Amazon, Flipkart ಭರ್ಜರಿ ಸೇಲ್ ! ಸ್ಮಾರ್ಟ್ ಫೋನ್, ಟ್ಯಾಬ್ ಗಳ ಮೇಲೆ ಭಾರೀ ಡಿಸ್ಕೌಂಟ್ !

ಫೋನ್‌ಗಳಲ್ಲಿ ಮಾತ್ರವಲ್ಲದೆ ಐಪ್ಯಾಡ್ ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿಯಂತಹ ಟ್ಯಾಬ್ಲೆಟ್‌ಗಳ ಮೇಲೆ ಕೂಡಾ ಆಫರ್ ನೀಡಲಾಗಿದೆ. Apple iPad 10th generation ಅನ್ನು  Amazon ಮತ್ತು Flipkart ಎರಡರಲ್ಲೂ 30,000 ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ. 

Written by - Ranjitha R K | Last Updated : May 2, 2024, 01:07 PM IST
  • ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಎರಡರಲ್ಲೂ ಬಿಗ್ ಸೇಲ್ ಆರಂಭ
  • Flipkart Plus ಸದಸ್ಯತ್ವ ಹೊಂದಿರುವವರಿಗೆ ಫ್ಲಿಪ್‌ಕಾರ್ಟ್‌ನಲ್ಲಿ ಸೇಲ್
  • ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ರಿಯಾಯಿತಿ
Amazon, Flipkart ಭರ್ಜರಿ ಸೇಲ್ ! ಸ್ಮಾರ್ಟ್ ಫೋನ್, ಟ್ಯಾಬ್ ಗಳ ಮೇಲೆ ಭಾರೀ ಡಿಸ್ಕೌಂಟ್ !  title=

ಬೆಂಗಳೂರು : ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಎರಡರಲ್ಲೂ ಬಿಗ್ ಸೇಲ್ ಆರಂಭವಾಗಿದೆ. Flipkart Plus ಸದಸ್ಯತ್ವ ಹೊಂದಿರುವವರಿಗೆ ಫ್ಲಿಪ್‌ಕಾರ್ಟ್‌ನಲ್ಲಿ ಸೇಲ್ ಆರಂಭವಾಗಿದೆ. ಎರಡೂ ಸೇಲ್ ಗಳಲ್ಲಿ ಐಫೋನ್ 15, ಐಫೋನ್ 14 ನಂತಹ ಇತ್ತೀಚಿನ ಸ್ಮಾರ್ಟ್‌ಫೋನ್‌ಗಳಲ್ಲಿ ಭಾರೀ ರಿಯಾಯಿತಿಗಳು ಲಭ್ಯವಿವೆ.ಫೋನ್‌ಗಳಲ್ಲಿ ಮಾತ್ರವಲ್ಲದೆ ಐಪ್ಯಾಡ್ ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿಯಂತಹ ಟ್ಯಾಬ್ಲೆಟ್‌ಗಳ ಮೇಲೆ ಕೂಡಾ ಆಫರ್ ನೀಡಲಾಗಿದೆ. Apple iPad 10th generation ಅನ್ನು  Amazon ಮತ್ತು Flipkart ಎರಡರಲ್ಲೂ 30,000 ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ. 

ಈ ಹಿಂದೆ 36,999ಕ್ಕೆ ಲಭ್ಯವಿದ್ದ  Apple iPad 10th generation ಅನ್ನು ಈಗ 31,999 ರೂಪಾಯಿಗೆ ಖರೀದಿಸಬಹುದಾಗಿದೆ.ಇಷ್ಟು ಮಾತ್ರವಲ್ಲದೆ ಅಮೆಜಾನ್ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಿದರೆ,ಇನ್ನೂ ಹೆಚ್ಚಿನ ರಿಯಾಯಿತಿಗಳನ್ನು ಪಡೆಯಬಹುದು.EMI ಮೂಲಕ ಖರೀದಿಸಿದರೆ 1200 ವರೆಗೆ ಮತ್ತು ಸಂಪೂರ್ಣ ಪಾವತಿಯನ್ನು ಒಮ್ಮೆಲೇ ಮಾಡಿದರೆ  980 ರೂವರೆಗೆ  ರಿಯಾಯಿತಿ ಪಡೆಯಬಹುದು.ಅದೇ ರೀತಿ,ICICI ಡೆಬಿಟ್ ಕಾರ್ಡ್ ಹೊಂದಿದ್ದರೆ,ಈ ಐಪ್ಯಾಡ್ ಮೇಲೆ 1250 ರೂ. ಡಿಸ್ಕೌಂಟ್ ಸಿಗಲಿದೆ.  

ಇದನ್ನೂ ಓದಿ :ಫೋನ್‌ ಮಾತುಕತೆಯನ್ನು ಇನ್ನೂ ಮಜವಾಗಿಸಲು ಗೂಗಲ್ ಪರಿಚಯಿಸಿದೆ ಆಡಿಯೋ ಎಮೋಜಿ!

ಫ್ಲಿಪ್‌ಕಾರ್ಟ್‌ನಲ್ಲಿಯೂ Apple iPad 10th generation ಮೇಲೆ ಉತ್ತಮ  ಡೀಲ್  ನಡೆಯುತ್ತಿದೆ.ಈ ಐಪ್ಯಾಡ್ ಸಾಮಾನ್ಯವಾಗಿ 31,999ರೂ.ಗೆ ಲಭ್ಯವಿದೆ.ಆದರೆ  SBI ಕಾರ್ಡ್ ಹೊಂದಿದ್ದರೆ ಅದನ್ನು 28,999 ರೂ.ಗೆ ಖರೀದಿಸಬಹುದು.

Apple iPad 10th generation :
ಇದು ಫಾಸ್ಟ್  5G ಇಂಟರ್ನೆಟ್ ಅನ್ನು ಬೆಂಬಲಿಸುತ್ತದೆ. ಹಾಗಾಗಿ ಯಾವುದೇ ಅಡೆತಡೆಯಿಲ್ಲದೆ ಡೌನ್‌ಲೋಡ್ ಮಾಡಬಹುದು ಅಥವಾ ಸ್ಟ್ರೀಮ್ ಮಾಡಬಹುದು.ಈ ಬಾರಿಯ ದೊಡ್ಡ ಬದಲಾವಣೆ ಎಂದರೆ ಆಪಲ್ ತನ್ನ ಹಳೆಯ ಲೈಟ್ನಿಂಗ್ ಪೋರ್ಟ್ ಅನ್ನು USB-C ಪೋರ್ಟ್‌ನೊಂದಿಗೆ ಬದಲಾಯಿಸಿದೆ. ಈಗ ನೀವು ನಿಮ್ಮ ಇತರ Android ಫೋನ್‌ಗಳಿಗೆ ಬಳಸುವ ಚಾರ್ಜರ್‌ನೊಂದಿಗೆ ಈ ಐಪ್ಯಾಡ್ ಅನ್ನು ಚಾರ್ಜ್ ಮಾಡಬಹುದು.ಐಫೋನ್ 15 ಸರಣಿಯಲ್ಲಿಯೂ  ಅದೇ ಬದಲಾವಣೆ ಮಾಡಲಾಗಿದೆ. 

ಇದನ್ನೂ ಓದಿ :Whats App ಶೀಘ್ರದಲ್ಲೇ ಪಾಪ ಮಾಡುವವರಿಗೆ ಶಿಕ್ಷೆ ನೀಡಲಿದೆ!

ಇದು ದೊಡ್ಡ 10.9-ಇಂಚಿನ ಸ್ಕ್ರೀನ್ ಮತ್ತು ಅತ್ಯಂತ ತೆಳುವಾದ ಅಂಚುಗಳನ್ನು ಹೊಂದಿದೆ.ಇದು ಹಿಂದಿನ ಐಪ್ಯಾಡ್‌ಗಳಿಗಿಂತ ಹೆಚ್ಚು ಆಧುನಿಕವಾಗಿ ಕಾಣುವಂತೆ ಮಾಡುತ್ತದೆ.ಈ ಐಪ್ಯಾಡ್‌ನಲ್ಲಿನ ಹೊಸ ವೈಶಿಷ್ಟ್ಯವೆಂದರೆ ಪವರ್ ಬಟನ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ನಂತೆಯೂ ಕಾರ್ಯನಿರ್ವಹಿಸುತ್ತದೆ.ಹಿಂಭಾಗದಲ್ಲಿ 12 ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ ಕ್ಯಾಮೆರಾ ಇದೆ.

ಈ ಹೊಸ ಐಪ್ಯಾಡ್  Apple iPad 10th generation ಪ್ರೊಸೆಸರ್ ಸ್ವಲ್ಪ ಹಳೆಯದಾಗಿದ್ದರೂ,ಇದು ದೈನಂದಿನ ಕಾರ್ಯಗಳನ್ನು ಸುಲಭವಾಗಿ ನಿರ್ವಹಿಸುತ್ತದೆ.ಇದು 5G ಇಂಟರ್ನೆಟ್ ಅನ್ನು ಬೆಂಬಲಿಸುತ್ತದೆ.ಒಟ್ಟಾರೆಯಾಗಿ, ನೀವು ಆಪಲ್ ಉತ್ಪನ್ನಗಳನ್ನು ಖರೀದಿಸಬೇಕು ಎಂದಿದ್ದರೆ, ಈ ಐಪ್ಯಾಡ್ ನಿಮಗೆ ಉತ್ತಮ ಆಯ್ಕೆಯಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News