಳನ್ನು ಒಳಗೊಂಡಂತೆ 6,728,000 ಖಾತೆಗಳನ್ನು ನಿಷೇಧಿಸಿದೆ. ಫೆಬ್ರವರಿ 2024 ರಲ್ಲಿ ಪೂರ್ವಭಾವಿಯಾಗಿ ನಿಷೇಧಿಸಿದ 1,424,000 ಖಾತೆಗಳನ್ನು ಒಳಗೊಂಡಂತೆ 7,628,000 ಖಾತೆಗಳನ್ನು ನಿಷೇಧಿಸಲಾಗಿದೆ. ಮಾರ್ಚ್ 2024 ರಲ್ಲಿ 1,430,000 ಪೂರ್ವಭಾವಿಯಾಗಿ ನಿಷೇಧಿತ ಖಾತೆಗಳನ್ನು ಒಳಗೊಂಡಂತೆ ಒಟ್ಟು 7,954,000 ಖಾತೆಗಳನ್ನು ನಿಷೇಧಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.